ಯಾರ ಆಡಳಿತದಲ್ಲಿ ಕಾಶ್ಮೀರ ಪಂಡಿತರ ಕೊಲೆ ಆಯಿತು?

ಪ್ರಧಾನಿ ಮೋದಿಯವರದು ಮಾತು ಮಾತ್ರ ಎಂದು ತಿಳಿದ ಬಳಿಕ ಕಳೆದ ತಿಂಗಳು ಕಾಶ್ಮೀರದ ಪಂಡಿತರ ಸಂಘಟನೆಯವರು ಕಾಂಗ್ರೆಸ್ಸಿಗೆ ಸೇರಿದರು.

ಮಾಹಿತಿ ಹಕ್ಕಿನಡಿ ಶ್ರೀನಗರದ ಎಸ್‍ಪಿ ಕಚೇರಿ ನೀಡಿರುವ ಲೆಕ್ಕದಂತೆ ಕೊಲೆಯಾದ ಪಂಡಿತರ ಸಂಖ್ಯೆ 89 ಹಾಗೂ ಕೊಲೆಯಾದ ಇತರರ ಸಂಖ್ಯೆ 1,635. ಕಾಶ್ಮೀರಿ ಪಂಡಿತರ ಕೊಲೆ ನಡೆದುದು 1990ರ ಜನವರಿ ಫೆಬ್ರವರಿಯಲ್ಲಿ. ಆಗ ರಾಷ್ಟ್ರಪತಿ ಆಡಳಿತ ಇದ್ದ ಜಮ್ಮು ಕಾಶ್ಮೀರದ ರಾಜ್ಯಪಾಲರಾಗಿದ್ದವರು ಪಕ್ಕಾ ಆರೆಸ್ಸೆಸ್ ಜಗ್‍ಮೋಹನ್.

ಇದೇ ವೇಳೆ ಕೇಂದ್ರದಲ್ಲಿ ಬಿಜೆಪಿ ಬೆಂಬಲದ ವಿ. ಪಿ. ಸಿಂಗ್ ಸರಕಾರ ಅಧಿಕಾರಕ್ಕೆ ಬಂದಿತ್ತು. ಆರೆಸ್ಸೆಸ್ ರಾಜ್ಯಪಾಲ ಜಗ್‍ಮೋಹನ್ ರಕ್ಷಣೆ ನೀಡಲಿಲ್ಲ. ಪಂಡಿತರು ವಲಸೆ ಹೋದರು.

ಬಿಜೆಪಿಯ ಮಂದಿರ ರಾಜಕೀಯದ, ಧರ್ಮಾಧಾರಿತ ಮತ ವಿಭಜನೆಯ ಒಂದು ತಂತ್ರವಿದು. ವಾಜಪೇಯಿ ಪ್ರಧಾನಿಯಾಗಿದ್ದಾಗ ಒಂದೇ ವರುಷ ಗಾಂಧೀಜಿಯವರನ್ನು ಬಯ್ಯಲು ನಾಲ್ಕು ಭಗತ್ ಸಿಂಗ್ ಸಿನಿಮಾಗಳು ಬಂದಿದ್ದವು. ಇದನ್ನು ಗಮನಿಸಿದಲ್ಲಿ ಕಾಶ್ಮೀರ ಫೈಲ್‍ಗಿಂತ 100 ಪಟ್ಟು ಹೆಚ್ಚು ಕ್ರೂರವಾದುದು ಗುಜರಾತ್ ಫೈಲ್ಸ್.

Related Posts

Leave a Reply

Your email address will not be published.