ಇತ್ತೀಚೆಗೆ ಸಂಸತ್ತಿನಲ್ಲಿ ಪಾಸಾದ ಮೂರು ಕ್ರಿಮಿನಲ್ ಮಸೂದೆಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕುವ ಮೂಲಕ ಅವನ್ನು ಕಾನೂನು ಆಗಿಸಿದರು. ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, ಭಾರತೀಯ ಸಾಕ್ಷ್ಯ ಕಾಯ್ದೆ ಇವೇ ಆ ಮೂರು. 1872ರ ಬ್ರಿಟಿಷರ ಕಾನೂನುಗಳಿಗೆ ಈ ಮೂಲಕ ಇನ್ನಷ್ಟು ತಿದ್ದುಪಡಿ ತರಲಾಗಿದೆ.
ಮಂಗಳೂರು ಮಣ್ಣಗುಡ್ಡದ ಮಠದಕಣಿ ರಸ್ತೆಯ ಮಿಶನ್ ಗೋರಿ ರಸ್ತೆಯಲ್ಲಿದ್ದ ದಿನಸಿ ಅಂಗಡಿಯೊಂದರಲ್ಲಿ ಬೆಂಕಿ ಅವಘಡ ಸಂಬವಿಸಿ ಅಂಗಡಿಯಲ್ಲಿದ್ದ ವಸ್ತುಗಳಲ್ಲಿ ಸುಟ್ಟು ಕರಕಲಾಗಿವೆ.ಅಗ್ನಿಶಾಮಕ ದಳದವರು ಸಕಾಲದಲ್ಲಿ ಆಗಮಿಸಿ ಬೆಂಕಿ ನಂದಿಸಿದ್ದರಿಂದ ಆಚೀಚೆಯ ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಹರಡಲಿಲ್ಲ. ಆದರೆ ಸಂದೀಪ್ ಎಂಬವರಿಗೆ ಸೇರಿದ ಅಂಗಡಿಯೊಳಗಿನ ವಸ್ತುಗಳೆಲ್ಲ ಸುಟ್ಟು ಹೋಗಿವೆ. ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಅವಘಡಕ್ಕೆ ಕಾರಣ ಎನ್ನಲಾಗಿದೆ. ಇಂದು ಮುಂಜಾವ ಐದೂವರೆ
ಒಡಿಶಾ ರಾಜ್ಯದ ಕಿಯೊಂಜಾರ್ ಜಿಲ್ಲೆಯಲ್ಲಿ ಹೂಕೋಸು ಕಿತ್ತು ಪಲ್ಯ ಮಾಡಿ ತಿಂದಿದ್ದಾರೆ ಎಂದು ಮಗನೇ ತಾಯಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿರುವ ಅಮಾನವೀಯ ಘಟನೆ ನಡೆದಿದೆ. 70ರ ಮಹಿಳೆ ಸರಸಪಸಿ. ಈಕೆಯ ಕಿರಿಯ ಮಗ ಪ್ರತ್ಯೇಕ ಕೃಷಿ ಭೂಮಿ ಹೊಂದಿದ್ದ. ಆಕೆ ಆ ಮಗನ ಹೊಲದಿಂದ ಹೂಕೋಸು ತಂದು ಪಲ್ಯ ಮಾಡಿ ತಿಂದಿದ್ದಳು. ಕೆರಳಿ ಜಗಳಕ್ಕೆ ಬಂದಿದ್ದ ಮಗ. ತಾಯಿಯೂ ಜಗಳಕ್ಕೆ ನಿಂತಳು. ತಾಯಿಯನ್ನೇ ಮಿಂಚುರಿ ಕಂಬಕ್ಕೆ ಕಟ್ಟಿ ಹೊಡೆದಿದ್ದಾನೆ. ಆಗ ಬೇರೆಯವರು ಬಂದು
ಹುಬ್ಬಳ್ಳಿಯಲ್ಲಿ ನಡೆದ ಕರ್ನಾಟಕ ಅಂತರರಾಷ್ಟ್ರ ಚಲನಚಿತ್ರ ಅಕಾಡೆಮಿ ಯೋಜಿತ ಅಂತರರಾಷ್ಟ್ರ ಚಲನಚಿತ್ರೋತ್ಸವದಲ್ಲಿ ಮೂಗಜ್ಜನ ಕೋಳಿ ಚಿತ್ರದ ನಟನೆಗಾಗಿ ಕುಸಲ್ದರಸೆ ನವೀನ್ ಡಿ. ಪಡೀಲ್ ಅವರು ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.ಜೀಟಿಗೆ ಚಿತ್ರದ ಬಳಿಕ ಸಂತೋಷ್ ಮಾಡ ನಿರ್ದೇಶಿಸಿದ ಅರೆ ಭಾಷೆಯ ಚಿತ್ರ ಮೂಗಜ್ಜನ ಕೋಳಿ. ಇದರಲ್ಲಿ ನವೀನ್ ಪಡೀಲ್ ಅವರು ಮೂಗಜ್ಜನ ಪಾತ್ರ ವಹಿಸಿದ್ದಾರೆ. ಕೋಳಿಗಳ ವಿಷಯದಲ್ಲಿ ಜೀವ ಇಟ್ಟಿರುವ ಮಾತೇ ಇಲ್ಲದ ಒರಟು ಮುದುಕನ
ವಿಧಾನ ಪರಿಷತ್ತಿನಲ್ಲಿ ಪ್ರತಿ ಪಕ್ಷದ ನಾಯಕರಾಗಿ ಮಾಜೀ ಮಂತ್ರಿ ಕೋಟ ಶ್ರೀನಿವಾಸ ಪೂಜಾರಿ ನೇಮಕಗೊಂಡಿದ್ದಾರೆ. ಏಳು ತಿಂಗಳ ಬಳಿಕ ಬಿಜೆಪಿ ಈ ತೀರ್ಮಾನ ತೆಗೆದುಕೊಂಡಿದೆ. ವಿಧಾನ ಪರಿಷತ್ತಿನಲ್ಲಿ ಉಪ ನಾಯಕರಾಗಿ ಸುನಿಲ್ ವಲ್ಯಾಪುರೆ ಅವರನ್ನು ನೇಮಿಸಲಾಗಿದೆ. ಅದೇ ವೇಳೆ ಎನ್. ರವಿಕುಮಾರ್ ಅವರನ್ನು ವಿಧಾನ ಪರಿಷತ್ತಿನಲ್ಲಿ ಮುಖ್ಯ ಸಚೇತಕರಾಗಿ ಬಿಜೆಪಿ ನೇಮಕ ಮಾಡಿದೆ. ಹುಬ್ಬಳ್ಳಿ ಧಾರವಾಡ ಶಾಸಕ ಅರವಿಂದ ಬೆಲ್ಲದ ಅವರನ್ನು ವಿಧಾನ ಸಭೆಯಲ್ಲಿ ಉಪ ನಾಯಕರಾಗಿ ಮತ್ತು
ಬಹು ಕಾಲದಿಂದ ಮಂಗಳೂರು ಬೈಕಂಪಾಡಿಯಲ್ಲಿರುವ ಎಪಿಎಂಸಿ ಯಾರ್ಡ್‍ನಲ್ಲಿ ಕೂಲಿಕಾರ್ಮಿಕನಾಗಿದ್ದ ಒಡಿಶಾ ಮೂಲದ ವ್ಯಕ್ತಿಯ ಮೃತ ದೇಹವು ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿದೆ.ಮೃತ ವ್ಯಕ್ತಿಯು ಒಡಿಶಾ ರಾಜ್ಯದ ಜಾವಪುರ ಜಿಲ್ಲೆಯ 44ರ ವಲಸೆ ಕಾರ್ಮಿಕ ರಶಿಂರಂಜನ್ ಎಂದು ತಿಳಿದುಬಂದಿದೆ. ಕಾಲಿನ ಮಂಡಿ ಬಳಿ ಗಾಯದ ಗುರುತುಗಳಿದ್ದು ಲಘು ವಾಹನ ಗುದ್ದಿ ಸಾವು ಉಂಟಾಗಿರಬಹುದು ಎಂದು ಅನುಮಾನಾಸ್ಪದ ಪ್ರಕರಣವನ್ನು ದಾಖಲಿಸಲಾಗಿದೆ.ಪಣಂಬೂರು ಮತ್ತು ಮಂಗಳೂರು ಸಂಚಾರ
ನೆಲ್ಯಾಡಿ: ಪೆರಿಯಶಾಂತಿಯ ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯರೂ ತೀವ್ರವಾದ ಗಾಯಗೊಂಡ ಘಟನೆ ಸಂಭವಿಸಿದೆ. ಕಡಬ ಸಮೀಪದ ಕುಟ್ರುಪಾಡಿ ನಿವಾಸಿಯಾದ ರಾಜು, ಅ್ಯನಿ, ಸಿನ್ಸಿ, ಮೇರಿ ಎಂಬುವರು ಕೆನಡಕ್ಕೆ ತೆರಳುವ ಮಗನನ್ನು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಿಟ್ಟು ಬರುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಕಾರಿನಲ್ಲಿದ್ದ ಅ್ಯನಿ ಎಂಬ ಮಹಿಳೆಯ ಕೈ ಹಾಗೂ ಕಾಲುಳಿಗೆ ತೀವ್ರವಾಗಿ ಗಾಯಗೊಂಡಿದ್ದು ಇವರನ್ನು ಮಂಗಳೂರಿನ
ಬಂಟ್ವಾಳ: ಮಹಿಳೆಯೊಬ್ಬರು ಸಂಗಬೆಟ್ಟು ಸಮೀಪದ ಪುಚ್ಚಮೊಗರು ಎಂಬಲ್ಲಿ ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಹಣ ದ್ವಿಗುಣಗೊಳಿಸುವ ಆಪ್ ನಲ್ಲಿ ರೂ. 21 ಲಕ್ಷ ಹೂಡಿಕೆ ಮಾಡಿ, ಹಣ ಕಳೆದುಕೊಂಡಿದ್ದರು. ಈ ಬಗ್ಗೆ ಪೊಲೀಸ್ ಠಾಣೆಗೂ ದೂರು ನೀಡಿದ್ದರು. ಕುಕ್ಕಿಪಾಡಿ ಗ್ರಾಮದ ಏರೋಡಿಯ ಜಾನ್ ಸಂತೋಷ್ ಡಿಸೋಜ ಅವರ ಪತ್ನಿ ವೀಟಾ ಮರಿನಾ ಡಿಸೋಜ (32) ಮೃತ ಮಹಿಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಕ್ಕಳು ಇಲ್ಲ ಎಂಬ ಕೊರಗು ಜೊತೆಗೆ ಆರ್ಥಿಕ
ಓಮ್ನಿ ಹಾಗೂ ಕ್ರೆಟಾ ಕಾರು ಢಿಕ್ಕಿಯಾದ ಪರಿಣಾಮ ಓರ್ವ ಮೃತಪಟ್ಟು, ಓಮ್ನಿಯಲ್ಲಿದ್ದ 8 ಮಂದಿ ಗಂಭೀರ ಗಾಯಗೊಂಡ ಘಟನೆ ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪದ ಡಿ.23ರ ಶನಿವಾರ ಮಧ್ಯಾಹ್ನ ನಡೆದಿದೆ. ಓಮ್ನಿ ಚಲಾಯಿಸುತ್ತಿದ್ದ ಸೋಮವಾರ ಪೇಟೆಯ ಚೌಡ್ಲು ಗ್ರಾಮದ ಕೆಂಚುಮನೆ ನಿವಾಸಿ ರವಿ (53) ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಮೃತಪಟ್ಟಿದ್ದಾರೆ. ರವಿ ಅವರ ತಾಯಿ ಮಣಿಯಮ್ಮ(75), ಪತ್ನಿ ವಾಣಿ (47), ಪುತ್ರಿ ರಿಷಾ (19), ಪುತ್ರ ಶರಣ್
ಮಾನಸಿಕ ಆರೋಗ್ಯ ಸಮಸ್ಯೆಗಳಿರುವ ವ್ಯಕ್ತಿಗಳನ್ನು ನೋಡಿಕೊಳ್ಳುವ ಪ್ರಮುಖ ಸಂಸ್ಥೆಯಾದ ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರವು ಡಿಸೆಂಬರ್ 21 ರಂದು ತನ್ನ ನಿವಾಸಿಗಳಿಗೆ ಕ್ರಿಸ್‌ಮಸ್ ಆಚರಣೆಯನ್ನು ಏರ್ಪಡಿಸಿತ್ತು. ನಿವಾಸಿಗಳು ಮತ್ತು ಸಿಬ್ಬಂದಿ ವರ್ಣರಂಜಿತ ಹಬ್ಬದ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು. ಸಿಬ್ಬಂದಿ ಮತ್ತು ನಿವಾಸಿಗಳು ಪ್ರದರ್ಶಿಸಿದ ಆಕರ್ಷಕ ಕ್ರಿಸ್ಮಸ್ ಸ್ಕಿಟ್‌ನೊಂದಿಗೆ ಆಚರಣೆಯು ಪ್ರಾರಂಭವಾಯಿತು. ಕ್ರಿಸ್‌ಮಸ್ ಕ್ಯಾರೋಲ್‌ಗಳಿಗೆ




























