ಮಣ್ಣಗುಡ್ಡದ ಅಂಗಡಿಯಲ್ಲಿ ಬೆಂಕಿ : ಸಕಾಲದಲ್ಲಿ ಆರಿಸಿದ ಅಗ್ನಿಶಾಮಕ ದಳ

ಮಂಗಳೂರು ಮಣ್ಣಗುಡ್ಡದ ಮಠದಕಣಿ ರಸ್ತೆಯ ಮಿಶನ್ ಗೋರಿ ರಸ್ತೆಯಲ್ಲಿದ್ದ ದಿನಸಿ ಅಂಗಡಿಯೊಂದರಲ್ಲಿ ಬೆಂಕಿ ಅವಘಡ ಸಂಬವಿಸಿ ಅಂಗಡಿಯಲ್ಲಿದ್ದ ವಸ್ತುಗಳಲ್ಲಿ ಸುಟ್ಟು ಕರಕಲಾಗಿವೆ.
ಅಗ್ನಿಶಾಮಕ ದಳದವರು ಸಕಾಲದಲ್ಲಿ ಆಗಮಿಸಿ ಬೆಂಕಿ ನಂದಿಸಿದ್ದರಿಂದ ಆಚೀಚೆಯ ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಹರಡಲಿಲ್ಲ. ಆದರೆ ಸಂದೀಪ್ ಎಂಬವರಿಗೆ ಸೇರಿದ ಅಂಗಡಿಯೊಳಗಿನ ವಸ್ತುಗಳೆಲ್ಲ ಸುಟ್ಟು ಹೋಗಿವೆ. ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಅವಘಡಕ್ಕೆ ಕಾರಣ ಎನ್ನಲಾಗಿದೆ. ಇಂದು ಮುಂಜಾವ ಐದೂವರೆ ಗಂಟೆಯ ಹೊತ್ತಿಗೆ ಈ ಬೆಂಕಿ ಅವಘಡ ನಡೆದಿದೆ.
