ಮೂಲ್ಕಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ತುಳು ಕನ್ನಡ ಸಾಹಿತಿ ಡಾ ಗಣೇಶ ಅಮೀನ್ ಸಂಕಮಾರ್ ಆಯ್ಕೆಯಾಗಿದ್ದಾರೆ ಎಂದು ದ.ಕ ಜಿಲ್ಲಾ ಕಸಾಪ ಅಧ್ಯಕ್ಷ ಡಾ ಎಂ ಪಿ ಶ್ರೀನಾಥ್ ಮಾಧ್ಯಮಕ್ಕೆ ತಿಳಿಸಿದ್ದಾರೆ. ಇದೇ ಡಿಸೆಂಬರ್ 27ರಂದು ಮೂಲ್ಕಿ ಕಾರ್ನಾಡು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಡಾ.ಗಣೇಶ ಅಮೀನ್
ವಿಟ್ಲ: ಪುಣಚ ಸಮೀಪದ ತೋರಣಕಟ್ಟೆಯಲ್ಲಿ ಪಾಳು ಬಾವಿಯೊಂದಕ್ಕೆ ನರಿ ಬಿದ್ದಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳೀಯರ ನೆರವಿನೊಂದಿಗೆ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ನಿರುಪಯುಕ್ತವಾದ ಬಾವಿಯ ಒಳಗೆ ಆಹಾರ ಅರಸಿಕೊಂಡು ಬಂದ ನರಿ ಬಿದ್ದಿದ್ದು, ಅದರ ಕೂಗು ಕೇಳಿ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿಯನ್ನು ನೀಡಿದ್ದಾರೆ. ಸಹಾಯಕ ವಲಯ ಅರಣ್ಯಾಧಿಕಾರಿ ಸೀತಾರಾಮ ನೇತೃತ್ವದಲ್ಲಿ ಸ್ಥಳೀಯ ನಿವಾಸಿ ವಾಮನ್ ನಾಯಕ್ ಎಂಬರು ಬಾವಿಗೆ ಇಳಿದು ನರಿಯನ್ನು ಗೋಣಿಗೆ
ಮೊಂಟ್ರಾ ಇಲೆಕ್ಟ್ರಿಕ್ ಅಧಿಕೃತ ಡೀಲರ್‌ನ ತನಿಯಾ ಮೋಟಾರ್ಸ್ ಸೂಪರ್ ಆಟೋ ಶೋರೂಂ ಕಾಪುವಿನ ಕೊಪ್ಪಲಂಗಡಿಯ ಸ್ವಸ್ತಿಕ್ ಎನ್‌ಕ್ಲೇವ್‌ನಲ್ಲಿ ಡಿಸೆಂಬರ್ 15ರಂದು ಶುಭಾರಂಭಗೊಳ್ಳಲಿದ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹಾಗೂ ಉತ್ಪಾದನೆ ಹೆಚ್ಚಾಗಿದೆ. ಕಾರು, ಸ್ಕೂಟರ್, ಬೈಕ್ ಹಾಗೂ ತ್ರಿಚಕ್ರ ವಾಹನಗಳ ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಯಾಗಿದೆ. ಇದೀಗ ಪ್ರತಿ ಕ್ಷೇತ್ರದಲ್ಲಿ ಪೈಪೋಟಿ ಹೆಚ್ಚಾಗಿದೆ. ಈ ರಿಕ್ಷಾವನ್ನು ಒಂದು ಬಾರಿ ಚಾರ್ಜ್ ಮಾಡಿದರೆ 197 ಕಿಲೋ
ಆರೆಸ್ಸೆಸ್ ರಾಷ್ಟ್ರೀಯ ಕಚೇರಿ ಇರುವ ನಾಗಪುರ ವಲಯದಲ್ಲಿ ಬಿಜೆಪಿಗೆ ಭಾರೀ ಮುಖಭಂಗವಾಗಿದೆ. ಈ ಜಿಲ್ಲೆಯ ಹದಿಮೂರು ಪಂಚಾಯತು ಸಮಿತಿಗಳಲ್ಲಿ ಒಂಬತ್ತರ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.ಮೂರು ಪಂಚಾಯತು ಸಮಿತಿಗಳು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷಕ್ಕೆ ಸಿಕಿದೆ. ಒಂದರಲ್ಲಿ ಶಿವಸೇನೆಯ ಭಿನ್ನಮತೀಯ ಬಣವು ಅಧ್ಯಕ್ಷತೆಯನ್ನು ಗೆದ್ದಿದೆ. ಬಿಜೆಪಿ ಒಂದರಲ್ಲೂ ಅಧ್ಯಕ್ಷ ಸ್ಥಾನ ಗೆಲ್ಲಲು ವಿಫಲವಾಗಿದೆ. ಮೈತ್ರಿ ಕಾರಣಕ್ಕೆ ಎರಡು ಕಡೆ
ಸುಳ್ಯ ತಾಲೂಕಿನ ಮಂಡೆಕೋಲು ಸುತ್ತಮುತ್ತ ಆನೆಗಳ ಹಿಂಡು ಒಂದು ತಳವೂರಿದ್ದು ಕಾಡಿಗಿಂತ ಹೆಚ್ಚಾಗಿ ನಾಡನ್ನು ಆಶ್ರಯಿಸಿದ್ದು, ಸುತ್ತ ಮುತ್ತ ಸಿಕ್ಕ ಕೃಷಿ ಬೆಳೆಗಳನ್ನೆಲ್ಲ ಒಂದು ಹದ ಮಾಡಿವೆ.ಒಂಬತ್ತು ಆನೆಗಳ ಈ ಹಿಂಡಿನಲ್ಲಿ ಒಂದು ಮರಿಯಾನೆ ಕೂಡ ಇದೆ. ಮರಿಯನ್ನು ಜತನದಿಂದ ನೋಡಿಕೊಳ್ಳುವ ಆನೆಗಳು ಜನರತ್ತ, ಜನ ನಿವಾಸಿಗಳತ್ತ ಸಿಟ್ಟಿನಿಂದಲೇ ಇರುವುದಾಗಿಯೂ, ಜನರು ಭಯದಿಂದ ಬದುಕುವ ವಾತಾವರಣ ಇದೆ ಎನ್ನಲಾಗಿದೆ. ಮಂಡೆಕೋಲು ಬಳಿಯ ಪಂಜಿಕಲ್ಲು ಎಂಬಲ್ಲಿ ಪಯಸ್ವಿನಿ
ಸಂಸತ್ ದಾಳಿಯ ಆರೋಪಿ ಮನೋರಂಜನ್ ವಿವೇಕಾನಂದ, ಭಗತ್ ಸಿಂಗ್ ಮೊದಲಾದವರ ಪುಸ್ತಕ ಹೆಚ್ಚು ಓದುತ್ತಿದ್ದ ಎಂದೂ, ಮನೆಯಲ್ಲಿ ಸಾಕಷ್ಟು ಕ್ರಾಂತಿಕಾರಿಗಳ ಎಡ ಬಲ ವಾದದ ಪುಸ್ತಕಗಳು ದೊರೆತಿರುವುದಾಗಿ ವರದಿಯಾಗಿದೆ. ಹಾಸನ ಜಿಲ್ಲೆಯ ರಾಮನಾಥಪುರ ತಾಲೂಕಿನ ಮಲ್ಲಾಪುರ ಗ್ರಾಮ ಮೂಲದ ದೇವರಾಜೇಗೌಡ, ಶೈಲಜಾ ದಂಪತಿಯ ಮಗ ಮನೋರಂಜನ್. ವಿಕ್ರಾಂತ್ ಉದ್ಯೋಗದ ಬಳಿಕ ದೇವರಾಜೇಗೌಡರು ಕೃಷಿ ಮಾಡುತ್ತಿದ್ದರು. ಮೈಸೂರಿನ ವಿಜಯನಗರದಲ್ಲಿ ಸ್ವಂತ ಕಟ್ಟಿದ ಮನೆಯಲ್ಲಿ ವಾಸವಿದ್ದರು.
ಸೆಪ್ಟೆಂಬರ್ ವಿಶೇಷ ಸಂಸತ್ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆ ಸ್ವೀಕಾರದ ವೇಳೆ ಅಟ್ಟಣಿಗೆಯಿಂದ ಕೆಲವರು ಮೋದೀಜಿ ಜೈ ಎಂದು ಕೂಗಿದ್ದರು. ಇದು ಭದ್ರತಾ ಲೋಪ, ನಾಳೆ ಅಟ್ಟಣಿಗೆಯಿಂದ ದಾಳಿ ಆಗಬಹುದು, ಬಾಂಬು ಎಸೆಯಬಹುದು ಎಂದು ಹಲವು ಸಂಸದರು ಆತಂಕ ವ್ಯಕ್ತಪಡಿಸಿದ್ದರು. ಈಗ ಇಬ್ಬರು ಗ್ಯಾಲರಿಯಿಂದ ಲೋಕಸಭೆಯೊಳಕ್ಕೆ ನುಗ್ಗಿ ಬಂದು ಹಾರಿ ಸಿಕ್ಕಿ ಬಿದ್ದಿದ್ದಾರೆ. ಇವರೂ ಬಲಪಂಥೀಯರೆ. ಅವರಲ್ಲಿ ಒಬ್ಬ ಮೈಸೂರಿನ ವಿದ್ಯಾರ್ಥಿ. ಪ್ರೇಕ್ಷಕರ ಗ್ಯಾಲರಿಗೆ ಪಾಸ್ ಮೈಸೂರು
ಕರ್ನಾಟಕ ಲೋಕಾಯುಕ್ತದ ಮಂಗಳೂರು ವಿಭಾಗದ ಅಧಿಕಾರಿಗಳಿಂದ ಕಡಬ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಲೋಕಾಯುಕ್ತ ಜನಸಂಪರ್ಕ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಲೋಕಾಯುಕ್ತ ಮಂಗಳೂರು ವಿಭಾಗದ ಎಸ್‍ಪಿ ಸೈಮನ್ ಮಾತನಾಡಿ ಕಡಬ ತಾಲೂಕಿನಲ್ಲಿ ಸಾರ್ವಜನಿಕರ ಕುಂದು ಕೊರತೆಗಳ ಬಗ್ಗೆ ಹಾಗೂ ಸಾರ್ವಜನಿಕರಿಗೆ ಯಾವುದೇ ಅಧಿಕಾರಿಗಳು ಸರಿಯಾಗಿ ಸ್ಪಂದನೆ ನೀಡದೆ ಅಧಿಕಾರ ನಡೆಸದಿದ್ದರೆ. ಸರಕಾರಿ ಸವಲತ್ತುಗಳನ್ನು ದೊರಕಿಸಿಕೊಡುವಲ್ಲಿ ವಿನಕಾರಣ ತೊಂದರೆ ನೀಡಿದಲ್ಲಿ
ಉಳ್ಳಾಲ: ಯುವಕನೋರ್ವನನ್ನು ಚೂರಿಯಿಂದ ಇರಿದು ಹತ್ಯೆ ನಡೆಸಿರುವ ಘಟನೆ ಸೋಮೇಶ್ವರ ಪುರಸಭೆ ವ್ಯಾಪ್ತಿಯ ಸಾರಸ್ವತಕಾಲನಿ ಎಂಬಲ್ಲಿ ನಿನ್ನೆ ತಡರಾತ್ರಿ ವೇಳೆ ಸಂಭವಿಸಿದೆ. ಸಾರಸ್ವತಕಾಲನಿ ನಿವಾಸಿ ವರುಣ್ (28) ಹತ್ಯೆಯಾದವರು. ಸ್ಥಳೀಯ ಸೂರಜ್ ಎಂಬಾತ ಕೃತ್ಯ ಎಸಗಿರುವುದಾಗಿ ಪೆÇಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಕೊಲ್ಯ ಜಾಯ್ಲಾಂಡ್ ಶಾಲೆ ಸಮೀಪ ತಡರಾತ್ರಿ ವೇಳೆ ಸೂರಜ್ ಹಾಗೂ ಇನ್ನಿಬ್ಬರು ಮದ್ಯಪಾನ ನಡೆಸುತ್ತಿರುವುದನ್ನು ವರುಣ್ ಪ್ರಶ್ನಿಸಿದ್ದರು. ಇದರಿಂದ ಐದು
ದೇವರ ಸೃಷ್ಠಿಯಲ್ಲಿ ಎಲ್ಲಾರಿಗೂ ಬದುಕುವ ಸಮಾನ ಅವಕಾಶವಿದ್ದು, ಮೇಲು ಕೀಳು ಎಂಬ ಬೇಧ ಸಲ್ಲದು, ಅದರಲ್ಲೂ ವಿಶೇಷ ಮಕ್ಕಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಮೂಲಕ ಅವರನ್ನು ಸಂತೋಷವಾಗಿಡುವ ಜವಾಬ್ದಾರಿ ನಮ್ಮದಾಗಿದೆ ಎಂಬುದಾಗಿ ಪಡುಬಿದ್ರಿ ಇನ್ನರ್ ವೀಲ್ಹ್ ಕ್ಲಬ್ ಅಧ್ಯಕ್ಷೆ ನಮೃತ ಮಹೇಶ್ ಅಭಿಪ್ರಾಯಪಟ್ಟರು. ಅವರು ಉಡುಪಿಯ ಸಾಲ್ಮರ ಉಪ್ಪೂರು ಔದ್ಧಿಕ ದಿವಾಂಗರ ವಸತಿ ಕೇಂದ್ರಕ್ಕೆ ತಮ್ಮ ತಂಡದೊಂದಿಗೆ ಭೇಟಿ ಮಾಡಿ ಅಲ್ಲಿನ ಸಾಧಕ ಭಾದಕಗಳನ್ನು ಅರಿತು ಬಳಿಕ ನಡೆದ ಸರಳ




























