ಪಡುಬಿದ್ರಿ : ದೇವರ ಸೃಷ್ಠಿಯಲ್ಲಿ ಎಲ್ಲರಿಗೂ ಬದುಕುವ ಸಮಾನ ಅವಕಾಶ: ನಮೃತಾ ಮಹೇಶ್
ದೇವರ ಸೃಷ್ಠಿಯಲ್ಲಿ ಎಲ್ಲಾರಿಗೂ ಬದುಕುವ ಸಮಾನ ಅವಕಾಶವಿದ್ದು, ಮೇಲು ಕೀಳು ಎಂಬ ಬೇಧ ಸಲ್ಲದು, ಅದರಲ್ಲೂ ವಿಶೇಷ ಮಕ್ಕಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಮೂಲಕ ಅವರನ್ನು ಸಂತೋಷವಾಗಿಡುವ ಜವಾಬ್ದಾರಿ ನಮ್ಮದಾಗಿದೆ ಎಂಬುದಾಗಿ ಪಡುಬಿದ್ರಿ ಇನ್ನರ್ ವೀಲ್ಹ್ ಕ್ಲಬ್ ಅಧ್ಯಕ್ಷೆ ನಮೃತ ಮಹೇಶ್ ಅಭಿಪ್ರಾಯಪಟ್ಟರು.
ಅವರು ಉಡುಪಿಯ ಸಾಲ್ಮರ ಉಪ್ಪೂರು ಔದ್ಧಿಕ ದಿವಾಂಗರ ವಸತಿ ಕೇಂದ್ರಕ್ಕೆ ತಮ್ಮ ತಂಡದೊಂದಿಗೆ ಭೇಟಿ ಮಾಡಿ ಅಲ್ಲಿನ ಸಾಧಕ ಭಾದಕಗಳನ್ನು ಅರಿತು ಬಳಿಕ ನಡೆದ ಸರಳ ಕಾರ್ಯಕ್ರಮವೊಂದರಲ್ಲಿ ವಿಶೇಷ ಮಕ್ಕಳಿಗೆ ಬೇಕಾದ ದಿನ ಬಳಕೆ ವಸ್ತುಗಳನ್ನು ಸಂಸ್ಥೆಯ ಮುಖ್ಯರಿಗೆ ಹಸ್ತಾಂತರ ಮಾಡಿದ್ದಾರೆ.
ಈ ಸಂದರ್ಭ ಇನ್ನರ್ ವೀಲ್ಹ್ ಕಾರ್ಯದರ್ಶಿ ಮನೋರಮ ಮೇಗನಾಥ್, ಪ್ರಮುಖರಾದ ವಸುಧಾ ಕೋಟ್ಯಾನ್, ರಾಜೇಶ್ವರಿ ಅವಿನಾಶ್, ಅಪ್ಪಿ ಸಾಲ್ಯಾನ್, ಸುನೀತಾ ಭಕ್ತ ವತ್ಸಲ, ಅನಿತಾ ಬಿ.ವಿ ಹಾಗೂ ಸ್ಪಂದನ ಸಂಸ್ಥೆಯ ಮುಖ್ಯಸ್ಥ ಜನಾರ್ದನ್ ಉಪಸ್ಥಿತರಿದ್ದರು.