ಮಂಡೆಕೋಲು ಬಳಿ ಆನೆಗಳ ಹಿಂಡು : ಕಾಡು ಬಿಟ್ಟು ನಾಡಲ್ಲಿ ಓಡಾಟ
ಸುಳ್ಯ ತಾಲೂಕಿನ ಮಂಡೆಕೋಲು ಸುತ್ತಮುತ್ತ ಆನೆಗಳ ಹಿಂಡು ಒಂದು ತಳವೂರಿದ್ದು ಕಾಡಿಗಿಂತ ಹೆಚ್ಚಾಗಿ ನಾಡನ್ನು ಆಶ್ರಯಿಸಿದ್ದು, ಸುತ್ತ ಮುತ್ತ ಸಿಕ್ಕ ಕೃಷಿ ಬೆಳೆಗಳನ್ನೆಲ್ಲ ಒಂದು ಹದ ಮಾಡಿವೆ.ಒಂಬತ್ತು ಆನೆಗಳ ಈ ಹಿಂಡಿನಲ್ಲಿ ಒಂದು ಮರಿಯಾನೆ ಕೂಡ ಇದೆ. ಮರಿಯನ್ನು ಜತನದಿಂದ ನೋಡಿಕೊಳ್ಳುವ ಆನೆಗಳು ಜನರತ್ತ, ಜನ ನಿವಾಸಿಗಳತ್ತ ಸಿಟ್ಟಿನಿಂದಲೇ ಇರುವುದಾಗಿಯೂ, ಜನರು ಭಯದಿಂದ ಬದುಕುವ ವಾತಾವರಣ ಇದೆ ಎನ್ನಲಾಗಿದೆ. ಮಂಡೆಕೋಲು ಬಳಿಯ ಪಂಜಿಕಲ್ಲು ಎಂಬಲ್ಲಿ ಪಯಸ್ವಿನಿ ನದಿಯಲ್ಲಿ ನೀರಾಟ ಆಡುವ ಈ ಆನೆಗಳು ಸುತ್ತಮುತ್ತ ಬೆಳೆ ಭಾಗ್ಯದಲ್ಲಿ ತಮ್ಮ ಭಾಗ ಎಂದು ಸಾಕಷ್ಟು ತಿಂದು ಹಾಕಿವೆ.