ಸಂಸತ್ ದಾಳಿಯ ಆರೋಪಿ ಮನೋರಂಜನ್ ಓದುವ ಪುಸ್ತಕಗಳ ಕ್ರಾಂತಿ
ಸಂಸತ್ ದಾಳಿಯ ಆರೋಪಿ ಮನೋರಂಜನ್ ವಿವೇಕಾನಂದ, ಭಗತ್ ಸಿಂಗ್ ಮೊದಲಾದವರ ಪುಸ್ತಕ ಹೆಚ್ಚು ಓದುತ್ತಿದ್ದ ಎಂದೂ, ಮನೆಯಲ್ಲಿ ಸಾಕಷ್ಟು ಕ್ರಾಂತಿಕಾರಿಗಳ ಎಡ ಬಲ ವಾದದ ಪುಸ್ತಕಗಳು ದೊರೆತಿರುವುದಾಗಿ ವರದಿಯಾಗಿದೆ.
ಹಾಸನ ಜಿಲ್ಲೆಯ ರಾಮನಾಥಪುರ ತಾಲೂಕಿನ ಮಲ್ಲಾಪುರ ಗ್ರಾಮ ಮೂಲದ ದೇವರಾಜೇಗೌಡ, ಶೈಲಜಾ ದಂಪತಿಯ ಮಗ ಮನೋರಂಜನ್. ವಿಕ್ರಾಂತ್ ಉದ್ಯೋಗದ ಬಳಿಕ ದೇವರಾಜೇಗೌಡರು ಕೃಷಿ ಮಾಡುತ್ತಿದ್ದರು. ಮೈಸೂರಿನ ವಿಜಯನಗರದಲ್ಲಿ ಸ್ವಂತ ಕಟ್ಟಿದ ಮನೆಯಲ್ಲಿ ವಾಸವಿದ್ದರು.