Home Blog Left SidebarPage 325

ಕಡಿಯಾಳಿ: ಹಾಲಿನ ಟ್ರೇಗಳಿಗೆ ಢಿಕ್ಕಿಯಾದ ಪಿಕಪ್ ವಾಹನ: ಹಾಲು ರಸ್ತೆಪಾಲು

ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸಿದ ಪಿಕಪ್ ವಾಹನವೊಂದು ಹಾಲಿನ ಬೂತ್ ಎದುರಿಗಿದ್ದ ಟ್ರೇಗಳಿಗೆ ಡಿಕ್ಕಿ ಹೊಡೆದ ಘಟನೆ ಕಡಿಯಾಳಿಯಲ್ಲಿ ನಡೆದಿದೆ. ಸೋಮವಾರ ಬೆಳಗ್ಗೆ ಈ ಘಟನೆ ನಡೆದಿದೆ. ಪರಿಣಾಮ ಹಾಲಿನ ಪ್ಯಾಕೇಟ್‍ಗಳು ಒಡೆದು ಹಾಲು ಚೆಲ್ಲಾಪಿಲ್ಲಿಯಾಗಿದೆ. ದ್ವಿಚಕ್ರ ವಾಹನ ಹಾಗೂ ಪಕ್ಕದಲ್ಲಿದ್ದ ಸ್ಯೆಕಲ್ ಸವಾರರು ಅಪಾಯದಿಂದ

ಮತ್ತೆ ಗೃಹ ಬಂಧನದಲ್ಲಿ ಇಡಿ- ಮೆಹಬೂಬಾ

ತೀರ್ಪು ಕೇಂದ್ರ ಸರಕಾರದ ಪರ ಆದ ಮತ್ತು ಚುನಾವಣೆ ನಡೆಸಲು ಇನ್ನೂ ಹತ್ತು ತಿಂಗಳಷ್ಟು ಕಾಲಾವಕಾಶ ಕೊಟ್ಟಿರುವುದು ಜಮ್ಮು ಮತ್ತು ಕಾಶ್ಮೀರದ ರಾಜಕೀಯ ನಾಯಕರಿಗೆ ತೃಪ್ತಿ ತಂದಿಲ್ಲ. ಮತ್ತೆ ಬಂಧಿಸಿ ಗೃಹ ಬಂಧನದಲ್ಲಿ ಇಡುವಂತೆ ಮಾಜೀ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಒತ್ತಾಯಿಸಿದರು.ಆದರೆ ಲೆಫ್ಟಿನೆಂಟ್ ಗವರ್ನರ್ ಅದಕ್ಕೆ ಸಮ್ಮತಿಸಿಲ್ಲ. ಕಾಶ್ಮೀರದ ಎಲ್ಲ ಕಡೆ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಉಸಿರು ಕಟ್ಟಿಸುವಂತಿದೆ. ನನ್ನನ್ನೂ ಬಂಧನದಲ್ಲಿಡಿ ಎಂದು ಮೆಹಬೂಬಾ

ಬೈಂದೂರು: ಇತಿಹಾಸ ಪ್ರಸಿದ್ಧ ಬೈಂದೂರು ತಗ್ಗರ್ಸೆ ಕಂಬಳೋತ್ಸವಕ್ಕೆ ಚಾಲನೆ

ಹಲವು ಶತಮಾನಗಳ ಇತಿಹಾಸ ಹೊಂದಿರುವ ಉಡುಪಿ ಜಿಲ್ಲೆ ಬೈಂದೂರು ಸಮೀಪದ ತಗ್ಗರ್ಸೆ ಸಾಂಪ್ರದಾಯಿಕ ಕಂಬಳೋತ್ಸವವು ಕಂಠದಮನೆ ಕುಟುಂಬಸ್ಥರಿಗೆ ಸೇರಿದ ಕಂಬಳಗದ್ದೆಯಲ್ಲಿ ಪ್ರತಿವರ್ಷದಂತೆ ಸಂಭ್ರಮದಿಂದ ನಡೆಯಿತು. 60ಕ್ಕೂ ಅಧಿಕ ಜೊತೆ ಕೋಣಗಳು ಹರಕೆ ಹಾಗೂ ಸ್ವರ್ಧೆಯಲ್ಲಿ ಭಾಗವಹಿಸುವ ಮೂಲಕ ತಗ್ಗರ್ಸೆ ಕಂಬಳದ ಮೆರುಗು ಮತ್ತಷ್ಟು ಹೆಚ್ಚಿತು. ಕಂಠದಮನೆ ಟಿ. ನಾರಾಯಣ ಹೆಗ್ಡೆಯವರ ಕುಟುಂಬದವರಿಂದ ಸಾಂಪ್ರದಾಯಿಕ ಕಂಬಳ ವರ್ಷಂಪ್ರತಿ ನಡೆಯುತ್ತಿದ್ದು ಈ ಬಾರಿ

ಕಾರ್ಕಳ: ಬಸ್ಸು – ಬೊಲೆರೋ ವಾಹನ ಡಿಕ್ಕಿ, ಓರ್ವ ಮೃತ್ಯು, ಇಬ್ಬರಿಗೆ ಗಾಯ

ಬೆಳ್ಮಣ್: ಬಸ್ಸು ಹಾಗೂ ಬೊಲೆರೋ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಒರ್ವ ಸ್ಥಳದಲ್ಲೇ ಮೃಪಟ್ಟು ಇಬ್ಬರ ಗಂಭೀರ ಗಾಯಗೊಂಡ ಘಟನೆ ಕಾರ್ಕಳದ ಮಂಜರಪಲ್ಕೆ ಎಂಬಲ್ಲಿ ನಡೆದಿದೆ. ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಮಂಜರ್ಪಲ್ಕೆ ಎಂಬಲ್ಲಿ ನಂದಳಿಕೆ ಕಡೆಯಿಂದ ಬರುತ್ತಿದ್ದ ಬೋಲೆರೊ ಕಾರು ಕಾರ್ಕಳ ಕಡೆಯಿಂದ ಬರುತ್ತಿದ್ದ ಮುಂಬೈ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಜಯಪುರ ನಿವಾಸಿ ಶಿವಪ್ಪ 48 ಸ್ಥಳದಲ್ಲೇ ಮೃತಪಟ್ಟರೆ, ಮಂಜು 45

ಜಮ್ಮು-ಕಾಶ್ಮೀರ: ವಿಶೇಷ ಸ್ಥಾನಮಾನ ರದ್ದು: ಕೇಂದ್ರದ ಆದೇಶ ಎತ್ತಿಹಿಡಿದ ಸುಪ್ರೀಂ: 2024ರ ಸೆ.30ರೊಳಗೆ ಚುನಾವಣೆ ನಡೆಸಲು ಆದೇಶ

370ನೇ ವಿಧಿಯ ವಿಶೇಷ ಅಧಿಕಾರವನ್ನು ಜಮ್ಮು ಮತ್ತು ಕಾಶ್ಮೀರದಿಂದ ಕಿತ್ತುಕೊಂಡು 4 ವರುಷವಾದ ಬಳಿಕ ಇಂದು ಸುಪ್ರೀಂ ಕೋರ್ಟು ನೀಡುವ ತೀರ್ಪಿನತ್ತ ಎಲ್ಲರ ಕಣ್ಣೋಟವಿತ್ತು. ವಿಭಜನೆಯನ್ನು ಮಾನ್ಯ ಮಾಡಿ ಸುಪ್ರೀ ಕೋರ್ಟು ಒಟ್ಟಾರೆ ತೀರ್ಪು ನೀಡಿದೆ. ಪಂಚ ನ್ಯಾಯಾಧೀಶರ ಏಕಾಭಿಪ್ರಾಯದ ತೀರ್ಪು ಎನ್ನಲಾಗಿದೆಯಾದರೂ ಮೂರು ವಿಭಿನ್ನ ಅಭಿಪ್ರಾಯದ ತೀರ್ಪು ಹೊರಬಂದಿದೆ. ಸರಕಾರದ, ಸಂಸತ್ತಿನ ತೀರ್ಮಾನ ಆದೇಶವನ್ನು ಅಲ್ಲಗಳೆಯಲಾಗದು. ಒಕ್ಕೂಟ ಸೇರಿದ ಮೇಲೆ ಪ್ರತ್ಯೇಕ

ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ – ಡಿ.10ರಿಂದ ಡಿ.24ರ ವರೆಗೆ ಚಂಪಾಷಷ್ಠಿ ಮಹೋತ್ಸವ

ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿ.10ರಿಂದ 24ರ ವರೆಗೆ ಚಂಪಾಷಷ್ಠಿ ಮಹೋತ್ಸವ ವಿಜೃಂಭಣೆಯಿಂದ ನಡೆಯಲಿದ್ದು, ಶ್ರೀ ದೇವಳದಲ್ಲಿ ಮೂಲಮೃತಿಕಾ ಪ್ರಸಾದ ತೆಗೆಯುವ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಮೋಹನ್ ರಾಮ್ ಎಸ್ ಸುಳ್ಳಿ, ವ್ಯವಸ್ಥಾಪನ ಸಮಿತಿಯ ಸದಸ್ಯರು ಸೀತಾರಾಮ ಎಡಪಡಿತಾಯ, ಲೋಕೇಶ್, ಶ್ರೀಮತಿ ವನಜ ವಿ. ಭಟ್ , ಶೋಭಾ ಎಸ್ ಜಿ, ಮನೋಹರ ರೈ, ಪ್ರೀತಿ ಜಿಎಸ್ ಎನ್ ಪ್ರಸಾದ್, ದರ್ಬೆ ಪ್ರಸನ್ನ, ಶ್ರೀವಸ್ತ ವಿ. ಹಾಜರಿದ್ದರು.

ಕಡಬ: :ಶಾರೀರಿಕ ಅಸಕ್ತರಿಗೆ ಸಲಕರಣೆ ವಿತರಣೆ

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕಿನ ಕಡಬ ವಲಯದಲ್ಲಿ ಶಾರೀರಿಕ ಅಸಕ್ತರಿಗೆ ಸಲಕರಣೆ ವಿತರಣೆ ಹಾಗೂ ಮಾರಣಾಂತಿಕ ಕಾಯಿಲೆಯಿಂದ ಬಲಳುತ್ತಿರುವ ಕುಟುಂಬಕ್ಕೆ ಸಹಾಯಧನ ವಿತರಣೆ ಮಾಡಲಾಯಿತು. ಕಡಬ ವಲಯದ ಕಡಬ ಜನನಿ ಪ್ರಗತಿಬಂಧು ಸಂಘದ ಪ್ರಭಾಕರ ಶೆಟ್ಟಿಯವರು ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದು ಇವರಿಗೆ ರೂ 25000 ಸಹಾಯಧನ ವನ್ನು ವಿತರಿಸಲಾಯಿತು. ಕಡಬ ವಲಯದ ಪಿಜಕ್ಕಳ ತೇಜಸ್ ರವರು ಶಾರೀರಿಕ ಸಮಸ್ಶೆಯಿಂದ ನಡೆಯಲು ಸಾಧ್ಶವಾಗದಿದ್ದು

ಮಂಗಳೂರು: ಐಷಾರಾಮಿ ಸೆವೆನ್ ಸೀಸ್ ನ್ಯಾವಿಗೇಟರ್ ಪ್ರವಾಸಿ ಹಡಗು

ನವಮಂಗಳೂರು ಬಂದರಿಗೆ ಐಷಾರಾಮಿ ಸೆವೆನ್ ಸೀಸ್ ನ್ಯಾವಿಗೇಟರ್ ಪ್ರವಾಸಿ ಹಡಗು ಆಗಮಿಸುವುದರೊಂದಿಗೆ ಈ ಬಾರಿಯ ಕ್ರೋಸ್ ಸೀಸನ್ ಅರಂಭಗೊಂಡಿತು. ನಾರ್ವೆಯ ಒಡೆತನದ, ಬಹಾಮಾಸ್ ಧ್ವಜ ಹೊಂದಿದ್ದು 500 ಪ್ರಯಾಣಿಕರು ಮತ್ತು 350 ಸಿಬಂದಿಯನ್ನು ಹೊಂದಿದೆ. 173 ಮೀಟರ್ ಉದ್ದವಿರುವ ಈ ಹಡಗು ಆಗಿದ್ದು, 28,803 ಟನ್ ಭಾರ, ಮತ್ತು 7.5 ಮೀಟರ್ ಆಳವಿದೆ. ಹಡಗಿನಿಂದ ಇಳಿದ ಕ್ರೂಸ್ ಪ್ರಯಾಣಿಕರಿಗೆ ಚೆಂಡೆ ಮತ್ತು ಯಕ್ಷಗಾನ, ಭರತನಾಟ್ಯ ಪ್ರದರ್ಶನದೊಂದಿಗೆ ಸಾಂಪ್ರದಾಯಿಕ ಸ್ವಾಗತ

ಬೆಳಗಾವಿ ; ಬಕೆಟ್ ಜನತಾ ಪಾರ್ಟಿ ಬಿಜೆಪಿ – ಕಾಂಗ್ರೆಸ್ ಪಕ್ಷದಿಂದ ಲೇವಡಿ

ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿಯ ವಿಶ್ವನಾಥ್ ಅವರು ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಅಶೋಕ್‍ರನ್ನು ಬಕೆಟ್ ಹಿಡಿದುಕೊಂಡೇ ರಾಜಕೀಯ ಮಾಡುವವರು ಎಂದು ಟೀಕಿಸಿರುವುದು ಬಿಜೆಪಿಯ ಬಕೆಟ್ ರಾಜಕೀಯವನ್ನು ಬಹಿರಂಗಗೊಳಿಸಿದೆ ಎಂದು ರಾಜ್ಯ ಕಾಂಗ್ರೆಸ್ ಪಕ್ಷ ಗೇಲಿ ಮಾಡಿದೆ. ಬಿಜೆಪಿಯ ಎಸ್. ಆರ್. ವಿಶ್ವನಾಥ್ ಹೇಳಿಕೆಯನ್ನು ಪ್ರಸ್ತಾಪಿಸಿ, ಅಶೋಕ್ ಅವರೆ ಪ್ರತಿಪಕ್ಷದ ನಾಯಕ ಸ್ಥಾನ ಹಿಡಿಯಲು ಯಾರಿಗೆ ಬಕೆಟ್ ಹಿಡಿದಿರಿ

ಒಡಿಶಾ, ಜಾರ್ಖಂಡ್ ಪಶ್ಚಿಮ ಬಂಗಾಳದಲ್ಲಿ ಇಡಿ ದಾಳಿ – 290 ಕೋಟಿ ಕಳ್ಳ ಹಣ ವಶ

ಶನಿವಾರ dec 9 ;- ಇಡಿ- ಜಾರಿ ನಿರ್ದೇಶನಾಲಯದವರು ಒಡಿಶಾ ಮೂಲದ ಡಿಸ್ಟಿಲರಿ ಅವ್ಯವಹಾರಕ್ಕೆ ಸಂಬಂಧಿಸಿದ ಒಡಿಶಾ, ಜಾರ್ಖಂಡ್ ಪಶ್ಚಿಮ ಬಂಗಾಳದ ಮೂರು ಡಿಸ್ಟಿಲರಿಗೆ ದಾಳಿ ಮಾಡಿ 290 ಕೋಟಿ ರೂಪಾಯಿ ಲೆಕ್ಕ ಇಲ್ಲದ ಹಣ ವಶಪಡಿಸಿಕೊಂಡರು.ಈ ದಾಳಿ ವೇಳೆ ಒಂಬತ್ತು ಲಾಕರ್ ಮತ್ತು ಏಳು ಮುಚ್ಚಿದ ಕೋಣೆಗಳನ್ನು ತಪಾಸಣೆ ಮಾಡಲಾಯಿತು. ಕಪಾಟುಗಳಲ್ಲದೆ ಪೀಠೋಪಕರಣಗಳಲ್ಲೂ ಹಣ ಅಡಗಿಸಿಡಲಾಗಿತ್ತು. ಇದೇ ವೇಳೆ ಒಡಿಶಾದ ಮಹಿಳಾ ಮಂತ್ರಿ ಒಬ್ಬರು ಈ ಡಿಸ್ಟಿಲರಿಯ ಜೊತೆ ವೇದಿಕೆ