ಮತ್ತೆ ಗೃಹ ಬಂಧನದಲ್ಲಿ ಇಡಿ- ಮೆಹಬೂಬಾ
ತೀರ್ಪು ಕೇಂದ್ರ ಸರಕಾರದ ಪರ ಆದ ಮತ್ತು ಚುನಾವಣೆ ನಡೆಸಲು ಇನ್ನೂ ಹತ್ತು ತಿಂಗಳಷ್ಟು ಕಾಲಾವಕಾಶ ಕೊಟ್ಟಿರುವುದು ಜಮ್ಮು ಮತ್ತು ಕಾಶ್ಮೀರದ ರಾಜಕೀಯ ನಾಯಕರಿಗೆ ತೃಪ್ತಿ ತಂದಿಲ್ಲ. ಮತ್ತೆ ಬಂಧಿಸಿ ಗೃಹ ಬಂಧನದಲ್ಲಿ ಇಡುವಂತೆ ಮಾಜೀ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಒತ್ತಾಯಿಸಿದರು.ಆದರೆ ಲೆಫ್ಟಿನೆಂಟ್ ಗವರ್ನರ್ ಅದಕ್ಕೆ ಸಮ್ಮತಿಸಿಲ್ಲ. ಕಾಶ್ಮೀರದ ಎಲ್ಲ ಕಡೆ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಉಸಿರು ಕಟ್ಟಿಸುವಂತಿದೆ. ನನ್ನನ್ನೂ ಬಂಧನದಲ್ಲಿಡಿ ಎಂದು ಮೆಹಬೂಬಾ ಅವರು ಒತ್ತಾಯ ಮಾಡಿದರು. ಓಮರ್ ಅಬ್ದುಲ್ಲಾ ಕೂಡ ಹಾಗೆ ತಮ್ಮ ಅಸಂತೃಪ್ತಿ ವ್ಯಕ್ತ ಪಡಿಸಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ತೀರ್ಪಿನಂತೆ ಕೇಂದ್ರದ ಬಿಜೆಪಿ ಸರಕಾರದ ತೀರ್ಮಾನಕ್ಕೆ ಜಯವಾಗಿದೆ.