ಜಮ್ಮು-ಕಾಶ್ಮೀರ: ವಿಶೇಷ ಸ್ಥಾನಮಾನ ರದ್ದು: ಕೇಂದ್ರದ ಆದೇಶ ಎತ್ತಿಹಿಡಿದ ಸುಪ್ರೀಂ: 2024ರ ಸೆ.30ರೊಳಗೆ ಚುನಾವಣೆ ನಡೆಸಲು ಆದೇಶ
370ನೇ ವಿಧಿಯ ವಿಶೇಷ ಅಧಿಕಾರವನ್ನು ಜಮ್ಮು ಮತ್ತು ಕಾಶ್ಮೀರದಿಂದ ಕಿತ್ತುಕೊಂಡು 4 ವರುಷವಾದ ಬಳಿಕ ಇಂದು ಸುಪ್ರೀಂ ಕೋರ್ಟು ನೀಡುವ ತೀರ್ಪಿನತ್ತ ಎಲ್ಲರ ಕಣ್ಣೋಟವಿತ್ತು. ವಿಭಜನೆಯನ್ನು ಮಾನ್ಯ ಮಾಡಿ ಸುಪ್ರೀ ಕೋರ್ಟು ಒಟ್ಟಾರೆ ತೀರ್ಪು ನೀಡಿದೆ. ಪಂಚ ನ್ಯಾಯಾಧೀಶರ ಏಕಾಭಿಪ್ರಾಯದ ತೀರ್ಪು ಎನ್ನಲಾಗಿದೆಯಾದರೂ ಮೂರು ವಿಭಿನ್ನ ಅಭಿಪ್ರಾಯದ ತೀರ್ಪು ಹೊರಬಂದಿದೆ.
ಸರಕಾರದ, ಸಂಸತ್ತಿನ ತೀರ್ಮಾನ ಆದೇಶವನ್ನು ಅಲ್ಲಗಳೆಯಲಾಗದು. ಒಕ್ಕೂಟ ಸೇರಿದ ಮೇಲೆ ಪ್ರತ್ಯೇಕ ಸಾರ್ವಭೌಮತೆ ಇಲ್ಲ. ಸುಗ್ರೀವಾಜ್ಞೆ ಸೀಮಿತ ಅವಧಿಗೆ ಮಾತ್ರ ಇರಬೇಕು. ೩೭೦ ಯುದ್ಧ ಕಾಲದ್ದು ಎಂದರೆ ತಾತ್ಕಾಲಿಕ. ಅದನ್ನು ಸಂಸತ್ತು ರದ್ದು ಮಾಡುವಾಗ ವಿಧಾನ ಸಭೆಯನ್ನು ಕೇಳಬೇಕಾಗಿಲ್ಲ. ಚಂದ್ರಚೂಡ್. ಗವಾಯಿ ಹಾಗೂ ಸೂರ್ಯಕಾಂತ್, ಖನ್ನಾ ಮತ್ತು ಕೌಲ್ ವಿಭಿನ್ನ ತೀರ್ಪು. ೨೦೨೪ರ ಸೆಪ್ಟೆಂಬರ್ ೩೦ರೊಳಗೆ ಚುನಾವಣೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಆದೇಶ ನೀಡಿತು.
ಸಿಜೆಐ ಡಿ. ವೈ. ಚಂದ್ರಚೂಡ್ ಏನು ತೀರ್ಪು ಬಿಜೆಪಿ ಸರಕಾರದ ಪರವೇ, ಜಮ್ಮು ಮತ್ತು ಕಾಶ್ಮೀರದ ಪರವೇ ಎನ್ನುವುದು ಎಲ್ಲರ ಗೊಂದಲವಿತ್ತು. 2019ರ ಜಮ್ಮು ಮತ್ತು ಕಾಶ್ಮೀರ ಮರು ರೂಪ ಕಾಯ್ದೆಯಂತೆ ಅಲ್ಲಿನ ವಿಶೇಷಾಧಿಕಾರವನ್ನು ಮತ್ತು ರಾಜ್ಯದ ಸ್ಥಾನಮಾನವನ್ನು ಕಿತ್ತುಕೊಂಡು ಎರಡು ಕೇಂದ್ರಾಡಳಿತ ಪ್ರದೇಶವಾಗಿ ಒಡೆಯಲಾಗಿತ್ತು.
ಸಿಜೆಐ ಚಂದ್ರಚೂಡರಲ್ಲದೆ ನ್ಯಾಯಮೂರ್ತಿಗಳಾದ ಎಸ್. ಕೆ. ಕೌಲ್, ಸಂಜೀವ್ ಖನ್ನಾ, ಬಿ. ಆರ್. ಗವಾಯಿ, ಸೂರ್ಯಕಾಂತ್ ಅವರುಗಳು ಕಳೆದ ೧೬ ದಿನಗಳಿಂದ ಕೇಂದ್ರ ಸರಕಾರದ ವಾದವನ್ನು ವಿಚಾರಣೆ ಮಾಡಿ ಕೇಳುತ್ತ, ತೀರ್ಪನ್ನು ಡಿಸೆಂಬರ್ 11ಕ್ಕೆ ಕಾಯ್ದಿರಿಸಿದ್ದರು. ಆರಂಭದ ಮುಮ್ಮಡಿ ನ್ಯಾಯಾಧೀಶರ ಪೀಠದಿಂದ ವಿಚಾರಣೆಯನ್ನು ಐವರು ನ್ಯಾಯಾಧೀಶರ ಪೀಠಕ್ಕೆ ವರ್ಗಾಯಿಸಲಾಗಿತ್ತು.