ಒಡಿಶಾ, ಜಾರ್ಖಂಡ್ ಪಶ್ಚಿಮ ಬಂಗಾಳದಲ್ಲಿ ಇಡಿ ದಾಳಿ – 290 ಕೋಟಿ ಕಳ್ಳ ಹಣ ವಶ
ಶನಿವಾರ dec 9 ;- ಇಡಿ- ಜಾರಿ ನಿರ್ದೇಶನಾಲಯದವರು ಒಡಿಶಾ ಮೂಲದ ಡಿಸ್ಟಿಲರಿ ಅವ್ಯವಹಾರಕ್ಕೆ ಸಂಬಂಧಿಸಿದ ಒಡಿಶಾ, ಜಾರ್ಖಂಡ್ ಪಶ್ಚಿಮ ಬಂಗಾಳದ ಮೂರು ಡಿಸ್ಟಿಲರಿಗೆ ದಾಳಿ ಮಾಡಿ 290 ಕೋಟಿ ರೂಪಾಯಿ ಲೆಕ್ಕ ಇಲ್ಲದ ಹಣ ವಶಪಡಿಸಿಕೊಂಡರು.
ಈ ದಾಳಿ ವೇಳೆ ಒಂಬತ್ತು ಲಾಕರ್ ಮತ್ತು ಏಳು ಮುಚ್ಚಿದ ಕೋಣೆಗಳನ್ನು ತಪಾಸಣೆ ಮಾಡಲಾಯಿತು. ಕಪಾಟುಗಳಲ್ಲದೆ ಪೀಠೋಪಕರಣಗಳಲ್ಲೂ ಹಣ ಅಡಗಿಸಿಡಲಾಗಿತ್ತು. ಇದೇ ವೇಳೆ ಒಡಿಶಾದ ಮಹಿಳಾ ಮಂತ್ರಿ ಒಬ್ಬರು ಈ ಡಿಸ್ಟಿಲರಿಯ ಜೊತೆ ವೇದಿಕೆ ಹಂಚಿಕೊಂಡಿರುವ ಫೋಟೋವೊಂದನ್ನು ಬಿಜೆಪಿ ಶಾಸಕರೊಬ್ಬರು ಬಹಿರಂಗಗೊಳಿಸಿದ್ದಾರೆ.