Home Blog Left SidebarPage 347

ಬೈಂದೂರು: ರಾಷ್ಟ್ರೀಯ ದಾಖಲೆ ಗೈದ ಮಣಿಕಂಠ ಹೋಬಳಿದಾರ್ ಅವರಿಗೆ ಹುಟ್ಟೂರ ಸನ್ಮಾನ ಕಾರ್ಯಕ್ರಮ

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಅಥ್ಲೆಟಿಕ್ ಫೆಡರೇಷನ್ ಆಫ್ ಇಂಡಿಯಾ ನೇತೃತ್ವದಲ್ಲಿ 62ನೇ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‍ನಲ್ಲಿ ಸರ್ವಿಸಸ್ ತಂಡವನ್ನು ಪ್ರತಿನಿಧಿಸಿ 100ಮೀ ಓಟದಲ್ಲಿ ಭಾರತದ ಅತ್ಯಂತ ವೇಗದ ಓಟಗಾರರಾಗಿ ದಾಖಲೆ ಮಾಡಿ ಚಿನ್ನದ ಪದಕ ಪಡೆದ ಮಣಿಕಂಠ ಹೋಬಳಿದಾರ್ ಇವರಿಗೆ ಹುಟ್ಟೂರ ಸನ್ಮಾನ ಕಾರ್ಯಕ್ರಮ ಬೈಂದೂರು ಶಾರದಾ

ಉಡುಪಿ ; ನಾಲ್ವರ ಕೊಲೆ ಪ್ರಕರಣ, ಆರೋಪಿ ಪ್ರವೀಣ್ ಬಂಧನ

ನೇಜಾರು ಸಮೀಪ ತಾಯಿ ಮತ್ತು ಮೂವರು ಮಕ್ಕಳ ಬರ್ಬರ ಹತ್ಯೆ ಪ್ರಕರಣದ ಆರೋಪಿಯನ್ನು ಬೆಳಗಾವಿಯಲ್ಲಿ ಪೆÇಲೀಸರು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿಯಲ್ಲಿ ಪ್ರವೀಣ್ ಚೌಗಲೆ (35) ಎಂಬಾತನನ್ನು ಬಂಧಿಸಿರುವುದಾಗಿ ವರದಿಯಾಗಿದೆ. ಈತ ಮಹಾರಾಷ್ಟ್ರದ ಸಾಂಗ್ಲಿ ಮೂಲದವನು ಎಂದು ತಿಳಿದುಬಂದಿದೆ. ಆರೋಪಿ ಪ್ರವೀಣ್ ಅರುಣ್ ಚೌಗಲೆ ಕುಡಚಿ ಮೂಲಕ ಮಹಾರಾಷ್ಟ್ರ ಅಥವಾ ಆಂಧ್ರಪ್ರದೇಶಕ್ಕೆ ಪರಾರಿಯಾಗಲು ಹೊಂಚು ಹಾಕಿದ್ದ ಎನ್ನಲಾಗಿದೆ. ಪ್ರವೀಣ್ ಅರುಣ್

ಸುರತ್ಕಲ್: ಕರಾವಳಿ ಸ್ವೋರ್ಟ್ಸ್ ಮಳಿಗೆಯಲ್ಲಿ 20ನೇ ವಾರ್ಷಿಕೋತ್ಸವ ಆಚರಣೆ

ಸುರತ್ಕಲ್‍ನ ಸರ್ವಿಸ್ ಬಸ್ ನಿಲ್ದಾಣದ ಬಳಿಯ ಎಸ್‍ವಿಎಸ್‍ಎಸ್ ಬ್ಯಾಂಕ್ ಬಿಲ್ಡಿಂಗ್‍ನಲ್ಲಿ ಕಾರ್ಯಾಚರಿಸುತ್ತಿರುವ ಕರಾವಳಿ ಸ್ವೋರ್ಟ್ಸ್ ಮಳಿಗೆಯಲ್ಲಿ 20ನೇ ವರ್ಷದ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಸುರತ್ಕಲ್‍ನ ಸರ್ವಿಸ್ ಬಸ್ ನಿಲ್ದಾಣದ ಬಳಿಯ ಎಸ್‍ವಿಎಸ್‍ಎಸ್ ಬ್ಯಾಂಕ್ ಬಿಲ್ಡಿಂಗ್‍ನಲ್ಲಿರುವ ಕರಾವಳಿ ಸ್ವೋರ್ಟ್ಸ್ ಗ್ರಾಹಕರ ಅತ್ಯುತ್ತಮ ಮಳಿಗೆಯಾಗಿದ್ದು, ಕ್ರೀಡೆಗೆ ಬೇಕಾದ

ಬೈಂದೂರು: ಪೊಲೀಸ್ ಠಾಣೆಯಲ್ಲಿ ಆಯುಧ ಪೂಜೆ ಸಂಭ್ರಮ

ಬೈಂದೂರು ಪೊಲೀಸ್ ಠಾಣೆಯಲ್ಲಿ ಗಣಹೋಮ, ನಾಗದೇವರ ಪೂಜೆ, ಆಯುಧ ಪೂಜೆ ಹಾಗೂ ವಾಹನ ಪೂಜಾ ಕೈಂಕರ್ಯಗಳು ವಿಶೇಷ ಹೂವಿನ ಅಲಂಕಾರದೊಂದಿಗೆ ಅತ್ಯಂತ ವಿಶಿಷ್ಠವಾಗಿ ಆಚರಿಸಲಾಯಿತು. ಸಮವಸ್ತ್ರಧಾರಿ ಇಲಾಖೆಯ ಸಿಬ್ಬಂದಿಗಳು ಪೂಜೆಯ ಅಂಗವಾಗಿ ಅಪ್ಪಟ ಭಾರತೀಯ ಶೈಲಿಯ ಉಡುಗೆಯನ್ನು ತೊಟ್ಟು ಗಮನ ಸೆಳೆದರು. ಠಾಣೆ ಸಿಬ್ಬಂದಿಗಳು ಭಾವೈಕ್ಯತೆ ಮೂಡಿಸುವ ಹಾಗೂ ಪರಸ್ಪರ ವಿಶ್ವಾಸ ಹೆಚ್ಚಿಸುವ ಕಲ್ಪನೆಯಲ್ಲಿ ಸಿಬ್ಬಂದಿಗಳು ಒಂದೇ ರೀತಿಯ ಸಮವಸ್ತ್ರ ಧರಿಸಿದರು. ಠಾಣೆಯ ವೃತ್ತ

ವಿದ್ಯಾಗಿರಿಯಲ್ಲಿ ಮಿಜಾರುಗುತ್ತು ಆನಂದ ಆಳ್ವರಿಗೆ ನುಡಿನಮನ

ಸ್ವರ್ಗಸ್ಥರಾದ ಶತಾಯುಷಿ ಮಿಜಾರುಗುತ್ತು ಆನಂದ ಆಳ್ವ ಅವರಿಗೆ ನುಡಿನಮನ' ಹಾಗೂಸಹಬೋಜನ’ವು ಆಳ್ವಾಸ್ ಕಾಲೇಜಿನ ಕೃಷಿಸಿರಿ ವೇದಿಕೆಯಲ್ಲಿ ಶ್ರದ್ಧಾ-ಭಕ್ತಿಯಿಂದ ನೆರವೇರಿತು. ನಿಟ್ಟೆ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ವಿನಯ ಹೆಗ್ಡೆ ಅವರು ನುಡಿನಮನ ಸಲ್ಲಿಸುತ್ತಾ `ಕೌಟುಂಬಿಕ ಜವಾಬ್ದಾರಿಯಿಂದ ತನ್ನ ವಿದ್ಯಾಭ್ಯಾಸ ಮೊಟುಕಾದರೂ, ವಿದ್ಯಾಕ್ಷೇತ್ರಕ್ಕೆ ಕೊಡುಗೆ ನೀಡಿ ಹಾಗೂ ವಿಶ್ವವಿದ್ಯಾಲಯಕ್ಕೆ ಸಮಾನಾಗಿ ಶಿಕ್ಷಣ ಸಂಸ್ಥೆ ಕಟ್ಟುವಲ್ಲಿ ಮಗನಿಗೆ ನೆರಳಾಗಿ ನಿಂತ

ಬಂಟ್ವಾಳ: ಕಲ್ಲಡ್ಕದಲ್ಲಿದೆ ಅಪರೂಪದ ಅಪೂರ್ವ ಸಂಗ್ರಹದ ಮ್ಯೂಸಿಯಂ…!!!

ಬಂಟ್ವಾಳ: ರಾಜರ ಕಾಲದಿಂದ ಆರಂಭಗೊಂಡು ಹಿರಿಯರು ಬಳಸಿದಂತಹ ಅಪರೂಪದ ವಸ್ತುಗಳ ಅಪೂರ್ವ ಸಂಗ್ರಹವನ್ನು ನೋಡಬೇಕಾದರೆ ಒಮ್ಮೆ ಕಲ್ಲಡ್ಕದ ಮ್ಯೂಸಿಯಂಗೆ ಭೇಟಿ ನೀಡಬೇಕು. ಒಂದಾಣೆ, ಎರಡಾಣೆ ನಾಣ್ಯಗಳಿಗಿಂತಲೂ ಹಿಂದಿನ ಕಾಲದಲ್ಲಿ ಬಳಕೆಯಲ್ಲಿದ್ದ ನಾಣ್ಯ, ದೇಶ ವಿದೇಶಗಳ ಕರೆನ್ಸಿಗಳ ಅಪಾರವಾದ ಸಂಗ್ರಹ ಇಲ್ಲಿದ್ದು ಕಣ್ತುಂಬಿಕೊಳ್ಳುವ ಅವಕಾಶವನ್ನು ಈ ಮ್ಯೂಸಿಯಂ ಒದಗಿಸುತ್ತದೆ. ಮಹಮ್ಮದ್ ಯಾಸೀರ್ ಎನ್ನುವ ಯುವ ಉದ್ಯಮಿಯ ಹವ್ಯಾಸವಾಗಿ ಆರಂಭಗೊಂಡ ಹಳೆ ಪರಕರಗಳು ಹಾಗೂ

ಚಿಕ್ಕಪ್ಪನ ಕಾರಿನಡಿಗೆ ಸಿಲುಕಿ ಒಂದೂವರೆ ವರ್ಷದ ಮಗುವಿನ ದಾರುಣ ಸಾವು

ಮಂಜೇಶ್ವರ : ತಂದೆಯ ಸಹೋದರ ಕಾರನ್ನು ಮುಂದಕ್ಕೆ ತೆಗೆಯುತ್ತಿರುವ ಮಧ್ಯೆ ಕಾರಿನಡಿಯಲ್ಲಿ ಸಿಲುಕಿ ಒಂದೂವರೆ ವರ್ಷದ ಮಗು ದಾರುಣವಾಗಿ ಸಾವನ್ನಪ್ಪಿದ್ದಾನೆ. ಸೋಂಕಾಲ್ ಕೋಡಂಗ ರಸ್ತೆಯ ನಿಸಾರ್ – ತಸ್ರೀಫಾ ದಂಪತಿಗಳ ಪುತ್ರ ಮಾಶಿತುಲ್ ಜಿಶಾನ್ ಸಾವನ್ನಪ್ಪಿದ ದುರ್ದೈವಿ. ಉಪ್ಪಳಕ್ಕೆ ಹೋಗಲು ಬಾಲಕನ ಚಿಕ್ಕಪ್ಪ ಮನೆಯ ಗೇಟಿನೊಳಗೆ ಕಾರಿನಲ್ಲಿ ಆಗಮಿಸುತ್ತಿರುವಾಗ ಕಾರನ್ನು ನೋಡಿ ಎದುರಿಗೆ ಹೋದ ಮಗು ಕಾರಿನ ಮುಂಬಾಗದ ಚಕ್ರದಡಿ ಸಿಲುಕಿ ಈ ದುರ್ಘಟನೆ ಸಂಭವಿಸಿದೆ.

ಉಡುಪಿ ; ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ – ಇಂದು ಅಂತ್ಯಕ್ರಿಯೆ

ಉಡುಪಿ: ನೇಜಾರು ಸಮೀಪದ ತೃಪ್ತಿ ನಗರದಲ್ಲಿ ನಿನ್ನೆ ಹತ್ಯೆಗೊಳಗಾದ ಒಂದೇ ಕುಟುಂಬದ ನಾಲ್ವರ ಅಂತ್ಯಕ್ರಿಯೆ ಇಂದು ನಡೆಯಲಿದೆ. ಉಡುಪಿಯ ಜಾಮಿಯಾ ಮಸೀದಿ ಸಮೀಪದ ದಫನ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ನಿನ್ನೆ ರಾತ್ರಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆದಿದ್ದು, ಇಂದು ಆಸ್ಪತ್ರೆಯಿಂದ ಅಂತ್ಯಕ್ರಿಯೆಯ ಹಿನ್ನೆಲೆಯಲ್ಲಿ ತೆಗೆದುಕೊಂಡು ಬರಲಾಗಿದೆ. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ಅವರು ತನಿಖೆಗಾಗಿ ಐದು

ಗಂಗೊಳ್ಳಿ : ಮೀನುಗಾರಿಕ ಬೋಟಿಗೆ ಬೆಂಕಿ : ಅಪಾರ ನಷ್ಟ

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪದ ಗಂಗೊಳ್ಳಿಯ ಮ್ಯಾಗನೀಸ್ ರಸ್ತೆಯಲ್ಲಿ ಮೀನುಗಾರಿಕ ಬೋಟಿಗೆ ಬೆಂಕಿ ತಗುಲಿದ ಘಟನೆ ನಡೆದಿದೆ. ದುರ್ಘಟನೆಯು ಪಟಾಕಿಯ ಕಿಡಿಯಿಂದ ಸಂಭವಿಸಲಾಗಿದೆ ಎಂದು ಶಂಕಿಸಲಾಗಿದೆ. ಇದರಿಂದಾಗಿ ಕೋಟ್ಯಾಂತರ ರೂಪಾಯಿ ನಷ್ಟ ಉಂಟಾಗಿದೆ. ಯಾವುದೇ ಸಾವು-ನೋವು ಉಂಟಾಗಿಲ್ಲ. ಈ ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

ಉಡುಪಿ: ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ: ದರೋಡೆಗೆ ಬಂದವರ ಕೃತ್ಯ ಶಂಕೆ!

ಒಂದೇ ಕುಟುಂಬದ ನಾಲ್ವರನ್ನು ಕೊಲೆ ಮಾಡಿದ ಘಟನೆ ಉಡುಪಿ ಜಿಲ್ಲೆಯ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ನೇಜಾರಿನಲ್ಲಿ ನಡೆದಿದೆ. ನಾಲ್ವರ ಹತ್ಯೆ ಹಿಂದೆ ದರೋಡೆ ಕೃತ್ಯದ ಶಂಕೆ ವ್ಯಕ್ತವಾಗಿದೆ. ಹಬ್ಬದ ದಿನ ಈ ಸುದ್ದಿ ಕೇಳಿ ಜನ ಬೆಚ್ಚಿ ಬಿದ್ದಿದ್ದಾರೆ. ಮನೆಗೆ ನುಗ್ಗಿ ತಾಯಿ ಹಾಗೂ ಮೂವರು ಮಕ್ಕಳನ್ನು ಹತ್ಯೆ ಮಾಡಲಾಗಿದೆ. ಈ ಮನೆಯ ಯಜಮಾನ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಮನೆಯಲ್ಲಿದ್ದ ಮೂವರು ಮಕ್ಕಳು ಮತ್ತು ತಾಯಿಯನ್ನು ಚೂರಿಯಲ್ಲಿ ಇರಿದು ಕೊಲೆಗೈಯಲಾಗಿದೆ.