ಚಿಕ್ಕಪ್ಪನ ಕಾರಿನಡಿಗೆ ಸಿಲುಕಿ ಒಂದೂವರೆ ವರ್ಷದ ಮಗುವಿನ ದಾರುಣ ಸಾವು
ಮಂಜೇಶ್ವರ : ತಂದೆಯ ಸಹೋದರ ಕಾರನ್ನು ಮುಂದಕ್ಕೆ ತೆಗೆಯುತ್ತಿರುವ ಮಧ್ಯೆ ಕಾರಿನಡಿಯಲ್ಲಿ ಸಿಲುಕಿ ಒಂದೂವರೆ ವರ್ಷದ ಮಗು ದಾರುಣವಾಗಿ ಸಾವನ್ನಪ್ಪಿದ್ದಾನೆ.
ಸೋಂಕಾಲ್ ಕೋಡಂಗ ರಸ್ತೆಯ ನಿಸಾರ್ – ತಸ್ರೀಫಾ ದಂಪತಿಗಳ ಪುತ್ರ ಮಾಶಿತುಲ್ ಜಿಶಾನ್ ಸಾವನ್ನಪ್ಪಿದ ದುರ್ದೈವಿ. ಉಪ್ಪಳಕ್ಕೆ ಹೋಗಲು ಬಾಲಕನ ಚಿಕ್ಕಪ್ಪ ಮನೆಯ ಗೇಟಿನೊಳಗೆ ಕಾರಿನಲ್ಲಿ ಆಗಮಿಸುತ್ತಿರುವಾಗ ಕಾರನ್ನು ನೋಡಿ ಎದುರಿಗೆ ಹೋದ ಮಗು ಕಾರಿನ ಮುಂಬಾಗದ ಚಕ್ರದಡಿ ಸಿಲುಕಿ ಈ ದುರ್ಘಟನೆ ಸಂಭವಿಸಿದೆ.
ಮಗುವಿನ ಕೂಗು ಕೇಳಿ ಮನೆಯವರು ಹಾಗೂ ಸುತ್ತುಮುತ್ತಲಿನವರು ಆಗಮಿಸಿ ಮಗುವನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ಜೀವವನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಮಂಜೇಶ್ವರ ಪೆÇಲೀಸರು ಕೇಸು ದಾಖಲಿಸಿದ್ದಾರೆ.