Home Blog Left SidebarPage 376

ಪುತ್ತೂರು: ಅ.7ರಂದು ಶೌರ್ಯ ಜಾಗರಣ ರಥಯಾತ್ರೆ, ಬೃಹತ್ ಹಿಂದೂ ಶೌರ್ಯ ಸಂಗಮ

ಪುತ್ತೂರು: ವಿಶ್ವ ಹಿಂದೂ ಪರಿಷತ್ ಸ್ಥಾಪನೆಯಾಗಿ 60ನೇ ವರ್ಷಕ್ಕೆ ಕಾಲಿಡುತ್ತಿರುವ ನಿಟ್ಟಿನಲ್ಲಿ ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲೆ ವತಿಯಿಂದ ಶೌರ್ಯ ಜಾಗರಣಾ ರಥಯಾತ್ರೆ, ಬೃಹತ್ ಹಿಂದೂ ಶೌರ್ಯ ಸಂಗಮ ಅ.7 ರಂದು ಸಂಜೆ ಪುತ್ತೂರಿನ ಕಿಲ್ಲೇ ಮೈದಾನದಲ್ಲಿ ನಡೆಯಲಿದೆ ಎಂದು ಬಜರಂಗದಳ ದಕ್ಷಿಣ ಪ್ರಾಂತ ಸಹಸಂಯೋಜಕ ಮುರಳೀಕೃಷ್ಣ ಹಸಂತಡ್ಕ ತಿಳಿಸಿದ್ದಾರೆ. ಅವರು

ಮಂಗಳೂರು: ಅ.5ರಂದು ಬಿಎಂಆರ್ ಗ್ರೂಪ್‍ನ ವಿನ್ ಯುವರ್ ಡ್ರೀಮ್ ಹೋಮ್‍ನ ಸೀಸನ್-3ರ ಡ್ರಾ ಕಾರ್ಯಕ್ರಮ

ಬಿಎಂಆರ್ ಗ್ರೂಪ್ ವತಿಯಿಂದ ವಿನ್ ಯುವರ್ ಡ್ರೀಮ್ ಹೋಮ್‍ನ ಸೀಸನ್-3ರ ಡ್ರಾ ಕಾರ್ಯಕ್ರಮವು ಅಕ್ಟೋಬರ್ 5ರಂದು ಚೊಕ್ಕಬೆಟ್ಟುವಿನ ಎಮ್‍ಜೆಎಮ್ ಹಾಲ್‍ನಲ್ಲಿ ನಡೆಯಲಿದೆ. ಸಂಜೆ 7 ಗಂಟೆಗೆ ನಡೆಯಲಿರುವ ಈ ಸ್ಕೀಮ್‍ನ 15ನೇ ಡ್ರಾ ದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ನೂತನ ಮನೆಯನ್ನು ಪಡೆಯುವ ವಿಜೇತರ ಹೆಸರನ್ನು ಆಯ್ಕೆ ಮಾಡಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಬಿಎಂಆರ್ ಗ್ರೂಪ್‍ನ ಅಧ್ಯಕ್ಷರಾದ ಇಬ್ರಾಹಿಂ, ಬಿಎಂಆರ್

ಮಾರ್ಬಲ್‌ ತುಂಬಿಕೊಂಡಿದ್ದ ಲಾರಿ ಪಲ್ಟಿ : ನಾಲ್ಕು ಜನ ಗಂಭೀರ

ವಿಟ್ಲ: ಮಾರ್ಬಲ್‌ ತುಂಬಿಕೊಂಡು ಬಂದ ಲಾರಿ ಪಲ್ಟಿಯಾಗಿ ನಾಲ್ಕು ಜನ ಗಂಭೀರ ಗಾಯಗೊಂಡ ಘಟನೆ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದಲ್ಲಿ ನಡೆದಿದೆ. ಲಾರಿ ಪಲ್ಟಿಯಾಗಿ ಕಾರ್ಮಿಕರ ಕೈ-ಕಾಲು ಛಿದ್ರ ಛಿದ್ರಗೊಂಡಿದ್ದು, ಗಂಭೀರ ಗಾಯಗೊಂಡ ಗಾಯಾಳುಗಳನ್ನು ನಾಲ್ಕು ಆಂಬ್ಯುಲೆನ್ಸ್‌ ಮೂಲಕ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಗಾಯಾಳುಗಳನ್ನು ಉತ್ತರ ಭಾರತದ ಮೂಲದವರು ಎಂದು ಗುರುತಿಸಲಾಗಿದ್ದು, ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲಿನೆ

ಮೂಡುಬಿದಿರೆ:ಮಾನ್ವತ್ವದೆಡೆಯಿ೦ದ ದೈವತ್ವದೆಡೆಗೆ ಸಾಗಿಸುವುದೇ ಧರ್ಮ : ಭಟ್ಟಾರಕ ಶ್ರೀ

ನಮ್ಮ ತನದಲ್ಲಿ ಜಗತ್ತನ್ನು ನೋಡುವ, ಮತ್ತೊಬ್ಬರ ಕಷ್ಟಗಳನ್ನು ಅರಿಯುವುದರ ಮೂಲಕ ನಾವೆಲ್ಲರೂ ಒ೦ದೇ ಎ೦ಬುದನ್ನು ಧರ್ಮಗಳು ಹೇಳುತ್ತವೆ. ಅ೦ಧಕಾರದಲ್ಲಿರುವವರನ್ನು ಬೆಳಕಿನೆಡೆಗೆ ಕೊ೦ಡೊಯ್ಯುವುದೇ ಧರ್ಮ. ಈ ನಿಟ್ಟಿನಲ್ಲಿ ಎಲ್ಲರನ್ನೂ ಧರ್ಮೀಯರನ್ನಾಗಿ ಮಾಡುವುದು ಧರ್ಮಗಳ ಕರ್ತವ್ಯವಾಗಬೇಕು ಎ೦ದು ಮೂಡುಬಿದಿರೆ ಜೈನ ಮಠದ ಪರಮಪೂಜ್ಯ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು. ಅವರು ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆ೦ಟ್ ವಿದ್ಯಾ

ಆದಿವಾಸಿ ಕೊರಗ ಸಮುದಾಯದ ಬದುಕಿನೊಂದಿಗೆ ಚೆಲ್ಲಾಟ ಆಡುವುದನ್ನು ಸಹಿಸಲು ಸಾಧ್ಯವಿಲ್ಲ – ಸುನಿಲ್ ಕುಮಾರ್ ಬಜಾಲ್

ಮಂಗಳೂರು ಮಹಾನಗರ ಪಾಲಿಕೆಯ ಆಡಳಿತ ಮತ್ತು ಅಧಿಕಾರಿಗಳು ಜಿಲ್ಲೆಯ ಮೂಲ ನಿವಾಸಿಗಳಾಗಿರುವ ಆದಿವಾಸಿ ಕೊರಗ ಸಮುದಾಯದ ಬಗ್ಗೆ ಮಾನವೀಯ ನೆಲೆಯಿಂದ ಕಾರ್ಯಾಚರಿಸುವುದು ಸಂವಿಧಾನದ ಆಶಯವಾಗಿದೆ ಇದಕ್ಕೆ ವ್ಯತಿರಿಕ್ತವಾಗಿ ಕೊರಗ ಸಮುದಾಯದ ಬದುಕಿನೊಂದಿಗೆ ಚೆಲ್ಲಾಟ ಆಡುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಸಿಐಟಿಯು ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಹೇಳಿದರು ಅವರು ಇಂದು ಮಂಗಳೂರು ಮಹಾನಗರ ಪಾಲಿಕೆಯ ಎದುರು ವಾಮಂಜೂರು

ಮಂಗಳೂರು: ಸಹೋದರರಿಬ್ಬರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ

ಮಂಗಳೂರು : ಕದ್ರಿ ಕಂಬಳದಲ್ಲಿರುವ ತಮ್ಮ ನಿವಾಸದಲ್ಲಿ ಇಬ್ಬರು ವೃದ್ಧೆಯರು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮಂಗಳವಾರ ಅಕ್ಟೋಬರ್ 3 ರಂದು ನಡೆದಿದೆ. ಮೃತರನ್ನು 70 ವರ್ಷ ವಯಸ್ಸಿನ ಲತಾ ಭಂಡಾರಿ ಮತ್ತು ಅವರ ಸಹೋದರಿ ಸುಂದರಿ ಶೆಟ್ಟಿ (80) ಎಂದು ಗುರುತಿಸಲಾಗಿದೆ. ಲತಾ ಭಂಡಾರಿಯವರ ಪತಿ ಜಗನಾಥ ಭಂಡಾರಿ ಎಂದಿನಂತೆ ಯಶರಾಜ್ ಬಾರ್‌ಗೆ ಕೆಲಸಕ್ಕೆ ಹೋಗಿದ್ದರು. 4:30 ಕ್ಕೆ ಮನೆಗೆ ಹಿಂದಿರುಗಿದಾಗ, ಅವರು ತಮ್ಮ ಕೋಣೆಯಲ್ಲಿ ತಮ್ಮ ಹೆಂಡತಿ ಮತ್ತು ಅತ್ತಿಗೆ

ಮೂಡುಬಿದಿರೆ : ವಿಕಲಚೇತನ ವಿದ್ಯಾರ್ಥಿಗಳಿಗೆ ಸಾಧನಾ ಸಲಕರಣೆ ವಿತರಣೆ

ಮೂಡುಬಿದಿರೆ: ಕ್ಷೇತ್ರ ಸಮನ್ವಯ ಸಂಪನ್ಮೂಲ ಕೇಂದ್ರ ಮೂಡುಬಿದಿರೆ ಇಲ್ಲಿ ಮಂಗಳವಾರ ವಲಯದ 15 ವಿಕಲಚೇತನ ವಿದ್ಯಾರ್ಥಿಗಳಿಗೆ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು. ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಅವರು ಸಾಧನ ಸಲಕರಣೆ ವಿತರಿಸಿ ಮಾತನಾಡಿ ಪೋಷಕರು ತಮ್ಮ ಮಕ್ಕಳಿಗೆ ಮತ್ತಷ್ಟು ಉತ್ತೇಜನ ನೀಡಿ ಈ ಮಕ್ಕಳು ಮುಖ್ಯವಾಹಿನಿ ಬರುವಂತೆ ಮಾಡಬೇಕು. ಸರ್ಕಾರದ ವ್ಯವಸ್ಥೆ ಮತ್ತು ಇಲಾಖೆಯ ಅಧಿಕಾರಿಗಳೊಂದಿಗೆ ಸಹಯೋಗದಿಂದ ಸಲಕರಣೆಗಳ ಸದುಪಯೋಗ ಪಡೆದುಕೊಳ್ಳಬೇಕೆಂದರು.

ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ಆದರ್ಶ್ ಶೆಟ್ಟಿ ನೆಲ್ಯಾಡಿ

ನೆಲ್ಯಾಡಿ: ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಅಮೆಚೂರ್ ಕ್ರೀಡಾಕೂಟದಲ್ಲಿ ಆದರ್ಶ್ ಶೆಟ್ಟಿ ಇವರು ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ತೆಲಂಗಾಣದಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ದೈಹಿಕ ಶಿಕ್ಷಕರಾದ ಏಲಿಯಸ್ ಪಿಂಟೋ, ರಾಜೇಶ್ ಮೂಲ್ಯ ಹಾಗೂ ಪುಷ್ಪರಾಜ್ ಇವರಿಗೆ ತರಬೇತಿಯನ್ನು ನೀಡಿದ್ದಾರೆ. ಪ್ರಸ್ತುತ ಇವರು ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ.

ಸುಳ್ಯ: ಮೈರೋಲ್ ಹಣ್ಣು ಎಂದು ಭಾವಿಸಿ ಜ್ಯೂಸ್ ಮಾಡಿ ಕುಡಿದ ಮಹಿಳೆ ಸಾವು

ಕಾಡಿನಲ್ಲಿ ಸಿಗುವ ಯಾವುದೋ ಹಣ್ಣನ್ನು ಮೈರೋಳ್ ಹಣ್ಣ ಎಂದು ಭಾವಿಸಿ ಮನೆಗೆ ತಂದು ಶರಬತ್ತು ಮಾಡಿ ಕುಡಿದ ಮಹಿಳೆಯೊಬ್ಬರು ಅಸ್ವಸ್ಥಗೊಂಡು ಮೃತಪಟ್ಟ ಘಟನೆ ಸುಳ್ಯದಲ್ಲಿ ನಡೆದಿದೆ. ಸುಳ್ಯದ ಅಮರಪಡ್ನೂರು ಗ್ರಾಮದ ಕುಳ್ಳಾಜೆ ನಿವಾಸಿ ಲೀಲಾವತಿ(35) ಮೃತಪಟ್ಟವರು. ಇವರ ಇದೇ ಲೋಕಯ್ಯ ನಾಯ್ಕ ಕೂಡಾ ಹಣ್ಣಿನ ಶರಬತ್ತು ಕುಡಿದು ಅಸ್ವಸ್ಥಗೊಂಡಿದ್ದರೆನ್ನಲಾಗಿದೆ. ಲೀಲಾವತಿ ಹಾಗೂ ಲೋಕಯ್ಯ ನಾಯ್ಕ ಒಂದು ವಾರದ ಹಿಂದೆ ಮೈರೋಳ್ ಹಣ್ಣಿನ ರಸ ತೆಗೆದು ಶರಬತ್ತು ಮಾಡಿ

ಲಖೀಂಪುರಖೇರಿ ಘಟನೆ ಖಂಡಿಸಿ ದೇಶಾದ್ಯಂತ ಕಪ್ಪು ದಿನಾಚರಣೆ ; CITU ನೇತ್ರತ್ವದಲ್ಲಿ ಮಂಗಳೂರಿನಲ್ಲಿ ಪ್ರತಿಭಟನೆ

ಉತ್ತರಪ್ರದೇಶದ ಲಖೀಂಪುರಖೇರಿಯಲ್ಲಿ 2021ರಲ್ಲಿ ರೈತರ ಮೇಲೆ ನಡೆದ ಅಮಾನವೀಯ ಧಾಳಿಗೆ ಹಾಗೂ ಪ್ರಾಣಹಾನಿಗಳಿಗೆ ಕಾರಣವಾದ BJP ನಾಯಕರೂ,ಕೇಂದ್ರ ಸಚಿವರಾದ ಅಜಯ್ ಮಿಶ್ರ ಥೇಣಿಯ ಮೇಲೆ ಕಠಿಣ ಕ್ರಮ ಜರುಗಿಸಲು ಒತ್ತಾಯಿಸಿ ದೇಶಾದ್ಯಂತ ನಡೆದ ಕಪ್ಪು ದಿನಾಚರಣೆಯ ಅಂಗವಾಗಿ ಇಂದು (03-10-2023) CITU ನೇತ್ರತ್ವದಲ್ಲಿ ಮಂಗಳೂರಿನ ಕ್ಲಾಕ್ ಟವರ್ ಬಳಿಯಲ್ಲಿ ಪ್ರತಿಭಟನೆ ಜರುಗಿತು. ಪ್ರತಿಭಟನೆಯನ್ನುದ್ದೇಶಿಸಿ CITU ಜಿಲ್ಲಾಧ್ಯಕ್ಷರಾದ ಜೆ.ಬಾಲಕ್ರಷ್ಣ ಶೆಟ್ಟಿಯವರು