ಮಂಗಳೂರು: ಅ.5ರಂದು ಬಿಎಂಆರ್ ಗ್ರೂಪ್‍ನ ವಿನ್ ಯುವರ್ ಡ್ರೀಮ್ ಹೋಮ್‍ನ ಸೀಸನ್-3ರ ಡ್ರಾ ಕಾರ್ಯಕ್ರಮ
ಬಿಎಂಆರ್ ಗ್ರೂಪ್ ವತಿಯಿಂದ ವಿನ್ ಯುವರ್ ಡ್ರೀಮ್ ಹೋಮ್‍ನ ಸೀಸನ್-3ರ ಡ್ರಾ ಕಾರ್ಯಕ್ರಮವು ಅಕ್ಟೋಬರ್ 5ರಂದು ಚೊಕ್ಕಬೆಟ್ಟುವಿನ ಎಮ್‍ಜೆಎಮ್ ಹಾಲ್‍ನಲ್ಲಿ ನಡೆಯಲಿದೆ. ಸಂಜೆ 7 ಗಂಟೆಗೆ ನಡೆಯಲಿರುವ ಈ ಸ್ಕೀಮ್‍ನ 15ನೇ ಡ್ರಾ ದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ನೂತನ ಮನೆಯನ್ನು ಪಡೆಯುವ ವಿಜೇತರ ಹೆಸರನ್ನು ಆಯ್ಕೆ ಮಾಡಲಾಗುತ್ತದೆ.
ಈ ಕಾರ್ಯಕ್ರಮದಲ್ಲಿ ಬಿಎಂಆರ್ ಗ್ರೂಪ್‍ನ ಅಧ್ಯಕ್ಷರಾದ ಇಬ್ರಾಹಿಂ, ಬಿಎಂಆರ್ ಗ್ರೂಪ್‍ನ ಆಡಳಿತ ನಿರ್ದೇಶಕರಾದ ದಾವೂದ್ ಹಕೀಮ್ ಕೆಪಿಸಿಸಿಯ ಜನರಲ್ ಸೆಕ್ರೆಟರಿ ಇನಾಯತ್ ಆಲಿ, ಮಂಗಳೂರಿನ ಬಿರುವೆರ್ ಕುಡ್ಲದ ಸ್ಥಾಪಕರಾದ ಉದಯ್ ಪೂಜಾರಿ, ಬದ್ರಿಯಾ ಜುಮ್ಮಾ ಮಸೀದಿ ಮುಸ್ಲಿಂ ಜಮಾ ಅತ್ ನ ಅಧ್ಯಕ್ಷರಾದ ಮುಮ್ತಾಜ್ ಆಲಿ, ಮಂಗಳೂರು ಉತ್ರರದ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರಾದ ಭರತ್ ರಾಜ್ ಕೃಷ್ಣಾಪುರ ಎಂಸಿಸಿಯ ಸದಸ್ಯರಾದ ಶಂಶಾದ್ ಅಬುಬಕ್ಕರ್, ನ್ಯಾಯವಾದಿ ಜೀಶಲ್ ಆಲಿ ಇಮ್, ಕೃಷ್ಣಾಪುರ ಮುನೀರ್ ಹಾರ್ಡ್‍ವೇರ್‍ನ ಅಶ್ರಫ್, ಕೃಷ್ಣಾಪುರ ಮುನೀರ್ ಟ್ರೇಡರ್ಸ್‍ನ ಅನ್ವರ್ ಹುಸೈನ್, ಕೃಷ್ಣಾಪುರ ಮುನೀರ್ ಎಂಟರ್‍ಪ್ರೈಸಸ್‍ನ ಅಬೂಬಕ್ಕರ್ ಸಿದ್ದಿಕ್ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿರಲಿದ್ದಾರೆ ಹಾಗೂ ವಿಜೆ ಡಿಕ್ಸನ್ ಅವರು ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ.