ಲಖೀಂಪುರಖೇರಿ ಘಟನೆ ಖಂಡಿಸಿ ದೇಶಾದ್ಯಂತ ಕಪ್ಪು ದಿನಾಚರಣೆ ; CITU ನೇತ್ರತ್ವದಲ್ಲಿ ಮಂಗಳೂರಿನಲ್ಲಿ ಪ್ರತಿಭಟನೆ

ಉತ್ತರಪ್ರದೇಶದ ಲಖೀಂಪುರಖೇರಿಯಲ್ಲಿ 2021ರಲ್ಲಿ ರೈತರ ಮೇಲೆ ನಡೆದ ಅಮಾನವೀಯ ಧಾಳಿಗೆ ಹಾಗೂ ಪ್ರಾಣಹಾನಿಗಳಿಗೆ ಕಾರಣವಾದ BJP ನಾಯಕರೂ,ಕೇಂದ್ರ ಸಚಿವರಾದ ಅಜಯ್ ಮಿಶ್ರ ಥೇಣಿಯ ಮೇಲೆ ಕಠಿಣ ಕ್ರಮ ಜರುಗಿಸಲು ಒತ್ತಾಯಿಸಿ ದೇಶಾದ್ಯಂತ ನಡೆದ ಕಪ್ಪು ದಿನಾಚರಣೆಯ ಅಂಗವಾಗಿ ಇಂದು (03-10-2023) CITU ನೇತ್ರತ್ವದಲ್ಲಿ ಮಂಗಳೂರಿನ ಕ್ಲಾಕ್ ಟವರ್ ಬಳಿಯಲ್ಲಿ ಪ್ರತಿಭಟನೆ ಜರುಗಿತು.

ಪ್ರತಿಭಟನೆಯನ್ನುದ್ದೇಶಿಸಿ CITU ಜಿಲ್ಲಾಧ್ಯಕ್ಷರಾದ ಜೆ.ಬಾಲಕ್ರಷ್ಣ ಶೆಟ್ಟಿಯವರು ಮಾತನಾಡುತ್ತಾ, ದೇಶವನ್ನಾಳುವ ನರೇಂದ್ರ ಮೋದಿ ಸರಕಾರವು ನಿತ್ಯ ನಿರಂತರವಾಗಿ ರೈತ ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೊಳಿಸಿ ಜನಸಾಮಾನ್ಯರ ಬದುಕನ್ನು ನುಚ್ಚುನೂರುಗೊಳಿಸಿದೆ. ದೇಶದ ಸಂಪತ್ತನ್ನು ಕಾರ್ಪೊರೇಟ್ ಗಳ ಕೈಗೊಪ್ಪಿಸುವ ಮೂಲಕ ದೇಶದ ಆರ್ಥಿಕತೆಯನ್ನು ಸರ್ವನಾಶಗೊಳಿಸಿದೆ ಎಂದು ಹೇಳಿದರು

ಪ್ರಾಸ್ತಾವಿಕವಾಗಿ ಮಾತನಾಡಿದ CITU ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು, ಮೂರು ವರ್ಷಗಳ ಹಿಂದೆ ನರೇಂದ್ರ ಮೋದಿ ಸರಕಾರ ಜಾರಿಗೆ ತರಲು ಯತ್ನಿಸಿದ ಕರಾಳ ಶಾಸನದ ವಿರುದ್ದ ದೇಶದ ಅನ್ನದಾತರು ಧೀರ್ಘ ಕಾಲದ ಹೋರಾಟ ನಡೆಸುವ ಮೂಲಕ ದೇಶದ ಆಳುವ ವರ್ಗದ ಹುನ್ನಾರವನ್ನು ಸೋಲಿಸಲು ಸಾಧ್ಯವಾಗಿದೆ. ಇದರಿಂದ ಕಂಗೆಟ್ಟ ಕೇಂದ್ರ ಸರಕಾರದ ಮಂತ್ರಿ ಅಜಯ್ ಮಿಶ್ರಾ ಥೇಣಿಯವರು ಉತ್ತರಪ್ರದೇಶದ ಲಖೀಂಪುರ್ ಖೇರ್ ನಲ್ಲಿ ಹೋರಾಟ ನಿರತ ರೈತರ ಮೇಲೆ ಕಾರು ಚಲಾಯಿಸುವ ಮೂಲಕ ಹಲವು ರೈತರ ಸಾವಿಗೆ ಕಾರಣರಾಗಿದ್ದು, ಇಡೀ ಘಟನೆಯನ್ನು ಸಮಗ್ರ ತನಿಖೆ ನಡೆಸಿ ನ್ಯಾಯ ದೊರಕಿಸಿ ಕೊಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ CITU ಜಿಲ್ಲಾ ನಾಯಕರಾದ ಸುಕುಮಾರ್ ತೊಕ್ಕೋಟ್ಟು,ರೈತ ಸಂಘದ ನಾಯಕರಾದ ಸದಾಶಿವದಾಸ್ ರವರು ಮಾತನಾಡುತ್ತಾ, ಕೇಂದ್ರ ಸರಕಾರದ ಜನವಿರೋಧಿ ನೀತಿಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟರು.

ಪ್ರತಿಭಟನೆಯಲ್ಲಿ CITU ಜಿಲ್ಲಾ ನಾಯಕರಾದ ಯೋಗೀಶ್ ಜಪ್ಪಿನಮೊಗರು,ಜಯಂತ ನಾಯಕ್,ಬಿ.ಕೆ.ಇಮ್ತಿಯಾಜ್,ಪದ್ಮಾವತಿ ಶೆಟ್ಟಿ, ರೋಹಿದಾಸ್, ನೋಣಯ್ಯ ಗೌಡ,ವಸಂತಿ ಕುಪ್ಪೆಪದವು,ರಾಧಾ ಮೂಡಬಿದ್ರಿ,ಗಿರಿಜಾ ಮೂಡಬಿದ್ರೆ,ಲೋಲಾಕ್ಷಿ ಬಂಟ್ವಾಳ,ರಫೀಕ್ ಹರೇಕಳ, ವಿಲ್ಲವಿಲ್ಸನ್ ಬಿ.ಎಂ.ಭಟ್, ಜನಾರ್ದನ ಕುತ್ತಾರ್,ಭಾರತಿ ಬೋಳಾರ, ಈಶ್ವರಿ ಪದ್ಮುಂಜ, ಲೋಕೇಶ್, ಅಟೋರಿಕ್ಷಾ ಚಾಲಕರ ಮುಖಂಡರಾದ ಮಹಮ್ಮದ್ ಅನ್ಸಾರ್, ದಯಾನಂದ ತೊಕ್ಕೋಟು, ಬೀದಿಬದಿ ವ್ಯಾಪಾರಸ್ಥರ ಸಂಘದ ನಾಯಕರಾದ ಮಹಮ್ಮದ್ ಮುಸ್ತಾಫ,DYFI ಜಿಲ್ಲಾ ನಾಯಕರಾದ ಸಂತೋಷ್ ಬಜಾಲ್ ಮುಂತಾದವರು ಭಾಗವಹಿಸಿದ್ದರು.

Related Posts

Leave a Reply

Your email address will not be published.