ಉಳ್ಳಾಲ: ಮಳೆ ನೀರಿಗೆ ಬಿದ್ದು ಸಾವನ್ನಪ್ಪಿದ ಸೋಮೇಶ್ವರ ಪಿಲಾರು ಬಳಿಯ ಬಾಡಿಗೆ ಮನೆ ನಿವಾಸಿ ಸುರೇಶ್ ಗಟ್ಟಿ (52) ಕುಟುಂಬಸ್ಥರಿಗೆ ಪ್ರಾಕೃತಿಕ ವಿಕೋಪದಡಿ ರೂ.5 ಲಕ್ಷ ಪರಿಹಾರವನ್ನು ಕಂದಾಯ ಇಲಾಖೆಯು ಖಜಾನೆ 2 ಮುಖೇನ ನೀಡಿದೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್ ಪ್ರಭಾಕರ್ ಖರ್ಜುರೆ,. ಕಂದಾಯ ನಿರೀಕ್ಷಕರು ಮಂಜುನಾಥ್ ಕೆ.ಹೆಚ್, ಪುರಸಭೆ ಅಧಿಕಾರಿಗಳು ಭೇಟಿ ನೀಡಿ
ಮಾಜಿ ಸಚಿವರು ಹಾಗೂ ಕೆ.ಪಿ.ಸಿ.ಸಿ ಉಪಾಧ್ಯಕ್ಷರಾದ ಸನ್ಮಾನ್ಯ ವಿನಯ್ ಕುಮಾರ್ ಸೊರಕೆ ಯವರು, ಇಂದು ಕಡಲ್ಕೊರೆತದಿಂದ ತೀವ್ರ ಹಾನಿಗೊಳಗಾಗಿ, ಅಪಾಯದ ಅಂಚಿಗೆ ತಲುಪಿರುವ ಕಾಡಿಪಟ್ನ – ಪಡುಬಿದ್ರಿ ಬೀಚ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಂಬಂಧ ಪಟ್ಟ ಇಲಾಖೆಯ ಅಭಿಯಂತರ ರಿಗೆ ಕರೆ ಮಾಡಿ ತುರ್ತು ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಈ ಸಂದರ್ಭ ಮಾಜಿ ಸಚಿವರೊಂದಿಗೆ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಪ್ರಧಾನ ಕಾರ್ಯದರ್ಶಿ
ಉಜಿರೆ, ಜುಲೈ 1: ಪದವಿ ಮತ್ತು ಸ್ನಾತಕೊತ್ತರ ಶಿಕ್ಷಣ ಪಡೆಯುವ ಹಂತಗಳಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧಗೊಂಡು ಉನ್ನತ ಹುದ್ದೆಗಳನ್ನು ಪಡೆಯುವ ಮಹತ್ವಾಕಾಂಕ್ಷೆಯೊಂದಿಗೆ ವಿದ್ಯಾರ್ಥಿಗಳು ಮುನ್ನಡೆಯಬೇಕುಎಂದು ಬೆಂಗಳೂರಿನ ವಾಣ ಜ್ಯತೆರಿಗೆಇಲಾಖೆಯ ಸಹಾಯಕಆಯಕ್ತರಾದ ಸೌಮ್ಯ ಬಾಪಟ್‍ಅಭಿಪ್ರಾಯಪಟ್ಟರು. ಉಜಿರೆಯ ಶ್ರೀ ಧ.ಮಂ ಕಾಲೇಜಿನ ವಾರ್ಷಿಕೋತ್ಸವಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ವಿವಿಧ ವಲಯಗಳಲ್ಲಿ ಸಾಧನೆಗೈದ ವಿದ್ಯಾರ್ಥಿ
ಉಜಿರೆ: ದೂರದೃಷ್ಟಿಯೊಂದಿಗಿನ ವಿಶಾಲ ಮನಸ್ಥಿತಿ ಮಹತ್ತರ ಕಾರ್ಯಗಳಿಗೆ ಪ್ರೇರಣೆಯಾಗುತ್ತದೆ ಎಂದು ಮೂಡಬಿದಿರೆಯ ಎಕ್ಸಲೆಂಟ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ನಿರ್ದೇಶಕ ಡಾ. ಬಿ. ಪಿ. ಸಂಪತ್ ಕುಮಾರ್ ಹೇಳಿದರು. ಎಸ್.ಡಿ.ಎಂ. ಪದವಿ ಕಾಲೇಜಿನ ಸಮ್ಯಕ್‍ದರ್ಶನ ಸಭಾಂಗಣದಲ್ಲಿ ಡಿ. ರತ್ನವರ್ಮ ಹೆಗ್ಗಡೆ ಸ್ಮರಣಾರ್ಥ ಬುಧವಾರ ಆಯೋಜಿಸಿದ್ದ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಅಂತರ್ ಕಾಲೇಜು ಕನ್ನಡ ಚರ್ಚಾ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಸಾಧಾರಣ
ಉಡುಪಿ : ಉಡುಪಿ ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಕಳೆದ 24 ಗಂಟೆಯಲ್ಲಿ 121 ಮಿಲಿಮೀಟರ್ ಮಳೆ ದಾಖಲಾಗಿದೆ. ಉಡುಪಿ ಜಿಲ್ಲೆಯ ಸರಾಸರಿ ಮಳೆಯ ವಿವರದ ಪ್ರಕಾರ ಉಡುಪಿ ನಗರದಲ್ಲಿ 131 ಮಿ.ಮೀ., ಬ್ರಹ್ಮಾವರದಲ್ಲಿ 106, ಬೈಂದೂರಿನಲ್ಲಿ 130, ಕುಂದಾಪುರದಲ್ಲಿ 85, ಕಾರ್ಕಳದಲ್ಲಿ 151, ಕಾಪುವಿನಲ್ಲಿ 126 ಮತ್ತು ಹೆಬ್ರಿಯಲ್ಲಿ 116 ಮಿ.ಮೀ. ಮಳೆ ದಾಖಲಾಗಿದೆ.
ಉಡುಪಿ: ಎರಡು ದಿನಗಳಿಂದ ಉಡುಪಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಉಡುಪಿಯ ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಉಡುಪಿ ನಗರದ ಮೂಡನಿಡುಂಬೂರು ಬ್ರಹ್ಮ ಬೈದರ್ಕಳ ಗರಡಿ ಮತ್ತು ಬನ್ನಂಜೆ ಶಿರಿಬೀಡು ವಾರ್ಡ್‌ನಲ್ಲಿವ ಗರಡಿಗೆ ವಿಪರೀತ ಮಳೆಯಿಂದಾಗಿ ನೀರು ನುಗ್ಗಿದೆ. ಸಾಕಷ್ಟು ಮನೆಗಳ ಅಂಗಳದವರೆಗೂ ನೀರು ನುಗ್ಗಿದ್ದು, ಹರಿಯುವ ನೀರಿನಲ್ಲಿ ಕಾರ್ಮಿಕರು ನಡೆದಾಡಲು ಹರಸಾಹಸ ಪಡುವಂತಾಗಿದೆ. ಇಂದ್ರಾಣಿ ನದಿ ಇದೀಗ ನೆರೆಯಿಂದ
ಉಡುಪಿ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ರಜತ ಮಹೋತ್ಸವ ಸಮಿತಿ ಹಾಗೂ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇವರ ಸಹಯೋಗದಲ್ಲಿ ರಾಜ್ಯದ ಪತ್ರಕರ್ತರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುತಿಭಾ ಪುರಸ್ಕಾರ – 2023 ಕಾರ್ಯಕ್ರಮ ಜುಲೈ 8 ರಂದು ಶನಿವಾರ ಮಧ್ಯಾಹ್ನ 2 ಗಂಟೆಗೆ ಉಡುಪಿ ಜಿಲ್ಲೆಯ ಕೆಎಂಸಿ ಆಸ್ಪತ್ರೆ ಮಣಿಪಾಲ ಇದರ ಟಿಎಂಎಪೈ ಆಡಿಟೋರಿಯಂ ನ ಮೂರನೇ ಮಹಡಿಯಲ್ಲಿ ಜರುಗಲಿದೆ ಎಂದು ಉಡುಪಿ ಜಿಲ್ಲಾ
ಉಳ್ಳಾಲ: ಕರ್ತವ್ಯವಾದರೂ ನಿಭಾಯಿಸಲು ಛಲ ಬೇಕು. ಮಳೆಗಾಲದ ಸಂದರ್ಭ ಮೆಸ್ಕಾಂ ಪವರ್ಮೆನ್‍ಗಳು ಜನರ ಬಾಯಿಂದ ಕೇಳುವುದೇ ಜಾಸ್ತಿ. ಆದರೆ ಮೆಸ್ಕಾಂನ ಉಳ್ಳಾಲ-2 ಘಟಕದ ಪವರ್ಮೆನ್ ವಸಂತ್ ಹಾಗೂ ಸುರೇಶ್ ಗದ್ದೆಯೊಂದರಲ್ಲಿ ಕೃತಕ ನೆರೆಯಾಗಿದ್ದರೂ ಅದನ್ನು ಕಷ್ಟಪಟ್ಟು ದಾಟಿ 40 ಮನೆಗಳಿಗೆ ವಿದ್ಯುತ್ ಪೂರೈಸಿದ್ದಾರೆ. ಈ ಕುರಿತ ವೀಡಿಯೋವನ್ನು ಮೆಸ್ಕಾಂ ಜೆ.ಇ ನಿತೇಶ್ ಹೊಸಗದ್ದೆ ಇವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ತಮ್ಮ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ
ಮಂಗಳೂರಿನಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಕೆಲವೆಡೆ ಮಳೆಯಿಂದಾಗಿ ಹಾನಿ ಸಂಭವಿಸುತ್ತಿದೆ. ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ಕಟ್ಟಡದ ಮೇಲಿದ್ದ ಜಾಹೀರಾತು ಹೋರ್ಡಿಂಗ್ ಬಿದ್ದು 12ಕ್ಕೂ ಹೆಚ್ಚು ವಾಹನಗಳಿಗೆ ಹಾನಿಯಾಗಿರುವ ಘಟನೆ ನಡೆದಿದೆ. ಬಿಕರ್ನಕಟ್ಟೆಯಲ್ಲಿನ ಕಟ್ಟಡದಲ್ಲಿದ್ದ ಜಾಹೀರಾತು ಹೋರ್ಡಿಂಗ್ ಕಟ್ಟಡದ ಪಾರ್ಶ ಸಮೇತ ಬಿದ್ದಿದೆ. ಪರಿಣಾಮ ಕೆಳಗಡೆ ನಿಲ್ಲಿಸಿದ್ದ 12 ವಾಹನಗಳು ಜಖಂಗೊಂಡಿವೆ. ವಿದ್ಯುತ್ ಕಂಬ ಕೂಡ ಮುರಿದು ಬಿದ್ದಿದೆ.
ಉಳ್ಳಾಲ ಹಾಗೂ ಉಚ್ಚಿಲ ಭಾಗದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಉಳ್ಳಾಲ ಬೀಚ್ ಬಳಿ ಹಾಕಲಾಗಿದ್ದ ಚರ್ಮುರಿ ಅಂಗಡಿಗಳು ಸಮುದ್ರಪಾಲಾಗಿದೆ. ಉಚ್ಚಿಲ ಭಾಗದಲ್ಲಿ ಸಮುದ್ರ ತೀರದ ಮನೆಗಳಿಗೆ ಅಪ್ಪಳಿಸಿ, ಹಲವು ಮರಗಳು ಸಮುದ್ರಪಾಲಾಗಿವೆ. ಸಮುದ್ರತೀರದಲ್ಲಿ 80 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿರುವುದರಿಂದ ಭಾರೀ ಗಾತ್ರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿವೆ. ಉಳ್ಳಾಲ ಬೀಚ್, ಮೊಗವೀರಪಟ್ನ, ಸುಭಾಷನಗರ, ಕೈಕೋ, ಕಿಲೆರಿಯಾನಗರ, ಸೋಮೇಶ್ವರ, ಉಚ್ಚಿಲ, ಬಟ್ಟಪ್ಪಾಡಿ




























