ಉಡುಪಿಯಲ್ಲಿ ಬಿಡುವಿಲ್ಲದ ಮುಂಗಾರಿನ ಜೋರು

ಉಡುಪಿ : ಉಡುಪಿ ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಕಳೆದ 24 ಗಂಟೆಯಲ್ಲಿ 121 ಮಿಲಿಮೀಟರ್ ಮಳೆ ದಾಖಲಾಗಿದೆ. ಉಡುಪಿ ಜಿಲ್ಲೆಯ ಸರಾಸರಿ ಮಳೆಯ ವಿವರದ ಪ್ರಕಾರ ಉಡುಪಿ ನಗರದಲ್ಲಿ 131 ಮಿ.ಮೀ., ಬ್ರಹ್ಮಾವರದಲ್ಲಿ 106, ಬೈಂದೂರಿನಲ್ಲಿ 130, ಕುಂದಾಪುರದಲ್ಲಿ 85, ಕಾರ್ಕಳದಲ್ಲಿ 151, ಕಾಪುವಿನಲ್ಲಿ 126 ಮತ್ತು ಹೆಬ್ರಿಯಲ್ಲಿ 116 ಮಿ.ಮೀ. ಮಳೆ ದಾಖಲಾಗಿದೆ.