Home Blog Left SidebarPage 477

ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಎಂ.ಜಿ.ರೋಡ್‍ ತಿರುವು ರಸ್ತೆಯಲ್ಲಿ ಕೃತಕ ನೆರೆ

ಮಂಗಳೂರಿನ ಎಂ.ಜಿ.ರೋಡ್ ಬಲ್ಲಾಳ್‍ಬಾಗ್‍ನಿಂದ ತಿರುವು ಪಡೆದ ರಸ್ತೆಯ ಅಂಚಿನಲ್ಲಿ ಕೃತಕ ನೆರೆ ಸೃಷ್ಠಿಯಾಗಿದೆ. ಈ ರಸ್ತೆಯಲ್ಲಿ ನೀರು ಹರಿಯಲು ಸೂಕ್ತವಾದ ಚರಂಡಿ ವ್ಯವಸ್ಥೆ ಇಲ್ಲದ್ದರಿಂದ ಮಳೆ ನೀರು ರಸ್ತೆಯಂಚಿನಲ್ಲೇ ನಿಂತು ವ್ಯಾಪಾರ ಮಳಿಗೆಗಳ ಒಳಗೆ ನುಗ್ಗುತ್ತಿದೆ. ಮಂಗಳೂರಿನ ಬಲ್ಳಾಲ್‍ಬಾಗ್ ಎಂ.ಜಿ.ರೋಡ್ ರಸ್ತೆಯಿಂದ ತಿರುವು ಪಡೆದ

ಕೊಲ್ಲಹಳ್ಳಿಯಲ್ಲಿ ಸರ್ಕಾರಿ ಕೆರೆ ಮುಚ್ಚಲು ಪ್ರಯತ್ನ : ಪ್ರಭಾವಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

ಸಕಲೇಶಪುರ: ರಾಷ್ಟ್ರೀಯ ಹೆದ್ದಾರಿ 75ರ ಬೈಪಾಸ್ ರಸ್ತೆ ಹಾಲೇಬೇಲೂರು ಅಂಡರ್ ಪಾಸ್ ಸಮೀಪ ಮಳಲಿಗ್ರಾಮ ಪಂಚಾಯತಿಯ ಕೊಲ್ಲಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಗೌರಿಕೆರೆಯನ್ನು ಅಕ್ರಮವಾಗಿ ಮುಚ್ಚಲು ಪ್ರಯತ್ನಿಸುತ್ತಿರುವವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮಾನವ ಹಕ್ಕುಗಳ ರಕ್ಷಣಾ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮಳಲಿಗ್ರಾಮ ಪಂಚಾಯತಿಯ ಕೊಲ್ಲಹಳ್ಳಿ ಗ್ರಾಮದಲ್ಲಿರುವ ಸರ್ವೆ ನಂ 64ರಲ್ಲಿ ಸುಮಾರು 1ಎಕರೆ 33ಗುಂಟೆ ಸರಕಾರಿ

ಬಾರ್ಕೂರಿನ ಸ್ವೀಝಲ್ ಫುರ್ಟಾಡೊ ಒಲಿದ ಮಿಸ್ ಟೀನ್ ಯೂನಿವರ್ಸಲ್ ಇಂಟರ್ ನ್ಯಾಷನಲ್ ಪ್ರಿನ್ಸಸ್ ಪ್ರಶಸ್ತಿ

ಬ್ರಹ್ಮಾವರ : ಉಡುಪಿ ಜಿಲ್ಲೆ ಬಾರ್ಕೂರು ಮೂಲದ ಸ್ವೀಝಲ್ ಫುರ್ಟಾಡೊ ಅವರು ಸೌತ ಅಮೇರಿಕಾ ಪೆರುವಿನಲ್ಲಿ ನಡೆದ ಮಿಸ್ ಟೀನ್ ಇಂಟರ್‍ನ್ಯಾಶನಲ್ ಸ್ಪರ್ಧೆಯಲ್ಲಿ ಮಿಸ್ ಟೀನ್ ಯೂನಿವರ್ಸಲ್ ಇಂಟರ್‍ನ್ಯಾಷನಲ್ ಪ್ರಿನ್ಸಸ್ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದಾರೆ. ಈ ಸ್ಪರ್ಧೆಯಲ್ಲಿ ಸ್ವೀಜಲ್ ಅವರು ‘ಮಿಸ್ ಟೀನ್ ಯೂನಿವರ್ಸಲ್ ಏಷ್ಯಾ’ ಮತ್ತು ‘ಅತ್ಯುತ್ತಮ ರಾಷ್ಟ್ರೀಯ ಕಾಸ್ಟೂಮ್ಸ್ ಪ್ರಶಸ್ತಿ’ಯನ್ನೂ

ಉಳ್ಳಾಲ : ಹಿಟ್ ಆಂಡ್ ರನ್ ಅಪಘಾತ-ಯುವಕ ಸಾವು

ಉಳ್ಳಾಲ: ರಾ.ಹೆ 66ರ ಸಂಕೊಳಿಗೆ ಸಮೀಪ ತಡರಾತ್ರಿ ಬೈಕ್‍ಗೆ ಕಾರು ಢಿಕ್ಕಿ ಹೊಡೆದು ಪರಾರಿಯಾದ ಹಿಟ್ ಆಂಡ್ ರನ್ ಪ್ರಕರಣದ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆಯಲ್ಲಿ ಗಾಯಾಳು ಕೋಟೆಕಾರು ವೈದ್ಯನಾಥ ದೈವಸ್ಥಾನ ರಸ್ತೆ ನಿವಾಸಿ ತೇಜಸ್ ರಾಮ ಕುಲಾಲ್ (28) ಮೃತಪಟ್ಟಿದ್ದರು. ರಾ.ಹೆ 66ರ ಸಂಕೊಳಿಗೆ ಸಮೀಪ ತಡರಾತ್ರಿ ಬೈಕಿಗೆ ಪೆಟ್ರೋಲ್ ಹಾಕಿಸಲೆಂದು ಉಚ್ಚಿಲದ ಪೆಟ್ರೋಲ್ ಪಂಪ್ ಗೆ ತೆರಳುವಾಗ ಘಟನೆ ಸಂಭವಿಸಿತ್ತು. ಘಟನೆಯಿಂದ ಬೈಕ್ ಸವಾರ ಗಂಭೀರ

ಮಕ್ಕಳಲ್ಲಿ ಓದುವ ಗ್ರಹಿಕೆಯ ಸಾಮಾರ್ಥ್ಯವನ್ನು ಹೆಚ್ಚಿಸಲು ಸಂಗೀತವು ಒಂದು ಉತ್ತಮ ಮಾರ್ಗವಾಗಿದೆ – ಶ್ರೀಮತಿ ಪದ್ಮಶ್ರೀ ಭಟ್

ಸಂಗೀತವು ಮಕ್ಕಳಲ್ಲಿ ಮೆದುಳಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಪಠ್ಯದೊಂದಿಗೆ ಸಂಗೀತದಲ್ಲಿ ತೊಡಗಿಸಿಕೊಳ್ಳುವುದರಿಂದ ಮಕ್ಕಳಲ್ಲಿ ಮೆದುಳಿನ ಬೆಳವಣಿಗೆಯಲ್ಲಿ ಸುಧಾರಣೆ ಕಾಣಬಹುದಾಗಿದೆ. ಸಂಗೀತವನ್ನು ಸರಳವಾಗಿ ಆಲಿಸುವಾಗ ಉತ್ತಮ ನರ ಸಂಸ್ಕರಣೆಯನ್ನು ಕಾಣಬಹುದೆಂದು ಅಧ್ಯಯನ ಕಂಡು ಹಿಡಿದಿದೆ. ಸಂಗೀತದಲ್ಲಿ ತೊಡಗಿರುವ ಇತರ ಅಧ್ಯಯನಗಳು ಮಕ್ಕಳಲ್ಲಿ ಐಕ್ಯೂ ಪಾಯಿಂಟ್‌ಗಳ ಹೆಚ್ಚಳವನ್ನು ಕಂಡುಕೊಂಡಿದೆ. ಮಕ್ಕಳಲ್ಲಿ ಓದುವ ಗ್ರಹಿಕೆಯ ಸಾಮಾರ್ಥ್ಯವನ್ನು

ಸಜೀಲಾ ಕೋಲಾ ಅವರಿಗೆ ಫ್ಯಾಶನ್ ಮತ್ತು ಸ್ಟೈಲಿಂಗ್‌ನಲ್ಲಿ ಜೀವಮಾನ ಸಾಧನೆ ಪ್ರಶಸ್ತಿ

ಮುಂಬೈ:ಸಿಮ್ರಾನ್ ಇನ್‌ಸ್ಟಿಟ್ಯೂಟ್‌ನ ಪ್ರಧಾನ ನಿರ್ದೇಶಕಿ ಸಜೀಲಾ ಕೋಲಾ ಅವರಿಗೆ ಮೊಹಮ್ಮದ್ ನಾಗಮಾನ್ ಲತೀಫ್ ನಿರ್ಮಿಸಿದ ಇಂಟರ್ನ್ಯಾಷನಲ್ ಐಕಾನಿಕ್ ಅವಾರ್ಡ್ಸ್ ಸೀಸನ್ 9 2023 ರಲ್ಲಿ ನಡೆದ ಇತ್ತೀಚಿನ ಈವೆಂಟ್‌ನಲ್ಲಿ ಫ್ಯಾಶನ್ ಮತ್ತು ಸ್ಟೈಲಿಂಗ್‌ನಲ್ಲಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಗಿದೆ. ಫ್ಯಾಶನ್‌ನಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದ ಕರ್ನಾಟಕದ ಮೊದಲ ಮಹಿಳೆ. ಸಜೀಲಾ ಕೋಲಾ ಮೂರು ದಶಕಗಳಿಂದ ಫ್ಯಾಷನ್ ಉದ್ಯಮದ ಅವಿಭಾಜ್ಯ

ಪಿಂಕ್ ವಾಟ್ಸಪ್ ಗ್ರಾಹಕರೆ ಎಚ್ಚರ !!

ಸೈಬರ್ ವಂಚಕರು ಮೋಸ ಮಾಡಲು ಹೊಸ ತಂತ್ರಗಳನ್ನು ಹುಡುಕುತ್ತಿದ್ದಾರೆ. Whatsapp ಹೊಸ ವೈಶಿಷ್ಟ್ಯಗಳೊಂದಿಗೆ ಪಿಂಕ್ ಬಣ್ಣದಲ್ಲಿ ಬಂದಿದೆ & ನವೀಕರಿಸಲು ಲಿಂಕ್‌ಗಳನ್ನು ಕಳುಹಿಸಲಾಗುತ್ತಿದೆ ಎಂಬ ಸಂದೇಶ ಕಳುಹಿಸುವ ವಂಚನಾ ಜಾಲ ಸಕ್ರೀಯವಾಗಿದ್ದು ನಿಮ್ಮ ಬ್ಯಾಂಕ್ ಖಾತೆಯ ಹಣ ದೋಚುವ ಸಾಧ್ಯತೆ ಇದೆ. ನಿಮ್ಮ ವಾಟ್ಸ್‌ಆಪ್ ಪಿಂಕ್ ಬಣ್ಣ ಬಂದಿದೆ ಅದರ ಮೇಲೆ ಕ್ಲಿಕ್ ಮಾಡಿ ಅದು ಕೇಳುವ ಮಾಹಿತಿಯನ್ನು ನಮೂದಿಸಿದರೆ ನಿಮ್ಮ ಮಾಹಿತಿಯು ಸೈಬರ್ ಅಪರಾಧಿಗಳ ಕೈ ಸೇರುತ್ತದೆ.

ಮುಲ್ಕಿಯಲ್ಲಿ ಬಿಜೆಪಿ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ

ಕಾರ್ಯಕರ್ತರ ಶ್ರಮದಿಂದ ಬಿಜೆಪಿ ಗೆಲುವು ಸಾಧ್ಯವಾಗಿದೆ. ಅದ್ದರಿಂದ ಕಾರ್ಯಕರ್ತರಿಗೆ ವಿಶೇಷ ಅಭಿನಂದನೆ ಸಲ್ಲಬೇಕಾಗಿದೆ ಎಂದು ಮುಲ್ಕಿ ಮೂಡಬಿದಿರೆ ಕ್ಷೇತ್ರದ ಶಾಸಕರಾದ ಉಮಾನಾಧ ಕೋಟ್ಯಾನ್ ಹೇಳಿದರು. ಅವರು ಪಡುಪಣಂಬೂರಿನ ಮೂಲ್ಕಿ ಸೀಮೆ ಅರಮನೆ ಧರ್ಮಚಾವಡಿಯಲ್ಲಿ ನಡೆದ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ವಿರೋಧ ಪಕ್ಷದವರು ಎಲ್ಲಾ ರೀತಿಯ ಅಪಪ್ರಚಾರ ಮಾಡಿದ್ದು ಆದರೆ ಯಾವುದೇ ಅಪಪ್ರಚಾರಕ್ಕೆ ನಾನು ಉತ್ತರ ನೀಡಲಿಲ್ಲ.

ಕುಡುಕರ ತಾಣವಾದ ಕಿನ್ನಿಗೋಳಿ ಬಸ್ಸು ತಂಗುದಾಣ

ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಿನ್ನಿಗೋಳಿ ಕೇಂದ್ರ ಬಸ್ಸು ತಂಗುದಾಣ ಹಾಗೂ ನಿಲ್ದಾಣ ಅವ್ಯವಸ್ದೆಗಳ ಅಗರವಾಗಿದ್ದು, ಇದೀಗ ಮದ್ಯವ್ಯಸನಿಗಳ ತಾಣವಾಗಿ ಮಾರ್ಪಟ್ಟಿದೆ. ಒಂದೆಡೆ ಬಸ್ಸು ನಿಲ್ದಾಣದಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಧೆ ಇಲ್ಲದೆ ವಾಹನ ಸಂಚಾರಕ್ಕೆ ಹಾಗೂ ಪಾದಚಾರಿಗಳಿಗೆ ತೀವ್ರ ತೊಂದರೆಯಾಗಿದೆ. ಮತ್ತೊಂದೆಡೆ ನಿತ್ಯ ಪ್ರಯಾಣಿಕರಿಗೆ ಪ್ರಮುಖ ಆಸರೆಯಾಗಿದ್ದ ಈ ಬಸ್ಸು ನಿಲ್ದಾಣವನ್ನು ಇದೀಗ ಕುಡುಕರೇ ಆಳುತ್ತಿದ್ದಾರೆ. ಪ್ರತಿನಿತ್ಯ ಸುಮಾರು

ಬಿಜೆಪಿ ಕಾರ್ಯಕರ್ತನ ಮೇಲೆ ಮಾರಕಾಯುಧಗಳಿಂದ ಹಲ್ಲೆಗೆ ಯತ್ನ : ನಟೋರಿಯಸ್ ಕ್ರಿಮಿನಲ್ ಗಳಿಗೆ ಸುಪಾರಿ ನೀಡಿದ ಸ್ಥಳೀಯ ಕಾಂಗ್ರೆಸ್ ಮುಖಂಡ

ಉಡುಪಿ : ಇತ್ತೀಚೆಗೆ ಉಡುಪಿ ಜಿಲ್ಲೆಯ ಉದ್ಯಾವರದ ಬೊಳ್ಜೆ ಪರಿಸರದಲ್ಲಿ ಬಿಜೆಪಿ ಕಾರ್ಯಕರ್ತ ರಕ್ಷಿತ್ ಸಾಲಿಯಾನ್ ಮೇಲೆ ಅಪರಿಚಿತರಾದ ಮೂವರು ಮಾರಕಾಯುಧಗಳಿಂದ ಹಲ್ಲೆ ಮಾಡಲು ಯತ್ನಿಸಿದ ಘಟನೆ ವರದಿಯಾಗಿತ್ತು. ಈ ಬಗ್ಗೆ ಉಡುಪಿ ಜಿಲ್ಲೆಯ ಕಾಪು ಪೋಲಿಸ್ ಠಾಣೆಯುಲ್ಲಿ ದೂರು ದಾಖಲಾಗಿದ್ದು ಈ ಕುರಿತಂತೆ ಪೋಲೀಸರು ವಿಚಾರಣೆ ನಡೆಸಲು ಪ್ರಾರಂಭಿಸಿದಾಗ ಈ ಹಿಂದೆ ಹಲವಾರು ದರೋಡೆ, ಕಳ್ಳತನ ಕೊಲೆ ಇತ್ಯಾದಿ ಆರೋಪಗಳನ್ನು ಹೊತ್ತು, ಇದೀಗ ಜಾಮೀನಿನ ಮೇಲೆ ತಿರುಗಾಡುತ್ತಿರುವ