ಉಳ್ಳಾಲ : ಹಿಟ್ ಆಂಡ್ ರನ್ ಅಪಘಾತ-ಯುವಕ ಸಾವು

ಉಳ್ಳಾಲ: ರಾ.ಹೆ 66ರ ಸಂಕೊಳಿಗೆ ಸಮೀಪ ತಡರಾತ್ರಿ ಬೈಕ್‍ಗೆ ಕಾರು ಢಿಕ್ಕಿ ಹೊಡೆದು ಪರಾರಿಯಾದ ಹಿಟ್ ಆಂಡ್ ರನ್ ಪ್ರಕರಣದ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆಯಲ್ಲಿ ಗಾಯಾಳು ಕೋಟೆಕಾರು ವೈದ್ಯನಾಥ ದೈವಸ್ಥಾನ ರಸ್ತೆ ನಿವಾಸಿ ತೇಜಸ್ ರಾಮ ಕುಲಾಲ್ (28) ಮೃತಪಟ್ಟಿದ್ದರು.
ರಾ.ಹೆ 66ರ ಸಂಕೊಳಿಗೆ ಸಮೀಪ ತಡರಾತ್ರಿ ಬೈಕಿಗೆ ಪೆಟ್ರೋಲ್ ಹಾಕಿಸಲೆಂದು ಉಚ್ಚಿಲದ ಪೆಟ್ರೋಲ್ ಪಂಪ್ ಗೆ ತೆರಳುವಾಗ ಘಟನೆ ಸಂಭವಿಸಿತ್ತು. ಘಟನೆಯಿಂದ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದು, ನಂತರ ಮೃತಪಟ್ಟಿದ್ದಾರೆ. ಘಟನೆಗೆ ಕಾರಣವಾದ ಕೇರಳ ನೋಂದಾಯಿತ ಇನೋವಾ ಕಾರಿನ ದಾಖಲೆಯನ್ನು ಸಿಸಿಟಿವಿ ಮೂಲಕ ಪತ್ತೆಹಚ್ಚಲಾಗಿತ್ತು.
