ಬಾರ್ಕೂರಿನ ಸ್ವೀಝಲ್ ಫುರ್ಟಾಡೊ ಒಲಿದ ಮಿಸ್ ಟೀನ್ ಯೂನಿವರ್ಸಲ್ ಇಂಟರ್ ನ್ಯಾಷನಲ್ ಪ್ರಿನ್ಸಸ್ ಪ್ರಶಸ್ತಿ
ಬ್ರಹ್ಮಾವರ : ಉಡುಪಿ ಜಿಲ್ಲೆ ಬಾರ್ಕೂರು ಮೂಲದ ಸ್ವೀಝಲ್ ಫುರ್ಟಾಡೊ ಅವರು ಸೌತ ಅಮೇರಿಕಾ ಪೆರುವಿನಲ್ಲಿ ನಡೆದ ಮಿಸ್ ಟೀನ್ ಇಂಟರ್‍ನ್ಯಾಶನಲ್ ಸ್ಪರ್ಧೆಯಲ್ಲಿ ಮಿಸ್ ಟೀನ್ ಯೂನಿವರ್ಸಲ್ ಇಂಟರ್‍ನ್ಯಾಷನಲ್ ಪ್ರಿನ್ಸಸ್ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದಾರೆ.
ಈ ಸ್ಪರ್ಧೆಯಲ್ಲಿ ಸ್ವೀಜಲ್ ಅವರು ‘ಮಿಸ್ ಟೀನ್ ಯೂನಿವರ್ಸಲ್ ಏಷ್ಯಾ’ ಮತ್ತು ‘ಅತ್ಯುತ್ತಮ ರಾಷ್ಟ್ರೀಯ ಕಾಸ್ಟೂಮ್ಸ್ ಪ್ರಶಸ್ತಿ’ಯನ್ನೂ ಮುಡಿಗೇರಿಸಿಕೊಂಡಿದ್ದಾರೆ. ದಕ್ಷಿಣ ಭಾರತದ ಸೂಪರ್ ಮಾಡೆಲ್ ಎಂದು ಗುರುತಿಸಿಕೊಂಡಿರುವ 18 ವರ್ಷದ ಸ್ವೀಝಲ್ ಫುರ್ಟಾಡೋ, ಫ್ಯಾಷನ್ ಲೋಕದಲ್ಲಿ ತನ್ನದೇ ಆದ ವಿಶೇಷ ಛಾಪನ್ನು ಮೂಡಿಸಿದ್ದಾರೆ.
2004ರಲ್ಲಿ ಜನಿಸಿದ ಸ್ವೀಝಲ್, ಚಿಕ್ಕ ವಯಸ್ಸಿನಿಂದಲೂ ತನ್ನ ಪ್ರತಿಭೆ ಮತ್ತು ಸೌಂದರ್ಯ ಪ್ರದರ್ಶಿಸಿ ಬೆಂಗಳೂರು, ತಮಿಳುನಾಡು, ದೆಹಲಿಯಲ್ಲಿ ನಡೆದ ಅನೇಕ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಯನ್ನು ಪಡೆದಿದ್ದಳು. ಬೆಂಗಳೂರು ಸೈಂಟ್ ಜೋಸೆಪ್ ಕಾಲೇಜ್ ಆಫ್ ಕಾಮರ್ಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ. ಬಿ.ಏ ಶಿಕ್ಷಣ ಪಡೆದ ಸ್ವೀಝಲ್ ಫುರ್ಟಾಡೋ ಬಾರ್ಕೂರಿನ ಬೆಣ್ಣೆಕುದ್ರು ಮೂಲದ ಸವಿತಾ ಫುರ್ಟಾಡೊ ಅವರ ಪುತ್ರಿಯಾಗಿದ್ದಾಳೆ .