ಮಕ್ಕಳಲ್ಲಿ ಓದುವ ಗ್ರಹಿಕೆಯ ಸಾಮಾರ್ಥ್ಯವನ್ನು ಹೆಚ್ಚಿಸಲು ಸಂಗೀತವು ಒಂದು ಉತ್ತಮ ಮಾರ್ಗವಾಗಿದೆ – ಶ್ರೀಮತಿ ಪದ್ಮಶ್ರೀ ಭಟ್

ಸಂಗೀತವು ಮಕ್ಕಳಲ್ಲಿ ಮೆದುಳಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಪಠ್ಯದೊಂದಿಗೆ ಸಂಗೀತದಲ್ಲಿ ತೊಡಗಿಸಿಕೊಳ್ಳುವುದರಿಂದ ಮಕ್ಕಳಲ್ಲಿ ಮೆದುಳಿನ ಬೆಳವಣಿಗೆಯಲ್ಲಿ ಸುಧಾರಣೆ ಕಾಣಬಹುದಾಗಿದೆ. ಸಂಗೀತವನ್ನು ಸರಳವಾಗಿ ಆಲಿಸುವಾಗ ಉತ್ತಮ ನರ ಸಂಸ್ಕರಣೆಯನ್ನು ಕಾಣಬಹುದೆಂದು ಅಧ್ಯಯನ ಕಂಡು ಹಿಡಿದಿದೆ. ಸಂಗೀತದಲ್ಲಿ ತೊಡಗಿರುವ ಇತರ ಅಧ್ಯಯನಗಳು ಮಕ್ಕಳಲ್ಲಿ ಐಕ್ಯೂ ಪಾಯಿಂಟ್‌ಗಳ ಹೆಚ್ಚಳವನ್ನು ಕಂಡುಕೊಂಡಿದೆ. ಮಕ್ಕಳಲ್ಲಿ ಓದುವ ಗ್ರಹಿಕೆಯ ಸಾಮಾರ್ಥ್ಯವನ್ನು ಹೆಚ್ಚಿಸಲು ಸಂಗೀತವು ಒಂದು ಉತ್ತಮ ಮಾರ್ಗವಾಗಿದೆ. ಎಲ್ಲ ಮಕ್ಕಳಿಗೆ ಓದುವುದು ಒಂದು ಪ್ರಮುಖ ಕೌಶಲವಾಗಿದ್ದು. ಎಲ್ಲ ವಿಷಯಗಳನ್ನು ಗ್ರಹಿಸಲು ಸಂಗೀತ ಸಹಕರಿಸುತ್ತದೆ ಎಂದು ವಾಯ್ಸ್ ಆಫ್ ಅರಾಧನದ ನಿರ್ದೇಶಕಿ ಪದ್ಮಶ್ರೀ ಭಟ್ ತಿಳಿಸಿದರು.

ಶಿಮಂತೂರಿನ ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್ ನಲ್ಲಿ ನಡೆದ ಈ ಶೈಕ್ಷಣಿಕ ವರ್ಷದ ಉಚಿತ ಸಂಗೀತ ತರಗತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಸಂಗೀತ ಶಿಕ್ಷಣವು ಮಕ್ಕಳಿಗೆ ಸಂಗೀತ ಕೌಶಲಗಳನ್ನು ಬೆಳೆಸಿಕೊಳ್ಳಲು ಅವಕಾಶ ನೀಡುವುದಲ್ಲದೆ, ಜ್ಞಾನದ ಬಗ್ಗೆ ಹೆಚ್ಚಿನ ಒಲವು ನೀಡುತ್ತದೆ ಎಂದು ಶ್ರೀ ಶಾರದಾ ಸೊಸೈಟಿಯ ಅಧ್ಯಕ್ಷರಾದ ಧರ್ಮದರ್ಶಿ ಡಾ ಹರಿಕೃಷ್ಣ ಪುನರೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಶ್ರೀ ಶಾರದಾ ಸೊಸೈಟಿಯ ಕೋಶಾಧಿಕಾರಿ ಕೊಡೆತ್ತೂರು ಭುವನಾಭಿರಾಮ ಉಡುಪ, ನಿರ್ದೇಶಕರಾದ ಪಿ.ಎಸ್. ಸುರೇಶ್ ರಾವ್, ಶಾಲಾ ಸಂಚಾಲಕರಾದ ದೇವಪ್ರಸಾದ್ ಪುನರೂರು, ಸಂಗೀತಾ ಗುರುಗಳಾದ ಆದರ್ಶ್ ಎಸ್. ಜೆ ಉ ಪಸ್ಥಿತರಿದ್ದರು.ಶಾಲಾ ಪ್ರಾಂಶುಪಾಲರಾದ ಜಿತೇಂದ್ರ ವಿ ರಾವ್ ಸ್ವಾಗತಿಸಿದರು, ಸಹ ಶಿಕ್ಷಕಿ ಪ್ರಜ್ವಲ ಕಾರ್ಯಕ್ರಮ ನಿರೂಪಿಸಿದರು ಹಾಗೂ ಹೇಮಲತಾ ವಂದಿಸಿದರು.

Related Posts

Leave a Reply

Your email address will not be published.