ಉಡುಪಿ : ಮುಂಗಾರಿನ ಋತು ಪ್ರಾರಂಭವಾದರೂ, ಉಡುಪಿ ಜಿಲ್ಲೆಯ ಕೆಲೆವೆಡೆ ಮಾತ್ರ ಅಲ್ಪ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಆದರೆ ಉಡುಪಿ ನಗರ ಪ್ರದೇಶ ಸೇರಿದಂತೆ ಹಲವೆಡೆ ಕೇವಲ ಮೋಡ ಕವಿದ ವಾತಾವರಣ ಮಾತ್ರ ಭಾಗ್ಯವೆಂಬಂತಿದೆ. ಬಹುತೇಕ ಕಡೆಗಳಲ್ಲಿ ನೀರಿಗೆ ಹಾಹಾಕಾರ ಪಡುವಂತಾಗಿದ್ದು, ಇದೀಗ ನಗರಸಭೆ ವ್ಯಾಪ್ತಿಯಲ್ಲಿ ಇನ್ನು 10 ದಿನ ಮಾತ್ರ ಆಗುವಷ್ಟು ಕುಡಿಯುವ ನೀರು
ಕಳೆದ ಎರಡು ವರ್ಷಗಳಿಂದ ಕಲ್ಲಟ್ಟೆ ಬ್ರಹ್ಮಸ್ಥಾನ ರಸ್ತೆಯ ತೀರ ಅಂಚಿನಲ್ಲಿರುವ ಉಪಯೋಗವಿಲ್ಲದ ವಿದ್ಯುತ್ ಕಂಬಗಳನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಪಡುಬಿದ್ರಿ ಮೆಸ್ಕಾಂ ಶಾಖಾಧಿಕಾರಿಗಳನ್ನು ಆಗ್ರಹಿಸಿದ್ದಾರೆ. ಈ ಹಿಂದೆ ಪಕ್ಕದ ದೂರವಾಣಿ ಕೇಂದ್ರಕ್ಕೆ ಸಂಪರ್ಕವಿದ್ದು ಇದೀಗ ಅವರು ಬೇರೆಡೆಯಿಂದ ಅವರು ವಿದ್ಯುತ್ ಸಂಪರ್ಕ ಪಡೆದ ಕಾರಣ ಈ ಕಂಬಗಳು ಹಾಗೆಯೇ ಇದೆ. ಸಂಚಾರಕ್ಕೆ ತೊಡಕುಂಟು ಮಾಡುತ್ತಾ ರಸ್ತೆಗೆ ಅಂಟಿಕೊಂಡು ನಿಂತುಕೊಂಡಿದೆ. ಗ್ರಾಹಕರ ಸಮಸ್ಯೆಗಳಿಗೆ
ಬೆಂಗಳೂರಿನ ಯಲಹಂಕದ ನ್ಯೂ ಟೌನ್ ನ್ಯಾಶನಲ್ ಪಬ್ಲಿಕ್ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಯಾಗಿರುವ ಆದಿತ್ಯ ಟಿ. (15), ಒಂದು ವಾರದ ಹಿಂದೆ ನಾಪತ್ತೆಯಾಗಿದ್ದಾನೆ. ಮೇ 29, 2023ರ ಸೋಮವಾರದಂದು ತನ್ನ ಪೋಷಕರಾದ ತಂದೆ ತಿಮ್ಮ ರಾಯಪ್ಪ ಮತ್ತು ತಾಯಿ ಅನಿತಾರಲ್ಲಿ ಕೂದಲು ಕಟ್ಟಿಂಗ್ ಮಾಡಿಸಿಕೊಂಡು ಬರುತ್ತೇನೆಂದು ಮಧ್ಯಾಹ್ನದ ಹೊತ್ತಿಗೆ ಹೋದವನು ಮರಳಿ ಮನೆಗೆ ಬಂದಿಲ್ಲ. ಈ ಬಗ್ಗೆ ಹೆತ್ತವರು ಬೆಂಗಳೂರಿನ ಆರ್.ಟಿ. ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ನಂತರ
ಬಿಗ್‍ಬಾಸ್ ಕನ್ನಡ 9ರ ಕಾರ್ಯಕ್ರಮದಲ್ಲಿ ಗೆಲುವಿನ ನಗೆ ಬೀರಿರುವ ತುಳು ಚಿತ್ರರಂಗದ ಪ್ರತಿಭಾನ್ವಿತ ಕಲಾವಿದ ರೂಪೇಶ್ ಶೆಟ್ಟಿ ಅವರ ಮತ್ತೊಂದು ಸಿನಿಮಾ ಸರ್ಕಸ್. ಜೂನ್ 9ರಂದು ಒಮಾನ್-ಮಸ್ಕತ್‍ನಲ್ಲಿ ಮೆಗಾ ಪ್ರೀಮಿಯರ್ ಶೋ ಹಮ್ಮಿಕೊಂಡಿದ್ದಾರೆ. ಗಿರ್ಗಿಟ್ ಎಂಬ ಬ್ಲಾಕ್ ಬಸ್ಟರ್ ತುಳು ಸಿನಿಮಾದ ಮೂಲಕ ಯಶಸ್ಸು ಗಳಿಸಿರುವ ರೂಪೇಶ್ ಶೆಟ್ಟಿ ಇದೀಗ ಸರ್ಕಸ್ ಸಿನಿಮಾದ ಮೂಲಕ ಸುದ್ದಿಯಲ್ಲಿದ್ದಾರೆ. ಸರ್ಕಸ್ ಸಿನಿಮಾದ ಪ್ರೀಮಿಯರ್ ಪ್ರದರ್ಶನ ದುಬೈ,
ಉಡುಪಿ : ಅರಣ್ಯ ಇಲಾಖೆ ಮಂಗಳೂರು ವೃತ್ತ, ಕುಂದಾಪುರ ವಿಭಾಗದಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜೂನ್ 5 ರಂದು ಕುಂದಾಪುರ-ಕೋಡಿ ಸೇತುವೆ ಬಳಿಯ ಶ್ರೀನಾಗ ಜಟ್ಟಿಗೇಶ್ವರ ದೇವಸ್ಥಾನದ ಎದುರು ಹಮ್ಮಿ ಕೊಂಡ ಕಾಂಡ್ಲಾ ಸಸಿ ನೆಡುವ ಕಾರ್ಯಕ್ರಮಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬೋಟ್ ಮೂಲಕ ತೆರಳಿ ನದಿ ನಡುವೆ ಬೆಳೆಸಿದ ಕಾಂಡ್ಲಾ ವನಗಳ ವೀಕ್ಷಣೆ ಮಾಡಿದ ಬಳಿಕ ಚಾಲನೆ ನೀಡಿದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ದೇಶದಲ್ಲಿ ಶೇ.20 ಅರಣ್ಯ
ಉಡುಪಿ : ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ಶಿರನ್ ಶೆಟ್ಟಿ ನೇತೃತ್ವದ ವೈದ್ಯರ ತಂಡ ಡಾ. ಗಣೇಶ್ ಭಟ್, ಡಾ. ಅತಿಶ್ ಶೆಟ್ಟಿ, ಡಾ. ಬಾಲಾಜಿ ಮತ್ತು ಡಾ. ಸಂದೇಶ್ ಶೇಟ್ (ಅರಿವಳಿಕೆ) ಇವರುಗಳು ಎಂಡೋಲ್ಟ್ರಾಸೌಂಡ್ ಗೈಡೆಡ್ ಗ್ಯಾಸ್ಟ್ರೋಜೆಜುನೋಸ್ಟೋಮಿ ಎಂಬ ಸಂಕೀರ್ಣ ವಿನೂತನ ಎಂಡೋಸ್ಕೋಪಿ ಕಾರ್ಯವಿಧಾನ (ಶಸ್ತ್ರಚಿಕಿತ್ಸೆ)ಯನ್ನು ಉಡುಪಿ ಜಿಲ್ಲೆಯ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಇತ್ತೀಚೆಗೆ ನಡೆಸಲಾಯಿತು.
ಪುತ್ತೂರು : ಮಣಿಪುರ ರಾಜ್ಯದಲ್ಲಿ ಮೀಸಲಾತಿ ಗಲಭೆ ಸೃಷ್ಠಿಸಿ ಚರ್ಚ್ ಮತ್ತು ಕ್ರಿಶ್ಚಿಯನರ ಮೇಲೆ ಮೇಲೆ ನಡೆಸಲಾಗಿರುವ ದಾಳಿಯನ್ನು ಖಂಡಿಸಿ ಮತ್ತು ಮಣಿಪುರದಲ್ಲಿ ಶಾಂತಿ-ಸುವ್ಯವಸ್ಥೆಯನ್ನು ಕಾಪಾಡುವಂತೆ ಆಗ್ರಹಿಸಿ ಪುತ್ತೂರಿನ ಆಡಳಿತ ಸೌಧದ ಎದುರು ಸಿಐಟಿಯು ಬೆಂಬಲಿತ ತಾಲ್ಲೂಕು ಬೀಡಿ ಕೆಲಸಗಾರರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಪುತ್ತೂರು ತಾಲೂಕು ಬೀಡಿ ಕೆಲಸಗಾರರ ಸಂಘದ ಗೌರವಾಧ್ಯಕ್ಷರಾದ ಕಾರ್ಮಿಕ ಮುಂದಾಳು
ಅದೆಷ್ಟೋ ವರ್ಷಗಳಿಂದ ತ್ಯಾಜ್ಯ ಸಮಸ್ಯೆಯಿಂದ ನಲುಗುತ್ತಿರುವ ಪಡುಬಿದ್ರಿಯ ಈ ಜಟಿಲ ಸಮಸ್ಯೆಗೆ ಮುಕ್ತಿಯಾರಿಂದ ಯಾವಾಗ ಎಂಬ ಪ್ರಶ್ನೆಗೆ ಎಲ್ಲೂ ಉತ್ತರವೇ ಸಿಗುತ್ತಿಲ್ಲ, ಪರಿಣಾಮ ಪಡುಬಿದ್ರಿ ಗ್ರಾ.ಪಂ. ಕಛೇರಿಯ ಮುಂಭಾಗದಲ್ಲೇ ರಾಶಿ ರಾಶಿ ದುರ್ನಾತ ಪ್ಲಾಸ್ಟಿಕ್ ತ್ಯಾಜ್ಯರಾಶಿ. ಬೃಹತ್ ಕಂಪನಿಗಳಿಗೆ ಸಾಹಸ್ರಾರು ಎಕ್ರೆ ಭೂಮಿ ನೀಡುವಾಗ, ಯಾವ ಅಧಿಕಾರಿ ಸಹಿತ ಯಾವೊಬ್ಬ ಜನಪ್ರತಿನಿಧಿಗೂ ಗ್ರಾಮದ ಉಪಯೋಗಕ್ಕೆ ಒಂದಿಷ್ಟು ಭೂಮಿಯನ್ನು ಉಳಿಸ ಬೇಕೆಂಬ ಅಲೋಚನೆಯೇ ಬಂದಿಲ್ಲ,
ಪುತ್ತೂರು ವಿಧಾನ ಸಭಾಕ್ಷೇತ್ರಕ್ಕೆ ಸಂಬಂಧಿಸಿದಂತೆ ಪುತ್ತೂರು ತಾಲೂಕಿನಲ್ಲಿ ಪೊಲೀಸ್ ಅಧೀಕ್ಷರ ಕಛೇರಿಯನ್ನು ಪ್ರಾರಂಭಿಸುವ ಬಗ್ಗೆ ಸರಕಾರದ ಹಂತದಲ್ಲಿ ಈಗಾಗಲೇ ಅನುಮೋದನೆಯಾಗಿದೆ. ಕಂದಾಯ ಇಲಾಖೆಯಿಂದಲೂ ಸ್ಥಳ ಕಾಯ್ದಿರಿಸಲಾಗಿದೆ. ಸರಕಾರವು ಈ ವಿಚಾರವನ್ನು ಪರಿಗಣಿಸಿ ಎಸ್‍ಪಿ ಕಚೇರಿಯನ್ನು ಪುತ್ತೂರಿಗೆ ಸ್ಥಳಾಂತರ ಮಾಡುವಂತೆ ಶಾಸಕ ಆಶೋಕ್ ಕುಮಾರ್ ರೈ ಅವರು ಗೃಹ ಸಚಿವರಿಗೆ ಮನವಿ ಮಾಡಿದ್ದಾರೆ. ಪುತ್ತೂರಿಗೆ ಉಪವಿಭಾಗಕ್ಕೆ ಎಸ್‍ಪಿ ಕಚೇರಿಯನ್ನು
ಪರಿಸರವನ್ನು ಅತ್ಯಂತ ಜೋಪಾನವಾಗಿ ಕಾಪಾಡಬೇಕಾದ ಮನುಷ್ಯರು ತಮ್ಮ ಉತ್ತಮ ಬದುಕಿಗಾಗಿ ಪರಿಸರವನ್ನೇ ಹಾಳು ಮಾಡುತ್ತಿರುವುದು ಅತ್ಯಂತ ಅಪಾಯಕಾರಿ ಸಂಗತಿಯಾಗಿದೆ.ಪರಿಸರ ನಾಶಗೊಂಡರೆ ಮಾನವ ಕುಲಕ್ಕೆ ಉಳಿಗಾಲವಿಲ್ಲ.ನೆಲ ಜಲ ಗಾಳಿ ಗಿಡ ಮರ ಪ್ರಾಣಿ ಪಕ್ಷಿ ಸೇರಿದಂತೆ ಇಡೀ ಪರಿಸರವನ್ನು ಸಂರಕ್ಷಣೆ ಮಾಡುವುದರ ಜೊತೆಗೆ ಮಾನವನ ಅಭಿವೃದ್ಧಿಯೂ ಆಗಬೇಕು. ಅದು ಪರಿಸರ ಸ್ನೇಹಿ ಅಭಿವೃದ್ಧಿಯಾಗುವತ್ತ ನಮ್ಮೆಲ್ಲರ ಹೊಣೆಯಾಗಬೇಕು ಎಂದು ಯೆನೆಪೋಯ ಪದವಿ ಕಾಲೇಜ್ ನ ಉಪ




























