ಜೂನ್ 9ರಂದು ಒಮಾನ್-ಮಸ್ಕತ್‍ನಲ್ಲಿ ಸರ್ಕಸ್ ತುಳು ಸಿನಿಮಾದ ಪ್ರೀಮಿಯರ್ ಶೋ

ಬಿಗ್‍ಬಾಸ್ ಕನ್ನಡ 9ರ ಕಾರ್ಯಕ್ರಮದಲ್ಲಿ ಗೆಲುವಿನ ನಗೆ ಬೀರಿರುವ ತುಳು ಚಿತ್ರರಂಗದ ಪ್ರತಿಭಾನ್ವಿತ ಕಲಾವಿದ ರೂಪೇಶ್ ಶೆಟ್ಟಿ ಅವರ ಮತ್ತೊಂದು ಸಿನಿಮಾ ಸರ್ಕಸ್. ಜೂನ್ 9ರಂದು ಒಮಾನ್-ಮಸ್ಕತ್‍ನಲ್ಲಿ ಮೆಗಾ ಪ್ರೀಮಿಯರ್ ಶೋ ಹಮ್ಮಿಕೊಂಡಿದ್ದಾರೆ.

ಗಿರ್ಗಿಟ್ ಎಂಬ ಬ್ಲಾಕ್ ಬಸ್ಟರ್ ತುಳು ಸಿನಿಮಾದ ಮೂಲಕ ಯಶಸ್ಸು ಗಳಿಸಿರುವ ರೂಪೇಶ್ ಶೆಟ್ಟಿ ಇದೀಗ ಸರ್ಕಸ್ ಸಿನಿಮಾದ ಮೂಲಕ ಸುದ್ದಿಯಲ್ಲಿದ್ದಾರೆ. ಸರ್ಕಸ್ ಸಿನಿಮಾದ ಪ್ರೀಮಿಯರ್ ಪ್ರದರ್ಶನ ದುಬೈ, ಅಬುಧಾಬಿ ಮತ್ತು ಪುಣೆಯಲ್ಲಿ ಯಶಸ್ವಿ ಪ್ರದರ್ಶನ ನಡೆದು ಸಿನಿ ಪ್ರೇಕ್ಷಕರನ್ನು ಮನರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತುಳು ಸಿನಿಮಾ ಸರ್ಕಸ್ ಹಾಡುಗಳು ರಿಲೀಸ್ ಆಗಿದ್ದು, ಸರ್ಕಸ್ ಟೈಟಲ್ ಟ್ರ್ಯಾಕ್ ಹಾಗೂ ಓಹ್ ಬೇಬಿ ಗರ್ಲ್ ಹಾಡು ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಲೋಯ್ ವ್ಯಾಲೆಂಟೀನ್ ಸಲ್ಡಾನಾ ಸಂಗೀತ ನೀಡಿರುವ ಸರ್ಕಸ್ ಟೈಟಲ್ ಸಾಂಗ್‍ಗೆ ರೂಪೇಶ್ ಶೆಟ್ಟಿ ಸಾಹಿತ್ಯ ಬರೆದಿದ್ದರೆ ಚಂದನ್ ಶೆಟ್ಟಿ ಗಾನಸುಧೆ ಹರಿಸಿದ್ದಾರೆ. ಓಹ್ ಬೇಬಿ ಗರ್ಲ್ ಹಾಡನ್ನು ನಿಹಾಲ್ ತಾವ್ರೋ ಹಾಡಿದ್ದಾರೆ.

ತುಳು ಚಿತ್ರ ಸರ್ಕಸ್'ನಲ್ಲಿ ನಟನೆಯ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ರೂಪೇಶ್ ಶೆಟ್ಟಿ. ಹೊತ್ತಿದ್ದಾರೆಸರ್ಕಸ್’ ಚಿತ್ರದಲ್ಲಿ ರೂಪೇಶ್ ಶೆಟ್ಟಿ ಜೊತೆಗೆ ನಟಿ ರಚನಾ ರೈ, ನಟ ಯಶ್ ಶೆಟ್ಟಿ, ಅರವಿಂದ್ ಬೋಳಾರ್, ನವೀನ್ ಡಿ ಪಡೀಲ್ ಮುಂತಾದವರು ಅಭಿನಯಿಸಿದ್ದಾರೆ.

ಇದೀಗ ಜೂನ್ 9ರಂದು ಸರ್ಕಸ್ ಸಿನಿಮಾದ ಪ್ರೀಮಿಯರ್ ಶೋ ಒಮಾನ್ ಮಸ್ಕತ್‍ನಲ್ಲಿ ಹಮ್ಮಿಕೊಂಡಿದ್ದು, ಆಸಕ್ತರು ಟಿಕೆಟ್ ಕಾಯ್ದಿರಿಸಲು 00968-77240531, 96895148101 ಸಂಪರ್ಕಿಸಬಹುದು.

Related Posts

Leave a Reply

Your email address will not be published.