Home Blog Left SidebarPage 505

ಕಾಪು : ಬಿಜೆಪಿಯಿಂದ ರೋಡ್ ಶೋ

ಕಾಪು ಕ್ಷೇತ್ರವನ್ನು ಗೆದ್ದು ಬೀಗಿದ ಭಾರತೀಯ ಜನತಾ ಪಾರ್ಟಿಯ ನೂರಾರು ಕಾರ್ಯಕರ್ತರು ಹಾಲಿ ಹಾಗೂ ಮಾಜಿ ಶಾಸಕರನ್ನು ಸೇರಿಕೊಂಡು ಕ್ಷೇತ್ರದ್ಯಾಂತ ರೋಡ್ ಶೋ ನಡೆಸುವ ಮೂಲಕ ವಿಜಯೋತ್ಸವ ಆಚರಿಸಿದ್ದಾರೆ.ಹಾಲಿ ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಹಾಗೂ ಮಾಜಿ ಶಾಸಕ ಲಾಲಾಜಿ ಆರ್, ಮೆಂಡನ್ ಉಪಸ್ಥಿತಿಯಲ್ಲಿ ಪಡುಕರೆಯಿಂದ ಚಾಲನೆಗೊಂಡ ರೋಡ್ ಶೋ ಉದ್ಯಾವರ, ಕಟಪಾಡಿ, ಶಿರ್ವ,

ಕಾಪುವಿನಲ್ಲಿ ಎಲ್‍ಇಡಿ ಸ್ಕ್ರೀನ್‍ನಲ್ಲಿ ಪ್ರಮಾಣ ವಚನದ ನೇರಪ್ರಸಾರ

ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಪ್ರಮಾಣವಚನ ಸ್ವೀಕಾರ ಮಾಡಿರುವ ದೃಶ್ಯವನ್ನು ಕಾಪು ಕಾಂಗ್ರೆಸ್ ಎಲ್‍ಇಡಿ ಸ್ಕ್ರೀನ್ ಮೂಲಕ ಕಾಪು ಪೇಟೆಯಲ್ಲಿ ಸಾರ್ವಜನಿಕರ ವೀಕ್ಷಣೆಗೆ ಇಟ್ಟು ಸಂಭ್ರಮಾಚರಣೆ ನಡೆಸಿದ್ದಾರೆ.ಸಿದ್ಧರಾಮಯ್ಯ ಹಾಗೂ ಅವರ ತಂಡ ಪ್ರಮಾಣವಚನ ಸ್ವೀಕರಿಸುತ್ತಿದಂತೆ ಕಾಂಗ್ರೆಸ್ ಕಾರ್ಯಕರ್ತರು ಸುಡುಮದ್ದು ಸಿಡಿಸಿ…ಸಾರ್ವಜನಿಕರಿಗೆ ಸಿಹಿ ಹಂಚಿ ಸಿದ್ದರಾಮಯ್ಯ ಹಾಗೂ ವಿನಯ ಕುಮಾರ್ ಸೊರಕೆ ಪರ ಘೋಷಣೆಯನ್ನು ಕೂಗಿ

ಪಡುಬಿದ್ರಿ : ವಿದ್ಯುತ್ ಟ್ರಾನ್ಸ್ ಪಾರ್ಮಾರ್ ಧರೆಗುರುಳಿ ಅನಾಹುತ

ಬೀಸಿದ ಬಾರೀ ಗಾಳಿಗೆ ಪಡುಬಿದ್ರಿ ಬೇಂಗ್ರೆಯಲ್ಲಿ ಮರವೊಂದು ವಿದ್ಯುತ್ ಕಂಬವೊಂದಕ್ಕೆ ಬಿದ್ದ ಪರಿಣಾಮ ಸುಮಾರು ಹತ್ತು ವಿದ್ಯುತ್ ಕಂಬಗಳು ಸಹಿತ ಒಂದು ವಿದ್ಯುತ್ ಟ್ರಾನ್ಸ್ ಪಾರ್ಮಾರ್ ಧರೆಗುರುಳಿ ಆರು ಲಕ್ಷ ರೂಪಾಯಿಗೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.ಬೇಂಗ್ರೆಯ ಪ್ರಮುಖ ರಸ್ತೆಯಲ್ಲಿ ಈ ದುರಂತ ಸಂಭವಿಸಿದ್ದು, ಆ ವೇಳೆಯಲ್ಲಿ ಯಾವುದೇ ವಾಹನಗಳಾಗಲೀ ಸಾರ್ವಜನಿಕ ಸಂಚಾರವಾಗಲಿ ಇಲ್ಲದ ಕಾರಣ ಯಾವುದೇ ಸಾವು ನೋವು ಸಂಭವಿಸಿಲ್ಲ, ವಿಷಯ ತಿಳಿದ ತಕ್ಷಣ

ಸುಳ್ಯ. ಬೆಳ್ಳಾರೆ ಕಾಂಗ್ರೆಸ್ ವತಿಯಿಂದ ಬೆಳ್ಳಾರೆ ಯಲ್ಲಿ ವಿಜಯೋತ್ಸವ

ರಾಜ್ಯದಲ್ಲಿ ಇಂದು ಕಾಂಗ್ರೆಸ್ ಸರಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಮತ್ತು ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಹಾಗೂ ಎಂಟು ಜನ ಸಚಿವರಿಗೆ ಪ್ರಮಾಣವಚನ ವಿಜಯೋತ್ಸವ ಈ ಸಂದರ್ಭದಲ್ಲಿ ಸುನಿಲ್ ರೈ ಪುಡ್ಕಜೆ, ಹಮೀದ್ ಬೆಳ್ಳಾರೆ ಸಚಿನ್ ರಾಜ್ ಶೆಟ್ಟಿ ಪೆರುವಾಜೆ ಹಾಗೂ ಹಲವಾರು ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ಭಾಗಿಯಾಗಿದ್ದರು

ಸಿಎಂ ಆಗಿ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕಾರ – ಕಾರ್ಕಳದಲ್ಲಿ ಸಂಭ್ರಮಾಚರಣೆ

ಸಿದ್ದರಾಮಯ್ಯ ಅವರು ಸಿಎಂ ಅಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಕಾರ್ಕಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ಆಚರಿಸಿದರು. ಕಾರ್ಕಳ ಬಸ್ ನಿಲ್ದಾಣದಲ್ಲಿ ಪಟಾಕಿ ಸಿಡಿಸಿ ಕಾಂಗ್ರೆಸ್ ಪರ ಘೋಷಣೆ ಕೂಗಿ ಸಂಭ್ರಮವನ್ನು ಆಚರಿಸಿದರು.

ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ – ಮೂಡುಬಿದರೆಯಲ್ಲಿ ಜಾಗೃತಿ ಜಾಥಾ

ಮೂಡುಬಿದಿರೆ: ಜಿಲ್ಲಾ ಪಂಚಾಯತ್ ದ.ಕ.ಜಿಲ್ಲೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಶ್ರಿತ ರೋಗವಾಹಕ ನಿಯಂತ್ರಣಾಧಿಕಾರಿಗಳ ಕಛೇರಿ ಮಂಗಳೂರು, ಸಮುದಾಯ ಆರೋಗ್ಯ ಕೇಂದ್ರ ಮೂಡುಬಿದಿರೆ, ಪುರಸಭೆ, ನೇತಾಜಿ ಬ್ರಿಗೇಡ್ ಹಾಗೂ ಜವನೆರ್ ಬೆದ್ರ ಇವುಗಳ ಸಹಯೋಗದಲ್ಲಿ ರಾಷ್ಟ್ರೀಯ ಡೆಂಗ್ಯೂ ದಿನವನ್ನು ಸಮಾಜ ಮಂದಿರದಲ್ಲಿ ಆಚರಿಸಲಾಯಿತು. ಉದ್ಯಮಿ ಸತ್ಯಪ್ರಕಾಶ್ ಹೆಗ್ಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಜಿಲ್ಲಾ ಆಶಿತಾ ರೋಗವಾಹಕ

ಹಿರಿಯ ಸಮಾಜ ಸೇವಕರೂ, ಭಾಸ್ಕರ್. ಎಂ. ಮಳವೂರು ಅನಾರೋಗ್ಯದಿಂದಾಗಿ ನಿಧನ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ಸದಸ್ಯರೂ, ಜಿಲ್ಲಾ ಸಂಘಟನಾ ಸಂಚಾಲಕರೂ, ಮಳವೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರೂ, ಹಿರಿಯ ಸಮಾಜ ಸೇವಕರೂ ಹಾಗೂ ಜಿಲ್ಲೆಯ ಖ್ಯಾತ ವಾದ್ಯ ಕಲಾವಿದರೂ ಆಗಿರುವ ಶ್ರೀಯುತ ಭಾಸ್ಕರ್. ಎಂ. ಮಳವೂರು ಸಿದ್ಧಾರ್ಥನಗರ ಇವರು ಇಂದು ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ಅನಾರೋಗ್ಯದಿಂದಾಗಿ ನಿಧನ ಹೊಂದಿದ್ದಾರೆ. ಇವರ ಪಾರ್ಥೀವ ಶರೀರದ ಅಂತಿಮ ದರ್ಶನದ ವ್ಯವಸ್ಥೆಯನ್ನು ಮಧ್ಯಾಹ್ನ 2 ಗಂಟೆಗೆ

ನಾವೆಲ್ಲ ಒಂದಾಗಿ ಪಕ್ಷ, ಸಂಘಟನೆ, ದೇಶವನ್ನು ಕಟ್ಟೋಣ : ಯತ್ನಾಳ್

ಪುತ್ತೂರು: ನಡೆದಿರುವ ಘಟನೆಯನ್ನು ಮರೆತು ಮತ್ತೊಮ್ಮೆ ನಾವೆಲ್ಲ ಒಂದಾಗಿ ಪಕ್ಷ, ಸಂಘಟನೆ, ದೇಶವನ್ನು ಕಟ್ಟೋಣ ಎಂದು ವಿಜಯಪುರ ನಗರ ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್ ಬಿಜೆಪಿ ನಾಯಕರಿಗೆ, ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಬ್ಯಾನರ್ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಂದ ಹಲ್ಲೆಗೊಳಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳುಗಳ ಆರೋಗ್ಯ ವಿಚಾರಣೆಗಾಗಿ ಪುತ್ತೂರಿಗೆ ಆಗಮಿಸಿದ್ದ ಯತ್ನಾಳ್ ಸಂಘ ಕಾರ್ಯಾಲಯಕ್ಕೆ ಭೇಟಿ ನೀಡಿ ಬಳಿಕ ಬಿಜೆಪಿ

ಯತ್ನಾಳ್ ಪುತ್ತೂರು ಅಸ್ಪತ್ರೆ ಭೇಟಿ ಸಂದರ್ಭ – ಅಜಿತ್ ರೈ ಹೊಸಮನೆಯನ್ನು ಹೊರದೂಡಿದ ಹಿಂದೂ ಕಾರ್ಯಕರ್ತರು

ಪುತ್ತೂರು: ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಪುತ್ತೂರು ಅಸ್ಪತ್ರೆಗೆ ಆಗಮಿಸಿದ ಸಂದರ್ಭ ಬಿಜೆಪಿಯ ಅಜಿತ್ ರೈ ಹೊಸಮನೆಯನ್ನು ಹಿಂದೂ ಕಾರ್ಯಕರ್ತರು ಹೊರದೂಡಿದ ಘಟನೆ ನಡೆದಿದೆ. ಪೋಲೀಸ್ ದೌರ್ಜನ್ಯದಿಂದ ಗಾಯಗೊಂಡವರನ್ನು ಭೇಟಿಯಾಗಲು ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಅವರು ಅರುಣ್ ಕುಮಾರ್ ಪುತ್ತಿಲ ಅವರೊಂದಿಗೆ ಅಸ್ಪತ್ರೆಯ ಒಳಹೋಗುತ್ತಿದ್ದಂತೆ, ಒಳಪ್ರವೇಶಿಸಲು ಯತ್ನಿಸಿದ ಬಿಜೆಪಿಯ ಅಜಿತ್ ರೈ ಹೊಸಮನೆಯನ್ನು ಹಿಂದೂ ಕಾರ್ಯಕರ್ತರು ಹೊರ ತಳ್ಳಿದ್ದಾರೆ. ಈ ಹಿಂದೆ

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಹಿರಿಯ ವಕೀಲ ವಿಶ್ವನಾಥನ್, ನ್ಯಾಯಮೂರ್ತಿ ಮಿಶ್ರಾ ಪ್ರಮಾಣ ವಚನ ಸ್ವೀಕಾರ

ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಶುಕ್ರವಾರ ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಹಿರಿಯ ವಕೀಲ ಕೆವಿ ವಿಶ್ವನಾಥನ್ ಅವರಿಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಪ್ರಮಾಣ ವಚನ ಬೋಧಿಸಿದರು . ಈ ಮೂಲಕ ಸುಪ್ರೀಂ ಕೋರ್ಟ್ ಈಗ 34 ನ್ಯಾಯಾಧೀಶರ ಪೂರ್ಣ ಬಲವನ್ನು ಹೊಂದಿದೆ.