ಯತ್ನಾಳ್ ಪುತ್ತೂರು ಅಸ್ಪತ್ರೆ ಭೇಟಿ ಸಂದರ್ಭ – ಅಜಿತ್ ರೈ ಹೊಸಮನೆಯನ್ನು ಹೊರದೂಡಿದ ಹಿಂದೂ ಕಾರ್ಯಕರ್ತರು

ಪುತ್ತೂರು: ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಪುತ್ತೂರು ಅಸ್ಪತ್ರೆಗೆ ಆಗಮಿಸಿದ ಸಂದರ್ಭ ಬಿಜೆಪಿಯ ಅಜಿತ್ ರೈ ಹೊಸಮನೆಯನ್ನು ಹಿಂದೂ ಕಾರ್ಯಕರ್ತರು ಹೊರದೂಡಿದ ಘಟನೆ ನಡೆದಿದೆ. ಪೋಲೀಸ್ ದೌರ್ಜನ್ಯದಿಂದ ಗಾಯಗೊಂಡವರನ್ನು ಭೇಟಿಯಾಗಲು ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಅವರು ಅರುಣ್ ಕುಮಾರ್ ಪುತ್ತಿಲ ಅವರೊಂದಿಗೆ ಅಸ್ಪತ್ರೆಯ ಒಳಹೋಗುತ್ತಿದ್ದಂತೆ, ಒಳಪ್ರವೇಶಿಸಲು ಯತ್ನಿಸಿದ ಬಿಜೆಪಿಯ ಅಜಿತ್ ರೈ ಹೊಸಮನೆಯನ್ನು ಹಿಂದೂ ಕಾರ್ಯಕರ್ತರು ಹೊರ ತಳ್ಳಿದ್ದಾರೆ.
ಈ ಹಿಂದೆ ಹಿಂದೂ ಜಾಗರಣ ವೇದಿಕೆಯಲ್ಲಿ ಗುರುತಿಸಿಕೊಂಡಿರುವ ಅಜಿತ್ ರೈ ಹೊಸಮನೆ, ಪೋಟೊ ಕ್ಲಿಕ್ಕಿಸಲೆಂದು ಒಳಬಂದಿದ್ದಾರೆ, ಈ ಹಿಂದೆ ಪುತ್ತೂರಿನಲ್ಲಿ ಆದ ಬೆಳವಣಿಗೆಯನ್ನು ಜತೆಯಲ್ಲೇ ಇದ್ದುಕೊಂಡು ಪ್ರತಿಯೊಂದು ಮಾಹಿತಿಯನ್ನ್ನೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಗೆ ರವಾನಿಸಿದ್ದಾರೆ ಎಂಬ ಅನುಮಾನದಿಂದ ಆಕ್ರೋಶಿತರಾಗಿ ಹಿಂದೂ ಕಾರ್ಯಕರ್ತರು ಅವರನ್ನು ಹೊರ ಹಾಕಿದ್ದಾರೆಂದು ತಿಳಿದು ಬಂದಿದೆ. ಯಾತ್ನಾಳ್ ಅವರೊಂದಿಗೆ ಒಳಹೋಗಲಾಗದೆ ಹೊರಗುಳಿದ ಅಜಿತ್ ರೈ ಆಕ್ರೋಶಭರಿತವಾಗಿ ಮಾತನಾಡುತ್ತಿರುವುದು ಮತ್ತು ಅಜಿತ್ ರೈ ಒಬ್ಬ ನಕಲಿ ಹಿಂದೂ ಹಾಗೂ ಸ್ವಾರ್ಥಿ ಎಂಬ ಪ್ರತ್ಯೇಕ ವೀಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
