ಪಡುಬಿದ್ರಿ : ವಿದ್ಯುತ್ ಟ್ರಾನ್ಸ್ ಪಾರ್ಮಾರ್ ಧರೆಗುರುಳಿ ಅನಾಹುತ

ಬೀಸಿದ ಬಾರೀ ಗಾಳಿಗೆ ಪಡುಬಿದ್ರಿ ಬೇಂಗ್ರೆಯಲ್ಲಿ ಮರವೊಂದು ವಿದ್ಯುತ್ ಕಂಬವೊಂದಕ್ಕೆ ಬಿದ್ದ ಪರಿಣಾಮ ಸುಮಾರು ಹತ್ತು ವಿದ್ಯುತ್ ಕಂಬಗಳು ಸಹಿತ ಒಂದು ವಿದ್ಯುತ್ ಟ್ರಾನ್ಸ್ ಪಾರ್ಮಾರ್ ಧರೆಗುರುಳಿ ಆರು ಲಕ್ಷ ರೂಪಾಯಿಗೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಬೇಂಗ್ರೆಯ ಪ್ರಮುಖ ರಸ್ತೆಯಲ್ಲಿ ಈ ದುರಂತ ಸಂಭವಿಸಿದ್ದು, ಆ ವೇಳೆಯಲ್ಲಿ ಯಾವುದೇ ವಾಹನಗಳಾಗಲೀ ಸಾರ್ವಜನಿಕ ಸಂಚಾರವಾಗಲಿ ಇಲ್ಲದ ಕಾರಣ ಯಾವುದೇ ಸಾವು ನೋವು ಸಂಭವಿಸಿಲ್ಲ, ವಿಷಯ ತಿಳಿದ ತಕ್ಷಣ ಪಡುಬಿದ್ರಿ ಮೆಸ್ಕಾಂ ಶಾಖಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ದುರಸ್ಥಿ ಕಾರ್ಯ ಆರಂಭಿಸಿದ್ದಾರೆ.