Home Blog Left SidebarPage 532

36 ನೇ ಫೆಡರೇಶನ್ ಕಪ್ ವಾಲಿಬಾಲ್ ಚಾಂಪಿಯನ್ ಶಿಫ್

36 ನೇ ಫೆಡರೇಶನ್ ಕಪ್ ವಾಲಿಬಾಲ್ ಚಾಂಪಿಯನ್ ಶಿಪ್ಪು ಪoಡಿಚೇರಿ ಕರೇ ಕಲ್ ನಲ್ಲಿ ತಾರೀಕು 20 ರಿಂದ 26ರ ತನಕ ನಡೆಯಿತು ಈ ಕ್ರೀಡಾಕೂಟಕ್ಕೆ ಮುಖ್ಯ ಅತಿಥಿಯಾಗಿ ಕರ್ನಾಟಕ ವಾಲಿಬಾಲ್ ಅಸೋಸಿಯೇಷನ್ ಸದಸ್ಯ ಪುತ್ತೂರು ಇಬ್ರಾಹಿಂ ಗೋಳಿ ಕಟ್ಟೆ ಹಾಗೂ ರಾಷ್ಟ್ರ ವಾಲಿಬಾಲ್ ತರಬೇತಿದಾರ ಪುತ್ತೂರು ಪಿ ವಿ ನಾರಾಯಣ ಅತಿಥಿಯಾಗಿ ಭಾಗವಹಿಸಿದ ಈ ಇಬ್ಬರನ್ನು ಪಾಂಡಿಚೇರಿ

ಭೂಮಿ ಕೊಟ್ಟದ್ದೂ ಕಾಂಗ್ರೆಸ್, ಕೃಷಿಕರಿಗೆ ಉಚಿತ ಕರೆಂಟ್ ಕೊಟ್ಟದ್ದೂ ಕಾಂಗ್ರೆಸ್: ಅಶೋಕ್ ರೈ

ಪುತ್ತೂರು: ಉಳುವವನೇ ಭೂಮಿಯ ಒಡೆಯ ಎಂಬ ಕಾನೂನು ಜಾರಿಗೆ ತಂದು ಭೂಮಿಯಿಲ್ಲದ ಬಡವನನ್ನು ಭೂಮಿಯ ಒಡೆಯನನ್ನಾಗಿ ಮಾಡಿದ್ದು ಕಾಂಗ್ರೆಸ್‌ನ ಇಂದಿರಾಗಾಂಧಿ ಅದೇ ರೀತಿ ಕರ್ನಾಟಕದಲ್ಲಿ ಕೃಷಿಗೆ ಉಚಿತ ವಿದ್ಯುತ್ ನೀಡುವ ಮೂಲಕ ಕೃಷಿಕರ ಬದುಕನ್ನು ಹಸನಾಗಿಸಿದ್ದೂ ಕಾಂಗ್ರೆಸ್ ಸರಕಾರವೇ ಆಗಿದೆ ಎಂದು ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಹೇಳಿದರು. ಪೆರ್ಲಂಪಾಡಿಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಉಳುವವನೇ ಭೂಮಿಯ ಒಡೆಯ ಕಾನೂನು ಜಾರಿಗೆ ಬಂದಾಗ

ಕಾವಿನಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ : ಬಿಜೆಪಿಗರಿಗೂ ಗ್ಯಾರಂಟಿ ಕಾರ್ಡು ಕೊಡಿ; ಅಶೋಕ್ ರೈ

ಪುತ್ತೂರು: ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತದೆ, ಯಾರಿಗೂ ಸಂಶಯ ಬೇಡ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ರಾಜ್ಯದ ಜನತೆಗೆ ನೀಡಿದ ನಾಲ್ಕು ಗ್ಯಾರಂಟಿ ಯಓಜನೆಯು ಸರಕಾರ ಅಧಿಕಾರಕ್ಕೆ ಬಂದ ತಕ್ಷಣ ಜಾರಿಯಾಗುತ್ತದೆ. ಈಗಾಗಲೇ ಕಾರ್ಯಕರ್ತರು ಎಲ್ಲಾ ಮನೆಗಳಿಗೂ ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡು ವಿತರಣೆ ಮಾಡುತ್ತಿದ್ದು ಬಿಜೆಪಿಗರ ಮನೆಗಳಿಗೂ ಕಾರ್ಡು ವಿತರಿಸಿ ಯಾವುದೇ ತಾರತಮ್ಯ ಮಾಡಬೇಡಿ ಎಂದು ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ

ದಿನನಿತ್ಯ ಒಂದೊಂದು ರೀತಿಯ ತೆರಿಗೆ ವಿಧಿಸಿ ಜನರ ಮೇಲೆ ಬರೆ : ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಡಿಎಂಕೆ

ಮಂಜೇಶ್ವರ : ಎಲ್ಲವನ್ನೂ ಸರಿಪಡಿಸುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಕೇರಳದ ಎಡರಂಗ ಸರಕಾರವು ದಿನನಿತ್ಯ ಒಂದೊಂದು ರೀತಿಯ ತೆರಿಗೆಗಳನ್ನು ಹೇರಿ ಜನತೆಯನ್ನು ಸುಲಿಯುತ್ತಿದ್ದು, ಈ ತುಘಲಕ್ ಸರಕಾರ ತೊಲಗದೆ ಜನತೆ ನೆಮ್ಮದಿ ಕಾಣಲಾರರು ಎಂದು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀ ಮುಹಮ್ಮದ್ ಡಿಎಂಕೆ ಹೇಳಿದರು. ರಾಜ್ಯ ಸರಕಾರದ ತೆರಿಗೆ ಸುಲಿಗೆ ಪ್ರತಿಭಟಿಸಿ ಯುಡಿಎಫ್ ಪೈವಳಿಕೆ ಪಂಚಾಯತ್ ಸಮಿತಿ ಆಶ್ರಯದಲ್ಲಿ ಪೈವಳಿಕೆ ಪಂಚಾಯತ್ ಕಚೇರಿ ಮುಂಭಾಗದಲ್ಲಿ

ಚುನಾವಣೆ ಹಿನ್ನೆಲೆ, ಕೇರಳ-ಕರ್ನಾಟಕ ಗಡಿಭಾಗದಲ್ಲಿ ತೀವ್ರ ತಪಾಸಣೆ

ಮಂಜೇಶ್ವರ : ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಕೇರಳ ಪೆÇಲೀಸರು ಕೂಡಾ ಕರ್ನಾಟಕ ಮತ್ತು ಕೇರಳ ರಾಜ್ಯಗಳ ಗಡಿ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆಯನ್ನು ಬಿಗಿಗೊಳಿಸಿದ್ದಾರೆ.ಕರ್ನಾಟಕ ಭಾಗಕ್ಕೆ ವ್ಯಾಪಾರ, ಚಿಕಿತ್ಸೆ, ಶಿಕ್ಷಣ ಪ್ರವೇಶ ಸೇರಿದಂತೆ ವಿವಿದ ಉದ್ದೇಶಗಳಿಗಾಗಿ ಅನೇಕ ಜನರು ಕೇರಳದಿಂದ ಗಡಿ ದಾಟಿರವರು ಮರಳಿ ಬರುವಾಗ ದೊಡ್ಡ ಮೊತ್ತದ ಹಣ ಜೊತೆಯಾಗಿದ್ದರೆ ಸಾಕಷ್ಟು ದಾಖಲೆಗಳನ್ನು ಹೊಂದಿರಬೇಕು. ದಾಖಲೆಗಳ ಕೊರತೆಯಿಂದ

ಬೈಂದೂರು ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಅವರಿಂದ ಬಿರುಸಿನ ಮತ ಪ್ರಚಾರ

ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಅವರು ಗಂಗೊಳ್ಳಿ ಮತ್ತು ಹೊಸೂರು ಭಾಗದಲ್ಲಿ ಚುನಾವಣಾ ಪ್ರಚಾರ ಕೈಗೊಂಡರು. ಈ ಸಂದರ್ಭದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ, ಈ ಬಾರಿಯ ಚುನಾವಣೆಯಲ್ಲಿ ಗುರುರಾಜ್ ಗಂಟಿಹೊಳೆ ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಬೈಂದೂರಿನ ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ, ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

ಬಿಜೆಪಿ ಕಾರ್ಯಕರ್ತರು ಜೆಡಿಎಸ್‍ಗೆ ಸೇರ್ಪಡೆ

ಚುನಾವಣಾ ಸಂದರ್ಭದಲ್ಲಿ ಪಕ್ಷ ತೊರೆದು ಬೇರೆ ಪಕ್ಷಕ್ಕೆ ಸೇರ್ಪಡೆಯಾಗುವುದು ಮಾಮೂಲಿಯಾಗಿದೆ. ಆದರೆ ಈಗಿನ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಕಾರ್ಯ ವೈಖರಿ ಜನರಿಗೆ ಬೇಸತ್ತು ಹೋಗಿದೆ. ಕುಮಾರ ಸ್ವಾಮಿಯ ಪಂಚರತ್ನ ಯೋಜನೆ ಜನರಿಗೆ ಭರವಸೆ ಮೂಡಿದೆ ಇದರಿಂದಾಗಿ ಬೇರೆ ಪಕ್ಷದ ಕಾರ್ಯಕರ್ತರು ಜೆಡಿಎಸ್ ಪಕ್ಷಕ್ಕೆ ಒಲವು ತೋರಿದ್ದರೆ. ಈ ಹಿನ್ನೆಲೆ ಪುತ್ತೂರು ವಿಧಾನಸಭಾ ಕ್ಷೇತ್ರದ ಚಿಕ್ಕಮೂಡ್ನೂರ್ ವಾರ್ಡ್‍ನ ತಾರಿಗುಡ್ಡೆಯಲ್ಲಿ ಜೆಡಿಎಸ್ ವಿಧಾನಸಭಾ

ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ : ಪುತ್ತೂರಿನ ವಿವಿಧೆಡೆ ಮತಪ್ರಚಾರ

ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರು ಪುತ್ತೂರಿನ ವಿವಿಧೆಡೆ ಮತಯಾಚನೆ ಮಾಡಿದರು. ಸಾರ್ವಜನಿಕ ಸಭೆ ಮತ್ತು ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದು ಮತದಾರದಲ್ಲಿ ವಿನಂತಿಸಿದರು. ಅಶೋಕ್ ಕುಮಾರ್ ರೈ ಅವರ ಜೊತೆ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದರು.

ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ದಾಖಲಾದ ಸಚಿವ ಎಸ್. ಅಂಗಾರ

ಅನಾರೋಗ್ಯದಿಂದ ಬಳಲುತ್ತಿದ್ದ ಸಚಿವ ಅಂಗಾರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜಠರದ ಅಲ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಬುಧವಾರ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಅವರು ಆರೋಗ್ಯದಿಂದಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಚುನಾವಣಾ ಪ್ರಚಾರಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿ : ಕೋಲ್ನಾಡು ರಾ.ಹೆ.ಬಳಿಯ ಜಾಗದಲ್ಲಿ ಚಪ್ಪರ ಮುಹೂರ್ತ

ರಾಜ್ಯ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಸ್ಟಾರ್ ಪ್ರಧಾನಿ ನರೇಂದ್ರ ಮೋದಿ ಮೇ 3ರಂದು ಮೂಲ್ಕಿಗೆ ಆಗಮಿಸುವ ಹಿನ್ನಲೆಯಲ್ಲಿ ಕೋಲ್ನಾಡು ರಾಷ್ಟ್ರೀಯ ಹೆದ್ದಾರಿ ಬಳಿಯ ಜಾಗದಲ್ಲಿ ಇಂದು ಚಪ್ಪರ ಮುಹೂರ್ತ ನಡೆಯಿತು. ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಧಾನದ ಅರ್ಚಕ ಶ್ರೀಪತಿ ಉಪಾಧ್ಯಾಯ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆದು ಚಪ್ಪರ ಮುಹೂರ್ತಕ್ಕೆ ಚಾಲನೆ ನೀಡಲಾಯಿತು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ ಉಮಾನಾಥ