ಚುನಾವಣಾ ಪ್ರಚಾರಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿ : ಕೋಲ್ನಾಡು ರಾ.ಹೆ.ಬಳಿಯ ಜಾಗದಲ್ಲಿ ಚಪ್ಪರ ಮುಹೂರ್ತ
ರಾಜ್ಯ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಸ್ಟಾರ್ ಪ್ರಧಾನಿ ನರೇಂದ್ರ ಮೋದಿ ಮೇ 3ರಂದು ಮೂಲ್ಕಿಗೆ ಆಗಮಿಸುವ ಹಿನ್ನಲೆಯಲ್ಲಿ ಕೋಲ್ನಾಡು ರಾಷ್ಟ್ರೀಯ ಹೆದ್ದಾರಿ ಬಳಿಯ ಜಾಗದಲ್ಲಿ ಇಂದು ಚಪ್ಪರ ಮುಹೂರ್ತ ನಡೆಯಿತು. ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಧಾನದ ಅರ್ಚಕ ಶ್ರೀಪತಿ ಉಪಾಧ್ಯಾಯ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆದು ಚಪ್ಪರ ಮುಹೂರ್ತಕ್ಕೆ ಚಾಲನೆ ನೀಡಲಾಯಿತು.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ ಉಮಾನಾಥ ಕೋಟ್ಯಾನ್ ಅವರು ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಮಧ್ಯ ಭಾಗದ ಮೂಲ್ಕಿಯ ಕೋಲ್ನಾಡು ರಾಷ್ಟ್ರೀಯ ಹೆದ್ದಾರಿ 66ರ ಬಳಿಯ ಗುಂಡಾಲುಗುತ್ತು ಬಳಿಯ ಭಾರತೀಯ ಜನತಾ ಪಕ್ಷದ ಚುನಾವಣ ಪ್ರಚಾರದ ಬೃಹತ್ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕಾರ್ಯಕರ್ತರನ್ನು ಉದ್ದೇಶಿಸಿ ಚುನಾವಣ ಪ್ರಚಾರ ಭಾಷಣ ಮಾಡಲಿದ್ದಾರೆ.
.ಕಾರ್ಯಕ್ರಮಕ್ಕೆ ಸುಮಾರು 2 ರಿಂದ 3 ಲಕ್ಷ ಜನರ ಆಗಮನದ ನಿರೀಕ್ಷೆಯಿದ್ದು ಬೃಹತ್ ಜರ್ಮನ್ ಪೆಂಡಾಲ್ ವೇದಿಕೆ.ಪಾರ್ಕಿಂಗ್ ವ್ಯವಸ್ಧೆ ಹಾಗೂ ಸುಮಾರು ಇನ್ನೂರಕ್ಕೂ ಹೆಚ್ಚು ಸಿಸಿ ಕ್ಯಾಮರ ಹಾಗೂ ಜನರಿಗೆ ಕುಳಿತುಕೊಳ್ಳಲು ವ್ಯವಸ್ಧೆ ಮಾಡಲಾಗುತ್ತಿದೆ.ಮೇ 3 ರಂದು ಬೆಳಗ್ಗೆ 11 ಗಂಟೆಗೆ ಕೋಲ್ನಾಡು ಬಳಿ ಕಳೆದ ಬಾರಿ ನಡೆದ ಕೃಷಿ ಮೇಳದ ಸ್ಧಳಕ್ಕೆ ಹೆಲಿಕಾಪ್ಟರ್ ಮೂಲಕ ಪ್ರಧಾನಿಯವರು ಆಗಮಿಸಲಿದ್ದು ಬಳಿಕ ಗುಂಡಾಲುಗುತ್ತು ಬಳಿಯ ವೇದಿಕೆಯಲ್ಲಿ ಕಾರ್ಯಕರ್ತರನ್ನು ಉದ್ಧೇಶಿಸಿ ಮಾತನಾಡಲಿದ್ದಾರೆ. ಪ್ರಧಾನಿ ಆಗಮನಕ್ಕೆ ಮೂರು ಪ್ರತ್ಯೇಕ ಹೆಲಿಪ್ಯಾಡ್ ಗಳನ್ನು ಕೂಡ ನಿರ್ಮಾಣ ಮಾಡಲಾಗುವ ಕೆಲಸ ಪ್ರಗತಿಯಲ್ಲಿದೆ ಎಂದರು.
ಈ ಸಂದರ್ಭ ಮೂಲ್ಕಿನಗರ ಪಂಚಾಯತ್ ಅಧ್ಯಕ್ಷ ಸುಭಾಷ್ ಶೆಟ್ಟಿ.ಸದಸ್ಯರಾದ ಹರ್ಷರಾಜ್ ಶೆಟ್ಟಿ.ರಾಧಿಕಾ ಯಾದವ್ ಕೋಟ್ಯಾನ್.ದಯಾವತಿ ಅಂಚನ್.ನರಸಿಂಹ ಪೂಜಾರಿ.ಹಳೆಯಂಗಡಿ ಗ್ರಾಮ ಅಧ್ಯಕ್ಷೆ ಪೂರ್ಣಿಮಾ.ಬಿಜೆಪಿ ಮಂಡಲಾಧ್ಯಕ್ಷ ಸುನಿಲ್ ಆಳ್ವಾ.ಬಿಜೆಪಿ ಮುಖಂಡರಾದ ಭುವನಾಬಿರಾಮ ಉಡುಪ.ಕಸ್ತೂರಿ ಪಂಜ.ಕೇಶವ ಕರ್ಕೇರ.ರಂಗನಾಥ ಶೆಟ್ಟಿ.ಆದರ್ಶ ಶೆಟ್ಟಿ ಎಕ್ಕಾರು.ದೇವಪ್ರಸಾದ್ ಪುನರೂರು.ವಿನೋದ್ ಬೊಳ್ಳೂರು.ವಿನೋದ್ ಸಲ್ಯಾನ್ ಬೆಳ್ಳಾಯರು.ವಿಜಯ್ ಶೆಟ್ಟಿ ಕೋಲ್ನಾಡು ಮತ್ತಿತರರು ಉಪಸ್ಥಿತರಿದ್ದರು.