ಕಾಪು ಬಿಜೆಪಿ ಕಚೇರಿಯಲ್ಲಿ ಉದ್ಯಾವರ ಗ್ರಾಮ ಪಂಚಾಯತ್ 6ನೇ ವಾರ್ಡನ್ನು 2 ಬಾರಿ ಪ್ರತಿನಿಧಿಸಿರುವ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಉದ್ಯಾವರ ಗ್ರಾಮೀಣ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಿಥೇಶ್ ಪೂಜಾರಿ ಕಾಂಗ್ರೆಸ್ ತೊರೆದು ಭಾರತೀಯ ಜನತಾ ಪಾರ್ಟಿ ಸೇರ್ಪಡೆಗೊಂಡರು. ಶಾಸಕ ಲಾಲಾಜಿ ಮೆಂಡನ್ ಪಕ್ಷದ ಧ್ವಜ ನೀಡಿ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ
ಕರಾವಳಿಯಲ್ಲಿ ಇಂದು ಮುಸ್ಲಿಂ ಬಾಂಧವರು ಈದುಲ್ ಫಿತ್ರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡರು. ನಗರದ ಪ್ರಮುಖ ಮಸೀದಿಗಳಿಗೆ ತೆರಳಿ ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಹಬ್ಬದ ಸಂಭ್ರಮವನ್ನು ವಿನಿಮಯಮಾಡಿಕೊಂಡರು. ಜಿಲ್ಲೆಯ ಬಹುತೇಕ ಎಲ್ಲಾ ಮಸೀದಿ-ಈದ್ಗಾಗಳಲ್ಲಿ ವಿಶೇಷ ನಮಾಝ್, ಪ್ರವಚನ ಬಳಿಕ ಪರಸ್ಪರ ಹಸ್ತಲಾಘವ, ಆಲಿಂಗನ ಮೂಲಕ ಹಬ್ಬದ ಶುಭಾಶಯ ವಿನಿಮಯ ಹಾಗೂ ಮನೆಗಳಲ್ಲಿ ಹಬ್ಬದ ಸಂಭ್ರಮ ಕಂಡು ಬಂತು. ನಗರದ ಬಾವುಟಗುಡ್ಡದ ಈದ್ಗಾ ಜುಮಾ
ಮಂಜೇಶ್ವರ: ಪವಿತ್ರ ರಂಜಾನಿನ 30 ವೃತ್ತಗಳನ್ನು ಆಚರಿಸಿ ಮಂಜೇಶ್ವರದ ವಿವಿಧ ಭಾಗಗಳಲ್ಲಿರುವ ಮುಸ್ಲಿಮರು ಅತ್ಯಂತ ಸಡಗರ ಸಂಭ್ರಮದ ಈದುಲ್ ಫಿತ್ರ್ ಆಚರಿಸಿದರು. ಮಂಜೇಶ್ವರದ ವಿವಿಧ ಮಸೀದಿ, ಈದ್ಗಾ ಗಳಲ್ಲಿ ಸಾಮೂಹಿಕ ನಮಾಜ್, ಈದ್ ಖುತ್ಬಾ, ಈದ್ ಸಂದೇಶ, ಪ್ರವಚನ, ಈದ್ ಶುಭಾಷಯ, ನೆರೆಮನೆ ಹಾಗೂ ಸಂಬಂಧಿಕರ ಮನೆಗೆ ಸೌಹಾರ್ದ ಬೇಟಿಯ ಮೂಲಕ ಹಬ್ಬಕ್ಕೆ ಸಂಭ್ರಮ ತರಲಾಯ್ತು. ತೂಮಿನಾಡು ಮಸ್ಜಿದ್ ನೂರ್ ಮಸೀದಿಯಲ್ಲಿ ನಡೆದ ಪ್ರಾರ್ಥನೆಗೆ ಅಶ್ಪಾಕ್ ಮಚ್ಚಂಪ್ಪಾಡಿ ಹಾಗೂ
ಮೂಡುಬಿದಿರೆ: ರಾಜ್ಯ ಪದವಿ ಪೂರ್ವ ಶಿಕ್ಷಣದ ಇತಿಹಾಸದಲ್ಲೇ ಆಳ್ವಾಸ್ ಪದವಿ ಪೂರ್ವ ಕಾಲೇಜು ದಾಖಲೆ ಸೃಷ್ಟಿಸಿದ್ದು, ಕಾಲೇಜಿನ ದ್ವಿತೀಯ ಪಿಯುಸಿಯ ವಾಣಿಜ್ಯ ವಿಭಾಗದ ಅನನ್ಯಾ ಕೆ. ಎ. 600ಕ್ಕೆ 600 ಅಂಕ ಪಡೆದಿದ್ದಾಳೆ. ಪರೀಕ್ಷೆಗೆ ಹಾಜರಾದ 2658 ವಿದ್ಯಾರ್ಥಿಗಳಲ್ಲಿ 2651 ವಿದ್ಯಾರ್ಥಿಗಳು ಉತ್ತೀರ್ಣರಾಗಿ, ವಿಜ್ಞಾನ ವಿಭಾಗದಲ್ಲಿ 11 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 35 ವಿದ್ಯಾರ್ಥಿಗಳು ಕಲಾ ವಿಭಾಗದಲ್ಲಿ ಓರ್ವ ವಿದ್ಯಾರ್ಥಿನಿ ಸೇರಿದಂತೆ ಕಾಲೇಜಿನ
ಮೂಡುಬಿದಿರೆ: ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಆಳ್ವಾಸ್ ಪಿಯು ಕಾಲೇಜು ವಿದ್ಯಾರ್ಥಿನಿ ಅನನ್ಯಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಭಿನಂದಿಸಿದರು. ಅನನ್ಯಳಿಗೆ ರೂ.3 ಲಕ್ಷ ನಗದು ಪುರಸ್ಕಾರವನ್ನು ಘೋಷಿಸಿದ ಅವರು, ಆಕೆ ಮುಂದಿನ ಸಿಎಸ್ ವ್ಯಾಸಂಗಕ್ಕೆ ಉಚಿತ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು ಎಂದರು.
ಸುಳ್ಯ: ಸುಳ್ಯದ ಜೀವನದಿ ಪಯಸ್ವಿನಿಯು ಹರಿವು ನಿಲ್ಲಿಸಿದ್ದು ಇದೀಗ ಕಾಂತಮಂಗಲ, ದೊಡ್ಡೆರಿ ಹಾಗೂ ಬಸವನಪಾದೆಯ ಸುಮಾರು 125 ಮನೆಗಳಿಗೆ ಕಳೆದ ಕೆಲ ದಿನಗಳಿಂದ ನೀರು ವ್ಯತ್ಯಯವಾಗಿತ್ತು. ಇದನ್ನು ಸರಿ ಪಡಿಸಲು ಹಲವಾರು ವಿಧಗಳಲ್ಲಿ ಪ್ರಯತ್ನಿಸಿದ್ದರು ಅಷ್ಟರಲ್ಲಾಗಲೇ ಚುನಾವಣೆ ಘೋಷಣೆ ಆದ ಹಿನ್ನಲೆಯಲ್ಲಿ ಟ್ಯಾಂಕರ್ ಹಾಗೂ ಪಂಚಾಯತ್ ವಾಹನದಲ್ಲಿ ಕೆಲ ಮನೆಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದ್ದು ಅದು ಕೂಡಾ ಕಷ್ಟಾ ಸಾಧ್ಯವಾದ ಹಿನ್ನಲೆಯಲ್ಲಿ ಗ್ರಾಮ ಪಂಚಾಯತ್
ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಡಿ ಕೆ ಶಿವಕುಮಾರ್ ಅವರ ಆದೇಶದ ಮೇರೆಗೆ, ಶ್ರೀ ವಿನಯ ಕುಮಾರ್ ಸೊರಕೆ ಹಾಗು ಉಡುಪಿ ಜಿಲ್ಲಾ ಕಾಂಗ್ರೇಸ್ ಶಿಫಾರಸ್ಸಿನ ಮೇರೆಗೆ ಕರ್ನಾಟಕ ರಾಜ್ಯ ಮೀನುಗಾರರ ಕಾಂಗ್ರೆಸ್ ಅತ್ಯಕ್ಷರಾದ ಮಂಜುನಾಥ್ ಭೀ ಸುಣಗಾರ ರವರು ನೇಮಕಾತಿಯನ್ನು ಅನುಮೋದಿಸಿರುತ್ತಾರೆ. ಕಾಪು ರಾಜೀವ್ ಭವನದಲ್ಲಿ ಶ್ರೀ ಮಂಜುನಾಥ್ ಭೀ ಸುಣಗಾರ ಹಾಗು ಶ್ರೀ ವಿನಯಕುಮಾರ್ ಸೊರಕೆಯವರು ಆದೇಶ ಪತ್ರವನ್ನು ನೀಡಿದರು. ಈ ಸಂಧರ್ಭದಲ್ಲಿ ಕಾಪು
ಭಾರತೀಯ ಜನತಾ ಪಾರ್ಟಿ ಪಡುಬಿದ್ರಿ ಮಹಾಶಕ್ತಿಕೇಂದ್ರದ ಚುನಾವಣಾ ಕಾರ್ಯಾಲಯದ ಉದ್ಘಾಟನೆಯನ್ನು ಕಾಪು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಚುನಾವಣೆಗೆ ಸ್ಪರ್ಧಿಸಲು ಆರಂಭದಲ್ಲಿ ಪೈಪೋಟಿ, ಆದರೆ ಪಕ್ಷ ನಿರ್ಣಯಿಸಿ ಟಿಕೇಟ್ ಒರ್ವರಿಗೆ ನೀಡಿತು ಎಂದಾದರೆ, ಮತ್ತೆ ನಮ್ಮ ಅಭ್ಯರ್ಥಿ ಪರ ನಿಷ್ಠೆಯಿಂದ ಕೆಲಸ ನಡೆಸುವುದೇ ನಮ್ಮ ಪಕ್ಷದ ಸಿದ್ಧಾಂತ. ಈ ಹಿಂದೆ ನಾನು
ಬಂಟ್ವಾಳದ ಪ್ರತಿಷ್ಠಿತ ಚಿನ್ನಾಭರಣ ಮಳಿಗೆಯಾದ ವಿಎನ್‍ಆರ್ ಗೋಲ್ಡ್‍ನಲ್ಲಿ ಅಕ್ಷಯ ತೃತೀಯ ಪ್ರಯುಕ್ತ ಗ್ರಾಹಕರಿಗೆ ಅತೀ ಕಡಿಮೆ ದರದಲ್ಲಿ ಚಿನ್ನಾಭರಣಗಳನ್ನು ಖರೀದಿ ಮಾಡುವ ಅವಕಾಶವಿದೆ. ಗ್ರಾಹಕರು ಎಪ್ರಿಲ್ 22ರಂದು ವಿಎನ್‍ಆರ್ ಮಳಿಗೆಗೆ ಭೇಟಿ ನೀಡಿ ಚಿನ್ನಾಭರಣವನ್ನು ಖರೀದಿಸಿ ಸಂಭ್ರಮಿಸಬಹುದು. ಅಕ್ಷಯ ತೃತೀಯದಂದು ಚಿನ್ನ ಖರೀದಿ ಮಾಡುವುದು ಅದೃಷ್ಟ ಹಾಗೂ ಸಮೃದ್ಧಿಯ ಸಂಕೇತ ಎಂದೇ ಭಾವಿಸಲಾಗಿದೆ. ಯಾಕೆಂದ್ರೆ ಈ ದಿನವನ್ನು ಮಂಗಳಕರ




























