ಉಡುಪಿ ಜಿಲ್ಲಾ ಮೀನುಗಾರರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಶ್ರೀ ವಿಶ್ವಾಸ್ ವಿ ಅಮೀನ್ ಆಯ್ಕೆ
ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಡಿ ಕೆ ಶಿವಕುಮಾರ್ ಅವರ ಆದೇಶದ ಮೇರೆಗೆ, ಶ್ರೀ ವಿನಯ ಕುಮಾರ್ ಸೊರಕೆ ಹಾಗು ಉಡುಪಿ ಜಿಲ್ಲಾ ಕಾಂಗ್ರೇಸ್ ಶಿಫಾರಸ್ಸಿನ ಮೇರೆಗೆ ಕರ್ನಾಟಕ ರಾಜ್ಯ ಮೀನುಗಾರರ ಕಾಂಗ್ರೆಸ್ ಅತ್ಯಕ್ಷರಾದ ಮಂಜುನಾಥ್ ಭೀ ಸುಣಗಾರ ರವರು ನೇಮಕಾತಿಯನ್ನು ಅನುಮೋದಿಸಿರುತ್ತಾರೆ.
ಕಾಪು ರಾಜೀವ್ ಭವನದಲ್ಲಿ ಶ್ರೀ ಮಂಜುನಾಥ್ ಭೀ ಸುಣಗಾರ ಹಾಗು ಶ್ರೀ ವಿನಯಕುಮಾರ್ ಸೊರಕೆಯವರು ಆದೇಶ ಪತ್ರವನ್ನು ನೀಡಿದರು. ಈ ಸಂಧರ್ಭದಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ,ಕೆಪಿಸಿಸಿ ಕಾರ್ಯದರ್ಶಿಗಳಾದ ದೇವಿಪ್ರಸಾದ್ ಶೆಟ್ಟಿ, ರಾಜ್ಯ ಮೀನುಗಾರರ ಕಾಂಗ್ರೆಸ್ ಘಟಕದ ಜಂಟಿ ಕಾರ್ಯದರ್ಶಿಗಳಾದ ಅಖಿಲೇಶ್ ಕೋಟ್ಯಾನ್, ರಮೇಶ್ ಎಸ್ ತಿಂಗಳಾಯ, ರಾಜೇಶ್ ಮೆಂಡನ್,ಯೋಗೀಶ್ ಶಿರೂರು, ಕಾಪು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಮಹಮ್ಮದ್ ಇಮ್ರಾನ್ ರವರು ಉಪಸ್ಥಿತರಿದ್ದರು.