Home Blog Left SidebarPage 645

ಮಂಗಳೂರಿನ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಭಾರೀ ಡ್ರಗ್ಸ್ ಜಾಲ

ಮಂಗಳೂರಲ್ಲಿ ಭಾರೀ ಡ್ರಗ್ಸ್ ಮಾಫಿಯಾ ಜಾಲವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ಖಾಸಗಿ ವೈದ್ಯಕೀಯ ಕಾಲೇಜಿನ ವೈದ್ಯರು, ವೈದ್ಯಕೀಯ ವಿದ್ಯಾರ್ಥಿ ಸಹಿತ 10 ಮಂದಿಯನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾಸಗಿ ಕಾಲೇಜಿನ ಬಿಡಿಎಸ್

ಜ.12ರಂದು ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಸ್ವಚ್ಛ ಉಡುಪಿ

ಸ್ವಾಮಿ ವಿವೇಕಾನಂದ ಜಯಂತಿಯ ಪ್ರಯುಕ್ತ ಜನವರಿ 12ರ ಗುರುವಾರದಂದು ಭಾರತ ಸೇವಾದಳ ಉಡುಪಿ ಜಿಲ್ಲಾ ಸಮಿತಿಯ ನೇತ್ರತ್ವದಲ್ಲಿ, ಮತ್ತು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗು ರಜತೋತ್ಸವ ಸಮಿತಿಯ ಸಹಯೋಗದೊಂದಿಗೆ ಜಿಲ್ಲೆಯ ಎಲ್ಲಾ 1096 ಸರಕಾರೀ, ಅನುದಾನಿತ ಮತ್ತು ಖಾಸಗಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಸುಮಾರು 1,60,000 ಶಾಲಾ ಮಕ್ಕಳಿಂದ ಏಕಕಾಲದಲ್ಲಿ ಆಯಾಯ ಶಾಲೆಗಳ ಅಕ್ಕ ಪಕ್ಕದ ವಠಾರದಲ್ಲಿ “ಸ್ವಚ್ಛ

ಜ.20ರಂದು ಬಹುನಿರೀಕ್ಷಿತ “ಶಕಲಕ ಬೂಮ್ ಬೂಮ್” ಚಿತ್ರ ತೆರೆಗೆ

ಯುಎನ್ ಸಿನೆಮಾಸ್ ಬ್ಯಾನರ್ ನಡಿ ನಿರ್ಮಾಣಗೊಂಡಿರುವ ಶಕಲಕ ಬೂಮ್ ಬೂಮ್ ತುಳು ಚಿತ್ರ ಇದೇ ಬರುವ ಜ.20ರಂದು ತುಳುನಾಡಿನಾದ್ಯಂತ ಬಿಡುಗಡೆಯಾಗಲಿದೆ. ಕಾಮಿಡಿ ಹಾಗೂ ಹಾರರ್ ವಿಭಿನ್ನ ಕಥಾಹಂದರದ ಹೊಂದಿರುವ ಶಕಲಕ ಬೂಮ್ ಬೂಮ್ ತುಳು ಚಿತ್ರ ಇದೇ ಬರುವ ಜ.20ರಂದು ತುಳುನಾಡಿನಾದ್ಯಂತ ತೆರೆ ಕಾಣಲಿದೆ. ಈ ಕುರಿತು ಮಂಗಳೂರಿನ ಪ್ರತಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಚಿತ್ರ ನಿರ್ಮಾಪಕರಾದ ನಿತ್ಯಾನಂದ ನಾಯಕ್ ನರಸಿಂಗೆ ಮಾತನಾಡಿದ ಈ ಚಲನಚಿತ್ರವನ್ನು ಶ್ರೀಶ ಎಳ್ಳಾರೆ

ವಾಲ್‍ಮ್ಯಾನ್ ಕರ್ತವ್ಯ ನಿರ್ವಹಿಸುತ್ತಿದ್ದ ಗೋವಿಂದ ಅವರು ಮರುಸೇರ್ಪಡೆ

ಕಳೆದ ಹಲವಾರು ವರ್ಷಗಳಿಂದ ವಾಲ್ ಮ್ಯಾನ್ ಕರ್ತವ್ಯ ನಿರ್ವಹಿಸುತ್ತಿದ್ದ ಹಿರಿಯ ನೌಕರ ಗೋವಿಂದ ಅವರನ್ನ ಕರ್ತವ್ಯಕ್ಕೆ ಮರು ಸೇರ್ಪಡೆಗೊಳಿಸಲಾಗಿದೆ. ಅವರ ಕರ್ತವ್ಯದ ವಯಸ್ಸು ಮೀರಿದ್ದರೂ, ಅವರ ಕೌಟುಂಬಿಕ ಪರಿಸ್ಥಿತಿ ಹದಗೆಟ್ಟಿರುವ ಕಾರಣ ಮಾನವೀಯ ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯು ಮತ್ತೆ ಸೇರ್ಪಡೆ ಮಾಡುವಂತೆ ಸೂಚಿಸಿದೆ. ಈ ಸಂಬಂಧ ಮೇಯರ್ ಜಯಾನಂದ ಅಂಚನ ಅವರು ಮಾಧ್ಯಮದೊಂದಿಗೆ ಮಾತನಾಡಿ ಗೋವಿಂದ ಅವರ ಕಷ್ಟದ ಪರಿಸ್ಥಿತಿಯನ್ನು ಕಂಡು ಮತ್ತೆ ವಾಲ್ಮ್ ಮ್ಯಾನ್

ಜುಗಾರಿ ಅಡ್ಡೆ, ಜೂಜು ಕೇಂದ್ರಗಳಿಗೆ ಡಿವೈಎಫ್ಐ ಮುತ್ತಿಗೆ.

ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯೊಳಗೆ ದಿನೇ ದಿನೇ ಸ್ಕಿಲ್ ಗೇಮ್, ವಿಡಿಯೋ ಗೇಮ್, ಜುಗಾರಿ ಅಡ್ಡೆಗಳು ರಾಜಾರೋಷವಾಗಿ ಕಾರ್ಯಾಚರಿಸುತ್ತಿವೆ. ರಿಕ್ರಿಯೇಶನ್ ಕ್ಲಬ್ ನ ಹೆಸರಿನಲ್ಲಿ ಜೂಜು ಕೇಂದ್ರಗಳನ್ನು ನಡೆಸಿ ಮೋಸದಾಟಕ್ಕೆ ಜನರನ್ನು ಬಲಿಪಡೆಯುತ್ತಿದೆ. ನಗರದ ಸಣ್ಣ ವ್ಯಾಪಾರಿಗಳು , ಕಾರ್ಮಿಕರು ,ವಿದ್ಯಾರ್ಥಿಗಳನ್ನು ಒಳಗೊಂಡಂತೆ ಬಡ ಮಧ್ಯಮ ವರ್ಗದ ಕೂಲಿ ಕಾರ್ಮಿಕರನ್ನು ಈ ಅಡ್ಡೆ ಗುರಿಯಾಗಿಸಿ ಜನರ ದುಡಿಮೆಯ ಹಣವನ್ನು ದೋಚುವ ಕಾರ್ಯದಲ್ಲಿ ತೊಡಗಿದೆ. ಈ

ಅತ್ಯಾಚಾರಿ , ಕೊಲೆಗಾರರ ಜೊತೆಗೆ ಶಾಸಕ ಹರೀಶ್ ಪೂಂಜಾರ ನಂಟು ಏನು: ಶೇಖರ್ ಲಾಯಿಲ ಪ್ರಶ್ನೆ

ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ , ಬಾಲ್ಯ ವಿವಾಹ , ಗರ್ಭಪಾತ ಸೇರಿದಂತೆ ಶಿಬಾಜೆಯ ದಲಿತ ಯುವಕನ ಕೊಲೆ , ತೋಟತ್ತಾಡಿಯ ಆತ್ಮಹತ್ಯೆ ಪ್ರೇರಣೆ ಪ್ರಕರಣದ ಆರೋಪಿಗಳೊಂದಿಗೆ ಶಾಸಕ ಹರೀಶ್ ಪೂಂಜಾರ ನಂಟು ಏನು ? ಬೆಂಗಳೂರಿನಲ್ಲಿ ನಡೆಯುವ ಹಲ್ಲೆ ಪ್ರಕರಣದ ಬಗ್ಗೆ ಮಾತನಾಡುವ ಶಾಸಕ ತನ್ನ ಕ್ಷೇತ್ರದ ಕ್ರಿಮಿನಲ್ ವ್ಯಕ್ತಿಗಳನ್ನು ರಕ್ಷಿಸುವ ಹಿನ್ನೆಲೆ ಏನು ಎಂದು ಸಿಪಿಐ(ಎಂ) ಮುಖಂಡ ಶೇಖರ್ ಲಾಯಿಲ ಪ್ರಶ್ನಿಸಿದ್ದಾರೆ ‌.

ನಿವೃತ್ತ ಮುಖ್ಯೋಪಾಧ್ಯಾಯ ಜಗನ್ನಾಥ .ಕೆ ನಿಧನ

ಮಂಗಳೂರು : ಉಳ್ಳಾಲ ತಾಲೂಕಿನ ಸೋಮೇಶ್ವರ ಆನಂದಾಶ್ರಮ ಪ್ರೌಢ ಶಾಲೆಯ ನಿವತ್ತ ಮುಖ್ಯೋಪಾಧ್ಯಾಯ ಜಗನ್ನಾಥ .ಕೆ (77)ಅವರು ಹೃದಯಾಘಾತದಿಂದ ಮಂಗಳವಾರ ನಿಧನರಾದರು . ಅವರು ಉಳ್ಳಾಲ ಕಾಪಿಕಾಡ್ ನಿವಾಸಿಯಾಗಿದ್ದರು . ತನ್ನ ನಿವೃತ್ತಿಯ ಬಳಿಕ ಅವರು ಆನಂದಾಶ್ರಮ ಶಾಲೆಯ ಮಾತೃಸಂಸ್ಥೆಯಾಗಿರುವ ಸಾರಸ್ವತ ಶಿಕ್ಷಣ ಸಂಸ್ಥೆಯ ಆಡಳಿತಕ್ಕೊಳಪಟ್ಟ ಉತ್ತರ ಕನ್ನಡದ ಶಿರಾಲಿಯ ಶ್ರೀವಳ್ಳಿ ಪ್ರೌಢಶಾಲೆಯ ಪ್ರಥಮ ಮುಖ್ಯೋಪಾಧ್ಯಾಯರಾಗಿ 2004 ರಿಂದ 2007 ರ ತನಕ ಕಾರ್ಯ ನಿರ್ವಹಿಸಿದ್ದರು.

ಮುಕ್ಕ ಶ್ರೀ ಸತ್ಯಧರ್ಮ ದೇವಿ ದೇವಸ್ಥಾನ- ಜ.14 ರಂದು ಸಾಮೂಹಿಕ ಶ್ರೀ ಶನಿಶಾಂತಿ ಹೋಮ ಶ್ರೀ ಶನೇಶ್ವರ ಪೂಜೆ

ಮಂಗಳೂರಿನ ಮುಕ್ಕದಲ್ಲಿರುವ ಶ್ರೀ ಸತ್ಯಧರ್ಮ ದೇವಿ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ಶನಿಶಾಂತಿ ಹೋಮ ಶ್ರೀ ಶನೇಶ್ವರ ಪೂಜೆ ಜ.೧೪ರಂದು ಹಮ್ಮಿಕೊಂಡಿದ್ದಾರೆ. ಶ್ರೀ ಕ್ಷೇತ್ರದಲ್ಲಿ ಬೆಳಿಗ್ಗೆ ೮ರಿಂದ ಸಾಮೂಹಿಕ ಶನಿಶಾಂತಿ ಹೋಮ ಪ್ರಾರಂಭಗೊಳ್ಳಲಿದೆ. ೧೧ ಗಂಟೆಗೆ ಪೂರ್ಣಾಹುತಿ , 11.30ಕ್ಕೆಸಭಾ ಕಾರ್ಯಕ್ರಮ ಜರುಗಲಿದೆ.12.30ಕ್ಕೆ ಮಹಾಪೂಜೆ, ಅನ್ನ ಸಂತರ್ಪಣೆ ನೆರವೇರಲಿದೆ. ಇನ್ನು ಇದೇ ವೇಳೆ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವದ ವಿಜ್ಞಾಪನಾ ಪತ್ರ ಬಿಡುಗಡೆ

ಗೊನ್ಝಾಗ ಯುವಪ್ರತಿಭೆ ಸಾಹಿತ್ಯಿಕ ಅನಾವರಣ

ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ದಶಮಾನೋತ್ಸವ ಸಂದರ್ಭದಲ್ಲಿ 15ರ ಹರೆಯದ ಬಾಲ ಸಾಹಿತಿ ಸಾಹಿತಿ ಶಿನೈದ್ ಫೆರ್ನಾಂಡಿಸ್ ಅವರ ಎರಡನೆಯ ಕೃತಿ ‘ದಿ ಸರ್ಚ್’ ಅನಾವರಣಗೊಳಿಸಲಾಯಿತು. ಮೊದಲ ಕೃತಿ ‘ದಿ ಇನ್ಸಿಡೆಂಟ್’ 2022 ರ ಫೆಬ್ರವರಿ ತಿಂಗಳಲ್ಲಿ ಬಿಡುಗಡೆಯಾಗಿತ್ತು. ಶಿನೈದ್ ಫೆರ್ನಾಂಡಿಸ್ ರವರು, ಶ್ರೀಮತಿ ಶರಲ್ ಮತ್ತು ಸಮಿತ್ ಫೆರ್ನಾಂಡಿಸ್ ಅವರ ಪುತ್ರಿಯಾಗಿದ್ದು, ಗೊನ್ಝಾಗ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ. ಪುಸ್ತಕ ಬಿಡುಗಡೆಯ

ಕೋಟೇಶ್ವರ – ಬೆಂಕಿ ಅವಘಡ, ಫ್ಯಾನ್ಸಿ ಸ್ಟೋರ್, ಬಟ್ಟೆಯಂಗಡಿ, ವಾಸದ ಮನೆ ಭಾಗಶ ಹಾನಿ

ಕೋಟೇಶ್ವರದ ಶ್ರೀ ಪಟ್ಟಾಭಿರಾಮಚಂದ್ರ ದೇವಸ್ಥಾನ ಬಳಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಲಕ್ಷಾಂತರ ಮೌಲ್ಯದ ಎರಡು ಫ್ಯಾನ್ಸಿ ಸ್ಟೋರ್ ಭಸ್ಮವಾಗಿದೆ. ಬಟ್ಟೆಯಂಗಡಿ, ವಾಸದ ಮನೆ ಭಾಗಶಃ ಸುಟ್ಟು ಹೋಗಿದೆ. ಕೋಟೇಶ್ವರ ಶಿವರಾಮ ಪೂಜಾರಿ ಎಂಬರಿಗೆ ಸೇರಿದ ವಾಣಿಜ್ಯ ಸಂಕೀರ್ಣದ ಕೆಳ ಅಂತಸ್ತಿನಲ್ಲಿ ಬಾಡಿಗೆಗಿದ್ದ ಸುಧಾಕರ ಜೋಗಿ ಎಂಬವರ ಮಹಾಲಕ್ಷ್ಮೀ ಕಂಗನ್ ಎರಡು ಶಾಪ್, ಸುಧಾಕರ ಜೋಗಿ ಅಂಗಡಿ ತಾಗಿಕೊಂಡಿದ್ದ ರಾಜೀವ ಶೆಟ್ಟಿ ಎಂಬವರ ರೆಡಿಮೇಡ್ ಬಟ್ಟೆ ಹಾಗೂ ಟೈಲರಿಂಗ್ ಶ್ಯಾಪ್,