Home Blog Left SidebarPage 717

ಹಾರಾಡಿ-ರೈಲ್ವೇ ನಿಲ್ದಾಣ ರಸ್ತೆ ಕಾಂಕ್ರಿಟೀಕರಣಕ್ಕೆ ಶಿಲಾನ್ಯಾಸ

ಪುತ್ತೂರು:ಸುಮಾರು 40 ವರ್ಷಗಳ ಜನತೆಯ ಬೇಡಿಕೆಯಾದ ನಗರದ ಹಾರಾಡಿ ರೈಲ್ವೇ ನಿಲ್ದಾಣ ರಸ್ತೆಯನ್ನು ಕಾಂಕ್ರಿಟೀಕರಣ ಮಾಡುವ ಮೂಲಕ ಅಭಿವೃದ್ಧಿಪಡಿಸುವ ಕಾರ್ಯ ಪುತ್ತೂರು ನಗರಸಭೆ ವತಿಯಿಂದ ನಡೆದಿದ್ದು, ಡಬಲ್ ಇಂಜಿನ್ ಸರಕಾರ ಇಂತಹಾ ಅಭಿವೃದ್ಧಿ ಕೆಲಸವನ್ನು ಮಾಡುವ ಮೂಲಕ ದೇಶದಲ್ಲಿ ಪರಿವರ್ತನೆ ಯುಗ ಉಂಟು ಮಾಡಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ, ಸಂಸದ ನಳಿನ್ ಕುಮಾರ್

ಕಿನ್ನಿಗೋಳಿ : ಮಹಿಳೆಗೆ ಕಾರು ಡಿಕ್ಕಿ,ಗಂಭೀರ ಗಾಯ

ಚಾಲಕನ ನಿಯಂತ್ರಣ ತಪ್ಪಿದ ಕಾರು ಮಹಿಳೆಗೆ ಡಿಕ್ಕಿಯಾಗಿ, ಮಹಿಳೆ ಸಹಿತ ಕಾರಿನಲ್ಲಿದ್ದ ನಾಲ್ವರು ಗಾಯಗೊಂಡ ಘಟನೆ ಕಿನ್ನಿಗೋಳಿ ಮೂಡಬಿದ್ರೆ ರಾಜ್ಯ ಹೆದ್ದಾರಿಯ ಎಂಸಿಸಿ ಬ್ಯಾಂಕ್ ಬಳಿ ನಡೆದಿದೆ. ಮಹಿಳೆಯ ಸ್ಥಿತಿ ಗಂಭೀರವಾಗಿದೆ. ಪಕ್ಷಿಕೆರೆ ಕೆಮ್ರಾಲ್ ನಿವಾಸಿ ಜಯಂತಿ ಶೆಟ್ಟಿ (50) ಗಾಯಗೊಂಡ ಮಹಿಳೆ. ಉಳಿದಂತೆ ಕಾರಿನಲ್ಲಿದ್ದ ಚಾಲಕ ತೋಡಾರ್ ಗಳಾದ ನಿವಾಸಿ ಚಾಲಕ ಕೆ ಹೆಚ್ ಅಬ್ದುಲ್ ಖಾದರ್ (65), ರಿದಾ (16), ರಶ್ಮಿ (18), ಕೌಸರ್ (46), ಎಂದು

ಚರ್ಚ್ ಸಭಾಂಗಣ ಉದ್ಘಾಟಿಸಿದ ಭಟ್ರು !ತೊಕ್ಕೋಟ್ಟಿನಲ್ಲೊಂದು ಸೌಹಾರ್ದ ಕಾರ್ಯಕ್ರಮ

ತೊಕ್ಕೋಟು ಪೆರ್ಮನ್ನೂರಿನ ಸಂತ ಸೆಬಾಸ್ತಿಯನ್ನರ ಇಗರ್ಜಿ ಬಳಿಯಲ್ಲಿ ಸಂತ ಸೆಬಾಸ್ತಿಯನ್ ಅಡಿಟೋರಿಯಂ ಹೆಸರಿನ ಸುಸಜ್ಜಿತವಾದ ಮದುವೆ ಸಮಾರಂಭಕ್ಕೆ ಯೋಗ್ಯವಾದ ಸಭಾಂಗಣ ವೊಂದು ಉದ್ಘಾಟನೆ ಗೊಂಡಿತು. ಸರ್ವ ಧರ್ಮ ಸಮನ್ವಯತೆಯ ಸಂದೇಶ ಸಾರುವ ರೀತಿಯಲ್ಲಿ ಈ ಸಮಾರಂಭ ಏರ್ಪಟ್ಟಿತ್ತು. ಹಿಂದೂ ಮುಸ್ಲಿಂ ಕ್ರೈಸ್ತ ಸಮುದಾಯದ ಬಾಂಧವರು ವೇದಿಕೆಯಲ್ಲಿ ಆಸನ ಅಲಂಕರಿಸಿದ್ದರು. ಈ ವೇದಿಕೆಯಲ್ಲಿದ್ದವರೆಲ್ಲರೂ ಗಣ್ಯರೇ. ಆ ಪೈಕಿ ಸಭಾಂಗಣವನ್ನು ಉದ್ಘಾಟಿಸಿದ ಡಾ|| ಯು.ಸಿ.

ಬಿ.ಸಿ ರೋಡ್‌ : ತುಳು ನಾಟಕೋತ್ಸವ

ಬಂಟ್ವಾಳದ ಬಿ.ಸಿ.ರೋಡ್‌ನ ಸ್ಪರ್ಶಾ ಕಲಾಮಂದಿರಲ್ಲಿ ತುಳು ನಾಟಕೋತ್ಸವ-2022 ಏಳು ದಿನಗಳ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನಾಲ್ಕನೇ ದಿನವಾದ ಇಂದು ಓಂ ಶ್ರೀ ಕಲಾವಿದೆರ್ ಬಿ.ಸಿ. ರೋಡ್ ಇವರಿಂದ ಅಂದ್‌oಡ ಅಂದ್ ಪನ್ಲೆ ನಾಟಕವು ಪ್ರದರ್ಶನಗೊಂಡಿತು.ತುಳು ನಾಟಕ ಕಲಾವಿದರ ಒಕ್ಕೂಟ ಮಂಗಳೂರು ಇದರ ಬಂಟ್ವಾಳ ಘಟಕದ ಆಯೋಜನೆಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಹಾಗೂ ಕರ್ನಾಟಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದರ ಸಹಯೋಗದೊಂದಿಗೆ ತುಳು ನಾಟಕೋತ್ಸವ

ಶಾರದಾ ಎ.ಅಂಚನ್ ರಿಗೆ ಹುಬ್ಬಳ್ಳಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ವಿಶ್ವ ಕನ್ನಡ ಸಂಘ (ರಿ) ಹುಬ್ಬಳ್ಳಿ ಇವರು ಪ್ರತೀ ವರುಷ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ನಾಡಿನ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕೊಡಮಾಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಾಗಿ ಮುಂಬಯಿ ಸಾಹಿತಿ, ಲೇಖಕಿ ಶಾರದಾ ಎ. ಅಂಚನ್ ಇವರಿಗೆ ಸಾಹಿತ್ಯ ಹಾಗೂ ವೈದ್ಯಕೀಯ ಕ್ಷೇತ್ರದ ಸಾಧನೆಗಾಗಿ ರಾಜ್ಯೋತ್ಸವ ಪ್ರಶಸ್ತಿ ಹಾಗೂ ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತೋತ್ಸವದ ಅಂಗವಾಗಿ ಕೊಡಮಾಡುವ “ವೀರರಾಣಿ ಕಿತ್ತೂರು ಚೆನ್ನಮ್ಮ ಸದ್ಭಾವನಾ ರಾಷ್ಟ್ರೀಯ

ಬೆಳ್ತಂಗಡಿ :ಹೊಂಡಮಯ ರಸ್ತೆಗಳಿಗೆ ತೇಪೆ ಕಾರ್ಯ

ಬೆಳ್ತoಗಡಿತಾಲೂಕಿನಲ್ಲಿರಾಷ್ಟೀಯ ಹೆದ್ದಾರಿ 73ರಲ್ಲಿ ಗುರುವಾಯನಕೆರೆಯಿಂದ ಉಜಿರೆವರೆಗೆ ಹೊಂಡಮಯವಾಗಿರುವ ಸ್ಥಳಗಳಿಗೆ ಕಡೆಗೂ ತೇಪೆ ಕಾರ್ಯಕ್ಕೆ ಇಲಾಖೆ ಮುಂದಾಗಿದೆ.ಪೂoಜಾಲಕಟ್ಟೆಯಿoದ ಚಾರ್ಮಾಡಿ ವರೆಗಿನ ರಸ್ತೆಯಲ್ಲಿ ಅಲ್ಲಲ್ಲಿ ಹೊಂಡಗುAಡಿ ಸೃಷ್ಟಿಯಾಗಿದ್ದು, ವಾಹನ ಸವಾರರು ಹರಸಾಹಸ ಪಡುವಂತಾಗಿತ್ತು. ದುರಸ್ತಿಗೆ ಅನೇಕ ಬಾರಿ ಪ್ರತಿಭಟನೆಗಳು ನಡೆದರೂ ಮಳೆಯಿಂದಾಗಿ ದುರಸ್ತಿ ಕಾರ್ಯ ಮುಂದೂಡಲೇ ಹೋಗಿತ್ತು. ಇದೀಗ ಕಳೆದ ಕೆಲ ದಿನಗಳಿಂದ ಮಳೆ ನಿಂತಿರುವುದಿರAದ

ಪುತ್ತೂರು : ಪುತ್ತೂರಿನಲ್ಲಿ ನ.13ರ ವರೆಗೆ ಕಾನೂನು ಅರಿವು-ನಾಗರಿಕ ಸಬಲೀಕರಣ ಅಭಿಯಾನ

ಪುತ್ತೂರು: ರಾಷ್ಟೀಯ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಅ. 31 ರಿಂದ ನ.13 ರ ವರೆಗೆ ಕಾನೂನು ಅರಿವು ಮತ್ತು ಪ್ರಚಾರ ಅಭಿಯಾನದ ಮೂಲಕ ನಾಗರಿಕರ ಸಬಲೀಕರಣ ಅಭಿಯಾನವನ್ನು ಕಾನೂನು ಸೇವೆಗಳ ಸಮಿತಿ ಮತ್ತು ವಕೀಲರ ಸಂಘ ಹಾಗು ಇತರ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಹಯೋಗದೊಂದಿಗೆ ನಡೆಸಲಾಗುವುದು. ಸಾರ್ವಜನಿಕರು ಈ ಅಭಿಯಾನದ ಪ್ರಯೋಜನ ಪಡೆಯುವಂತೆ ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶ ಮತ್ತು ಹೆಚ್ಚುವರಿ ನ್ಯಾಯಿಕ ದಂಡಾಧಿಕಾರಿ ಹಾಗು

ಮಂಗಳೂರು :ಮೂಡುಶೆಡ್ಡೆ- ಬೋಂದೆಲ್ ಸಂಪರ್ಕ ರಸ್ತೆ ಮಧ್ಯೆ ಸುರಿದ ತ್ಯಾಜ್ಯ ರಾಶಿ

ಮಂಗಳೂರು ಪಾಲಿಕೆ ವ್ಯಾಪ್ತಿಯ ಮೂಡುಶೆಡ್ಡೆ-ಬೋಂದೆಲ್ ಸಂಪರ್ಕ ರಸ್ತೆ ಮಧ್ಯೆ ಕಿಡಿಗೇಡಿಕಗಳು ತ್ಯಾಜ್ಯ ತಂದು ಸುರಿದಿದ್ದು, ತ್ಯಾಜ್ಯ ರಸ್ತೆ ಮಧ್ಯೆ ಚೆಲ್ಲಾಪಿಲ್ಲಿಯಾಗಿದ್ದು, ಇದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಕಿಡಿಗೇಡಿಗಳ ಕೃತ್ಯದ ವಿರುದ್ಧ ಇಲಾಖೆಗೆ ದೂರು ನೀಡಿದ್ದು, ಕೃತ್ಯ ಎಸಗಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ತಾಲೂಕು ಪಂಚಾಯತ್‌ನ ಮಾಜಿ ಅಧ್ಯಕ್ಷ ಹರೀಶ್ ಮೂಡುಶೆಡ್ಡೆ ಆಗ್ರಹಿಸಿದ್ದಾರೆ.

0%ಕಮೀಷನ್ 100% ಕೆಲಸ ಆಮ್ ಆದ್ಮಿ ಭರವಸೆಃ ಪೃಥ್ವಿ ರೆಡ್ಡಿ

ಮಂಗಳೂರುಃ ನಮ್ಮ ದೇಶದಲ್ಲಿ ಆಮ್ ಆದ್ಮಿ ಪಕ್ಷ ಕಡಿಮೆ ಅವಧಿಯಲ್ಲೇ ಜನಜಾಮಾನ್ಯರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದು, ದೆಹಲಿ, ಪಂಜಾಬ್ ರಾಜ್ಯಗಳ ಅನಂತರ ನಾವು ಗುಜರಾತ್ ರಾಜ್ಯ ವಿಧಾನಸಭಾ ಚುನಾವಣೆಯನ್ನು ಗೆಲ್ಲಲಿದ್ದೇವೆ ಎಂದು ಭರವಸೆಯನ್ನು ದೇಶದಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯ ಅಧ್ಯಕ್ಷ ಪೃಥ್ವಿ ರೆಡ್ಡಿ ವ್ಯಕ್ತಪಡಿಸಿದ್ದಾರೆಅವರು ಇಂದು ನಗರದ ಡಾನ ಬಾಸ್ಕೋ ಸಬಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಆಮ್ ಆದ್ಮಿ ಪಕ್ಷದ ವತಿಯಂದ ಆಯೋಜಿಸಲಾದ ಪಕ್ಷದ

ದ.ಕ. ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಅಧಿಕಾರ ಸ್ವೀಕಾರ

ದ.ಕ. ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಎಂ.ಆರ್.ರವಿಕುಮಾರ್ ಬುಧವಾರ ಅಧಿಕಾರ ಸ್ವೀಕರಿಸಿದರು.ಪ್ರಭಾರ ಜಿಲ್ಲಾಧಿಕಾರಿಯಾಗಿದ್ದ ದ.ಕ. ಜಿಪಂ ಸಿಇಒ ಡಾ.ಕುಮಾರ ಅವರು ನೂತನ ಜಿಲ್ಲಾಧಿಕಾರಿಗೆ ಅಧಿಕಾರ ಹಸ್ತಾಂತರ ಮಾಡಿದರು. ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ರಿಜಿಸ್ಟಾçರ್ ಆಗಿದ್ದ ಎಂ.ಆರ್.ರವಿಕುಮಾರ್ ಅವರನ್ನು ದ.ಕ. ಜಿಲ್ಲಾಧಿಕಾರಿಯಾಗಿ ನಿಯುಕ್ತಿಗೊಳಿಸಿ ರಾಜ್ಯ ಸರಕಾರ ಅ.31ರಂದು ಆದೇಶ ಹೊರಡಿಸಿತ್ತು.ಈ ಹಿಂದೆ ದ.ಕ. ಜಿಲ್ಲಾಧಿಕಾರಿಯಾಗಿದ್ದ