Home Blog Left SidebarPage 721

ಪ್ರಿಯತಮೆಯಿಂದ ಪಾನೀಯದಲ್ಲಿ ವಿಷ ಬೆರೆಸಿ ಪ್ರಿಯತಮನ ಹತ್ಯೆ

ತಿರುವನಂತಪುರಂ: ಬ್ರೇಕಪ್ ಮಾಡಿಕೊಳ್ಳುವಂತೆ ಹೇಳಿದರೂ ಆತ ಬ್ರೇಕಪ್ ಮಾಡಿಕೊಳ್ಳಲಿಲ್ಲ. ನನ್ನ ಜಾತಕದಲ್ಲಿ ಮೊದಲ ಗಂಡ ಸಾಯುತ್ತಾನೆ ಎಂದು ಬರೆದಿದೆ ಎಂದು ಸುಳ್ಳು ಹೇಳಿ ಅವನ ಮನಸ್ಸು ಬದಲಿಸಲು ಪ್ರಯತ್ನಿಸಿದರೂ ಸಫಲವಾಗಲಿಲ್ಲ. ಆಕೆ ತೆಗೆದುಕೊಂಡ ಕೊನೆಯ ದಾರಿ ಮಾತ್ರ ಅತ್ಯಂತ ಕಠೋರವಾಗಿತ್ತು. ಕೇರಳದ ತಿರುವನಂತಪುರಂ ಮೂಲದ ಶರೋನ್ ರಾಜ್ ಎಂಬ ಯುವಕನ ನಿಗೂಢ ಸಾವು ಹೊಸ

ಮಂಗಳೂರು ವಿ. ವಿ ಸಂಧ್ಯಾ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆ ವತಿಯಿಂದ ಫಿಟ್ ಇಂಡಿಯಾ 3.0 ಕಾಲ್ನಡಿಗೆ ಜಾಥ

ಮಂಗಳೂರು ವಿ. ವಿ ಸಂಧ್ಯಾ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆ ವತಿಯಿಂದ ಫಿಟ್ ಇಂಡಿಯಾ 3.0 ಕಾಲ್ನಡಿಗೆ ಜಾಥ ಇಂದು ಲಾಲ್ ಭಾಗ್ ಮಹಾತ್ಮಾ ಗಾಂಧಿ ವೃತ್ತದಿಂದ ಹಂಪನಕಟ್ಟೆ ಕ್ಲಾಕ್ ಟವರ್ ತನಕ ಜರುಗಿತು.ಮಂಗಳೂರು ವಿಶ್ವ ವಿದ್ಯಾನಿಲಯದ ರಾಷ್ಟ್ರೀಯ ಸೇವಾಯೋಜನೆಯ ಸಂಯೋಜನಾಧಿಕಾರಿ ಡಾ. ನಾಗರತ್ನ ಕೆ. ಎ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಅವರು ಮಾತನಾಡಿ ಉತ್ತಮ ಆರೋಗ್ಯ, ಸ್ವಚ್ಛ ಮನಸ್ಸು ಇದರ ಪರಿಕಲ್ಪನೆಯಾಗಿರುವ ಫಿಟ್ ಇಂಡಿಯಾ ರನ್ ಆರೋಗ್ಯ ವಂತ ಸಮಾಜದ

ಮಂಗಳೂರು : ಐಕ್ಯಮ್ ವಿಶೇಷ ಮಕ್ಕಳ ಶಾಲೆ ಯಲ್ಲಿ ದೀಪಾವಳಿ ಆಚರಣೆ

ಐಕ್ಯಮ್ ವಿಶೇಷ ಮಕ್ಕಳ ಶಾಲೆ ಯಲ್ಲಿ ದೀಪಾವಳಿ ಆಚರಣೆಯು ಅತ್ಯಂತ ವಿಜೃಂಭಣೆಯಿಂದ ಜರಗಿತು. ಈ ಒಂದು ಕಾರ್ಯಕ್ರಮವು ಪೃಥ್ವಿ ಟ್ರಸ್ಟ್ ಸಹಭಾಗಿತ್ವದಲ್ಲಿ ಜರಗಿತ್ತು. ಮುಖ್ಯ ಅತಿಥಿಯಾಗಿ ಮಾಜಿ ಶಾಸಕರು ದಕ್ಷಿಣ ಕ್ಷೇತ್ರ ಮಂಗಳೂರು ಶ್ರೀ ಜೆ ಆರ್ ಲೋಬೊ ಉಪಸ್ಥಿತರಿದ್ದರು.ಇವರು ಐಕ್ಯಮ್ ಶಾಲೆಯ ಮಕ್ಕಳೊಂದಿಗೆ ದೀಪವನ್ನು ಬೆಳಗಿಸಿದರ ಮೂಲಕ ಈ ಕಾರ್ಯಕ್ರಮವನ್ನು ಆರಂಭಿಸಿದರು.ಆ ನಂತರ ಸಭಾ ಕಾರ್ಯಕ್ರಮದಲ್ಲಿ ಮಕ್ಕಳ ಕುರಿತು ಮಾತನಾಡಿದರು.ಇದೇ ವೇಳೆ ಐಕ್ಯಂ ಸಂಸ್ಥೆಯ

ಬಂಟ್ವಾಳ: 22ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ

ಬಂಟ್ವಾಳ: ನವೆಂಬರ್ 12 ಮತ್ತು 13ರಂದು ಅಮ್ಮುಂಜೆಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿರುವ ಬಂಟ್ವಾಳ ತಾಲೂಕು 22ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಒಡ್ಡೂರು ಫಾರ್ಮ್ಸ್ ನಲ್ಲಿ ಶನಿವಾರ ಬಿಡುಗಡೆಗೊಳಿಸಿ, ಶುಭ ಹಾರೈಸಿದರು. ಈ ಸಂದರ್ಭ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷರಾದ ವಿಶ್ವನಾಥ ಬಂಟ್ವಾಳ, ಸ್ವಾಗತ ಸಮಿತಿ ಅಧ್ಯಕ್ಷರಾದ ಉಮೇಶ್ ಸಾಲಿಯಾನ್ ಬೆಂಜನಪದವು,

ಮಂಗಳೂರು : ಕರ್ತವ್ಯಗಳ ಪಾಲನೆ ಮನೆಯಿಂದಲೇ ಆರಂಭವಾಗಲಿ: ಎನ್ನೆಸ್ಸೆಸ್ ಸಂಯೋಜನಾಧಿಕಾರಿ ಡಾ. ನಾಗರತ್ನ

ಕರ್ತವ್ಯಗಳ ಪಾಲನೆ ಮನೆಯಿಂದಲೇ ಆರಂಭ ಆಗಬೇಕು. ಸಮಾಜದಲ್ಲಿ ಆಗುವ ತಪ್ಪುಗಳ ಬಗ್ಗೆ ಧ್ವನಿ ಎತ್ತುವ ಮನೋಭಾವವನ್ನು ಯುವಜನರು ಹೊಂದಿರಬೇಕು. ಪ್ರಾಥಮಿಕ ಹಂತದಿಂದಲೇ ಇಂತಹ ವಿಚಾರಗಳನ್ನು ಕಲಿಸುವ ಮತ್ತು ಅರಿಯುವ ಪ್ರಕ್ರಿಯೆ ಆದಾಗ ಎಲ್ಲರೂ ಸಮಾನರೆಂಬ ಮನೋಭಾವ ಹುಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಎನ್ಎಸ್ಎಸ್ ಸಂಯೋಜನಾಧಿಕಾರಿ ಡಾ. ನಾಗರತ್ನ ಕೆ.ಎ. ಅಭಿಪ್ರಾಯಪಟ್ಟರು.ಅವರು ಶನಿವಾರ ನಗರದ ರೋಶನಿ ನಿಲಯ ಸಭಾಂಗಣದಲ್ಲಿ ಯುವಜನ

ವಿಶ್ವ ಪಾರ್ಶ್ವವಾಯು ದಿನದ ಪ್ರಯುಕ್ತ ಜಾಗೃತಿ: ಮಲ್ಪೆಯಲ್ಲಿ ಮರಳು ಕಲಾ ಶಿಲ್ಪ ಅನಾವರಣ

ವಿಶ್ವದಾದ್ಯಂತ ಪಾರ್ಶ್ವವಾಯು ಸಂಭವವನ್ನು ಕಡಿಮೆ ಮಾಡಲು ಪ್ರತಿ ವರ್ಷ ಅಕ್ಟೋಬರ್ 29 ರಂದು ವಿಶ್ವ ಪಾರ್ಶ್ವವಾಯು ದಿನವನ್ನು ಆಚರಿಸಲಾಗುತ್ತದೆ. ಇದರ ಅಂಗವಾಗಿ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ  ಮತ್ತು ಆಸ್ಪತ್ರೆಯ ನರವಿಜ್ಞಾನ ವಿಭಾಗವು ಮಲ್ಪೆ ಕಡಲ ತೀರದಲ್ಲಿ ಪಾರ್ಶ್ವವಾಯು ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಮರಳು ಕಲಾ ಶಿಲ್ಪವನ್ನು ಅನಾವರಣಗೊಳಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಆಚರಿಸಿತು.  ಕೆಎಂಸಿ ಮಣಿಪಾಲದ ಡೀನ್ ಡಾ ಶರತ್ ಕೆ

ಬಿಜೆಪಿ ಸಂಸದ, ಶಾಸಕರುಗಳ ಬಣ್ಣ ಟೋಲ್ ಗೇಟ್ ಮುಂಭಾಗ ಕರಗುತ್ತಿದೆ. ವೈ ರಾಘವೇಂದ್ರ ರಾವ್

ಸುರತ್ಕಲ್ ಅಕ್ರಮ ಟೋಲ್ ಗೇಟ್ ಕರಾವಳಿ ಜಿಲ್ಲೆಗಳಲ್ಲಿ ನಡೆಯುತ್ತಿರುವ ಜನವಿರೋಧಿ ಆಡಳಿತದ ಸಂಕೇತವಾಗಿ ರಾರಾಜಿಸುತ್ತಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನರ ಒಕ್ಕೊರಲ ಆಗ್ರಹದ ಹೊರತಾಗಿಯೂ ಟೋಲ್ ಕೇಂದ್ರ ಮುಚ್ಚದಿರುವುದರ ಹಿಂದೆ ಭ್ರಷ್ಟಾಚಾರ, ಕಮೀಷನ್, ಖಾಸಗಿ ಕಂಪೆನಿಗಳ ಹಿತಾಸಕ್ತಿಗಳು ಕೆಲಸ ಮಾಡುತ್ತಿರುವುದು, ಬಿಜೆಪಿ ಸರಕಾರ ಅಂತಹ ನೀತಿಗಳ ಪರ ನಿರ್ಲಜ್ಜವಾಗಿ ನಿಂತಿರುವುದು ಇಂದು ಜನಸಾಮಾನ್ಯರಿಗೂ ಅರ್ಥವಾಗುತ್ತಿದೆ. ಜನಪರ ಕಾರ್ಯಗಳಿಗೆ ಬೆನ್ನು

ಕಂಚಿನಡ್ಕದಲ್ಲಿ ಪ್ರಪ್ರಥಮ ಬಾರಿಗೆ ಸಾಮೂಹಿಕ ಗೋಪೂಜೆ, ಗೌರವಾರ್ಪಣೆ

ದೀಪಾವಳಿಯ ಪ್ರಯುಕ್ತ ಕಂಚಿನಡ್ಕದ ಹಿಂದೂ ಬಾಂಧವರ ನೇತೃತ್ವದಲ್ಲಿ ಸಾಮೂಹಿಕ ಗೋಪೂಜೆ,ಗೋಸಾಕುವ ಕುಟುಂಬಕ್ಕೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಭಾಜಪ ಉಪಾಧ್ಯಕ್ಷ ಶ್ರೀಪ್ರಕಾಶ್ ಶೆಟ್ಟಿಯವರು ಭಾರತಮಾತೆ ಪೂಜೆ ನಡೆಸಿ ಚಾಲನೆ ನೀಡಿದರು. ಮಾತೆಯರಿಂದ ಗೋಪೂಜೆ ನಡೆಸಿ ಪ್ರತಿ ಗೋಸಾಕುವ ಕುಟುಂಬಕ್ಕೆ ಗೌರವಪೂರ್ವಕವಾಗಿ ಸನ್ಮಾನಿಸಿ, ಗೋಆಹಾರವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಕಾಪು ಮಂಡಲ ಭಾಜಪ ಅಧ್ಯಕ್ಷರಾದ ಶ್ರೀಕಾಂತ್

ಸೂಟರ್ ಪೇಟೆ ಶ್ರೀ ಬಬ್ಬುಸ್ವಾಮಿ ಕ್ಷೇತ್ರದಲ್ಲಿ ಪಾರಂಪರಿಕ ಬಲೀಂದ್ರ ಪೂಜೆ

ಅತೀ ಪುರಾತನ ಬಬ್ಬುಸ್ವಾಮಿ ಕ್ಷೇತ್ರಗಳಲ್ಲಿ ಒಂದಾಗಿರುವ ಸೂಟರ್ ಪೇಟೆ ಶ್ರೀ ಕೋರ್ದಬ್ಬು ದೇವಸ್ಥಾನದಲ್ಲಿ ಬಲೀಂದ್ರ ಪೂಜೆಯನ್ನು ವಿಶಿಷ್ಟ ರೀತಿಯಲ್ಲಿ ನಡೆಸಲಾಯಿತು. ಅಂಧಕಾರವನ್ನು ಕಳೆಯುವ ದೀಪಾವಳಿ ಹಬ್ಬದ ಮೂರನೇ ದಿನವೇ ಬಲಿಪಾಡ್ಯಮಿ. ಅಂದು ದಾನಶೂರ ಬಲೀಂದ್ರನ ಪೂಜೆಯನ್ನು ದೈವಸ್ಥಾನಗಳಲ್ಲಿ ಭಕ್ತಿ ಶ್ರದ್ಧೆಯಿಂದ ಆಚರಿಸಲಾಗುತ್ತದೆ. ಸೂಟರ್ ಪೇಟೆ ಶ್ರೀ ಕೋರ್ದಬ್ಬು ದೈವಸ್ದಾನದಲ್ಲಿ ಬಲೀಂದ್ರ ಪೂಜೆಯನ್ನು ಅತ್ಯಂತ ಪಾರಂಪರಿಕ ರೀತಿಯಲ್ಲಿ ಶ್ರದ್ಧಾಭಕ್ತಿಯಿಂದ

ಸುರತ್ಕಲ್ ಜಂಕ್ಷನ್‍ಗೆ ವೀರ ಸಾವರ್ಕರ್ ಹೆಸರಿಡುವ ಬಗ್ಗೆ ಪ್ರಸ್ತಾಪ :ಗದ್ದಲದ ಗೂಡಾದ ಪಾಲಿಕೆ ಸಭೆ

ಸುರತ್ಕಲ್ ಜಂಕ್ಷನ್‍ಗೆ ವೀರ ಸಾವರ್ಕರ್ ಹೆಸರು ಇಡುವ ಬಗ್ಗೆ ಬಿಜೆಪಿ ಸದಸ್ಯರು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದು ಇದರಿಂದಾಗಿ ಸಭೆಯಲ್ಲಿ ಗದ್ದಲ ಉಂಟಾಗಿ ಕೆಲ ಕಾಲ ಸಭೆ ಮುಂದೂಡಿಕೆಯಾದ ಘಟನೆ ನಡೆಯಿತು. ಪಾಲಿಕೆಯ ಸಭೆ ಸಾಮಾನ್ಯ ಸಭೆಯಲ್ಲಿ ಸುರತ್ಕಲ್ ಜಂಕ್ಷನ್‍ಗೆ ವೀರ ಸಾವರ್ಕರ್ ಹೆಸರು ಇಡಬೇಕೆಂದು ಪ್ರಸ್ತಾಪ ಮಾಡಿದ್ದರು. ಇದನ್ನು ವಿರೋಧಿಸಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆಗೆ ಇಳಿದಾಗ, ಬಿಜೆಪಿ ಸದಸ್ಯರು ವೀರ ಸಾವರ್ಕರ್ ಕೀ