ಮಂಗಳೂರು ವಿ. ವಿ ಸಂಧ್ಯಾ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆ ವತಿಯಿಂದ ಫಿಟ್ ಇಂಡಿಯಾ 3.0 ಕಾಲ್ನಡಿಗೆ ಜಾಥ

ಮಂಗಳೂರು ವಿ. ವಿ ಸಂಧ್ಯಾ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆ ವತಿಯಿಂದ ಫಿಟ್ ಇಂಡಿಯಾ 3.0 ಕಾಲ್ನಡಿಗೆ ಜಾಥ ಇಂದು ಲಾಲ್ ಭಾಗ್ ಮಹಾತ್ಮಾ ಗಾಂಧಿ ವೃತ್ತದಿಂದ ಹಂಪನಕಟ್ಟೆ ಕ್ಲಾಕ್ ಟವರ್ ತನಕ ಜರುಗಿತು.ಮಂಗಳೂರು ವಿಶ್ವ ವಿದ್ಯಾನಿಲಯದ ರಾಷ್ಟ್ರೀಯ ಸೇವಾಯೋಜನೆಯ ಸಂಯೋಜನಾಧಿಕಾರಿ ಡಾ. ನಾಗರತ್ನ ಕೆ. ಎ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಅವರು ಮಾತನಾಡಿ ಉತ್ತಮ ಆರೋಗ್ಯ, ಸ್ವಚ್ಛ ಮನಸ್ಸು ಇದರ ಪರಿಕಲ್ಪನೆಯಾಗಿರುವ ಫಿಟ್ ಇಂಡಿಯಾ ರನ್ ಆರೋಗ್ಯ ವಂತ ಸಮಾಜದ ನಿರ್ಮಾಣಕ್ಕೆ ಪೂರಕವಾಗಿದೆ.ಕಾಲೇಜಿನ ಪ್ರಾಂಶುಪಾಲೆ ಡಾ. ಶುಭಾಷಿನಿ ಶ್ರೀವತ್ಸ,ರಾ.ಸೆ.ಯೋ ಯೋಜನಾಧಿಕಾರಿ ಅಶೋಕನ್ ಕಾಲೇಜಿನ ಅಧ್ಯಾಪಕ ವೃಂದ, ರಾಸೆಯೋ ಸೇವಕರು, ಸೇವಕಿಯರು, ವಿದ್ಯಾರ್ಥಿಗಳು ಜಾಥದಲ್ಲಿ ಪಾಲ್ಗೊಂಡಿದ್ದರು.

Related Posts

Leave a Reply

Your email address will not be published.