Home Blog Left SidebarPage 751

ಡಾ.ಎಸ್ ರಾಧಾಕೃಷ್ಣನ್ ಅವರ ನೆನಪಿಗಾಗಿ ಶಿಕ್ಷಕ್ ಸಮ್ಮಾನ್-2022

ಸ್ವತಂತ್ರ ಮಾನ್ಯತೆ ಪಡೆದ ಶಾಲಾ ಶಿಕ್ಷಕರ ಒಕ್ಕೂಟ ಪಸ್ಟ್ ಕರ್ನಾಟಕ ಸಂಸ್ಥೆಯು ಡಾ.ಎಸ್ ರಾಧಾಕೃಷ್ಣನ್ ಅವರ ನೆನಪಿಗಾಗಿ ಶಿಕ್ಷಕ್ ಸಮ್ಮಾನ್-2022 ಅನ್ನು ಆಯೋಜಿಸಲಾಗಿತ್ತು. “ಶಿಕ್ಷಣದ ಚೇತರಿಕೆಯ ಹೃದಯದಲ್ಲಿ ಶಿಕ್ಷಕರು” ಎಂಬ ವಿಷಯದೊಂದಿಗೆ ಅಂತರರಾಷ್ಟ್ರೀಯ ಶಿಕ್ಷಕರ ದಿನವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಬಿಝಡ್ ಸಂಸ್ಥೆಯ ಅಧ್ಯಕ್ಷರಾದ ಡಾ

ನೊಂದ ಕುಟುಂಬಗಳ ನೆರವಿಗೆ ಮಿಡಿದ ಹೆಲ್ವ್ ಲೈನ್ ಸೇವಾ ತಂಡ ಹಾಗೂ ಅರ್ಪಣಾ ಸೇವಾ ಸಮಿತಿ

ಹೆಲ್ವ್ ಲೈನ್ ಸೇವಾ ತಂಡ ಹಾಗೂ ಅರ್ಪಣಾ ಸೇವಾ ಸಮಿತಿ ಸಹಯೋಗದೊಂದಿಗೆ ಭವತಿ ಬಿಕ್ಷಾಂದೇಹಿ ಸೇವಾ ಕಾರ್ಯವು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ನಡೆಯಿತು. ಸೇವಾ ಕಾರ್ಯದ ಮುಖ್ಯ ಆಕರ್ಷಣೆಯಾಗಿ ವಿಶೇಷ ವೇಷವು ಎಲ್ಲರ ಗಮನಸೆಳೆಯಿತು. ನೊಂದ ಮೂರು ಕುಟುಂಬಗಳ ಸಹಾಯಕ್ಕಾಗಿ ನೆರವಾಗಲು ಯುವಕರು ಕೈಜೋಡಿಸಿದ್ದು ವಿಶೇಷ. ಕಟೀಲು ದೇವಾಲಯದಲ್ಲಿ ಸುಮಾರು ಒಂದು ಲಕ್ಷದ ಐದು ಸಾವಿರ ರುಪಾಯಿ ಸಂಗ್ರಹಿಸಲಾಗಿದ್ದು. ದಿನಾಂಕ: 05/10/2022 ಬುಧವಾರ ಉಚ್ಚಿಲ ದೇವಸ್ಥಾನ

ಅಶಕ್ತರ ನೆರವಿಗಾಗಿ ಪ್ರೇತವಾದ ದೇವದಾಸ್..!

ನವರಾತ್ರಿ ಬಂತೆಂದರೆ ಸಾಕು ಎಲ್ಲಾ ದೇವಿ ದೇವಸ್ಥಾನಗಳಲ್ಲಿ ವಿಶೇಷ ದೇವಿ ಆರಾಧನೆಗಳು ನಡೆದರೆ, ಇನ್ನೊಂದೆಡೆ ವಿವಿಧ ವೇಷಧಾರಿಗಳು ಮನೆ ಮನೆಗೆ ಆಗಮಿಸುವ ಮೂಲಕ ಜನರ ಮನತಣಿಸುತ್ತಾರೆ. ಹುಲಿವೇಷ, ಪುರುಷವೇಷ, ಸ್ತ್ರೀವೇಷ ಹೀಗೆ ಹಲವು ತರಹದ ವೇಷಗಳನ್ನು ನವರಾತ್ರಿಯ ಒಂಬತ್ತು ದಿನಗಳಲ್ಲಿ ನೋಡಬಹುದು. ಇಂಥಹುದೇ ಒಂದು ವೇಷದ ಮೂಲಕ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ವ್ಯಕ್ತಿಯೊಬ್ಬರು ಕಳೆದ ಹತ್ತು ವರ್ಷಗಳಿಂದ ಗಮನಸೆಳೆಯುತ್ತಿದ್ದಾರೆ. ವಿಶೇಷವಾದ ಪ್ರೇತದ ವೇಷ ಹಾಕುವ

ಮಲ್ಪೆ ಕಡಲತೀರದಲ್ಲಿ ಜಲಸಾಹಸ ಕ್ರೀಡೆಗಳನ್ನು ಆರಂಭಿಸಲು ಜಿಲ್ಲಾಡಳಿತದಿಂದ ಅವಕಾಶ

ಮಲ್ಪೆ : ಮಲ್ಪೆ ಕಡಲತೀರದಲ್ಲಿ ಜಲಸಾಹಸ ಕ್ರೀಡೆಗಳನ್ನು ಆರಂಭಿಸಲು ಜಿಲ್ಲಾಡಳಿತವು ಅವಕಾಶ ಕಲ್ಪಿಸಿದ್ದು, ಅದರಂತೆ ರವಿವಾರ ಜಲಸಾಹಸಗಳು ಆರಂಭಗೊಳ್ಳುವ ಮೂಲಕ ಮಲ್ಪೆ ಬೀಚ್‌ನಲ್ಲಿ ಚಟುವಟಿಕೆ ಗರಿಗೆದರಿವೆ. ಮಳೆಗಾಲದ ಹಿನ್ನೆಲೆಯಲ್ಲಿ 5 ತಿಂಗಳಿಂದ ಬೀಚ್‌ನಲ್ಲಿ ಎಲ್ಲ ಚಟುವಟಿಕೆಗಳು ಸ್ಥಗಿತವಾಗಿದ್ದವು. ಸೆ. 15ಕ್ಕೆ ನಿಷೇಧದ ಅವಧಿ ಮುಗಿದರೂ ಪ್ರತಿಕೂಲ ಹವಾಮಾನದ ಕಾರಣ ಅವಕಾಶ ನೀಡಿರಲಿಲ್ಲ. ಇದೀಗ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಮತ್ತೆ ಕಳೆ ಬಂದಂತಾಗಿದೆ. ರವಿವಾರ

ಆಮ್ ಆದ್ಮಿ ಪಕ್ಷದಿಂದ ನಾಗರಿಕ ಕುಂದುಕೊರತೆ ಪೊರ್ಟಲ್ ಬಿಡುಗಡೆ

ಮಂಗಳೂರು : ಆಮ್ ಆದ್ಮಿ ಪಕ್ಷ, ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಶ್ರಯದಲ್ಲಿ ನಾಗರಿಕ ಕುಂದುಕೊರತೆ ಪೊರ್ಟಲ್ ಬಿಡುಗಡೆ ಕಾರ್ಯಕ್ರಮ ಅ.2, ಭಾನುವಾರದಂದು ನಗರದ ಬಿಜೈ ಚರ್ಚ್ ಹಾಲ್ ನಲ್ಲಿ ಜರಗಿತು. ಬಾಂಬೆ ಮತ್ತು ಕರ್ನಾಟಕ ಹೈ ಕೋರ್ಟ್ ನ ನಿವೃತ ನ್ಯಾಯಮೂರ್ತಿ ಮೈಕಲ್ ಎಫ್ ಸಲ್ದಾನ ಅವರು ನಾಗರಿಕ ಕುಂದುಕೊರತೆ ಪೊರ್ಟಲ್ ಅನ್ನು ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು, ಇಂದು ಆರಂಭಗೊಂಡ ಈ ಪೋರ್ಟಲ್ ಒಂದು ವರ್ಷದೊಳಗೆ ಮಂಗಳೂರಿನಲ್ಲಿ ಸಂಚಲನ ತರಲಿದ್ದು, ಇಡೀ

ಆಭರಣ ಮಳಿಗೆ ವತಿಯಿಂದ ನಮ್ಮಮ್ಮ ಶಾರದೆ ಸ್ಪರ್ಧೆ

ಮಂಗಳೂರಿನ ಪ್ರತಿಷ್ಠಿತ ಚಿನ್ನಾಭರಣ ಮಳಿಗೆಯಾದ ಆಭರಣ ಮಳಿಗೆಯ ವತಿಯಿಂದ ನಮ್ಮಮ್ಮ ಶಾರದೆ ಸ್ಪರ್ಧೆ ಮತ್ತು ಕಲಾ ನಿಕೇತನ ಮಂಗಳೂರು ಇದರ ನಿರ್ದೇಶಕಿ ಶ್ರೀಮತಿ ಸಾವಿತ್ರಿ ರಾಮರಾವ್ ಹಾಗೂ ವಿದ್ಯಾರ್ಥಿಗಳಿಂದ ವೀಣಾ ಸಂಧ್ಯಾ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಮಂಗಳೂರಿನ ಮಣ್ಣಗುಡ್ಡೆಯಲ್ಲಿರುವ ರೋಟರಿ ಬಾಲಭವನದಲ್ಲಿ ನಮ್ಮಮ್ಮ ಶಾರದೆ ಸ್ಪರ್ಧೆಯನ್ನು ಹಮ್ಮಿಕೊಂಡರು. ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳು ವೀಣೆ ಹಿಡಿದು ಶಾರದೆಯ ಅವತಾರದಲ್ಲಿ ಮಿಂಚಿದ್ದು ಎಲ್ಲರ ಗಮನ

ಅದಮಾರಿನಲ್ಲಿ ಕಾಣಿಸಿಕೊಂಡ ಹುಲಿಗಳ ಹಿಂಡು : ಭಯ ಭೀತರಾದ ಪುಟಾಣಿಗಳು

ಸಮಜೋಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಅದಮಾರು ಓಂ ಪ್ರೇಂಡ್ಸ್ ಸಂಸ್ಥೆಯ ಐದನೇ ವರ್ಷದ ನವರಾತ್ರಿ ಸಂದರ್ಭ ಹುಲಿವೇಷ ಧರಿಸಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ತಿರುಗಾಟ ಆರಂಭಿಸಿದೆ.ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ಸಂಸ್ಥೆಯ ವಾರ್ಷಿಕೋತ್ಸವ ನಡೆಸುವ ಅದೆಷ್ಟೋ ಸಂಸ್ಥೆಗಳಿಗೆ ಅಪವಾದವೋ ಎಂಬಂತೆ ಅದಮಾರಿನ ಓಂ ಪ್ರೇಂಡ್ಸ್ ಕಳೆದ ಇಪ್ಪತ್ತು ವರ್ಷಗಳಿಂದ ಸಮಜೋಮುಖಿ ಕಾರ್ಯ ಮುಂದುವರಿಸಿ ಕಳೆದ ಐದು ವರ್ಷಗಳಿಂದ ಸಂಸ್ಥೆಯ ಸದಸ್ಯರೇ ಸೇರಿ ಹುಲಿವೇಷ ಹಾಕಿ ತಿರುಗಾಟ

ಟೋಲ್ ವಿರುದ್ಧ ಹೋರಾಟ ಯುಪಿಸಿಎಲ್ ಹೋರಾಟದಂತ್ತಲ್ಲ : ವಿನಯ ಕುಮಾರ್ ಸೊರಕೆ

ಯುಪಿಸಿಎಲ್ ಹೋರಾಟದ ಸಂದರ್ಭ ಕಾಮಗಾರಿ ಗುತ್ತಿಗೆಗಾಗಿ ಹೋರಾಟ ನಡೆಸಿದವರು ಬಹಳಷ್ಟು ಮಂದಿ, ಆ ರೀತಿಯ ಹೋರಾಟ ಸುರತ್ಕಲ್ ಟೋಲ್ ತೆರವು ಹೋರಾಟವಲ್ಲ, ಮುನಿರ್ ಕಾಟಿಪಲ್ಲ ನೇತೃತ್ವದಲ್ಲಿ ನಡೆದ ಈ ಹೋರಾಟ ಜಯದೊಂದಿಗೆ ಅಂತ್ಯ ಕಾಣುವುದರಲ್ಲಿ ಸಂಶಯವಿಲ್ಲ ಎಂಬುದಾಗಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ. ಪಡುಬಿದ್ರಿಯ ಖಾಸಗಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸೊರಕೆ ಮಾತಿಗೆ ಧ್ವನಿ ಸೇರಿಸಿದ ಸೇರಿದ ಸಭೆ, ಅಂಥಹ ಸ್ವಾರ್ಥಿಗಳ ನೇತೃತ್ವ ಈ ಹೋರಾಟವಾಗಿದ್ದರೆ

ಉಳ್ಳಾಲ: ಸಂಚಾರಿ ಪೇದೆಗೆ ಕಾರು ಢಿಕ್ಕಿ ಹೊಡೆದು ಪರಾರಿ

ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಪೇದೆಗೆ ಅಪರಿಚಿತ ಕಾರು ಢಿಕ್ಕಿ ಹೊಡೆದು, ಅವರು ತಲೆಗೆ ಗಾಯಗೊಂಡಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಉಳ್ಳಾಲಬೈಲ್ ರಸ್ತೆಯಲ್ಲಿ ಸಂಭವಿಸಿದ್ದು, ಶಿವಮೊಗ್ಗ ನಿವಾಸಿ ಲೋಕೇಶ್ (35) ಗಾಯಾಳು ಪೇದೆ ಎಂದು ಗುರುತಿಸಲಾಗಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣೆಯ ಹೈವೇ ಪ್ಯಾಟ್ರಲ್ ವಾಹನದಲ್ಲಿ ಚಾಲಕನಾಗಿದ್ದ ಇವರು ಉಳ್ಳಾಲಬೈಲ್ ಬಳಿ ತಪಾಸಣೆಗೈಯ್ಯುತ್ತಿದ್ದ ವೇಳೆ ಘಟನೆ ನಡೆದಿದೆ.

ಕರ್ನಾಟಕ ರಾಜ್ಯ ರೈತಸಂಘ ಸುಳ್ಯ ತಾಲೂಕು ಕಛೇರಿ ಉದ್ಘಾಟನೆ

ರೈತಸಂಘದ ತಾಲೂಕು ಘಟಕದ ಅಧ್ಯಕ್ಷರಾದ ಲೋಲಾಜಾಕ್ಷ ಗೌಡ ಭೂತಕಲ್ಲು ರವರ ಆಧ್ಯಕ್ಷತೆಯಲ್ಲಿ ಸುಳ್ಯದ ಪೈಚಾರಿನಲ್ಲಿ ನೆರವೇರಿತು ಕಛೇರಿ ಉದ್ಘಾಟನೆಯನ್ನು ಪ್ರಗತಿಪರ ಕೃಷಿಕರು ಹಾಗೂ ಚಿಂತಕರಾದ ತೇಜಕುಮಾರ್ ಕುಡೆಕಲ್ಲು ನೇರವೇರಿಸಿ ರೈತಸಂಘಕ್ಜೆ ಅದರದೇ ಆದ ಘನತೆ ಗೌರವವಿದೆ. ವಿಧ್ಯಾರ್ಥಿ ಜೀವನದಲ್ಲಿ 80 ತ ದಶಕದ ರೈತನಾಯಕರ ಸಂಪರ್ಕದಲ್ಲಿದ್ದೆ.ಆಸಂದರ್ಭದಲ್ಲಿ ರೈತಸಂಘವೂ ಶ್ರೀ ಮಂತ ರೈತರ ಸಂಘ ಎಂಬ ಸಂಶಯವು ಜನಮಾನಸದಲ್ಲಿತ್ತು. ಪ್ರಸ್ತುತ ಸಣ್ಣ,ಅತೀಸಣ್ಣ ರೈತರು ಕೃಷಿ