ಟೋಲ್ ವಿರುದ್ಧ ಹೋರಾಟ ಯುಪಿಸಿಎಲ್ ಹೋರಾಟದಂತ್ತಲ್ಲ : ವಿನಯ ಕುಮಾರ್ ಸೊರಕೆ
ಯುಪಿಸಿಎಲ್ ಹೋರಾಟದ ಸಂದರ್ಭ ಕಾಮಗಾರಿ ಗುತ್ತಿಗೆಗಾಗಿ ಹೋರಾಟ ನಡೆಸಿದವರು ಬಹಳಷ್ಟು ಮಂದಿ, ಆ ರೀತಿಯ ಹೋರಾಟ ಸುರತ್ಕಲ್ ಟೋಲ್ ತೆರವು ಹೋರಾಟವಲ್ಲ, ಮುನಿರ್ ಕಾಟಿಪಲ್ಲ ನೇತೃತ್ವದಲ್ಲಿ ನಡೆದ ಈ ಹೋರಾಟ ಜಯದೊಂದಿಗೆ ಅಂತ್ಯ ಕಾಣುವುದರಲ್ಲಿ ಸಂಶಯವಿಲ್ಲ ಎಂಬುದಾಗಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ. ಪಡುಬಿದ್ರಿಯ ಖಾಸಗಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸೊರಕೆ ಮಾತಿಗೆ ಧ್ವನಿ ಸೇರಿಸಿದ ಸೇರಿದ ಸಭೆ, ಅಂಥಹ ಸ್ವಾರ್ಥಿಗಳ ನೇತೃತ್ವ ಈ ಹೋರಾಟವಾಗಿದ್ದರೆ ನಾವು ಖಂಡಿತಾ ಈ ಸಭೆಗೆ ಹಾಜರಾಗುತ್ತಿರಲಿಲ್ಲ, ಜನ ಹಿತಕ್ಕಾಗಿ ಸ್ವಾರ್ಥ ರಹಿತ ಹೋರಾಟ ಇದ್ದಾಗಿದ್ದು ಯಾವುದೇ ಮಟ್ಟದ ಹೋರಾಟಕ್ಕೆ ನಾವು ಸಿದ್ಧ ಎನ್ನುವ ಮೂಲಕ ಸಭೆ ಸಂಪೂರ್ಣ ಬೆಂಬಲ ವ್ಯಕ್ತ ಪಡಿಸಿದೆ, ದುರಾದೃಷ್ಟವೋ ಎಂಬಂತ್ತೆ ಈ ಸಭೆಯಲ್ಲೇ ಯುಪಿಸಿಎಲ್ ಗುತ್ತಿಗೆಗಾಗಿ ಹೋರಾಟದ ಮುಖವಾಡ ಧರಿಸಿದವರಿದ್ದರು.
ಸೆ.18ಕ್ಕೆ ಹೋರಾಟ: ಅಧಿಕಾರಿಗಳು ನೀಡಿದ ಭರವಸೆಯಂತೆ 18ಕ್ಕೆ ಮುನ್ನ ಟೋಲ್‍ಗೇಟ್ ತೆರವುಗೊಳ್ಳದಿದ್ದರೆ ಉಗ್ರಹೋರಾಟ, ಇಲ್ಲ ಅಧಿಕಾರಿಗಳು ಮಾತು ಉಳಿಸಿಕೊಂಡರೆ ಅದೇ ದಿನ ವಿಜಯೋತ್ಸವ ಆಚರಿಸಲಾಗುವುದು ಎಂಬುದಾಗಿ ಹೋರಾಟಗಾರ ಮುನಿರ್ ಕಾಟಿಪಳ್ಳ ಹೇಳಿದ್ದಾರೆ, ತೆರವುಗೊಳ್ಳವವರಗೆ ಯಾವುದೇ ನಿರ್ಧಾರಕ್ಕೆ ಬರಲು ಅಸಾಧ್ಯ ಕಾರಣ ಈ ಹಿಂದೆಯೂ ನಮ್ಮ ಸಂಸದ ನಳಿನ್ ಕುಮಾರ್ ಕಟೀಲ್ ನೀಡಿದ ಭರವಸೆ ಉಳಿಸಿಕೊಂಡಿಲ್ಲ, ಈ ಟೋಲ್‍ನಿಂದಾಗಿ ಉಡುಪಿ ಜಿಲ್ಲೆಯ ಜನ ಬಾರೀ ಸಮಸ್ಯೆಗೊಳಗಾಗಿದ್ದರೂ.. ವಿಧಾನ ಸೌಧದಲ್ಲಿ ಮಂಗಳೂರು ಶಾಸಕ ಯು.ಟಿ. ಖಾದರ್ ಧ್ವನಿ ಎತ್ತಿದರೂ ತೀರ ಹತ್ತಿರದ ಕಾಪು ಶಾಸಕ ಲಾಲಾಜಿ ಮೆಂಡನ್ ಸಹಿತ ಯಾವುದೇ ಶಾಸಕರು ಅವರ ಜನಪರ ಧ್ವನಿಗೆ ಸ್ವರ ಸೇರಿಸದಿರುವುದರಿಂದಲೇ ತಿಳಿಯುತ್ತೆ ಜನರ ಬಗ್ಗೆ ಇವರಿಗಿರುವ ಕಾಳಜಿ ಎಂದರು. ಈ ಸಂದರ್ಭ ಹೋರಾಟ ಸಮಿತಿಯ ಪ್ರಮುಖರಾದ ನವೀನ್‍ಚಂದ್ರ ಶೆಟ್ಟಿ, ರೋಲ್ಫಿ ಡಿ. ಕೋಸ್ತ, ಶೇಖರ್ ಹೆಜಮಾಡಿ, ಇಸ್ಮಾಯಿಲ್, ಲೀಡಾ ಪುಟ್ರಾಡೋ ವೇದಿಕೆಯಲ್ಲಿದ್ದರು.