ವಿದ್ಯೆ, ಬುದ್ಧಿವಂತಿಕೆ ಹಾಗೂ ಹೃದಯವಂತಿಕೆ ಸಹಿತ ಉನ್ನತ ಗುಣಗಳಿರುವ ಡಾ. ಬಿ.ಪಿ. ಸಂಪತ್ ಕುಮಾರ್ ಅವರು ಎಸ್.ಡಿ.ಎಂ. ಸಂಸ್ಥೆಗೆ ನೈಜ ಸಂಪತ್ತು ಎಂದು ಶ್ರೀ ಧ.ಮಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಎಸ್. ಸತೀಶ್ಚಂದ್ರ ಅವರು ಹೇಳಿದರು.ಉಜಿರೆ ಎಸ್.ಡಿ.ಎಂ. ಕಾಲೇಜಿನ ಕುಲಸಚಿವ (ಆಡಳಿತ) ಹಾಗೂ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಬಿ.ಪಿ. ಸಂಪತ್ ಕುಮಾರ್ ಅವರಿಗೆ
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಅತ್ಯಾಧುನಿಕ ಎಸ್.ಡಿ.ಎಂ. ಮಲ್ಟಿಮೀಡಿಯಾ ವಿಡಿಯೋ ಕಾನ್ಫರೆನ್ಸ್ ಕೊಠಡಿಯನ್ನು ಮೈಸೂರು ವಿಶ್ವವಿದ್ಯಾನಿಲಯದ ಮಾಜಿ ಉಪ ಕುಲಪತಿ ಪ್ರೊ. ಎಸ್. ಆರ್. ನಿರಂಜನ ಅವರು ಸೆ.28ರಂದು ಉದ್ಘಾಟಿಸಿದರು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು ಹಾಗೂ ರಾಜ್ಯಸಭಾ ಸದಸ್ಯರಾದ ಡಿ. ವೀರೇಂದ್ರ ಹೆಗ್ಗಡೆ ಅವರು ವೀಡಿಯೊ ಕಾನ್ಫರೆನ್ಸ್ ಲಿಂಕ್ ಕ್ಲಿಕ್ ಮಾಡುವ ಮೂಲಕ ಈ ಸೌಲಭ್ಯಕ್ಕೆ ಚಾಲನೆ ನೀಡಿದರು. ಈ ವೇಳೆ ಹೆಗ್ಗಡೆಯವರ
ರಾಜ್ಯಮಟ್ಟದ ದಸರಾ ಕ್ರೀಡಾಕೂಟದ ಪುರುಷರ ಹಾಗೂ ಮಹಿಳೆಯರ ಬಾಲ್ ಬ್ಯಾಡ್ಮಿಂಟನ್ ವಿಭಾಗದ ಪ್ರಶಸ್ತಿಯನ್ನು ಮೈಸೂರು ವಿಭಾಗವನ್ನು ಪ್ರತಿನಿಧಿಸಿದ ಮೂಡಬಿದ್ರೆ ಆಳ್ವಾಸ್ ತಂಡ ಪಡೆದುಕೊಂಡಿದೆ. ಮೈಸೂರು ವಿಶ್ವವಿದ್ಯಾನಿಲಯ ಗವಿಲ್ಯನ್ ಕ್ರೀಡಾಂಗಣದಲ್ಲಿ ನಡೆದ ದಸರಾ ಕ್ರೀಡಾಕೂಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಲೀಗ್ ಪಂದ್ಯಗಳಲ್ಲಿ ಆಳ್ವಾಸ್ ಪುರುಷರ ಹಾಗೂ ಮಹಿಳೆಯರ ತಂಡಗಳು ಕ್ರಮವಾಗಿ ಗುಲ್ಬರ್ಗ, ಬೆಳಗಾಂ , ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ
ಉಡುಪಿಯ ಆದರ್ಶ ಆಸ್ಪತ್ರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ ಹಾಗೂ ಜಿಲ್ಲಾ ಸರ್ವೇಕ್ಷಣಾ ಘಟಕ ಉಡುಪಿ ಇದರ ಆಶ್ರಯದಲ್ಲಿ ವಿಶ್ವ ಹೃದಯ ದಿನದ ಅಂಗವಾಗಿ ಬೃಹತ್ ಜಾಥಾ ನಡೆಯಿತು. ಇದರ ಉದ್ಘಾಟನಾ ಸಮಾರಂಭವು ಉಡುಪಿಯ ಜಿಲ್ಲಾಸ್ಪತ್ರೆಯಲ್ಲಿ ಜರುಗಿತ್ತು. ಈ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಉಡುಪಿ ಶಾಸಕ ಕೆ. ರಘುಪತಿ ಭಟ್, ಸಾತ್ವಿಕ ಜೀವನ ಶೈಲಿ, ಆಹಾರ ಪದ್ಧತಿಯನ್ನು ಅನುಸರಿಸುವ ಮೂಲಕ ಹೃದ್ರೋಗದ ಬಗ್ಗೆ ವೈದ್ಯರು ನೀಡಿದ
ಸುರತ್ಕಲ್ ಅಕ್ರಮ ಟೋಲ್ ಗೇಟ್ ತೆರವಿಗಾಗಿ ಅಕ್ಟೋಬರ್ 18ರಂದು ನೇರ ಕಾರ್ಯಾಚರಣೆ ಟೋಲ್ ಗೇಟ್ ಮುತ್ತಿಗೆ ಕಾರ್ಯಕ್ರಮದ ತಯಾರಿಗಾಗಿ ಮಂಗಳೂರು ನಗರ ಮಟ್ಟದ ಸಮಾನ ಮನಸ್ಕ ಸಂಘಟನೆಗಳ ಸಿದ್ದತಾ ಸಭೆಯು ನಗರದ ವುಡ್ ಲ್ಯಾಂಡ್ ಹೋಟೇಲ್ ನಲ್ಲಿ ನಡೆಯಿತು. ತಾತ್ಕಾಲಿಕ ಅವಧಿಗೆ ಆರಂಭಗೊಂಡ ಸುರತ್ಕಲ್ ಟೋಲ್ ಗೇಟ್ ಜನರ ಪ್ರಬಲ ವಿರೋಧದ ಹೊರತಾಗಿಯೂ ಏಳು ವರುಷ ಅಕ್ರಮವಾಗಿ ಪೂರೈಸಿದೆ. ಸಮಾನ ಮನಸ್ಕ ಸಂಘಟನೆಗಳ ಸಹಯೋಗದಲ್ಲಿ ನಿರಂತರ ಹೋರಾಟ ನಡೆದು ಇತ್ತೀಚೆಗೆ ಸಪ್ಟೆಂಬರ್
ನೆಲ್ಯಾಡಿ : ಸ್ವಿಫ್ಟ್ ಕಾರೊಂದರ ಬ್ಯಾಟರಿಯಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾದ ಕಾರಣ ಕಾರಿನ ಮುಂಭಾಗ ಸಂಪೂರ್ಣ ಸುಟ್ಟು ಕರಕಲಾದ ಘಟನೆ ನೆಲ್ಯಾಡಿ ಸಮೀಪದ ಗೋಳಿತೊಟ್ಟು ಸರಕಾರಿ ಶಾಲೆಯ ಬಳಿ ಸಂಭವಿಸಿದೆ. ಕಾರಿನಲ್ಲಿ ಪುತ್ತೂರು ಮೂಲದ ಗೋಕುಲದಾಸ ಹಾಗೂ ಮೆಲ್ವಿನ್ ಬೆಂಗಳೂರಿನಿಂದ ತಮ್ಮ ಊರಿಗೆ ಪ್ರಯಾಣಿಸುತ್ತಿದ್ದರು. ದುರ್ಘಟನೆಯಲ್ಲಿ ಪ್ರಯಾಣಿಕರಿಬ್ಬರೂ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ನೆಲ್ಯಾಡಿ ಹೊರಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಬೈಂದೂರಿನ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ವತಿಯಿಂದ 49ನೇ ವರ್ಷದ ಶ್ರೀ ಶಾರದೋತ್ಸವ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿತ್ತು.ಈ ಪುಣ್ಯ ಕಾರ್ಯಕ್ಕೆ ಬೈಂದೂರು ಭಾಗದ ಸಾರ್ವಜನಿಕರು ಪಾಲ್ಗೊಂಡು ಶ್ರೀದೇವಿ ಕೃಪಾಕಟಾಕ್ಷಕ್ಕೆ ಹಾಜರಿದ್ದು ಇನ್ನು ಮೂರು ದಿನ ನಡೆಯುವ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಕ್ಕೆ ಉತ್ಸವದಿಂದ ಪಾಲ್ಗೊಂಡು ಸೇವೆಯಲ್ಲಿ ನಿರತರಾಗಿದ್ದಾರೆ. ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ ನೆಲ್ಯಾಡಿ,
ಸುಳ್ಯ:ಪ್ರಾಕೃತಿಕ ವಿಕೋಪದಲ್ಲಿ ನಷ್ಟ ಆದವರಿಗೆ ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟು 76.84 ಲಕ್ಷ ರೂ ಪರಿಹಾರ ಬಿಡುಗಡೆಯಾಗಿದೆ. ಪ್ರಾಕೃತಿಕ ವಿಕೋಪದ ಹೆಸರಲ್ಲಿ ಕಾಂಗ್ರೆಸ್ ಕೀಳು ಮಟ್ಟದ ರಾಜಕೀಯ ಮಾಡುತ್ತಿದೆ ಎಂದು ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರ ಹೇಳಿದ್ದಾರೆ. ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಾಕೃತಿಕ ವಿಕೋಪಕ್ಕೆ ಪರಿಹಾರ ನೀಡಲಾಗಿಲ್ಲ ಎಂಬ ಕಾಂಗ್ರೆಸ್ ಮುಖಂಡರ ಹೇಳಿಕೆ ಸತ್ಯಕ್ಕೆ
ಸುರತ್ಕಲ್ ಸಮೀಪದ ಮುಕ್ಕದಲ್ಲಿ ಕೆಎಂಎಫ್ ವತಿಯಿಂದ ನೂತನವಾಗಿ ನಿರ್ಮಿಸಿದ ನಂದಿನಿ ಮೂ ಕೆಫೆ ಉದ್ಘಾಟನೆಗೊಂಡಿತ್ತು. ಮುಕ್ಕದಲ್ಲಿ ನೂತನವಾಗಿ ನಿರ್ಮಿಸಿದ ನಂದಿನಿ ಮೂ ಕೆಫೆಯನ್ನು ಕರ್ನಾಟಕ ಹಾಲು ಮಹಾ ಮಂಡಳಿ ಇದರ ವ್ಯವಸ್ಥಾಪಕ ನಿದೇಶಕರಾದ ಬಿ.ಸಿ ಸತೀಶ್ ಅವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದ್ರು. ತದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಎರಡು ಕೇಂದ್ರ ಮುಕ್ಕ ಮತ್ತು ಹೊಸಬೆಟ್ಟಿನಲ್ಲಿ
ಪುತ್ತೂರು : ಅತಿವೃಷ್ಠಿಯಿಂದ ಅಡಿಕೆ ಬೆಳೆಗೆ ಉಂಟಾದ ಹಾನಿಗೆ ಪರಿಹಾರ ಮತ್ತು ಕೇಂದ್ರ ಸರಕಾರ ಜಾರಿಗೆ ತಂದ ಮೂರು ಕೃಷಿ ಕಾನೂನು ರಾಜ್ಯದಲ್ಲಿ ಇನ್ನೂ ಜಾರಿಯಲ್ಲಿದ್ದು, ಅವುಗಳನ್ನು ತಕ್ಷಣವೇ ರದ್ದುಗೊಳಿಬೇಕೆಂದು ಆಗ್ರಹಿಸಿ ರೈತಸಂಘ,ಹಸಿರು ಸೇನೆಯಿಂದ ಪುತ್ತೂರು ಮಿನಿ ವಿಧಾನ ಸೌಧ ಮುಂಭಾಗದಲ್ಲಿ ಪ್ರತಿಭಟಮೆ ನಡೆಯಿತು. ರೈತಸಂಘದ ಕಛೇರಿಯಿಂದ ಮೆರವಣಿಗೆ ಮೂಲಕ ಹೊರಟ ರೈತಸಂಘದ ಕಾರ್ಯಕರ್ತರು ಪುತ್ತೂರು ಮಿನಿ ವಿಧಾನಸೌಧದ ಮುಂದೆ ಸೇರಿ ಪ್ರತಿಭಟನೆ ನಡೆಸಿದರು. ಈ




























