ಮಂಗಳೂರಿನ ಬೋಂದೆಲ್‍ನಲ್ಲಿರುವ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರವೇಶಕ್ಕೆ ಸಂಬಂಧಿಸಿದಂತೆ ಪ್ರಥಮ ಸೆಮಿಸ್ಟರ್ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪಾಲಿಟೆಕ್ನಿಕ್‍ಗಳಲ್ಲಿ ಪ್ರವೇಶ ಪಡೆಯಲು ಅವಧಿಯನ್ನು ವಿಸ್ತರಿಸಿದ್ದಾರೆ. ಸಂಸ್ಥೆಗಳ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯ ಮೇರೆಗೆ ಪ್ರಥಮ ಸೆಮಿಸ್ಟರ್‍ನಲ್ಲಿ ಭರ್ತಿ ಆಗದ
ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕಬ್ಬಳ್ಳಿ ಗ್ರಾಮದ ಮಹೇಶ್ ಎಂಬುವರ ಜಮೀನಿನಲ್ಲಿ ನೀರು ಇಲ್ಲದ ಬಾವಿಯಲ್ಲಿ ಗಂಡು ಜಿಂಕೆಯೊಂದು ಬಿದ್ದಿದ್ದ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಜಿಂಕೆಯನ್ನು ರಕ್ಷಣೆ ಮಾಡಲಾಗಿದೆ. ಅರಣ್ಯ ಸಂರಕ್ಷಣಾಧಿಕಾರಿ ಬಂಡೀಪುರ ಹುಲಿ ಯೋಜನೆಯ ಡಾ. ರಮೇಶ್ ಕುಮಾರ್ ರವರ ಮಾರ್ಗದರ್ಶನದಂತೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ. ರವೀಂದ್ರರವರ ನೇತೃತ್ವದಲ್ಲಿ..ವಲಯ ಅರಣ್ಯ ಅಧಿಕಾರಿ ಡಾ. ಲೋಕೇಶ್ ಹಾಗೂ ಪಶು ವೈದ್ಯರಾದ
ಪುತ್ತೂರು: ರಮಾನಾಥ ರೈ ಅವರ ಶಾಸಕರಾಗಿ, ಸಚಿವರಾಗಿ ಹಲವಾರು ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡಿದ್ದು, ಅವರ ಮಾರ್ಗದರ್ಶನ, ಸೇವೆಗಳು ಇನ್ನೂ ರಾಜ್ಯಕ್ಕೆ ಬೇಕಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷರಾದ ಮಾಜಿ ಶಾಸಕ ಮಧು ಬಂಗಾರಪ್ಪ ಹೇಳಿದರು. ಅವರು ಪೆರ್ನೆ ಎ.ಎಂ. ಅಡಿಟೋರಿಯಂನಲ್ಲಿ ಬೆಳ್ಳಿಪ್ಪಾಡಿ ರಮಾನಾಥ ರೈ ಹುಟ್ಟು ಹಬ್ಬ ಅಭಿನಂದನಾ ಸಮಿತಿ , ಯುವ ಕಾಂಗ್ರೆಸ್ ವಿಟ್ಲ-ಉಪ್ಪಿನಂಗಡಿ ಮತ್ತು ವಲಯ ಕಾಂಗ್ರೆಸ್ ಪೆರ್ನೆ ಇವುಗಳ ನೇತೃತ್ವದಲ್ಲಿ ರಮಾನಾಥ ರೈ ಅವರ 71ನೆಯ
ಮುತ್ತೂಟ್ ಮಿನಿ ಫೈನಾನ್ಸಿಯರ್ಸ್ ಲಿಮಿಟೆಡ್ : ಶಾಲಾ ಮಕ್ಕಳಿಗೆ ಉಚಿತ ಶಾಲಾ ಬ್ಯಾಗ್ ವಿತರಣೆ ಸುಳ್ಯ ತಾಲೂಕು ಬೆಳ್ಳಾರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದರ್ಖಾಸ್ತು ಇಲ್ಲಿ ಮುತ್ತೂಟ್ ಮಿನಿ ಫೈನಾನ್ಸಿಯರ್ಸ್ ಲಿಮಿಟೆಡ್ಇದರ ವತಿಯಿಂದ ಶಾಲಾ ಮಕ್ಕಳಿಗೆ ಉಚಿತ ಶಾಲಾ ಬ್ಯಾಗ್ ವಿತರಿಸುವ ಕಾರ್ಯಕ್ರಮ "ಬ್ಯಾಗ್ ಆಫ್ ಜಾಯ್" ಜರಗಿತು. ಸುಮಾರು 100 ವರ್ಷಗಳ ಅನುಭವ ಹೊಂದಿರುವ ಭಾರತದ ಕೆಲವೇ ಕೆಲವು ಕಂಪನಿಗಳಲ್ಲಿ ಮುತ್ತೂಟ್ ಮಿನಿ ಕೂಡ ಒಂದು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರ ಮೊಬೈಲ್ ನಂಬರ್ ಹ್ಯಾಕ್ ಆಗಿದ್ದು,8590710748 ಮೊಬೈಲ್ ನಂಬರ್ ನಿಂದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರ ಹೆಸರು ಹಾಗೂ ಫೋಟೋ ಬಳಸಿ ವಾಟ್ಸ್ ಅಪ್ ಮೂಲಕ ಸಂದೇಶ ಕಳುಹಿಸಿ ಅಪರಿಚಿತರು ಸಹಾಯ ಅಥವಾ ಹಣವನ್ನು ವರ್ಗಾಯಿಸಲು ಕೇಳಬಹುದು. ಆ ನಂಬರ್ ಜಿಲ್ಲಾಧಿಕಾರಿಯವರದ್ದಾಗಿರುವುದಿಲ್ಲ ಆದಕಾರಣ ಯಾರೂ ಕೂಡ ಯಾವುದೇ ರೀತಿಯಲ್ಲಿ ಸಹಾಯ ಅಥವಾ ಹಣವನ್ನು ಆ ನಂಬರ್ ಗೆ ವರ್ಗಾಯಿಸದಂತೆ ಜಿಲ್ಲಾಧಿಕಾರಿ ಡಾ.
ಒಂದು ಕುಟುಂಬ ಸಂತೋಷದಿoದ ಜೀವನ ಸಾಗಿಸಬೇಕಾದರೆ ಆ ಕುಟುಂಬದ ಎಲ್ಲರೂ ಸಾಕ್ಷರಸ್ಥರಾಗಿರಬೇಕು. ಅರಿವು, ಶಿಕ್ಷಣ, ಮಾಹಿತಿಯೇ ಸಾಕ್ಷರತೆ. ಸಾಕ್ಷರತೆಯಿಂದ ಮಾತ್ರ ಸ್ವಾವಲಂಭಿ ಬದುಕನ್ನು ನಡೆಸಬಹುದು ಎಂದು ಜಿಲ್ಲಾ ಸ್ವಚ್ಛತಾ ರಾಯಭಾರಿ ಹಾಗೂ ಜನಶಿಕ್ಷಣ ಟ್ರಸ್ಟ್ ನ ನಿರ್ದೇಕರಾದ ಶೀನ ಶೆಟ್ಟಿ ಅಭಿಪ್ರಾಯಪಟ್ಟರು.ಅವರು ಬುಧವಾರ ಸೈಂಟ್ ಜೋಕಿಮ್ಸ್ ಸಭಾಭವನದಲ್ಲಿ ಲೋಕ ಶಿಕ್ಷಣ ನಿರ್ದೇಶನಾಲಯ, ದ.ಕ.ಜಿ.ಪಂ.ಮoಗಳೂರು, ಜಿಲ್ಲಾ ಸಾಕ್ಷರತಾ ಸಮಿತಿ, ತಾಲೂಕು ಪಂಚಾಯಿತಿ ಕಡಬ
ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಸಮೀಪ ತಂದೆ ಮಗನಿಗೆ ಡಿಕ್ಕಿಯಾಗಿ ತಂದೆಯ ಸಾವಿಗೆ ಕಾರಣವಾಗಿ ಪರಾರಿಯಾಗಿದ್ದ ಲಾರಿಯನ್ನು ಕಾಪು ಸರ್ಕಲ್ ಇನ್ಸ್ ಪೆಕ್ಟರ್ ಪೂವಯ್ಯ ಹಾಗೂ ಪಡುಬಿದ್ರಿ ಎಸ್ಸೈ ಪುರುಷೋತ್ತಮ ತಂಡದ ತ್ವರಿತ ಕಾರ್ಯಚರಣೆಯಿಂದ ಮೂಡಬಿದರೆ ಬಳಿ ತಡೆದು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದು ಸಾರ್ವಜನಿಕ ವಲಯದಲ್ಲಿ ಬಾರೀ ಪ್ರಶಂಸೆಗೆ ಪಾತ್ರರಾಗಿದ್ದಾರೆ.ಬೆಳಗಾವಿಯಿಂದ ಬಸ್ಸಿನಲ್ಲಿ ಬಂದು ಬಸ್ಸಿಳಿದು ರಸ್ತೆ ಬದಿಯಲ್ಲಿ
50 ಅಡಿ ಆಳದ ಪಾಳು ಬಾವಿಗೆ ಯುವತಿಯೊಬ್ಬಳು ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಗಂಭೀರ ಗಾಯಗೊಂಡ ಘಟನೆ ಅಳಿಕೆ ಗ್ರಾಮದ ಮೂಡಾಯಿಬೆಟ್ಟು ಎಂಬಲ್ಲಿ ನಡೆದಿದೆ. ಬಾವಿಯೊಳಗೆ ನರಳಾಡುತ್ತಿದ್ದ ಯುವತಿಯ ನರಳಾಟ ಕೇಳಿದ ಸ್ಥಳೀಯರು ತಕ್ಷಣ ಫ್ರೆಂಡ್ಸ್ ವಿಟ್ಲ ತಂಡದ ಮುರಳೀಧರ ಇವರನ್ನು ಸಂಪರ್ಕಿಸಿದ್ದು, ತಕ್ಷಣ ಸ್ಪಂದಿಸಿದ ಮುರಳೀ ವಿಟ್ಲ ಮತ್ತು ತಂಡದವರು ಯುವತಿಯನ್ನು ಮೇಲಕ್ಕೆತ್ತಿ ರಕ್ಷಿಸಿದ್ದಾರೆ. ಬಳಿಕ ಗಂಭೀರ ಗಾಯಗೊಂಡ ಯುವತಿಯನ್ನು ಮಂಗಳೂರಿನ ದೇರಳಕಟ್ಟೆ ಖಾಸಗಿ
ವಿಟ್ಲ: ಕುಡಿತದ ಮತ್ತಿನಲ್ಲಿ ತಮ್ಮನೋರ್ವ ಅಣ್ಣನನ್ನು ಹೊಡೆದು ಕೊಲೆ ನಡೆಸಿದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ವಿಟ್ಲ ಪಡ್ನೂರು ಗ್ರಾಮದ ಕೊಡಂಗೆ ಎಂಬಲ್ಲಿ ನಡೆದ ಬಗ್ಗೆ ವರದಿಯಾಗಿದ್ದು, ಘಟನಾ ಸ್ಥಳಕ್ಕೆ ಎಎಸ್ಪಿ ಕುಮಾರ ಚಂದ್ರರವರು ಭೇಟಿ ನೀಡಿದ್ದಾರೆ. ವಿಟ್ಲ ಪಡ್ನೂರು ಗ್ರಾಮದ ಕೊಡಂಗೆ ದಿ. ಸೀನಪ್ಪ ದೇವಾಡಿಗರವರ ಪುತ್ರ ಗಣೇಶ್ ಬಂಗೇರ(54) ಮೃತದುರ್ದೈವಿಯಾಗಿದ್ದಾರೆ. ಮೃತರ ಸಹೋದರ ಪದ್ಮನಾಭ ಬಂಗೇರ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಸಹೋದರರಿಬ್ಬರಿರೂ
ಬಸ್ಸಿನಿಂದ ಎಸೆಯಲ್ಪಟ್ಟು ತೀವ್ರ ಗಾಯಗೊಂಡು ಮೆದುಳು ಡೆಡ್ ಆಗಿರುವ ಪಿಯುಸಿ ವಿದ್ಯಾರ್ಥಿಯ ಅಂಗಾಂಗ ದಾನ ಮಾಡಲಾಗಿದೆ. ಮಂಗಳೂರಿನ ಉಳ್ಳಾಲದ ಯಶರಾಜ್ (18) ಎಂಬ ಯುವಕ ವಾರದ ಹಿಂದೆ ಬಸ್ಸಿನಲ್ಲಿ ಬರುತ್ತಿದ್ದಾಗ ಕೆಳಕ್ಕೆ ಬಿದ್ದು ಗಾಯಗೊಂಡಿದ್ದ. ಮಂಗಳೂರಿ ಇಂಡಿಯಾನ ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದ ಯುವಕನ ಮೆದುಳು ನಿಷ್ಕ್ರಿಯ ಆಗಿರುವ ಬಗ್ಗೆ ವೈದ್ಯರು ನಿನ್ನೆ ಕುಟುಂಬಸ್ಥರಿಗೆ ತಿಳಿಸಿದ್ದು ಅಂಗಾಂಗ ದಾನಕ್ಕೆ ಸಲಹೆ ಮಾಡಿದ್ದರು. ಮಗನ ಅಗಲಿಕೆಯ




























