ಬ್ರಹ್ಮಾವರ : ಕೆಸರು ಗದ್ದೆಯಲ್ಲಿ ಒಂದು ದಿನ

ಬ್ರಹ್ಮಾವರದ ಶ್ರೀ ವೇಣುಗೋಪಾಲಕೃಷ್ಣ ಯುವಕ ಸಂಘ ಮೂಡುಕೇರಿ ಬಾರ್ಕೂರು, ಸೋಮ ಕ್ಷತ್ರಿಯ ಗಾಣಿಗ ಸಮಾಜ, ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ಸಂಘ, ಜಿಲ್ಲಾ ಗಾಣಿಗ ಯುವ ಸಂಘಟನೆ ಉದ್ಯಾವರ, ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕೆಸರು ಗದ್ದೆಯಲ್ಲಿ ಒಂದು ದಿನ ಕಾರ್ಯಕ್ರಮವು ದೇವಸ್ಥಾನದ ಬಳಿಯ ಸುಜಾತ ಶೆಟ್ಟಿ ಅವರ ಗದ್ದೆಯಲ್ಲಿ ಜರುಗಿತು.

ಸೋಮಕ್ಷತ್ರಿಯ ಗಾಣಿಗೆ ಸಮಾಜದ ಅಧ್ಯಕ್ಷ ಸೂರ್ಯನಾರಾಯಣಗಾಣಿಗ ಮಟಪಾಡಿ ಮತ್ತು ಗಣ್ಯರು ಗದ್ದೆಗೆ ಹಾಲು ಸಮರ್ಪಿಸಿ ಹಲವಾರು ಕ್ರೀಡೆಗಳಿಗೆ ಚಾಲನೆ ನೀಡಿದರು. ವಾಲಿಬಾಲ್, ಹಗ್ಗ ಜಗ್ಗಾಟ, ಹುಲಿ ಕುಣಿತ, ಓಟದಲ್ಲಿ ಮಹಿಳೆಯರು, ಪುರುಷರು ಸೇರಿದಂತೆ ನಾನಾ ಕ್ರೀಡೆಯಲ್ಲಿ ಭಾಗವಹಿಸಿದರು.

ಇದೇ ಸಂದರ್ಭದಲ್ಲಿ ಸಮಾಜದ ಪ್ರತಿಭಾವಂತರನ್ನು ಗೌರವಿಸಲಾಯಿತು.ಈ ಸಂದರ್ಭದಲ್ಲಿ ಯುವಕ ಸಂಘದ ಅಧ್ಯಕ್ಷ ಬಾಲಕೃಷ್ಣ ಉಪ್ಪೂರು, ರಾಮಕೃಷ್ಣ ಹಾರಾಡಿ,ಯೋಗೀಶ್ ಕೊಳಗಿರಿ ಮತ್ತು ನಾನಾ ಸಂಘದ ಪಧಾಧಿಕಾರಿಗಳು ಉಪಸ್ಥಿತರಿದ್ದರು.
