ಬೈಂದೂರು ಹೇರಂಜಾಲು ಶ್ರೀ ಗುಡೇ ಮಹಾಲಿಂಗೇಶ್ವರ ದೇವಾಸ್ಥಾನ: ವಾರ್ಷಿಕ ಶ್ರೀ ಮನ್ಮಹಾ ರಥೋತ್ಸವ

ಬೆಳಿಗ್ಗೆ ಗಂಟೆ 7-00ಕ್ಕೆ, ಪ್ರಾತಃಕಾಲ ಪೂಜೆ, ನಿತ್ಯಬಲಿ, ರಥಶುದ್ಧಿ ಹೋಮ, ಶತರುದ್ರಾಭಿಷೇಕ ಶತರುದ್ರಾಭಿಷೇಕದ ಸೇವಾಕರ್ತರು : ಶ್ರೀಮತಿ ಶೀಲಾ & ಶ್ರೀ ಜಯಶೀಲ ಶೆಟ್ಟಿ ಮತ್ತು ಮಕ್ಕಳು, ಘಟಪ್ರಭಾ, ಹಾಗೂ ರಥಬಲಿ, ಕ್ಷೇತ್ರಪಾಲ ಬಲಿ ,ರಥಾರೋಹಣ, ಶ್ರೀ ಮನ್ಮಹಾರಥೋತ್ಸವ
ಮಹಾಅನ್ನಸಂತರ್ಪಣೆ ಸೇವಾಕರ್ತರು ಶ್ರೀಮತಿ ಶಾಂತ ಮತ್ತು ಶ್ರೀ ಕೃಷ್ಣ ಗಾಣಿಗ ಮತ್ತು ಮಕ್ಕಳು ಅಡಿಗಳಹಿತ್ತು, ಹೇರಂಜಾಲು.

SHREE MAHALINGEWSARA RATHOSTHWA

ಮಧ್ಯಾಹ್ನ 3ಗಂಟೆಗೆ ವಾದ್ಯಗೋಷ್ಠಿ, ಚಂಡೆವಾದನ ಸಂಜೆ 5-30ಕ್ಕೆ ವಿವಿಧ ಟ್ಯಾಬ್ಲೆಗಳ ಮೂಲಕ ಭವ್ಯ ಮೆರವಣಿಗೆ ಮೂಲಕ ‘ರಥಾವರೋಹಣ ಹಾಗೂ 8-00ಕ್ಕೆ : ಭೂತ ಬಲಿ, ಶಯನೋತ್ಸವ ಶ್ರೀ ಸಾನಿಧ್ಯದಲ್ಲಿ ಸಂಪನ್ನಗೊಂಡಿತು.

ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಎಚ್ ಜಯಶೀಲ್ ಶೆಟ್ಟಿ ಅವರು ಮಾತನಾಡಿ, ಊರಿನ ಗ್ರಾಮಸ್ಥರು ಸಹಕಾರದಿಂದ ಈ ಹಬ್ಬ ವಿಜೃಂಭಣೆಯಾಗಲು ಸಾಧ್ಯವಾಯಿತು ಎಂದು ಹೇಳಿದರು.

ದೇವಾಸ್ಥಾನ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಹೆಚ್. ಪದ್ಮನಾಭ ಮೇರ್ಟ ಅವರು ಮಾತನಾಡಿ
ವರ್ಷಂಪ್ರತಿ ನಡೆಯುವ ಈ ಜಾತ್ರೆಯು ಈ ವರ್ಷ ಬಹಳ ಅದ್ದೂರಿಯಿಂದ ನಡೆದಿದೆ ಸಹಕರಿಸಿದ ದಾನಿಗಳಿಗೆ ತುಂಬು ಹೃದಯದಿಂದ ವಂದಿಸಿದರು.

ಈ ಸಂದರ್ಭದಲ್ಲಿ ಖಜಾಂಚಿಯಾದ ಹೆಚ್. ವಿಜಯ್ ಶೆಟ್ಟಿ, ಶ್ರೀ ಗುಡೇ ಮಹಾಲಿಂಗೇಶ್ವರ ಗೆಳಯರ ಬಳಗ ಪ್ರಧಾನ ಅರ್ಚಕರಾದ ಮಂಜುನಾಥ್ ಅಡಿಗ, ಹಳೆ ವಿದ್ಯಾರ್ಥಿ ಸಂಘ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹೇರಂಜಾಲು,ಶಿ ್ರೀ ಗುಡೇ ಮಹಾಲಿಂಗೇಶ್ವರ ಭಜನಾ ಮಂಡಳಿ ಹೇರಂಜಾಲು, ಆಡಳಿತ ಮಂಡಳಿ ಸದಸ್ಯರು, ಜೀರ್ಣೋದ್ಧಾರ ಸಮಿತಿ ಸದಸ್ಯರು, ದತ್ತಿನಿಧಿ ಸದಸ್ಯರು, ದೇವಳದ ತಂತ್ರಿಗಳು, ಅರ್ಚಕರು, ಸಿಬ್ಬಂದಿಗಳು ಹಾಗೂ ಊರ ಹತ್ತು ಸಮಸ್ತ ಗ್ರಾಮಸ್ಥರು ಉಪಸ್ಥಿತರಿದ್ದರು.

byndoor

Related Posts

Leave a Reply

Your email address will not be published.