ಕರಾವಳಿ ಯಾವತ್ತೂ ಭಾಗದಲ್ಲಿ ಜಾತಿ ರಾಜಕಾರಣ ನಡೆಯುದಿಲ್ಲ : ಗುರ್ಮೆ ಸುರೇಶ್ ಶೆಟ್ಟಿ

ನಾವು ಯಾರೂ ಅರ್ಜಿ ಹಾಕಿ ಯಾವುದೇ ಜಾತಿಯಲ್ಲಿ ಹುಟ್ಟಿದವರಲ್ಲ, ನಾವು ಬರ ಬರುತ್ತಾ..ವಿಶಾಲತೆ ಮೈಗೂಡಿಸಿಕೊಳ್ಳ ಬೇಕಾಗಿದ್ದು ಸಂಕುಚಿತ ಭಾವನೆಯಿಂದ ಹೊರ ಬರ ಬೇಕಾಗಿದೆ ಎಂಬುದಾಗಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದ್ದಾರೆ.

ಅವರು ಕಾಪು ಬಿಜೆಪಿ ಕಛೇರಿಯಲ್ಲಿ ಕರೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿಯ ಚುನಾವಣೆಯಲ್ಲಿ ಜಾತಿ ಮೇಲಾಟ ಮೇಲೈಸಬಹುದೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ್ದಾರೆ. ಜನ ಜಾತಿ ನೋಡಿ ಮತ ಚಲಾಯಿಸಿದ್ದರೆ ನಾನು ಶಾಸಕನಾಗಿ ಜನರ ಸೇವೆ ಮಾಡಲು ಅವಕಾಶವೇ ಸಿಗುತ್ತಿರಲಿಲ್ಲ, ಕರಾವಳಿಯಲ್ಲಿ ಯಾವತ್ತೂ ಜಾತಿ ರಾಜಕಾರಣ ನಡೆಯುದಿಲ್ಲ ಎಂದರು.

ಏ.21ಕ್ಕೆ ಬಿಜೆಪಿ ಮುಖಂಡ ಪ್ರತಾಪ ಸಿಂಹ ಕಾಪುವಿಗೆ ಆಗಮಿಸಲಿದ್ದು ಅದೇ ದಿನ ಸಂಜೆ ಕಾಪು ಜನಾರ್ದನ ದೇವಸ್ಥಾನದಿಂದ ಕಾಪು ಪೇಟೆಯವರಗೆ ರೋಡ್ ಶೋ ನಡೆಯಲಿದೆ ಎಂದರು.
ಇದೇ ಸಂದರ್ಭ ಕಾಂಗ್ರೆಸ್ ಕಾರ್ಯಕರ್ತ ದಿನಕರ್ ಪಾಂಗಾಳ ಇವರನ್ನು ಶಾಸಕರು ಪಕ್ಷದ ಧ್ವಜ ನೀಡಿ ಪಕ್ಷಕ್ಕೆ ಸೇರಿಸಿಕೊಂಡರು.
ಸುದ್ಧಿಗೋಷ್ಠಿಯಲ್ಲಿ ಜೀತೇಂದ್ರ ಶೆಟ್ಟಿ ಉದ್ಯಾವರ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಮುರಳಿಧರ ಪೈ, ಕೃಷ್ಣ ರಾವ್, ಸೋನು ಪಾಂಗಾಳ ಉಪಸ್ಥಿತರಿದ್ದರು.

Related Posts

Leave a Reply

Your email address will not be published.