Home ಕರಾವಳಿ Archive by category ಬೆಳ್ತಂಗಡಿ (Page 32)

ಔಟ್‌ಲುಕ್ ಸಮೀಕ್ಷೆಯಲ್ಲೂ ಎಸ್.ಡಿ.ಎಂ.ಗೆ ಉತ್ಕೃಷ್ಟ ಸ್ಥಾನ

ರಾಷ್ಟ್ರಮಟ್ಟದ ಜನಪ್ರಿಯ ನಿಯತಕಾಲಿಕೆ ‘ಔಟ್‍ಲುಕ್’ ಇತ್ತೀಚೆಗೆ ನಡೆಸಿದ ರಾಷ್ಟ್ರಮಟ್ಟದ ಅತ್ಯುತ್ತಮ ಕಾಲೇಜುಗಳ ಸಮೀಕ್ಷೆಯಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಗೆ ವಿವಿಧ ವಿಭಾಗಗಳಿಗೆ ಉತ್ಕøಷ್ಟ ಮನ್ನಣೆ ಲಭ್ಯವಾಗಿದೆ. ಸಮೀಕ್ಷೆಯಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗಕ್ಕೆ ರಾಷ್ಟ್ರಮಟ್ಟದಲ್ಲಿ 18ನೇ ಸ್ಥಾನ ಲಭ್ಯವಾಗಿದ್ದು, ಬಿಸಿಎಗೆ

ಉದ್ಯೋಗಕ್ಕಾಗಿ ನಿರೀಕ್ಷಿಸಬೇಡಿ – ನೀವೇ ಉದ್ಯೋಗಗಳನ್ನು ಸೃಷ್ಟಿಸಿ : ಅಬ್ದುಲ್ಲ ಮಡುಮೂಲೆ

“ನೀವು ಶ್ರೀಮಂತರಾಗಬೇಕೆಂಬ ಧ್ಯೇಯ ಹೊಂದಿದ್ದರೆ ಬೇರೆಯವರಿಗಾಗಿ ದುಡಿಯಬೇಡಿ. ನಿಮ್ಮ ಅಭಿವೃದ್ಧಿಗಾಗಿಯಷ್ಟೇ ಶ್ರಮ ಪಡಿ. ನಿಮ್ಮ ಕನಸುಗಳನ್ನು ಸಾಕಾರಮಾಡಿಕೊಳ್ಳಬೇಕಾದರೆ ಉದ್ಯೋಗಕ್ಕಾಗಿ ನಿರೀಕ್ಷೆ ಮಾಡಬೇಡಿ. ಬದಲಾಗಿ ನೀವೇ ಇತರರಿಗೆ ಉದ್ಯೋಗ ಸೃಷ್ಟಿಸಿಕೊಡುವಷ್ಟು ಪ್ರಬಲವಾಗಿ ಬೆಳೆಯಲು ನಿರ್ಧರಿಸಿ, ಅದರಂತೆಯೇ ಮುನ್ನಡೆದು ಯಶಸ್ಸು ಪಡೆಯಿರಿ” ಎಂದು ಅಬುಧಾಬಿ ಸರ್ಕಾರದ ಸೈಬರ್ ಫೌಂಡೇಶನ್ ಹಿರಿಯ ಆರ್ಥಿಕ ನಿಯಂತ್ರಣ ಅಧಿಕಾರಿಯಾದ ಸಿ. ಎ. ಅಬ್ದುಲ್ಲಾ ಮಡುಮೂಲೆ

ಮುರಿದ ಬೆಳ್ತಂಗಡಿಯ ಕನ್ನಾಜೆ-ಸವನಾಳು ಗ್ರಾಮದ ಸಂಪರ್ಕ ಸೇತುವೆ : ಕಂಗಲಾದ ಕುಟುಂಬಗಳು

ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದಿಂದ ಕನ್ನಾಜೆ, ಸವನಾಳು ಗ್ರಾಮಕ್ಕೆ ಸಂಪರ್ಕ ಸೇತುವೆಯ ಬಜಕ್ರೆ ಸಾಲು ಎಂಬಲ್ಲಿ ಸೇತುವೆ ಮುರಿದು ಹೋಗಿದ್ದು ನೂರಾರು ಕುಟುಂಬಗಳು ದಾರಿ ಕಾಣದೆ ಕಂಗಾಲಾಗಿದ್ದಾರೆ. ಈ ರಸ್ತೆ ಈಗಾಗಲೇ ಗ್ರಾಮ ಸಡಕ್ ರಸ್ತೆಯಾಗಿ ಮಂಜೂರು ಗೊಂಡಿದ್ದು ಈಗಾಗಲೇ ಕಾಮಗಾರಿ ಪ್ರಾರಂಭವಾಗಿದೆ. ಆದರೆ ಬಜಕ್ರೆ ಸಾಲು ಎಂಬಲ್ಲಿ ಹೊಸ ಸೇತುವೆ ಆಗುವ ಮೊದಲೇ ಹಳೇ ಸೇತುವೆ ತೆರವು ಮಾಡಿದ್ದೇ ಈ ಅವಾಂತರಕ್ಕೆ ಕಾರಣವಾಗಿದೆ. ಇದಕ್ಕೆ ಮೊದಲು ಸುಮಾರು ಮೂರು ಸಲ

ಹಿರಿಯ ವಿದ್ಯಾರ್ಥಿಗಳು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಹೆಮ್ಮೆಯ ಪಾಲುದಾರರು – ಡಾ. ಬಿ. ಯಶೋವರ್ಮ

ಎಸ್.ಡಿ.ಎಂ-ನ ಜಾಗತಿಕ ಮಟ್ಟದ ಹಿರಿಯ ವಿದ್ಯಾರ್ಥಿಗಳ ವೆಬಿನಾರ್ ಸರಣಿಗೆ ಚಾಲನೆಎಸ್.ಡಿ.ಎಂ ಸಂಸ್ಥೆ ಕೌಶಲ್ಯಯುತ ವಿದ್ಯಾರ್ಥಿಗಳು, ಸಂಶೋಧಕರು, ಅನ್ವೇಷಕರು ಹಾಗೂ ಚಿಂತನಶೀಲ ವ್ಯಕಿತ್ವಗಳನ್ನು ಸೃಷ್ಟಿಸುತ್ತದೆ. ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ಸಂಘ ಅದಕ್ಕೆ ಪೂರಕ ಶಕ್ತಿಯಾಗಬೇಕು. ನಮ್ಮೆಲ್ಲಾ ವಿದ್ಯಾರ್ಥಿಗಳ ಏಳಿಗೆ ಮತ್ತು ಸಾಧನೆಯ ಸಾಕ್ಷಿಗಳಾಗಬೇಕು ಎಂದು ಡಾ.ಬಿ ಯಶೋವರ್ಮ ಕರೆ ನೀಡಿದರು. ಅವರು ಇತ್ತೀಚೆಗೆ ಉಜಿರೆಯ ಎಸ್.ಡಿ.ಎಂ ಸ್ವಾಯತ್ತ ಕಾಲೇಜಿನ ಹಳೆ

ಆಕಾಶ ಅದ್ಭುತಗಳ ಆಗರ -ಪ್ರೊಫೆಸರ್ ರಮೇಶ್ ಭಟ್

ವಿವಿಧ ವಿಸ್ಮಯಗಳಿಗೆಆಕಾಶ ಸಾಕ್ಷಿಯಾಗುತ್ತದೆ. ಆಕಾಶದ ಬಗ್ಗೆ ಆಳವಾಗಿ ತಿಳಿಯುತ್ತಾ ಹೋದಂತೆ ಅವು ಸೃಷ್ಟಿಸುವ ಅದ್ಭುತಗಳನ್ನು ತಿಳಿದುಕೊಳ್ಳಬಹುದುಎಂದು ತಜ್ಞರಾದಪ್ರೊಫೆಸರ್‍ರಮೇಶ್ ಭಟ್ ಹೇಳಿದರು.ಅವರುಉಜಿರೆಯಎಸ್‍ಡಿಎಂಕಾಲೇಜಿನ ಭೌತಶಾಸ್ತ್ರ ವಿಭಾಗ ಆಯೋಜಿಸಿದ ವಂಡರ್‍ಆಫ್ ಸ್ಕೈಎಂಬ ವಿಷಯದವೆಬಿನಾರ್‍ಕಾರ್ಯಕ್ರಮದಲ್ಲಿ ಮಾತನಾಡಿದರು. ಆಕಾಶವು ನಮ್ಮದೃಷ್ಟಿಕೋನದಲ್ಲಿ ಭೂಮಿಯ ಮೇಲ್ಮೈಯ ಮೇಲೆ ಕಾಣುವ ವಾತಾವರಣ.ಸೂರ್ಯ, ಚಂದ್ರ ಮತ್ತು ನಕ್ಷತ್ರ ಮೊದಲಾದವುಗಳನ್ನು

ಸಕಲೇಶಪುರದ ದೋಣಿಗಾಲ್ ಎಂಬಲ್ಲಿ ಭೂಕುಸಿತ:ಗುಂಡ್ಯ ಚೆಕ್ ಪೋಸ್ಟ್‌ನಲ್ಲಿ ವಾಹನಗಳಿಗೆ ತಡೆ

ಗುಂಡ್ಯ: ಎಡೆಬಿಡದೆ ಸುರಿದ ಭಾರಿ ಮಳೆಯಿಂದಾಗಿ ಸಕಲೇಶಪುರ ತಾಲೂಕಿನ ದೋಣಿಗಾಲ್ ಬಳಿಯ ರಾಷ್ಟ್ರೀಯ ಹೆದ್ದಾರಿ 75 ಬಳಿ ಭೂಕುಸಿತವಾಗಿದೆ. ಬೆಂಗಳೂರು ಹಾಗೂ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದೆ. ಪ್ರಸಿದ್ದ ಪುಣ್ಯ ಕ್ಷೇತ್ರಗಳಾದ ಕುಕ್ಕೆ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳ, ಸೌತ್ತಡ್ಕ ಕ್ಷೇತ್ರಕ್ಕೆ ಭೇಟಿ ನೀಡುವ ವಾಹನದ ಚಾಲಕರು ಪರಾಡುತ್ತಿರುವ ಮಾಹಿತಿ ಲಭಿಸಿದೆ. ಇನ್ನು ಮುಂಜಾಗೃತವಾಗಿ ಗುಂಡ್ಯ ಚೆಕ್ ಪೋಸ್ಟ್ ಗಳಲ್ಲಿಯೇ ವಾಹನಗಳಿಗೆ ತಡೆ

‘ಪಾಡ್‍ಕಾಸ್ಟ್’ – ಮಾಹಿತಿ ತಂತ್ರಜ್ಞಾನದ ಹೊಸ ಆಯಾಮ

ಪಾಡ್‍ಕಾಸ್ಟ್ ಮಾಧ್ಯಮ ವೇದಿಕೆ ಜಾಗತಿಕ ಮಟ್ಟದಲ್ಲಿ ದೊಡ್ಡ ವ್ಯವಸ್ಥೆಯಾಗಿ ಹೊರಹೊಮ್ಮುತ್ತಿದ್ದು, ಮಾಹಿತಿ ತಂತ್ರಜ್ಞಾನಕ್ಕೆ ಒಂದು ಹೊಸ ಆಯಾಮವನ್ನು ನೀಡಿದೆ ಎಂದು ಹಿರಿಯ ಪತ್ರಕರ್ತ ಶರತ್ ಹೆಗ್ಡೆ ಕಡ್ತಲ ಹೇಳಿದರು. ಇಲ್ಲಿನ ಎಸ್.ಡಿ.ಎಮ್ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಆಯೋಜಿಸಿದ್ದ ‘ಧ್ವನಿ ಮಾಧ್ಯಮ – ಅಂಗೈಯಲ್ಲಿ ಅವಕಾಶ’ ಮತ್ತು ‘ಅರವಿನ ಅರಮನೆ ಪಾಡ್‍ಕಾಸ್ಟ್ ಉದ್ಘಾಟನೆ’ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾಗಿ

ಬೆಳ್ತಂಗಡಿಯಲ್ಲಿ ಬಿಜೆಪಿ ಮಂಡಲದಿಂದ ವಿಶೇಷ ಕಾರ್ಯಕಾರಿಣಿ ಸಭೆ

ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ವಿಶೇಷ ಕಾರ್ಯಕಾರಿಣಿ ಸಭೆ ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾ ಭವನದಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜಾ ರವರು ಕೋವಿಡ್ನ 2 ನೆ ಅಲೆಯನ್ನು ಸಮರ್ಪಕವಾಗಿ ನಿಯಂತ್ರಿಸುವ ದೇಶ ಅಂದರೆ ಅದು ನರೇಂದ್ರ ಮೋದಿ ಸರಕಾರದ ಭಾರತ ದೇಶ, ಕರ್ನಾಟಕದಲ್ಲಿ ಮುಖ್ಯ ಮಂತ್ರಿ ಯಡಿಯೂರಪ್ಪ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಅಲ್ಲದೆ ಬರೀ ಮೂರು ವರ್ಷದಲ್ಲಿ ಬೆಳ್ತಂಗಡಿ

ಉಜಿರೆಯಲ್ಲಿ ವಾಹನ ತಪಾಸಣೆ ವೇಳೆ ನಿಯಂತ್ರಣ ಕಳೆದುಕೊಂಡ ಸ್ಕೂಟರ್ ಸವಾರ

ಬೆಳ್ತಂಗಡಿ ಸಂಚಾರಿ ಪೊಲೀಸರ ಅವಾಂತರದಿಂದಾಗಿ ಸ್ಕೂಟರ್ ನಿಯಂತ್ರಣ ಕಳೆದುಕೊಂಡು ಸ್ಕಿಡ್ ಆಗಿ ಕಾರಿಗೆ ಢಿಕ್ಕಿಯಾದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಬೆಳ್ತಂಗಡಿ ಸಂಚಾರ ಠಾಣಾ ವ್ಯಾಪ್ತಿಯ ಉಜಿರೆಯ ಸಿದ್ದವನ ತಿರುವಿನಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಏಕಾ ಏಕಿ ವಾಹನಗಳನ್ನು ತಪಾಸಣೆ ಮಾಡಲು ನಿಲ್ಲಿಸಿದ್ದರಿಂದ ಸ್ಕೂಟರ್ ಹಠಾತ್ತನೆ ಬ್ರೇಕ್ ಹಾಕಿದಾಗ ಮಳೆಯಿಂದಾಗಿ ನಿಯಂತ್ರಣ ಕಳೆದುಕೊಂಡು ಸ್ಕೂಟರ್ ಸ್ಕಿಡ್ ಆಗಿ ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ

‘ಇಂಡಿಯಾ ಟುಡೇ’ ನಿಯತಕಾಲಿಕೆ ರಾಷ್ಟ್ರೀಯ ಸಮೀಕ್ಷೆ : ಉಜಿರೆಯ ಎಸ್.ಡಿ.ಎಂ ಕಾಲೇಜಿಗೆ ವಿಶೇಷ ಮನ್ನಣೆ

ಉಜಿರೆ : ರಾಷ್ಟ್ರ ಮಟ್ಟದ ಪ್ರಸಿದ್ಧ ‘ಇಂಡಿಯಾ ಟುಡೇ’ ನಿಯತಕಾಲಿಕೆಯು ಶೈಕ್ಷಣಿಕ ಕೋರ್ಸ್‍ಗಳ ನಿರ್ವಹಣಾ ಸಾಧನೆಯ ಅಂಶಗಳನ್ನು ಪರಿಗಣಿಸಿ ಇತ್ತೀಚೆಗೆ ನಡೆಸಿದ ರಾಷ್ಟ್ರೀಯ ಅತ್ಯುತ್ತಮ ಕಾಲೇಜುಗಳ ಸಮೀಕ್ಷೆಯಲ್ಲಿ ಉಜಿರೆಯ ಎಸ್.ಡಿ.ಎಂ ಕಾಲೇಜು ದೇಶದ ಪ್ರತಿóಷ್ಠಿತ ನೂರು ಕಾಲೇಜುಗಳ ಪಟ್ಟಿಯಲ್ಲಿ ಉನ್ನತ ಶ್ರೇಯಾಂಕ ಪಡೆದು ಮನ್ನಣೆ ಗಳಿಸಿದೆ.ರಾಷ್ಟ್ರದ ಪದವಿ ಹಾಗೂ ಸ್ನಾತಕೋತ್ತರ ಕೇಂದ್ರಗಳಲ್ಲಿನ ವಿವಿಧ ಕೋರ್ಸ್‍ಗಳ ನಿರ್ವಹಣೆ ಮತ್ತು ಸಾಧನೆಯನ್ನು ಮೌಲ್ಯಮಾಪನ ಮಾಡಲು