Home ಕರಾವಳಿ Archive by category ಬೆಳ್ತಂಗಡಿ (Page 33)

ಉಜಿರೆಯಲ್ಲಿ ವಾಹನ ತಪಾಸಣೆ ವೇಳೆ ನಿಯಂತ್ರಣ ಕಳೆದುಕೊಂಡ ಸ್ಕೂಟರ್ ಸವಾರ

ಬೆಳ್ತಂಗಡಿ ಸಂಚಾರಿ ಪೊಲೀಸರ ಅವಾಂತರದಿಂದಾಗಿ ಸ್ಕೂಟರ್ ನಿಯಂತ್ರಣ ಕಳೆದುಕೊಂಡು ಸ್ಕಿಡ್ ಆಗಿ ಕಾರಿಗೆ ಢಿಕ್ಕಿಯಾದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಬೆಳ್ತಂಗಡಿ ಸಂಚಾರ ಠಾಣಾ ವ್ಯಾಪ್ತಿಯ ಉಜಿರೆಯ ಸಿದ್ದವನ ತಿರುವಿನಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಏಕಾ ಏಕಿ ವಾಹನಗಳನ್ನು ತಪಾಸಣೆ ಮಾಡಲು ನಿಲ್ಲಿಸಿದ್ದರಿಂದ ಸ್ಕೂಟರ್ ಹಠಾತ್ತನೆ ಬ್ರೇಕ್ ಹಾಕಿದಾಗ

‘ಇಂಡಿಯಾ ಟುಡೇ’ ನಿಯತಕಾಲಿಕೆ ರಾಷ್ಟ್ರೀಯ ಸಮೀಕ್ಷೆ : ಉಜಿರೆಯ ಎಸ್.ಡಿ.ಎಂ ಕಾಲೇಜಿಗೆ ವಿಶೇಷ ಮನ್ನಣೆ

ಉಜಿರೆ : ರಾಷ್ಟ್ರ ಮಟ್ಟದ ಪ್ರಸಿದ್ಧ ‘ಇಂಡಿಯಾ ಟುಡೇ’ ನಿಯತಕಾಲಿಕೆಯು ಶೈಕ್ಷಣಿಕ ಕೋರ್ಸ್‍ಗಳ ನಿರ್ವಹಣಾ ಸಾಧನೆಯ ಅಂಶಗಳನ್ನು ಪರಿಗಣಿಸಿ ಇತ್ತೀಚೆಗೆ ನಡೆಸಿದ ರಾಷ್ಟ್ರೀಯ ಅತ್ಯುತ್ತಮ ಕಾಲೇಜುಗಳ ಸಮೀಕ್ಷೆಯಲ್ಲಿ ಉಜಿರೆಯ ಎಸ್.ಡಿ.ಎಂ ಕಾಲೇಜು ದೇಶದ ಪ್ರತಿóಷ್ಠಿತ ನೂರು ಕಾಲೇಜುಗಳ ಪಟ್ಟಿಯಲ್ಲಿ ಉನ್ನತ ಶ್ರೇಯಾಂಕ ಪಡೆದು ಮನ್ನಣೆ ಗಳಿಸಿದೆ.ರಾಷ್ಟ್ರದ ಪದವಿ ಹಾಗೂ ಸ್ನಾತಕೋತ್ತರ ಕೇಂದ್ರಗಳಲ್ಲಿನ ವಿವಿಧ ಕೋರ್ಸ್‍ಗಳ ನಿರ್ವಹಣೆ ಮತ್ತು ಸಾಧನೆಯನ್ನು ಮೌಲ್ಯಮಾಪನ ಮಾಡಲು

ಹೆಂಡತಿಯನ್ನು ಬಿಟ್ಟು ನಾದಿನಿಯೊಂದಿಗೆ ಗಂಡ ಪರಾರಿ..!! ಬೆಳ್ತಂಗಡಿ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲು.!

ಮದುವೆಯಾಗಿ ಒಂದು ವರ್ಷವಾಗುವ ಮೊದಲೇ ಹೆಂಡತಿಯನ್ನು ತೊರೆದು ನಾದಿನಿಯೊಂದಿಗೆ ಓಡಿ ಹೋದ ಘಟನೆ ಬೆಳ್ತಂಗಡಿ ತಾಲೋಕಿನ ಕನ್ಯಾನದ ಕೈಕಂಬ ಎಂಬಲ್ಲಿ ನಡೆದಿದ್ದು ಸದ್ಯ ಪ್ರಕರಣ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.ಕನ್ಯಾನದ ಮಹಮ್ಮದ್ ಎಂಬುವವರ ಪುತ್ರಿ ಸೌಧಳನ್ನು ಒಂಭಂತು ತಿಂಗಳ ಹಿಂದೆ ಪುಸ್ತಾಫಾ ಎಂಬುವವನು ಮದುವೆಯಾಗಿದ್ದ. ನಾದಿನಿ ರೈಹಾನಾಳೊಂದಿಗೆ ಮುಸ್ತಾಫಾ ಸಲುಗೆಯಿಂದ ಇದ್ದ. ಈ ನಡುವೆ ಸೌಧಳೊಂದಿಗೆ ಜಗಳವಾಡಿ ಮಾತು ಬಿಟ್ಟಿದ್ದ

ನಾಳೆಯಿಂದ ದೇಗುಲ ಓಪನ್: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸ್ಯಾನಿಟೈಸೇಷನ್ ಕಾರ್ಯ

ರಾಜ್ಯದ್ಯಾಂತ ಜುಲೈ 5ರಿಂದ ಅನ್‌ಲಾಕ್ 3.0 ಜಾರಿಯಲ್ಲಿರಲಿದ್ದು, ದೇವಾಲಯಗಳು ನಾಳೆಯಿಂದ ಓಪನ್ ಆಗಲಿದ್ದು, ಭಕ್ತರ ದರುಶನಕ್ಕೆ ಅವಕಾಶವನ್ನು ಕಲ್ಪಿಸಿ ರಾಜ್ಯ ಸರ್ಕಾರ ಆದೇಶವನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸಂಪೂರ್ಣ ಸ್ಯಾನಿಟೈಸೇಷನ್ ಕಾರ್ಯ ಮಾಡಲಾಗುತ್ತಿದೆ. ದೇವಸ್ಥಾನದ ಒಳಾಂಗಣ, ಹೊರಾಂಗಣ, ಅನ್ನಛತ್ರ, ವಸ್ತು ಸಂಗ್ರಹಾಲಯದಲ್ಲಿ ದೇವಳದ ಸಿಬ್ಬಂದಿಯಿಂದ ಸ್ಯಾನಿಟೈಸೇಷನ್ ಮಾಡಲಾಗುತ್ತಿದೆ. ನಾಳೆಯಿಂದ ಶ್ರೀ ಕ್ಷೇತ್ರ

ದೆಹಲಿಯಲ್ಲಿ ರೈತರ ಹೋರಾಟಕ್ಕೆ ಬೆಂಬಲ: ಬೆಳ್ತಂಗಡಿಯಲ್ಲಿ ರೈತ ಸಂಯುಕ್ತ ಮೋರ್ಚಾದಿಂದ ಪ್ರತಿಭಟನೆ

“ಕೃಷಿ ಉಳಿಸಿ ಪ್ರಜಾಪ್ರಭುತ್ವ ರಕ್ಷಿಸಿ” ಘೋಷಣೆಯಡಿಯಲ್ಲಿ ಭಾರತಾದ್ಯಂತ ಪ್ರತಿಭಟನೆ ನಡೆಸಿ ದೆಹಲಿಯಲ್ಲಿ ಕಳೆದ ಏಳು ತಿಂಗಳಿಂದ ನಿರಂತರವಾಗಿ ನಡೆಯುತ್ತಿರುವ ರೈತ ಹೋರಾಟ ಬೆಂಬಲಿಸಿ ಹೋರಾಟ ನಡೆಸಲು ರೈತ ಸಂಯುಕ್ತ ಮೋರ್ಚ ನೀಡಿದ ಕರೆಯಂತೆ ಬೆಳ್ತಂಗಡಿಯಲ್ಲಿ ಪ್ರತಿಭಟನೆ ನಡೆಯಿತು. ಹಿರಿಯ ಕಮ್ಯೂನಿಸ್ಟ್ ನಾಯಕ ಬಿ.ಎಂ.ಭಟ್ ಮಾತಾಡುತ್ತಾ ಕೊರೋನಾ ಸಂಕಷ್ಟದ ಲಾಕ್ ಡೌನ್ ಸಮಯದಲ್ಲಿ ರೈತ ವಿರೋದಿಯಾಗಿ ರೈತ ಪರ ಮಸೂದೆಗಳ ತಿದ್ದುಪಡಿ ಮಾಡಿದ ಬಿಜೆಪಿ

ಬೆಳ್ತಂಗಡಿಯಲ್ಲಿ ಅಕ್ರಮ ಮರಳು ಅವ್ಯವಹಾರ ಸೂಕ್ತ ತನಿಖೆ : ವಸಂತ ಬಂಗೇರರಿಂದ ಡಿಸಿಗೆ ಮನವಿ

ಬೆಳ್ತಂಗಡಿ ತಾಲೂಕಿನಲ್ಲಿ ಅಕ್ರಮ ಮರಳು ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಇದನ್ನು ಕೂಡಲೇ ತನಿಖೆ ಮಾಡುವಂತೆ ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಅವರು ಮಾಧ್ಯಮದ ಜೊತೆ ಮಾತನಾಡಿ ಬೆಳ್ತಂಗಡಿಯ ಧರ್ಮಸ್ಥಳ ಆಸು ಪಾಸು ದಿನಕ್ಕೆ ಸುಮಾರು 500 ಲೋಡಿಗಿಂತ ಅಧಿಕ ಮರಳು ಸಾಗಾಣಿಕೆ ಮೂಲಕ ಅನೇಕ ಅವ್ಯವಹಾರಗಳು ನಡೆಯುತ್ತಿದೆ. ಪರವಾನಿಗೆ ಇಲ್ಲದೆ ಮರಳು ಗಣಿಗಾರಿಕೆ ನಡೆಯುತ್ತಿದ್ದು ದೂರದ ಊರುಗಳಿಗೆ ಮರಳು ಸಾಗಣೆ

ಡಾ.ಡಿ.ವಿರೇಂದ್ರ ಹೆಗ್ಗಡೆಯವರಿಗೆ  ಏಷ್ಯಾಸ್ ಗ್ರೇಟೆಸ್ಟ್ ಲೀಡರ್ ಗೌರವ

ಪ್ರತಿಷ್ಠಿತ ಮ್ಯಾಗಝಿನ್‌ಗಳಲ್ಲಿ ಒಂದಾಗಿರುವ ’ಏಷ್ಯಾ ಒನ್’ ಕೊಡಮಾಡುವ ೨೦೨೦-೨೧ ನೇ ಸಾಲಿನ “ಏಷ್ಯಾದ ಮಾಹಾನ್ ನಾಯಕ” ಎನ್ನುವ ಬಿರುದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮಶ್ರೀ ಡಾ.ಡಿ.ವಿರೇಂದ್ರ ಹೆಗ್ಗಡೆಯವರು ಪಾತ್ರರಾಗಿದ್ದಾರೆ.   ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರ ಎಲ್ಲಾ ಕ್ಷೇತ್ರದ ಸಮಗ್ರ ಸಾಧನೆಯನ್ನು ಗುರುತಿಸಿ ’ಏಷ್ಯಾ ಒನ್’ “ಏಷ್ಯಾಸ್ ಗ್ರೇಟೆಸ್ಟ್ ಲೀಡರ್-2020-21” ಎನ್ನುವ

ಅರ್ಚಕರಿಗೆ ಹಾಗೂ ಆಶಾ ಕಾರ್ಯಕರ್ತರಿಗೆ ಆಹಾರ ಸಾಮಾಗ್ರಿ ವಿತರಣೆ : ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ

ಬೆಳ್ತಂಗಡಿಯಲ್ಲಿ ಧಾರ್ಮಿಕ ಪರಿಷತ್ ಹಾಗೂ ಧಾರ್ಮಿಕ ದತ್ತಿ ಇಲಾಖೆಯ ತಾಲೂಕಿನ ಎಲ್ಲಾ ಅರ್ಚಕರಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ದಿನ ಬಳಕೆ ಸಾಮಗ್ರಿಗಳನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಹರೀಶ್ ಪೂಂಜಾ ರವರು ಧಾರ್ಮಿಕ ಪರಿಷತ್ ಇದರ ಬಹಳ ಮಹತ್ವಾಕಾಂಕ್ಷೆ ಯೋಜನೆ ರಾಜ್ಯದ ಎಲ್ಲಾ ಅರ್ಚಕರಿಗೆ ಈ ಕೊರೊನಾ ಸಂದರ್ಭದಲ್ಲಿ ನಾವು ಸಹಕಾರವನ್ನು ಕೊಡಬೇಕೆಂಬ ಕಳಕಳಿಯಿಂದ ಈ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಅದಕ್ಕಾಗಿ ತಾಲೂಕಿನ ಎಲ್ಲಾ

ಬೆಳ್ತಂಗಡಿಯಲ್ಲಿ ಕೋವಿಡ್ ಸೋಂಕು ಇಳಿಮುಖ-ಶಾಸಕ ಹರೀಶ್ ಪೂಂಜಾ

ಬೆಳ್ತಂಗಡಿಯಲ್ಲಿ ಕೊರೊನಾ ಜಾಗೃತಿ ಬಗ್ಗೆ ಅಧಿಕಾರಿ ವರ್ಗದ ಸಭೆಯನ್ನು ಬೆಳ್ತಂಗಡಿಯ ಕಿನ್ಯಮ್ಮ ಸಭಾಭವನದಲ್ಲಿ ನಡೆಯಿತು. ಸಭೆಯಲ್ಲಿ ಮಾತನಾಡಿದ ಬೆಳ್ತಂಗಡಿ ತಾಲೂಕಿನ ಶಾಸಕರಾದ ಹರೀಶ್ ಪೂಂಜಾ ಈಗಾಗಲೇ ಬೆಳ್ತಂಗಡಿಯಲ್ಲಿ ಕೊರೊನಾ ಸಂಖ್ಯೆ ಕಡಿಮೆಯಾಗಿದ್ದು 4 ಗ್ರಾಮಗಳು ಕೊರೊನಾ ಮುಕ್ತವಾಗಿದೆ. ಇನ್ನೂ ಹೆಚ್ಚಿನ ಕ್ರಮ ವಹಿಸಲು ಸಲುವಾಗಿ ಎಲ್ಲಾ ಇಲಾಖೆಗಳ ಸಭೆ ಕರೆದು ಚರ್ಚಿಸಲಾಗಿದೆ ಎಂದರು. ಸಭೆಯಲ್ಲಿ ತಹಶೀಲ್ದಾರರು ಮಹೇಶ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.