Home ಕರಾವಳಿ Archive by category ಮಂಗಳೂರು (Page 184)

ಓಮಿನಿ ಕಾರಿನ ಮೇಲೆ ಸರಕು ಸಾಗಾಟದ ಲಾರಿ ಪಲ್ಟಿ ಸುರತ್ಕಲ್‍ನ ಕುಳಾಯಿಯಲ್ಲಿ ಘಟನೆ ಘಟನೆ

ಸುರತ್ಕಲ್‍ನ ಕುಳಾಯಿಯಲ್ಲಿ ಇಂದು ಮಧ್ಯಾಹ್ನ ಓಮಿನಿ ಮೇಲೆ ಸರಕು ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾದ ಪರಿಣಾಮ ಓಮಿನಿ ಚಾಲಕನನ್ನ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಓಮಿನಿ ಸಂಪೂರ್ಣ ಅಪ್ಪಚ್ಚಿಯಾಗಿದ್ದು, ಸುರತ್ಕಲ್ ಉತ್ತರ ಟ್ರಾಫಿಕ್ ಫೋಲಿಸರು ಆಗಮಿಸಿ ಸ್ಕ್ರೈನ್ ಸಹಾಯದಿಂದ ಲಾರಿಯನ್ನು ಎತ್ತಿ ಓಮಿನಿ ಚಾಲಕನನ್ನು ಆಸ್ಪತ್ರೆಗೆ

ದಿ ಮೈಸೂರು ಎಲೆಕ್ಟಿಕಲ್ ಇಂಡಸ್ಟ್ರೀಸ್ ಲಿ. ನ ಅಡಿಯಲ್ಲಿ : ದ.ಕ. ಜಿಲ್ಲೆಯ 26 ಶಾಲೆಗಳಿಗೆ ಅನುದಾನದ ಚೆಕ್ ವಿತರಣೆ

ಸ್ವಾಮಿ ವಿವೇಕಾನಂದರು ಕಂಡಂತಹ ಭಾರತವನ್ನು ನಾವು ನಿರ್ಮಾಣ ಮಾಡುವತ್ತ ಮುಂದುವರಿಯಬೇಕಿದ್ದು ಪ್ರಸ್ತುತದ ದಿನಗಳು ದೇಶಾದ್ಯಂತ ಅದಕ್ಕೆ ಪೂರಕ ವಾತಾವರಣ ನಿರ್ಮಿಸಿದ್ದು ಆ ನಿಟ್ಟಿನಲ್ಲಿ ನಾವೆಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹೇಳಿದರು.ಬೋಳಿಯಾರಿನ ಅಮರ್ ದೀಪ್ ಸಭಾಂಗಣದಲ್ಲಿ ಬೆಂಗಳೂರಿನ ದಿ ಮೈಸೂರು ಎಲೆಕ್ಟಿಕಲ್ ಇಂಡಸ್ಟ್ರೀಸ್ ಲಿ. ನ ಸಾಂಸ್ಥಿಕ ಸಾಮಾಜಿಕ ಜವಬ್ದಾರಿ(ಸಮೈಸೂರುಆರ್ ) ಯಡಿಯಲ್ಲಿ ಚೇರ್

ಬಹುಜನ ಚಳುವಳಿಯ ಹಿರಿಯ ನಾಯಕ, ಅಂಬೇಡ್ಕರ್ ವಾದಿ ಪಿ. ಡೀಕಯ್ಯ ನಿಧನ

ಮಂಗಳೂರು: ಮೆದುಳಿನ ರಕ್ತಸ್ರಾವದಿಂದ ಗಂಭೀರ ಸ್ಥಿತಿಯಲ್ಲಿದ್ದ ಬಹುಜನ ಚಳುವಳಿಯ ಹಿರಿಯ ನಾಯಕ, ಅಂಬೇಡ್ಕರ್ ವಾದಿ ಪಿ. ಡೀಕಯ್ಯನವರು ನಿನ್ನೆ ರಾತ್ರಿ ಮಣಿಪಾಲ  ಕೆಎಂಸಿ ಆಸ್ಪತ್ರೆ ಯಲ್ಲಿ ನಿಧನರಾಗಿದ್ದಾರೆ. ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಪಿ. ಡಿಕಯ್ಯನವರು, ತಮ್ಮ ಬಹು ಅಂಗಾಂಗಗಳನ್ನು ದಾನ ಮಾಡಿದ್ದಾರೆ.  ಇಂದು ಮಧ್ಯಾಹ್ನ 12 ಗಂಟೆಯ ಬಳಿಕ ಪದ್ಮುಂಜದಲ್ಲಿರುವ ಅವರ ನಿವಾಸದ ಬಳಿ ಅವರ ಅಂತ್ಯ ಸಂಸ್ಕಾರ ನೆರವೇರಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ

ಡಾ.ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ರಾಜ್ಯಾಸಭಾ ಸದಸ್ಯತ್ವ ನೀಡಿರುವುದು ಸ್ವಾಗತಾರ್ಹ: ಜೈನ್ ಮಿಲನ್ ರಾಜ್ಯಾಧ್ಯಕ್ಷ ಪುಷ್ಪರಾಜ್ ಜೈನ್

ಶ್ರೀ ಕ್ಷೇತ್ರದ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿರುವುದನ್ನು ಭಾರತೀಯ ಜೈನ್ ಮಿಲನ್‌ನ ರಾಜ್ಯಾಧ್ಯಕ್ಷ ಪುಷ್ಪರಾಜ್ ಜೈನ್ ಸ್ವಾಗತಿಸಿದ್ದಾರೆ. ಧಾರ್ಮಿಕ ಕ್ಷೇತ್ರದಲ್ಲಿದ್ದುಕೊಂಡು ತನ್ನ ಜವಾಬ್ದಾರಿಯೊಂದಿಗೆ ಸಾಮಾಜಿಕವಾಗಿ ತಮ್ಮನ್ನು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡು ಸಮಾಜದ ಕೆಳಸ್ಥರದಲ್ಲಿದ್ದ ಸಮುದಾಯವನ್ನು ಮುಖ್ಯವಾಹಿನಿಗೆ ತರುವಲ್ಲಿ ಡಿ.ವೀರೇಂದ್ರ ಹೆಗ್ಗಡೆ ಅವರ ಪ್ರಯತ್ನವನ್ನು ಗೌರವಿಸಿ

ತುಂಬಿ ಹರಿಯುತ್ತಿರುವ ನೇತ್ರಾವತಿ: ಎಚ್ಚರ ವಹಿಸುವಂತೆ ನದಿಪಾತ್ರದ ಜನತೆಗೆ ಸೂಚನೆ

ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ನೇತ್ರಾವತಿ ನದಿ ತುಂಬಿ ಹರಿಯುತ್ತಿದ್ದು ಗುರುವಾರ ಬೆಳಗ್ಗೆ ನದಿ ನೀರು 8 ಮೀಟರ್ ಎತ್ತರದಲ್ಲಿ ಹರಿಯುತ್ತಿದೆ.ಮೂರು ದಿನಗಳಿಂದ ನೀರಿನ ಮಟ್ಟ ಏರುತ್ತಲೇ ಸಾಗಿದ್ದು, ಇಂದು ಬೆಳಗ್ಗೆ 8 ಮೀಟರ್ ಗೆ ತಲುಪಿದೆ. ನೇತ್ರಾವತಿ ನದಿ ನೀರಿನ ಅಪಾಯದ ಮಟ್ಟ 8.5 ಮೀಟರ್ ಆಗಿದೆ. ಇನ್ನೂ ನೀರಿನ ಮಟ್ಟ ಏರಿಕೆಯಾದರೆ ನದಿ ಪಾತ್ರದ ತಗ್ಗು ಪ್ರದೇಶಗಳು ಮುಳುಗಡೆಯಾಗಲಿದೆ. 8.5 ಮೀಟರ್ ಗೆ ತಲುಪಿದರೆ ನೆರೆ ಉಂಟಾಗಲಿದೆ.

ಮಂಗಳೂರು: ಕಾರ್ಮಿಕ ಅದಾಲತ್-2 ವಾಹನ ಜಾಥಾಕ್ಕೆ ಚಾಲನೆ

ಕಾರ್ಮಿಕ ಇಲಾಖೆಯ ವತಿಯಿಂದ ಕಾರ್ಮಿಕರ ಸಮಸ್ಯೆಗಳನ್ನು ಬಗೆ ಹರಿಸುವ ಸಲುವಾಗಿ, ಪರಿಹಾರ ಒದಗಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಕಾರ್ಮಿಕ ಅದಾಲತ್ ನಡೆಸಲಾಗುತ್ತಿದ್ದು, ಈ ಪ್ರಯುಕ್ತ ನಗರದ ಯೆಯ್ಯಾಡಿ ಶರ್ಬತ್ ಕಟ್ಟೆಯ ಸಮೀಪದಲ್ಲಿರುವ ಕಾರ್ಮಿಕ ಇಲಾಖೆ ಕಚೇರಿಯಲ್ಲಿ “ಕಾರ್ಮಿಕ ಅದಾಲತ್-2 ವಾಹನ ಜಾಥಾಕ್ಕೆ ಚಾಲನೆ ಸಿಕ್ಕಿತ್ತು. ಸಹಾಯಕ ಕಾರ್ಮಿಕ ಆಯುಕ್ತರಾದ ಶಿವ ಕುಮಾರ್ ಚಾಲನೆ ನೀಡಿದರು. ತದಬಳಿಕ ಮಾತನಾಡಿದ ಅವರು, ಕಾರ್ಮಿಕ ಸಚಿವರ ಸೂಚನೆ ಮೇರೆಗೆ

ಬಜ್ಪೆಯ ಅದ್ಯಪಾಡಿಯಲ್ಲಿ ಗುಡ್ಡ ಕುಸಿತ , ರಸ್ತೆ ಕುಸಿತದಿಂದ ಆದ್ಯಪಾಡಿ-ಕೈಕಂಬ ಸಂಪರ್ಕ ಕಡಿತ

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇ ಬಳಿಯಿಂದಾಗಿ ಅದ್ಯಪಾಡಿಗೆ ತೆರಳುವ ರಸ್ತೆ ಭಾರೀ ಮಳೆಗೆ ಕೊಚ್ಚಿ ಹೋಗಿದೆ ಇದು ಅದ್ಯಪಾಡಿ-ಕೈಕಂಬ ಸಂಪರ್ಕಿಸುವ ರಸ್ತೆಯಾಗಿದ್ದು, ಕೆಲ ದಿನಗಳ ಹಿಂದೆಯೇ ಇಲ್ಲಿ ಮೋರಿ ಕುಸಿದಿತ್ತು. ಆ ಬಳಿಕ ರಸ್ತೆಯ ಎರಡೂ ಬದಿಗಳಲ್ಲಿ ಬ್ಯಾರಿಕೇಡ್ ಗಳನ್ನು ಅಳವಡಿಸಿ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಈ ಕುರಿತು ಸ್ಪಷ್ಟನೆ ನೀಡಿರುವ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ, ವಿಮಾನ ನಿಲ್ದಾಣದ ಹೊರಭಾಗದಲ್ಲಿ

ಜೈನ ಮನೆತನದ ವಾರಸುದಾರ ರಾಹುಲ್ ಬಲ್ಲಾಳ್ ನಿಧನ

ತುಳುನಾಡಿನ ಇತಿಹಾಸದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ಜೈನ ಮನೆತನದ ವಾರಸುದಾರ, ಮೂಡುಬಿದಿರೆಯ ಬಲ್ಲಾಳ್ ಕುಟುಂಬದ ರಾಹುಲ್ ಬಲ್ಲಾಳ್ (51) ಅವರು ಇಂದು ನಿಧನರಾಗಿದ್ದಾರೆ. ತುಳುನಾಡಿನ ಭವ್ಯ ಪರಂಪರೆ, ಪರೋಪಕಾರಿಗಳು ಆಗಿರುವಂತಹ ಶ್ರೀಮಂತ ಜೈನ ಮನೆತನದ ವಾರಸುದಾರರಾದ ಕೃಷಿಕರೂ, ಉದ್ಯಮಿ ಜಯವರ್ಮರಾಜ್ ಬಲ್ಲಾಳ್ ಅವರ ಸುಪುತ್ರರಾಗಿದ್ದ ರಾಹುಲ್ ಬಲ್ಲಾಳ್ ಕಾನೂನು ಪಧವೀಧರರು. ತನ್ನ ಕುಟುಂಬದ ಕೃಷಿ ಹಾಗೂ ಹೋಟೇಲ್ ಉದ್ಯಮವನ್ನು ಮುನ್ನಡೆಸಲು ರಾಹುಲ್ ಅವರು

ಗುರುಪುರ ಸಮೀಪದ ಅಣೆ ಬಳಿಯಲ್ಲಿ ಗುಡ್ಡ ಕುಸಿತ : ಲಘು ವಾಹನಗಳ ಸಂಚಾರಕ್ಕೆ ನಿರ್ಬಂಧ

ಕರಾವಳಿಯಲ್ಲಿ ಕಳೆದ ಎರಡು ದಿನಗಳಿಂದ ಸುರಿದ ಭಾರೀ ಮಳೆಗೆ ಅಲ್ಲಲ್ಲಿ ಗುಡ್ಡ ಕುಸಿತ ಸೇರಿದಂತೆ ಅಪಾರ ಹಾನಿ ಸಂಭವಿಸಿದೆ. ಇನ್ನು ಗುರುಪುರ ಸಮೀಪದ ಅಣೆ ಬಳಿಯಲ್ಲಿ ಗುಡ್ಡ ಕುಸಿತಗೊಂಡಿದ್ದು, ರಸ್ತೆ ಅಪಾಯದಂಚಿನಲ್ಲಿದೆ. ಸ್ಥಳಕ್ಕೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ದೇರಳಕಟ್ಟೆಯ ಕಾನೆಕೆರೆ ಗುಡ್ಡ ಕುಸಿತ : ಹಾನಿಗೊಳಗಾದ ಪ್ರದೇಶಕ್ಕೆ ಶಾಸಕ ಯು.ಟಿ. ಖಾದರ್ ಭೇಟಿ

ಉಳ್ಳಾಲ: ಮಳೆಯಿಂದ ಹಾನಿಗೀಡಾದ ಬೆಳ್ಮ ಗ್ರಾ.ಪಂ ವ್ಯಾಪ್ತಿಯ ವಿವಿಧ ಪ್ರದೇಶಗಳಿಗೆ ಶಾಸಕ ಯು.ಟಿ ಖಾದರ್ ಭೇಟಿ ನೀಡಿ ತುರ್ತು ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದರು.ಬೋರುಗುಡ್ಡೆ ಎರಡು ಮನೆಗಳ ಮೇಲೆ ಗುಡ್ಡೆ ಜರಿತವಾಗಿ ಹಾನಿ, ರೆಂಜಾಡಿಯ ಪಾಲೆದಡಿ ಮಸೀದಿ ಬಳಿ ಹಾನಿ, ಕೊಳಕೆಬೈಲ್ ಗುಡ್ಡ ಜರಿತ ಹಾಗೂ ಕಾನಕೆರೆ ಬಳಿ ಪೆಟ್ರೋಲ್ ಪಂಪ್ ಹಿಂಭಾಗದ ಒಂದು ಭಾಗ ಜರಿತ ಉಂಟಾಗಿದೆ. ಇವೆಲ್ಲವನ್ನು ಸ್ಥಳೀಯ ಜನಪ್ರತಿನಿಧಿಗಳ ಜೊತೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಈ