ಗುರುಪುರ ಸಮೀಪದ ಅಣೆ ಬಳಿಯಲ್ಲಿ ಗುಡ್ಡ ಕುಸಿತ : ಲಘು ವಾಹನಗಳ ಸಂಚಾರಕ್ಕೆ ನಿರ್ಬಂಧ

ಕರಾವಳಿಯಲ್ಲಿ ಕಳೆದ ಎರಡು ದಿನಗಳಿಂದ ಸುರಿದ ಭಾರೀ ಮಳೆಗೆ ಅಲ್ಲಲ್ಲಿ ಗುಡ್ಡ ಕುಸಿತ ಸೇರಿದಂತೆ ಅಪಾರ ಹಾನಿ ಸಂಭವಿಸಿದೆ. ಇನ್ನು ಗುರುಪುರ ಸಮೀಪದ ಅಣೆ ಬಳಿಯಲ್ಲಿ ಗುಡ್ಡ ಕುಸಿತಗೊಂಡಿದ್ದು, ರಸ್ತೆ ಅಪಾಯದಂಚಿನಲ್ಲಿದೆ. ಸ್ಥಳಕ್ಕೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.