Home ಕರಾವಳಿ Archive by category ಮಂಗಳೂರು (Page 27)

ಮಂಗಳೂರು: ವಾಲಿ ಸುಗ್ರೀವರ ಒಡ್ಡೋಲಗ ವಿಡಿಯೋ ಲೋಕಾರ್ಪಣೆ

ಯಕ್ಷಗಾನ ಪರಂಪರೆಯ ವಾಲಿ-ಸುಗ್ರೀವರ ಒಡ್ಡೋಲಗ ದಾಖಲೀಕರಣದ ವಿಡಿಯೋ ಮಧುಸೂಧನ ಅಲೆವೂರಾಯ ಅವರ ಪ್ರಸಿದ್ಧ ಯೂಟ್ಯೂಬ್ ಚಾನೆಲ್‍ನಲ್ಲಿ ಬಿಡುಗಡೆಗೊಂಡಿತು. ಮಂಗಳೂರಿನ ಪತ್ರಿಕಾಭವನದಲ್ಲಿ ವಾಲಿ ಸುಗ್ರೀವರ ಒಡ್ಡೋಲಗ ವಿಡಿಯೋ ಲೋಕಾರ್ಪಣೆಗೊಂಡಿತು. ಇದೇ ವೇಳೆ ಕನ್ನಡ ಸಾಹಿತ್ಯ ಪರಿಷತ್‍ನ ಮಾಜಿ ರಾಜ್ಯಾಧ್ಯಕ್ಷರಾದ ಡಾ. ಹರಿಕೃಷ್ಣ ಪುನರೂರು ಅವರು

ಮಂಗಳೂರು: ಪಣಂಬೂರು ಕಡಲ ತೀರದಲ್ಲಿ ಇಬ್ಬರ ಶವ ಪತ್ತೆ

ಮಧ್ಯವಯಸ್ಕ ವ್ಯಕ್ತಿ ಮತ್ತು ಮಹಿಳೆ ಸಮುದ್ರಕ್ಕೆ ಬಿದ್ದಿರುವ ಘಟನೆ ನಡೆದಿದ್ದು, ಬೆಂಗಳೂರಿನ ಲಕ್ಷ್ಮಿ (43), ಬೋರಲಿಂಗಯ್ಯ (50) ಮೃತ ವ್ಯಕ್ತಿಗಳು ಎಂದು ತಿಳಿದು ಬಂದಿದೆ. ಇವರಿಬ್ಬರು ಮನೆಯಲ್ಲಿ ಹೇಳದೇ ಬೆಂಗಳೂರಿನಿಂದ ತೆರಳಿರುವುದಾಗಿ ಪೆÇಲೀಸರಿಗೆ ಪ್ರಾಥಮಿಕ ಮಾಹಿತಿ ದೊರಕಿದೆ. ಇವರಿಬ್ಬರು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದೆ. ಪಣಂಬೂರು ಪೆÇಲೀಸರು ಸಂಬಂಧಿಕರನ್ನು ಸಂಪರ್ಕಿಸಿದ್ದು, ಇವರಿಬ್ಬರ ಸಾವಿನ ಸುದ್ದಿ ಕೇಳಿ ಸಂಬಂಧಿಕರು

Mangaluru : ಫುಟ್‍ಪಾತ್‍ನಲ್ಲಿ ಹೋಗುತ್ತಿದ್ದ ಹುಡುಗಿಯರ ಮೇಲೇರಿದ ಕಾರು

ಫುಟ್ ಪಾತ್‍ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಐದು ಮಂದಿಗೆ ಕಾರು ಢಿಕ್ಕಿಯಾಗಿ ಓರ್ವ ಯುವತಿ ದಾರುಣವಾಗಿ ಮೃತಪಟ್ಟ ಭೀಕರ ಘಟನೆ ಮಂಗಳೂರಿನ ಲೇಡಿಹಿಲ್ ಬಳಿ ನಡೆದಿದೆ. ಅಪಘಾತದಲ್ಲಿ ರೂಪಶ್ರೀ (23) ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಸುರತ್ಕಲ್‍ನ ಕಾನ, ಬಾಳದ ಗಂಗಾಧರ್ ಅವರ ಪುತ್ರಿಯಾದ ರೂಪಶ್ರೀ ಕುದ್ರೋಳಿ ದೇವಸ್ಥಾನಕ್ಕೆ ತೆರಳಿ ವಾಪಸಾಗುತ್ತಿದ್ದರೆಂದು ತಿಳಿದುಬಂದಿದೆ. ರೂಪಶ್ರೀ ಜೊತೆಯಲ್ಲಿ ಸ್ವಾತಿ (26), ಹಿತ್ನವಿ (16),

ಶ್ರೀ ವೆಂಕಟರಮಣ ದೇವಸ್ಥಾನ ರಥಬೀದಿ : ಶ್ರೀ ಶಾರದಾ ಮಾತೆಯ ಭವ್ಯ ವಿಗ್ರಹದ ಮೆರವಣಿಗೆ

101 ನೇ ಮಂಗಳೂರು ಶಾರದಾ ಮಹೋತ್ಸವ ಪ್ರಯುಕ್ತ ವಿಗ್ರಹದ ಭವ್ಯ ಮೆರವಣಿಗೆ ಮಂಗಳೂರು : ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನ , ಆಚಾರ್ಯ ಮಠ ವಠಾರದಲ್ಲಿ 101 ನೇ ವರ್ಷ ಸಂಭ್ರಮಾಚರಣೆಯ ಮಂಗಳೂರು ಶ್ರೀ ಶಾರದಾ ಮಹೋತ್ಸವ ಪ್ರಯುಕ್ತ ಶ್ರೀ ಶಾರದಾ ಮಾತೆಯ ಭವ್ಯ ವಿಗ್ರಹದ ಮೆರವಣಿಗೆ ವಿಜೃಂಭಣೆಯಿಂದ ನೆರವೇರಿತು . ಇಂದು ರಾತ್ರಿ ಶ್ರೀ ಮಾತೆಯ ವಿಗ್ರಹ ಪ್ರತಿಷ್ಠೆ ಕಾರ್ಯಕ್ರಮ ನಡೆಯಲಿರುವುದು . 7 ದಿನಗಳ ಪರ್ಯಂತ ಮಹೋತ್ಸವ ನಡೆಯಲಿದ್ದು ಸಹಸ್ರಾರು ಭಜಕರು

ಮಂಗಳೂರು:ರೋಗಿಗಳಲ್ಲಿ ಧನಾತ್ಮಕ ಚಿಂತನೆಗೆ ಓದುವ ಹವ್ಯಾಸ ಪೂರಕ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ಮಂಗಳೂರು ,ಅ.18:-ರೋಗಿಗಳಲ್ಲಿ ಧನಾತ್ಮಕ ಚಿಂತನೆಗೆ ಓದುವ ಹವ್ಯಾಸ ಪೂರಕವಾಗಿದೆ ಎಂಬುದಾಗಿ ದ.ಕ ಜಿಲ್ಲಾ ಉಸ್ತುವಾರಿ ಮತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಮಂಗಳೂರಿನ ಜಿಲ್ಲಾ ವೆನ್ಲಾಕ್ ಸರಕಾರಿ ಆಸ್ಪತ್ರೆ ಯಲ್ಲಿ ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಘಟಕ ,ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆ ಹಾಗೂ ಯೂತ್ ರೆಡ್ ಕ್ರಾಸ್ ಸಹಭಾಗಿತ್ವದಲ್ಲಿ ಆರಂಭಿಸಲಾಗಿರುವ ಸಮುದಾಯ ವಾಚನಾಲಯಕ್ಕೆ ಬುಧವಾರದಂದು ಭೇಟಿ

ದಿ.ವೇಣುಗೋಪಾಲರಿಗೆ ಪತ್ರಕರ್ತರ ಸಂಘದಿಂದ ಶ್ರದ್ಧಾಂಜಲಿ ಸಭೆ

ಮಂಗಳೂರು :ಇತ್ತೀಚೆಗೆ ನಿಧನರಾದ ಮೂಡುಬಿದಿರೆ ಪ್ರೆಸ್‌ಕ್ಲಬ್‌ನ ಮಾಜಿ ಅಧ್ಯಕ್ಷ ವೇಣುಗೋಪಾಲ ಅವರಿಗೆ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಬುಧವಾರ ನಗರದ ಪತ್ರಿಕಾ ಭವನದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನುಡಿನಮನ ಸಲ್ಲಿಸಿದ ಮೂಡುಬಿದಿರೆಯ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ‘ ಜನಪರ ಕಾಳಜಿಯ ಯುವ ಪತ್ರಕರ್ತ ವೇಣುಗೋಪಾಲ್ ಅವರು ಮೂಡುಬಿದಿರೆ ಪ್ರೆಸ್‌ಕ್ಲಬ್ ಅಧ್ಯಕ್ಷರಾಗಿ ಉತ್ತಮ ಸೇವೆ ಸಲ್ಲಿಸಿದ್ದರು. ಪ್ರೆಸ್‌ಕ್ಲಬ್‌ಗೆ ಸ್ವಂತ ನಿವೇಶನ

ಮಂಗಳೂರು: ಹಿಂದೂಗಳ ಅಂಗಡಿಗೆ ಕೇಸರಿ ಧ್ವಜ ಕಟ್ಟಿದ ವಿಚಾರ: ಬೀದಿ ಬದಿ ವ್ಯಾಪಾರಸ್ಥರ ಸಮನ್ವಯ ಸಮಿತಿಯಿಂದ ಸಚಿವ ದಿನೇಶ್ ಗುಂಡೂರಾವ್‍ಗೆ ದೂರು

ದೇವಸ್ಥಾನದಲ್ಲಿ ದಸರಾ ಉತ್ಸವದ ಸಂದರ್ಭ ವ್ಯಾಪಾರಕ್ಕೆ ಸಂಬಂಧಿಸಿ ಸೌಹಾರ್ದ ಕದಡಲು ಯತ್ನಿಸುತ್ತಿರುವ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಮತ್ತು ಸಹಚರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಸೌಹಾರ್ದ ಕದಡದಂತೆ ಕ್ರಮ ಕಾರ್ಯಕ್ರಮ ರೂಪಿಸಬೇಕು ಎಂದು ಒತ್ತಾಯಿಸಿ ದ.ಕ. ಜಿಲ್ಲಾ ಜಾತ್ಯತೀತ ಪಕ್ಷಗಳು ಹಾಗೂ ಸಂಘಟನೆಗಳ ಜಂಟಿ ವೇದಿಕೆಯು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‍ರಿಗೆ ಒತ್ತಾಯಿಸಿದೆ. ಮಂಗಳೂರಿನಲ್ಲಿ ಸರ್ಕ್ಯೂಟ್ ಹೌಸ್

“ಮಂಗಳೂರು ದಸರಾ ವೈಭವ” ಪೋಟೊಗ್ರಫಿ ಸ್ಪರ್ಧೆ ಪೋಸ್ಟರ್ ಬಿಡುಗಡೆ

ಮಂಗಳೂರಿನ ವೈಭವದ ದಸರಾ ಹಬ್ಬದ ರಂಗನ್ನು ಮತ್ತಷ್ಟು ಹೆಚ್ಚಿಸಲು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಮಂಗಳೂರು ವಲಯ ವತಿಯಿಂದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಸಹಯೋಗದಲ್ಲಿ “ಮಂಗಳೂರು ದಸರಾ ವೈಭವ” ಶೀರ್ಷಿಕೆಯಡಿ ಆಯೋಜಿಸಲಾದ ರಾಜ್ಯ ಮಟ್ಟದ ಪೊಟೋಗ್ರಫಿ ಮತ್ತು ವಿಡಿಯೋಗ್ರಫಿ ಸ್ಪರ್ಧೆಯ ಪೋಸ್ಟರ್ ಬಿಡುಗಡೆ ಶ್ರೀ ಕ್ಷೇತ್ರ ಕುದ್ರೋಳಿ ದೇವಸ್ಥಾನದ ಸಾಂಸ್ಕ್ರತಿಕ ವೇದಿಕೆಯಲ್ಲಿ ಮಂಗಳವಾರ ನೆರವೇರಿತು. ಶ್ರೀ ಕ್ಷೇತ್ರದ ಕೋಶಾಧಿಕಾರಿ

ಮಂಗಳೂರು: ಅ.21ರಂದು ಕುಡ್ಲ ಸಾಂಸ್ಕøತಿಕ ಪ್ರತಿಷ್ಠಾನದಿಂದ ಪಿಲಿಪರ್ಬ-2023

ಕುಡ್ಲ ಸಾಂಸ್ಕøತಿಕ ಪ್ರತಿಷ್ಠಾನದ ವತಿಯಿಂದ ತುಳು ನಾಡಿನ ಸಂಪ್ರದಾಯುಕ ಕಲೆ ಹುಲಿವೇಷ ಸ್ಪರ್ಧಾ ಕೂಡ ಕುಡ್ಲದ ಪಿಲಿಪರ್ಬ-2023 ಕಾರ್ಯಕ್ರಮ ಅಕ್ಟೋಬರ್ 21ರಂದು ನಗರದ ಕೇಂದ್ರ ಮೈದಾನದಲ್ಲಿ ನಡೆಯಲಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದರು. ಸಂಸದ ನಳಿನ್ ಕುಮಾರ್ ಕಟೀಲ್ ಅವರ ಮಾರ್ಗದರ್ಶನ ಮತ್ತು ತನ್ನ ನೇತೃತ್ವದಲ್ಲಿ ಕಳೆದ ವರ್ಷ ಯಶಸ್ವಿಯಾಗಿ ಕುಡ್ಲದ ಪಿಲಿಪರ್ಬ ಆಯೋಜಿಸಿದ್ದು, ಅದರ ಮುಂದುವರಿದ

ಮಂಗಳೂರು: ಬೊಳ್ಳಿ ಮೂವೀಸ್ ಮತ್ತು ಅವಿಕಾ ಪ್ರೋಡಕ್ಷನ್ ವತಿಯಿಂದ ಪಿಲಿತ ರಾಪಟ

ಬೊಳ್ಳಿ ಮೂವೀಸ್ ಮತ್ತು ಅವಿಕಾ ಪ್ರೋಡಕ್ಷನ್ ವತಿಯಿಂದ ನವರಾತ್ರಿ ಹಬ್ಬದ ಪ್ರಯುಕ್ತ ಅಕ್ಟೋಬರ್ 24ರಂದು ಪಿಲಿತ ರಾಪಟವನ್ನು ಹಮ್ಮಿಕೊಂಡಿದ್ದಾರೆ. ಯುವ ಸಂಗಮ ಕುದ್ರೋಳಿ ಮತ್ತು ಶಿವ ಫ್ರೆಂಡ್ಸ್ ಬರ್ಕೆ ಪಿಲಿತ ರಾಪಟ ನಡೆಯಲಿದೆ. ಮಂಗಳೂರಿನ ಬಿಜೈ ಕಾಪಿಕಾಡ್‍ನ ಕೊಟ್ಟಾರ 2ನೇ ಅಡ್ಡರಸ್ತೆಯಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ.