Home Archive by category ಮನರಂಜನೆ (Page 16)

ನಟ ಅರ್ಜುನ್ ಕಾಪಿಕಾಡ್ ಹುಲಿ ಕುಣಿತಕ್ಕೆ ಮನಸೋತ ಪ್ರೇಕ್ಷಕರು

ಕೋಸ್ಟಲ್ ವುಡ್ ನಲ್ಲಿ ಅಬತರ ಮೂವಿ ಸಖತ್ ಸದ್ದು ಮಾಡ್ತಾ ಇದೆ.ಬೊಳ್ಳಿ ಮೂವೀಸ್ ಲಾಂಛನದಲ್ಲಿ ಅರ್ಜುನ್ ಕಾಪಿಕಾಡ್ ನಿರ್ದೇಶನದ `ಅಬತರ’ ತುಳು ಮೂವಿ ಕರಾವಳಿಯಾದ್ಯಂತ ಯಶಸ್ವಿ ಪ್ರದರ್ಶನ ಕಾಣ್ತಾ ಇದೆ.ಇದೀಗ ಅಬರತ ಬೈಕ್ ರಥಯಾತ್ರೆ ಮಂಗಳೂರಲ್ಲಿ ಸಂಭ್ರಮದಿಂದ ಜರುಗಿತ್ತು. ನಗರದ ಫಾರಂ ನೆಕ್ಸಾ ಮಾಲ್ ನಲ್ಲಿ ಅಬರತ ಬೈಕ್ ರಥಯಾತ್ರೆಗೆ ಚಾಲನೆ ಸಿಕ್ಕಿತ್ತು.

ಮರವಂತೆ ಕಡಲ ತೀರದಲ್ಲಿ ಉಪಾಧ್ಯಕ್ಷ ಫಿಲಂ ಶೂಟಿಂಗ್

ಬೈಂದೂರು ತಾಲೂಕಿನ ವಿಶ್ವಪ್ರಸಿದ್ಧ ಮರವಂತೆ ಕಡಲ ತೀರದಲ್ಲಿ ಹಾಗೂ ಕುಂದಾಪುರ ಉಡುಪಿಯ ಪರಿಸರದಲ್ಲಿ ಇಂದು ಉಪಾಧ್ಯಕ್ಷ ಫಿಲಂ ಶೂಟಿಂಗ್ ನಡೆಯಿತು.ಸ್ಯಾಂಡಲ್‍ವುಡ್‍ನಲ್ಲಿ ಕಾಮಿಡಿ ಕಿಂಗ್ ಎಂದು ಹೆಸರು ಮಾಡಿದ ಖ್ಯಾತರಾದ ಚಲನಚಿತ್ರ ನಟ ಚಿಕ್ಕಣ್ಣ ಕೆಲವೊಂದು ಸಿನಿಮಾಗಳಲ್ಲಿ ಇವರೇ ಹೀರೋಗಿಂತ ಹಾಸ್ಯ ನಟನಾಗಿ ಹೆಚ್ಚಾಗಿ ಮಿಂಚಿದ್ದು, ಈಗ ಉಪಾಧ್ಯಕ್ಷ ಚಿತ್ರದಲ್ಲಿ ನಾಯಕನಾಗಿ ಮೋಡಿ ಮಾಡಲು ಸಜ್ಜಾಗಿದ್ದಾರೆ. ಸಾಕಷ್ಟು ಹಿಟ್ ಚಿತ್ರಗಳ ನಿರ್ಮಾಪಕರಾದ

ಕೃಷ್ಣನ ಹುಟ್ಟುಹಬ್ಬಕ್ಕಾಗಿ ಲತಾ ಮನೆಯವರಿಂದ ಮೂಡೆ

ಶ್ರೀ ಕೃಷ್ಣ ಜನ್ಮಾಷ್ಟಮಿಗಾಗಿ ಎರ್ಮಾಳಿನಲ್ಲಿ ಲತಾ ಮನೆಮಂದಿ ಸೇರಿ ಕೊಟ್ಟೆ ಕಡುಬು ತಯಾರಿಯಲ್ಲಿ ತೊಡಗಿದ್ದಾರೆ. ಕೃಷ್ಣ ಜನ್ಮಾಷ್ಟಮಿ ದಿನ ತುಳುವಿನ ಮೂಡೆ ಕನ್ನಡದ ಕೊಟ್ಟೆ ಕಡುಬು ಮಾಡುವುದು ವಾಡಿಕೆ. ಯದುನಂದನನಿಗೆ ಪ್ರಿಯವಾದ ತಿಂಡಿಗಳಲ್ಲಿ ಮೂಡೆಯೂ ಒಂದಾಗಿದ್ದು, ಅಷ್ಟಮಿಯಂದು ಕರಾವಳಿಯ ಎಲ್ಲರ ಮನೆಯಲ್ಲೂ ಮೂಡೆ ಘಮಘಮಿಸುತ್ತಿರುತ್ತದೆ. ಕೇದಗೆ ವರ್ಗದ ಮುಂಡೇವು ಮುಂಡಕ ಎಲೆ, ಪೆÇದರುಗಳು ತುಳುನಾಡಿನಲ್ಲಿ ಮುಖ್ಯವಾಗಿ ತೋಡು ತೊರೆಗಳ ದಂಡೆಗಳಲ್ಲಿ ಕಂಡು

ಮದರ್‌ ತೆರೇಸಾರವರ 25ನೇ ಸಂಸ್ಮರಣಾ ದಿನಾಚರಣೆ : ಜಿಲ್ಲಾ ಮಟ್ಟದ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆ

ಮಾನವೀಯತೆಯ ಪ್ರತಿರೂಪ ಸಂತ ಮದರ್ ತೆರೇಸಾರವರ 25ನೇ ಸಂಸ್ಮರಣಾ ದಿನಾಚರಣೆಯ ಅಂಗವಾಗಿ ತಾ.20-08-2022ರಂದು ಶನಿವಾರ ಬೆಳಿಗ್ಗೆ 9.30ಕ್ಕೆ ನಗರದ ಮಿಲಾಗ್ರಿಸ್ ಕಾಲೇಜ್ ನಲ್ಲಿ ದ.ಕ.ಜಿಲ್ಲಾ ಮಟ್ಟದ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಸಂತ ಮದರ್ ತೆರೇಸಾ ವಿಚಾರ ವೇದಿಕೆ ಮಂಗಳೂರು ಪತ್ರಿಕಾಹೇಳಿಕೆಯೊಂದರಲ್ಲಿ ತಿಳಿಸಿದೆ. ಸಹಾನುಭೂತಿ ಮತ್ತು ಆಧ್ಯಾತ್ಮಿಕತೆ’ ಎಂಬ ವಿಷಯದ ಮೇಲೆ ನಡೆಯುವ ಚಿತ್ರಕಲಾ ಸ್ಪರ್ಧೆಯನ್ನು ಹೈಸ್ಕೂಲ್,

ರಕ್ಷಾ ಬಂಧನ ಹಬ್ಬದ ಹಿಂದಿರುವ ಪೌರಾಣಿಕ ಕಥೆಯನ್ನು ಬಲ್ಲಿರಾ?

ಸಹೋದರ ಹಾಗೂ ಸಹೋದರಿಯ ನಡುವಿನ ಬಾಂಧವ್ಯ ಅತ್ಯಂತ ಅಮೂಲ್ಯವಾದದ್ದು. ಹಿಂದೂ ಧರ್ಮದಲ್ಲಿಯೂ ಈ ಸಂಬಂಧಕ್ಕೆಂದೇ ವಿಶೇಷ ಸ್ಥಾನಮಾನಗಳನ್ನು ನೀಡಲಾಗಿದೆ. ಪ್ರತಿ ವರ್ಷ ಹಿಂದೂ ಜನತೆ ಅತ್ಯಂತ ಉತ್ಸಾಹದಿಂದ ರಕ್ಷಾ ಬಂಧನವನ್ನು ಆಚರಿಸುತ್ತಾರೆ.ಸಹೋದರಿಯರು ತಮ್ಮ ಸಹೋದರನ ಕೈಗೆ ರಾಖಿಯನ್ನು ಕಟ್ಟುವ ಮೂಲಕ ಆತನ ಆರೋಗ್ಯ ಹಾಗೂ ಆಯಸ್ಸಿಗಾಗಿ ಪ್ರಾರ್ಥಿಸುತ್ತಾರೆ. ಇದಕ್ಕೆ ಪ್ರತಿಯಾಗಿ ಸಹೋದರರು ಜೀವಮಾನವಿಡೀ ಸಹೋದರಿಗೆ ರಕ್ಷಣೆಯಾಗಿ ನಿಲ್ಲುವ ಪ್ರತಿಜ್ಞೆಯನ್ನು ಮಾಡುತ್ತಾರೆ.

ಬಿಗ್‍ಬಾಸ್ ಒಟಿಟಿ ಸೀಸನ್-1, ಕರಾವಳಿಯ ಕುವರ ನಟ ರೂಪೇಶ್ ಶೆಟ್ಟಿ ಎಂಟ್ರಿ

ಕಿರುತೆರೆ ಲೋಕದ ದೊಡ್ಡ ರಿಯಾಲಿಟಿ ಶೋ ಎನಿಸಿಕೊಂಡಿರುವ ಬಿಗ್ ಬಾಸ್ ಒಟಿಟಿ ಸೀಸನ್-1 ಆರಂಭಗೊಂಡಿದೆ. ಈ ಬಾರಿ ಕರಾವಳಿಯ ಕುವರ ನಟ ಹಾಗೂ ನಿರೂಪಕ ರಾಕ್‍ಸ್ಟಾರ್ ರೂಪೇಶ್ ಶೆಟ್ಟಿ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ರೂಪೇಶ್ ಶೆಟ್ಟಿ ಅವರ ತುಳು ಮೂವಿ ಆಗಿರುವ ಗಿರಿಗಿಟ್ ಈಗಾಗಲೇ ಯಶಸ್ವಿ ಪ್ರದರ್ಶನ ಕಂಡಿದೆ. ಸದ್ಯದಲ್ಲೇ ಸರ್ಕಸ್ ತುಳು ಮೂವಿ ಕರಾವಳಿಯಾದ್ಯಂತ ಬಿಡುಗಡೆಗೊಳ್ಳಲು ಸಜ್ಜಾಗಿದೆ.. ಕಲರ್ಸ್ ವಾಹಿನಿಯ ಬಿಗ್ ಬಾಸ್ ಕನ್ನಡದ ಒಟಿಟಿ

ರೋಷನ್ ಶೆಟ್ಟಿ ಅಭಿನಯದ “ಪಯಣ” ಆಲ್ಬಮ್ ಸಾಂಗ್ ಬಿಡುಗಡೆ

ಟೆಲಿ ಚಿತ್ರ ಆಲ್ಬಾಂ ಹಾಡುಗಳ ಮೂಲಕ ಜನಮನ್ನಣೆ ಪಡೆದ ಹರ್ಷಿತ್ ಸೋಮೇಶ್ವರ ಅವರು ಮತ್ತೊಂದು ಹೊಸ ಪ್ರಯೋಗಕ್ಕೆ ಸಜ್ಜಾಗಿದ್ದು, ಅವರ ನಿರ್ದೇಶನದಲ್ಲಿ ಪಯಣ ಎಂಬ ಕನ್ನಡ ಆಲ್ಬಾಂ ಸಾಂಗ್ ಇದೇ ಭಾನುವಾರ ಯೂಟ್ಯೂಬ್ ಚಾನೆಲ್‍ನಲ್ಲಿ ಬಿಡುಗಡೆಗೊಳ್ಳಲಿದೆ. ಕನ್ನಡ ಪ್ರಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ವಾಸುಕೀ ವೈಭವ್ ಅವರ ಕಂಠದಲ್ಲಿ ಈ ಹಾಡು ಮೂಡಿಬಂದಿದೆ. ಈ ಬಗ್ಗೆ ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಟೆಲಿ

ಲಕ್ಷ್ಮೀಗೆ ವಿಶೇಷ ದಿನ : ವರ ಮಹಾಲಕ್ಷ್ಮೀ ವ್ರತ

ವರಲಕ್ಷ್ಮೀ ವ್ರತ ಎಂದು ಶ್ರಾವಣ ಮಾಸದಲ್ಲಿ ಲಕ್ಷ್ಮೀ ಪೂಜೆ ಮಾಡುತ್ತಾರೆ. ಸಂಸ್ಕೃತದಲ್ಲಿ ಒಂದು ಶಬ್ದದ ಮುಂದೆ ಬರುವ ಇನ್ನೊಂದು ಶಬ್ದದ ಆಧಾರದಲ್ಲಿ ಅರ್ಥ ಕಲ್ಪನೆಯಾಗುತ್ತದೆ. ವರ ಎಂಬ ಶಬ್ದಕ್ಕೆ ಅನೇಕ ಅರ್ಥಗಳಿವೆ. ವಧುವಿಗೆ ವರ, ವರದಾನ ಇತ್ಯಾದಿ ಶಬ್ದ ಪ್ರಯೋಗಗಳಲ್ಲಿ ವಿವಿಧ ಅರ್ಥ ಕಲ್ಪನೆ ಬರುತ್ತದೆ. ಇಲ್ಲಿ ವರ ಶಬ್ದದ ಅನಂತರ ಲಕ್ಷ್ಮೀ ಬಂದಿದ್ದಾಳೆ. ಅಂದರೆ ಹೇ ಲಕ್ಷ್ಮೀಯೇ ಸಂತೃಪ್ತಿಯನ್ನು ನೀಡು. ನೆಮ್ಮದಿಯನ್ನು ನೀಡು ಎಂಬುದಾಗಿದೆ. ಶ್ರೀಮನ್ನಾ ರಾಯಣನ

ಆಷಾಢ( ಆಟಿ ) ಅಮಾವಾಸ್ಯೆಯ ಹಾಲೆ ಮರದ ವೈಶಿಷ್ಟ್ಯತೆ

ಹಾಲೆ ಮರದ ಎಲೆಯು ಸಾಮಾನ್ಯವಾಗಿ ದಪ್ಪವಾಗಿದ್ದು ಒಂದು ಗೊಂಚಲಿನಲ್ಲಿ 7 ರಿಂದ 9 ಪತ್ರಗಳಿರುತ್ತವೆ. ಎಲೆಗಳ ಅಗಲ ಒಂದರಿಂದ ಎರಡು ಇಂಚು ಇದ್ದು, ಉದ್ದ 6 ರಿಂದ 12ಇಂಚು ಇರುತ್ತದೆ. ಕಡು ಹಸಿರು ವರ್ಣದಿಂದ ಕೂಡಿದ್ದು ಮುರಿದಾಗ ಹಾಲು ಹೊರಸೂಸುತ್ತದೆ.ಹಾಲೆ ಮರದ ತೊಗಟೆ ಬೂದು ವರ್ಣದಿಂದ ಕೂಡಿದ್ದು, ದೊರಗಾಗಿದ್ದು ಕಲ್ಲಿನಿಂದ ಜಜ್ಜಿ ಹಾಳೆಗಳಂತೆ ತೆಗೆಯಲು ಬರುವುದು. ಈ ಕಷಾಯವನ್ನು ಕುಡಿಯುವುದರಿಂದ ಶೀತ ವಾತಾವಾರಣವನ್ನು ತಡೆದುಕೊಳ್ಳುವ ಶಕ್ತಿ ಬರುತ್ತದೆ ಹುಳ

ಎಂ.ಪಿ ಸಿಲ್ಕ್ಸ್ ಆಷಾಢ ಆಫರ್ ರಿಯಾಯಿತಿ ದರದಲ್ಲಿ ವಿವಿಧ ಬ್ರ್ಯಾಂಡೆಡ್ ವಸ್ತ್ರಗಳು ಶೇ.50ರಷ್ಟು ಡಿಸ್ಕೌಂಟ್

ಮಂಗಳೂರಿನ ಹಂಪನಕಟ್ಟೆಯಲ್ಲಿರುವ ಎಂ.ಪಿ. ಸಿಲ್ಕ್ಸ್ ಮಳಿಗೆಯಲ್ಲಿ ಆಷಾಢ ಪ್ರಯುಕ್ತ ಬಿಗ್ ಸೇಲ್‍ನ್ನು ಹಮ್ಮಿಕೊಂಡಿದ್ದು, ಶೇ.50ರಷ್ಟು ರಿಯಾಯಿತಿಯನ್ನು ಘೋಷಿಸಿದ್ದು, ಉತ್ತಮ ಗುಣಮಟ್ಟದ ವಸ್ತ್ರಗಳು ಕೈಗೆಟಕುವ ದರದಲ್ಲಿ ಸಿಗಲಿದೆ. ವಿವಿಧ ವಿನ್ಯಾಸದ ಮತ್ತು ಉತ್ತಮ ಗುಣಮಟ್ಟವನ್ನು ಹೊಂದಿರುವ ವಸ್ತ್ರ ಮಳಿಗೆ ಎಂ.ಪಿ. ಸಿಲ್ಕ್ಸ್. ಈ ಬಾರಿಯ ಆಷಾಢ ಪ್ರಯುಕ್ತ ಗ್ರಾಹಕರಿಗಾಗಿ ವಿಶೇಷ ರಿಯಾಯಿತಿಯನ್ನು ಘೋಷಿಸಿದ್ದಾರೆ. ಸೂರತ್ ಸೀರೆ, ಫ್ಯಾನ್ಸಿ ಮತ್ತು ಕಾಟನ್