Home ಕರಾವಳಿ Archive by category ಉಡುಪಿ (Page 130)

ಕಾರ್ಮಿಕರಿಗೆ ನೀಡಲಾದ ಆಹಾರ ಕಿಟ್ ವಿತರಣೆಯಲ್ಲಿ ಅವ್ಯವಹಾರ- ತನಿಖೆಗೆ ಆಗ್ರಹಿಸಿ ಉಡುಪಿಯಲ್ಲಿ ಸಿಐಟಿಯು ಪ್ರತಿಭಟನೆ

ಉಡುಪಿ: ಕಾರ್ಮಿಕರ ಹೆಸರಲ್ಲಿ ನೀಡಲಾದ ಆಹಾರ ಕಿಟ್ ಅವ್ಯವಹಾರ ತನಿಖೆಗೆ ಅಗ್ರಹಿಸಿ ಹಾಗೂ ತೈಲ ಬೆಲೆ ಏರಿಕೆ ವಿರೋಧಿಸಿ ಉಡುಪಿಯಲ್ಲಿ ಸಿಐಟಿಯು ಕಾರ್ಮಿಕ ಸಂಘಟನೆ ಪ್ರತಿಭಟನೆ ನಡೆಸಿದರು. ಕೊವಿಡ್ ಸಂಕಷ್ಟ ಕಾಲದಲ್ಲಿ ಕಾರ್ಮಿಕರ ಹೆಸರಲ್ಲಿ ಬಿಡುಗಡೆಗೊಂಡ ಆಹಾರ ಕಿಟ್ ಖರೀದಿಯಲ್ಲಿ ಭಾರೀ ನಡೆದಿರುವ ಅವ್ಯಹಾರ ತನಿಖೆ ನಡೆಸುವ ಜೊತೆಗೆ ಹಲವು ಬೇಡಿಕೆಗಳನ್ನು

ಉದಯ್ ಗಾಣಿಗ ಕೊಲೆ ಪ್ರಕರಣ: ಬಿಜೆಪಿ ಮೌನದ ಬಗ್ಗೆ ಅನುಮಾನ ಹುಟ್ಟುತ್ತಿದೆ: ಡಿಕೆಶಿ

ಕುಂದಾಪುರ: ರಾಜಕೀಯ ದ್ವೇಷ ಸಾಧನೆಗಾಗಿ ಯಡಮೊಗೆಯಲ್ಲಿ ಬಿಜೆಪಿ ಪಕ್ಷದ ಮುಖಂಡರು ತಮ್ಮ ಪಕ್ಷದವರೇ ಆದ ಉದಯ್ ಗಾಣಿಗ ಅವರನ್ನು ಅಮಾನುಷವಾಗಿ ಹತ್ಯೆ ನಡೆಸಿರುವುದು ಖಂಡನೀಯ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.ತಾಲೂಕಿನ ಯಡಮೊಗೆಯ ಹೊಸಬಾಳು ಉದಯ್ ಗಾಣಿಗ ಅವರ ಮನೆಗೆ ಮಂಗಳವಾರ ಸಂಜೆ ಭೇಟಿ ನೀಡಿ ಅವರ ಪತ್ನಿ ಹಾಗೂ ಕುಟುಂಬಿಕರಿಗೆ ಸಾಂತ್ವನ ಹೇಳಿದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಪಕ್ಷ, ಜಾತಿ, ಧರ್ಮದ ನೆಲೆಯಲ್ಲಿ

ಕಾಂಗ್ರೆಸ್‌ನಲ್ಲಿ ಸಿಎಂ ಅಭ್ಯರ್ಥಿ ಬಗ್ಗೆ ಚರ್ಚೆ ಮಾಡುವ ಅಗತ್ಯವಿಲ್ಲ: ಉಡುಪಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

ರಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಅಭ್ಯರ್ಥಿ ಬಗ್ಗೆ ಚರ್ಚೆ ನಡೆಯುತ್ತಿದೆ. ನಾನು ಯಾವತ್ತೂ ಯಾರಿಗೂ ನನ್ನನ್ನು ಅಭ್ಯರ್ಥಿ ಮಾಡಿ ಎಂದು ಹೇಳಿಲ್ಲ. ಈಗ ಅದನ್ನು ಚರ್ಚೆ ಮಾಡುವ ಅಗತ್ಯ ಇಲ್ಲ. ಜನರ ಸಮಸ್ಯೆ ಆಲಿಸಿ ನ್ಯಾಯ ಒದಗಿಸೋಣ ಎಂದು ಉಡುಪಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು. ಅವರು ಉಡುಪಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಕೊರೋನಾ ಕಾಲದಲ್ಲಿ ಜೀವ ಇದ್ದರೆ ಜೀವನ ಎಂದು ಹೇಳಿದರು. ಸಿದ್ದರಾಮಯ್ಯ ಬಾದಾಮಿಯಿಂದ ಸ್ಪರ್ಧೆ ವಿಚಾರದ ಬಗ್ಗೆ

ನಮ್ಮ ಗಮನ ಇರುವುದು ಮೇಕೆದಾಟು ವಿಚಾರ ಮಾತ್ರ: ಉಡುಪಿಯಲ್ಲಿ ಡಿಕೆಶಿ

ನನಗೆ ಕುಮಾರಸ್ವಾಮಿ ಸುದ್ದಿನೂ ಬೇಡ… ಸುಮಲತಾ ಅವರ ಸುದ್ದಿನೂ ಬೇಡ. ನಮ್ಮ ಗಮನ ಇರುವುದು ಮೇಕೆದಾಟು ವಿಚಾರ ಮಾತ್ರ ಎಂದು ಉಡುಪಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ಅವರು ಉಡುಪಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು. ಮೇಕೆದಾಟು ವಿಚಾರದಲ್ಲಿ ಮುಖ್ಯಮಂತ್ರಿಗಳು ಸ್ಟಾಲಿನ್‌ಗೆ ಪತ್ರ ಬರೆದಿರುವುದು ಸರಿಯಲ್ಲ. ಮೊದಲು ಟೆಂಡರ್ ಕರೆದು ಮೇಕೆದಾಟು ಡ್ಯಾಮ್ ಕಟ್ಟುವ ಕೆಲಸ ಮಾಡಿ. ಡ್ಯಾಮ್ ವಿಚಾರದಲ್ಲಿ ಏರುಪೇರು ಇದ್ದರೆ

ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಅಗಲಿದ ಸದಸ್ಯರಿಗೆ ಶ್ರದ್ಧಾಂಜಲಿ ಅರ್ಪಣೆ

ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಇತ್ತೀಚೆಗೆ ದಿವಂಗತರಾದ ಕ್ಲಬ್ಬಿನ ಉಪಾಧ್ಯಕ್ಷ ಸಾಲ್ವಡೊರ್ ನೊರೊನ್ಹಾ ಹಾಗೂ ಕ್ಲಬ್ಬಿನ ಸದಸ್ಯರಾಗಿದ್ದ ಜಯರಾಜ್ ಶೆಟ್ಟಿ ಅವರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು. ಕ್ಲಬ್ಬಿನ ಒಳಾಂಗಣದಲ್ಲಿ ಆಯೋಜಿಸಿದ ಈ ಸಂತಾಪ ಸಭೆಯಲ್ಲಿ ಪ್ರೊಫೆಸರ್ ಕೆ ನಾರಾಯಣನ್, ಜಿ ಬಾಲಕೃಷ್ಣ ಶೆಟ್ಟಿ , ಬಿರ್ತಿ ರಾಜೇಶ್ ಶೆಟ್ಟಿ ಹಾಗೂ ಚಂದ್ರಶೇಖರ ಶೆಟ್ಟಿಯವರು ಅಗಲಿದ ಮಹನೀಯರನ್ನು ಹಾಗೂ ಅವರ ಸೇವೆಯನ್ನು

ಅಪಘಾತದಲ್ಲಿ ಗಂಭೀರ ಗಾಯಗೊಂಡ ಛಾಯಾಗ್ರಾಹಕ ಚಿಕಿತ್ಸೆಗೆ ಸ್ಪಂದಿಸದೆ ಸಾವು

ಕುಂದಾಪುರ: ರಸ್ತೆ ಅಪಘಾತವೊಂದರಲ್ಲಿ ಗಂಭೀರ ಗಾಯಗೊಂಡ ಛಾಯಾಗ್ರಾಹಕನೋರ್ವ ಆಸ್ಪತ್ರೆಯಲ್ಲಿ ಸಾವು-ಬದುಕಿನ ಹೋರಾಟ ನಡೆಸಿ ಕೊನೆಗೂ ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಬೆಳಿಗ್ಗೆ ತುಮಕೂರಿನ ಸಿದ್ದಗಂಗಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳಿದಿದ್ದಾರೆ. ನಾವುಂದದ ಮಾನಸ ಸ್ಟೂಡಿಯೋ ಮಾಲೀಕ ಹೇರೂರು ಅಶೋಕ್ ಶೆಟ್ಟಿ (58) ಸಾವನ್ನಪ್ಪಿದವರು. ಅಶೋಕ್ ಶೆಟ್ಟಿ ಬೆಂಗಳೂರಿನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಫೋಟೋಗ್ರಫಿ ಮುಗಿಸಿ ಭಾನುವಾರ ತಡರಾತ್ರಿ ತಮ್ಮ ಕಾರಿನಲ್ಲಿ ಪುತ್ರ

ಉಡುಪಿಯಲ್ಲಿ ನಾಗರಿಕ ಸಮಿತಿಯಿಂದ ಅನಾಥ ಶವಗಳ ಅಂತ್ಯಸಂಸ್ಕಾರ

ಉಡುಪಿ ; ಉಡುಪಿ ಜಿಲ್ಲಾ ನಾಗರಿಕ ಸಮಿತಿಯವರು, ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ರಕ್ಷಿಸಿಡಲಾಗಿದ್ದ ಮೂರು ಅನಾಥ ಶವಗಳ ಅಂತ್ಯಸಂಸ್ಕಾರವನ್ನು ಬೀಡಿನಗುಡ್ಡೆಯ ದಫನ ಭೂಮಿಯಲ್ಲಿ ಕಾನೂನಿನ ಪ್ರಕ್ರಿಯೆಗಳು ನಡೆದ ಬಳಿಕ, ತನಿಖಾ ಸಹಾಯಕ ವಿಶ್ವನಾಥ್ ಶೆಟ್ಟಿ ಅಮಾಸೆಬೈಲು ಅವರ, ಸಮಕ್ಷಮದಲ್ಲಿ ನಡೆಸಿದರು. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವ, ಅಪರಿಚಿತ ಮಹಿಳೆಯ ಶವ, ಮತ್ತು ನಗರದ ಸಾರ್ವಜನಿಕ ಸ್ಥಳದಲ್ಲಿ ಮೃತಪಟ್ಟಿರುವ ಅಪರಿಚಿತ

ಸ್ವಿಮ್ಮಿಂಗ್ ಪೂಲ್ ರೂಪ ತಾಳಿದ ತೆಂಕ ಗ್ರಾ.ಪಂ ರಸ್ತೆ:ಸ್ಥಳೀಯರ ಆಕ್ರೋಶ

ಕಾಪು ತಾಲೂಕಿನ ತೆಂಕ ಎರ್ಮಾಳು ಗ್ರಾ.ಪಂ. ವ್ಯಾಪ್ತಿಯ ಬೀಚ್ ರಸ್ತೆಯ ಬಬ್ಬುಸ್ವಾಮಿ ದೈವಸ್ಥಾನದ ಸಂಪರ್ಕ ರಸ್ತೆ ಮಳೆ ನೀರು ನಿಂತು ಸ್ವಿಮಿಂಗ್ ಪೊಲ್ ರೂಪ ತಾಳಿದ್ದರೂ ಗ್ರಾ.ಪಂ. ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬುದಾಗಿ ಆ ಭಾಗದ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಕ್ಷಾಂತರ ರೂ ಖರ್ಚು ಮಾಡಿ ನಿರ್ಮಾಣ ಮಾಡಿದ ಬಬ್ಬುಸ್ವಾಮಿ ದೈವಸ್ಥಾನ ಸಂಪರ್ಕ ಕಾಂಕ್ರೀಟ್ ರಸ್ತೆ ಬಹುತೇಕ ಮರಳು ಸಾಗಾಟಕ್ಕೆ ನಲುಗಿ ಹೋಗಿ ಬಿರುಕು ಬಿಟ್ಟಿದ್ದರೂ ಗ್ರಾ.ಪಂ. ತುಟಿ

ಉಡುಪಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್: ಕೋವಿಡ್ ಪೀಡಿತ ಗ್ರಾಮಕ್ಕೆ ರೇಷನ್ ಕಿಟ್ ವಿತರಣೆ

ಕಾಪು: ಉಡುಪಿ ಜಿಲ್ಲೆಯ ಹಾವಂಜೆ ಗ್ರಾಮದ ಕಿಲಿಂಜೆ ವಾರ್ಡ್‌ನಲ್ಲಿ ಕೊರೊನ ಬಂದು ಸೀಲ್ ಡೌನ್ ಅದ ಕುಟುಂಬಗಳಿಗೆ ಉಡುಪಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಸಂಸ್ಥೆಯ ವತಿಯಿಂದ ರೇಷನ್ ಕಿಟ್ ವಿತರಿಸಲಾಯಿತು. ಜಿಲ್ಲಾದ್ಯಂತ ಈ ವರೆಗೆ 54೦೦ ಕಿಟ್‌ಗಳನ್ನು ನೀಡಲಾಗಿದೆ. ಈ ಸಂದರ್ಭದಲ್ಲಿ ಸಮಾಜ ಸೇವಕ ನಿತ್ಯಾನಂದ ಒಳಕಾಡು ಮಾತನಾಡಿ, ಈ ಸಮಯದಲ್ಲಿ ಕೊರೊನ ಪೀಡಿತರಿಗೆ ಫುಡ್ ಕಿಟ್ ನೀಡಿದ ಮಲಬಾರ್ ಗೋಲ್ಡ್ ಸಂಸ್ಥೆಯ ಸಾಮಾಜಿಕ ಕಳಕಳಿ ಹಾಗೂ ಬಡವರಿಗೆ ನೀಡುವ ಸೌಲಭ್ಯಗಳಿಗೆ

ಕಾರ್ಕಳ ಶಾಸಕರಿಂದ ಕೋವಿಡ್ ನಿಯಮ ಉಲ್ಲಂಘನೆ ಅರೋಪ:ಕಾಂಗ್ರೆಸ್ ಮುಖಂಡ ಸುಭೋದ್ ರಾವ್ ದೂರು

ಕೊವಿಡ್ ಸೊಂಕು ನಿಯಂತ್ರಣಕ್ಕೆ ಹಾಕಲಾಗಿರುವ ನಿಯಾಮವಳಿಗಳನ್ನು ಅಡಳಿತ ಪಕ್ಷದ ಶಾಸಕರೇ ಉಲ್ಲಂಘಿಸಿ ಕಾರ್ಯಕ್ರಮ ನಡೆಸಿರುವ ಅರೋಪಗಳು ಕೇಳಿ ಬಂದಿದೆ.ಕಾರ್ಕಳ ಶಾಸಕ ಸುನೀಲ್ ಕುಮಾರ್ ಮೇಲೆ ಈ ಗಂಭೀರ ಅರೋಪ ಕೇಳಿ ಬಂದಿದ್ದು,ಕಾಂಗ್ರೆಸ್ ಮುಖಂಡ ಕಾರ್ಕಳ ಸುಭೋದ್ ರಾವ್ ಈ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲದ ಮೂಲಕ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಅನ್ ಲಾಕ್ ಬಳಿಕ ಉಡುಪಿ ಜಿಲ್ಲೆಯಲ್ಲಿ ಯಾವುದೇ ಸಭೆ ಸಮಾರಂಭ ನಡೆಸುವಂತಿಲ್ಲ ಎನ್ನುವ ಅದೇಶವನ್ನು