ಪುತ್ತೂರು : ಬೈಕ್ ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್ ಸವಾರ ಮೃತಪಟ್ಟ ಘಟನೆ ನಡೆದಿದೆ. ಪುತ್ತೂರು ಕೆ ಎಸ್ ಆರ್ ಟಿ ಸಿ ಬಸ್ಸ್ ನಿಲ್ದಾಣ ಕಟ್ಟಡದಲ್ಲಿರುವ ರೆಡ್ ಕ್ಲಬ್ ಪ್ರೀಮಿಯಮ್ ಬಟ್ಟೆ ಅಂಗಡಿಯ ಸಿಬ್ಬಂದಿ ನೌಷದ್ (20) ಮೃತಪಟ್ಟವರು. ಇವರು ಪುತ್ತೂರು ತಾಲೂಕು ಅರ್ಯಾಪು ಗ್ರಾಮದ ಸಂಪ್ಯದ ನಿವಾಸಿ ಅಬ್ದುಲ್ ಅಝೀಜ್ ಎಂಬವರ ಪುತ್ರ. ನೌಷದ್
ಕಡಬ : ತಮಿಳು ನಟ ವಿಶಾಲ್ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಇಂದು ಬೆಳಗ್ಗೆ ಭೇಟಿ ನೀಡಿ ದೇವರ ದರ್ಶನ ಪಡೆದು ಹಾಗೂ ದೇವಾಲಯದ ಆನೆಯ ಆಶೀರ್ವಾದ ಪಡೆದರು ನಂತರ ಆಶ್ಲೇಷ ಬಲಿ ಪೂಜೆ ನೆರವೇರಸಿದರು. ನಟ ವಿಶಾಲ್ ಜೊತೆಯಲ್ಲಿ ಮೈಸೂರಿನ ಆತ್ಮೀಯ ಸ್ನೇಹಿತ ಸ್ವಾಮಿ ಹಾಗೂ ಮತ್ತಿತರ ಸ್ನೇಹಿತರು ಜೊತೆಯಲ್ಲಿದ್ದು ಸಾಥ್ ನೀಡಿದರು.ನಿನ್ನೆ ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನಕ್ಕೂ ಬಂದು ದೇವರ ದರ್ಶನ ಪಡೆದಿದ್ದರು.
ಪುತ್ತೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹಿಂದೂ ವಿರುದ್ಧದ ಹೇಳಿಕೆಯ ಮೂಲಕ ಕಾಂಗ್ರೆಸ್ ಮಾನಸಿಕತೆ ಜಗತ್ತಿಗೇ ಗೊತ್ತಾಗಿದೆ. ಇಂತಹ ದ್ರೋಹಿಗಳ ಮಂಪರು ಪರೀಕ್ಷೆ ಮಾಡಬೇಕು. ಇದರ ಹಿಂದಿನ ಉದ್ದೇಶ, ಮುಖಗಳ ಕುರಿತು ತನಿಖೆ ಆಗಬೇಕು ಎಂದು ರಾಜ್ಯ ಗೃಹ ಸಚಿವರಿಗೆ ಆಗ್ರಹಿಸುವುದಾಗಿ ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ನೀಡಿದ ಹಿಂದೂ ವಿರೋಧಿ ಹೇಳಿಕೆಯನ್ನು ಖಂಡಿಸಿ ಪುತ್ತೂರು ಬಿಜೆಪಿ ಹಾಗೂ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪುತ್ತೂರು ಡಾ.ಶಿವರಾಮ ಕಾರಂತ ಬಾಲವನ ಸಮಿತಿ ಹಾಗೂ ಪುತ್ತೂರು ಸಹಾಯಕ ಆಯುಕ್ತರ ಕಾರ್ಯಾಲಯದ ಜಂಟಿ ಆಶ್ರಯದಲ್ಲಿ “ಬಾಲವನದಲ್ಲಿ ಬಾಲರು” ಸಂಭ್ರಮದ ಮಕ್ಕಳ ದಿನಾಚರಣೆ ನ.14 ಸೋಮವಾರ ಬೆಳಗ್ಗೆ 9 ರಿಂದ ಪರ್ಲಡ್ಕ ಡಾ.ಶಿವರಾಮ ಕಾರಂತ ಬಾಲವನದಲ್ಲಿ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ತಿಳಿಸಿದ್ದಾರೆ.ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಕಾರ್ಯಕ್ರಮದ
ಪಂಚಾಯತ್‍ರಾಜ್ ವ್ಯವಸ್ಥೆಯನ್ನು ಬುಡಮೇಲು ಮಾಡುವ ಮೂಲಕ ಬಿಜೆಪಿ ಸರಕಾರ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುವ ನಿಟ್ಟಿನಲ್ಲಿ ಒಂದೊಂದು ಕೆಲಸಗಳನ್ನು ಮಾಡುತ್ತಿದೆ ಎಂದು ರಾಜೀವಗಾಂಧಿ ಪಂಚಾಯತ್‍ರಾಜ್ ಸಂಘಟನೆಯ ಜಿಲ್ಲಾ ಅಧ್ಯಕ್ಷ ಸುಭಾಶ್ರಚಂದ್ರ ಶೆಟ್ಟಿ ಆರೋಪಿಸಿದ್ದಾರೆ. ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಕುರಿತು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಪ್ರತಿಭಟನೆ ಮೂಲಕ ಕಾಂಗ್ರೆಸ್ ತನ್ನ ಮೇಲೆ ಅಪಪ್ರಚಾರ ಮಾಡುತ್ತಿದೆ ಎಂದು ಶಾಸಕರು
ಪುತ್ತೂರು: ಪುತ್ತೂರಿಗೆ ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸ್ವಂತ ಮನೆ, ವಾಣಿಜ್ಯ ಉದ್ದೇಶಕ್ಕೆ 10 ಸೆಂಟ್ಸ್ ಭೂಮಿಯನ್ನು ಭೂ ಪರಿವರ್ತನೆಗೆ ಅವಕಾಶ ನೀಡಿರುವುದು ಸರಕಾರದ 2 ದೊಡ್ಡ ಕೊಡುಗೆಯಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.ಪುತ್ತೂರಿನಲ್ಲಿ ಸುಸಜ್ಜಿತವಾದ ಒಳಗಾಂಣ ಹೊರಾಂಗಣ ಇರುವಂತಹ ಕ್ರಿಕೆಟ್ ಕ್ರೀಡಾಂಗಣಕ್ಕೆ 23 ಎಕ್ರೆ 26 ಸೆಂಟ್ಸ್ ಜಾಗದಲ್ಲಿ ಕ್ರೀಡಾಂಗಣ ಮಾಡಲು ಮುಖ್ಯಮಂತ್ರಿ
ಪುತ್ತೂರು : ನವ ವಿವಾಹಿತೆಯೊಬ್ಬರು ಪತಿಯ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲ್ಲೂಕಿನ ಮಾಡನ್ನೂರು ಗ್ರಾಮದ ಸಾಂತ್ಯ ಎಂಬಲ್ಲಿ ನಡೆದಿದೆ. ಸಾಂತ್ಯ ನಿವಾಸಿ ಜಯಪ್ರಕಾಶ್ ಅವರ ಪತ್ನಿ ವೈಶಾಲಿ (26) ಆತ್ಮಹತ್ಯೆ ಮಾಡಿಕೊಂಡವರು. ಜಯ ಪ್ರಕಾಶ್ ಹಾಗೂ ವೈಶಾಲಿ ಮದುವೆ 7 ತಿಂಗಳ ಹಿಂದೆ ನಡೆದಿತ್ತು, ಶನಿವಾರ ಸಂಜೆ ಪತಿಯ ಮನೆಯಲ್ಲಿದ್ದ ವೈಶಾಲಿಯವರು ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು
ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ರಾಜ್ಯದ ಹಲವೆಡೆ ಪಿಎಫ್‍ಐ, ಎಸ್ಡಿಪಿಐ ಮುಖಂಡರ ಮನೆಗಳ ಮೇಲೆ ಎನ್‍ಐಎ ಅಧಿಕಾರಿಗಳು ಮತ್ತೆ ದಾಳಿ ನಡೆಸಿದ್ದು, ಮೂವರನ್ನು ವಶಕ್ಕೆ ಪಡೆದಿದ್ದಾರೆ. ದಕ್ಷಿಣ ಕನ್ನಡ, ಮೈಸೂರು, ಹುಬ್ಬಳ್ಳಿ ಸೇರಿದಂತೆ ಹಲವಡೆ ನಿಷೇಧಿತ ಪಿಎಫ್‍ಐ ಸಂಘಟನೆಯ ಮುಖಂಡರ ಮನೆಗಳ ಮೇಲೆ ಎನ್‍ಐಎ ಅಧಿಕಾರಿಗಳು ಇಂದು ಮುಂಜಾನೆ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆಂದು ತಿಳಿದುಬಂದಿದೆ.
ಸುಳ್ಯ ತಾಲೂಕಿನ ವಿದ್ಯಾರ್ಥಿನಿ ಅಪೂರ್ವ ಗೋಕುಲ್‍ದಾಸ್ ರಚಿಸಿರುವ ಪಂಜುರ್ಲಿ ದೈವದ ಚಿತ್ರ ಎಲ್ಲರ ಗಮನ ಸೆಳೆದಿದೆ. ರಿಷಬ್ ಶೆಟ್ಟಿ ನಿರ್ದೇಶನದ ಕನ್ನಡ ಚಲನ ಚಿತ್ರ ಕಾಂತಾರದಲ್ಲಿ ಮೂಡಿ ಬಂದ ಪಂಜುರ್ಲಿ ದೈವದ ಚಿತ್ರವನ್ನು ಅಪೂರ್ವ ಗೋಕುಲ್‍ದಾಸ್ ಮನಮೋಹಕವಾಗಿ ರಚಿಸಿ ಮೆಚ್ಚಿಗೆ ಗಳಿಸಿದ್ದಾಳೆ. ಅಪೂರ್ವ ಸುಳ್ಯ ನಗರ ಪಂಚಾಯತ್ ಮಾಜಿ ಸದಸ್ಯ ಕೆ.ಗೋಕುಲ್‍ದಾಸ್ ಅವರ ಪುತ್ರಿ. ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಎಂಟನೇ ತರಗತಿಯ
ಉತ್ತಮ ಗುಣಮಟ್ಟದ ಹಾಗೂ ಶುಚಿ ರುಚಿಯಾದ ವಿವಿಧ ರೀತಿಯ ತಿಂಡಿ ತಿನಿಸುಗಳ ಮಾರಾಟ ಮಳಿಗೆ “ಎಂ, ಟಿ, ಆರ್. ಐಯ್ಯಂಗಾರ್ ಬೇಕರಿ & ಸ್ವೀಟ್ಸ್ ಬೆಳ್ಳಾರೆಯಲ್ಲಿ ಶುಭರಂಭಗೊಂಡಿದೆ. ಶುಭ ಸಮಾರಂಭಗಳಿಗೆ ಬೇಕಾದ ಬೇಕರಿ ಉತ್ಪನ್ನ ಮತ್ತು ಸ್ವೀಟ್ಸ್ ಹೋಲ್ ಸೇಲ್ ದರದಲ್ಲಿ ಲಭ್ಯ. ಇಂದೇ ಸಂಪರ್ಕಿಸಿ. ಎಂ, ಟಿ, ಆರ್. ಐಯ್ಯಂಗಾರ್ ಬೇಕರಿ & ಸ್ವೀಟ್ಸ್ ಬಸ್ ನಿಲ್ದಾಣದ ಎದುರುಗಡೆ ಬೆಳ್ಳಾರೆ ಮೊಬೈಲ್: 9844829959, 7795381568. ಸಂಪರ್ಕಿಸಬಹುದು.




























